Tax Rebate: ಎಲೆಕ್ಟ್ರಿಕ್ ವಾಹನ ಖರೀದಿಗೆ ಸಬ್ಸಿಡಿ, ತೆರಿಗೆ ವಿನಾಯ್ತಿ: ಇಂಧನ ವೆಚ್ಚದ ಉಳಿತಾಯದ ಜೊತೆಗೆ ಹಲವು ಲಾಭ

ಎಲೆಕ್ಟ್ರಿಕ್ ವಾಹನಗಳ ಖರೀದಿ ವೇಳೆ ಸಾಲ ಮಾಡಿದ್ದರೆ, ಸಾಲದ ಮೇಲೆ ಪಾವತಿಸುವ ಬಡ್ಡಿಗೆ ಆದಾಯ ತೆರಿಗೆ ನಿಯಮದ ಸೆಕ್ಷನ್ 80ಇಇಬಿ ಅನ್ವಯ ₹ 1,50,000 ಮೊತ್ತದಷ್ಟು ತೆರಿಗೆ ವಿನಾಯ್ತಿಯನ್ನು ಸರ್ಕಾರ ಘೋಷಿಸಿದೆ.

Tax Rebate: ಎಲೆಕ್ಟ್ರಿಕ್ ವಾಹನ ಖರೀದಿಗೆ ಸಬ್ಸಿಡಿ, ತೆರಿಗೆ ವಿನಾಯ್ತಿ: ಇಂಧನ ವೆಚ್ಚದ ಉಳಿತಾಯದ ಜೊತೆಗೆ ಹಲವು ಲಾಭ
ಎಲೆಕ್ಟ್ರಿಕ್ ವಾಹನಗಳು (ಪ್ರಾತಿನಿಧಿಕ ಚಿತ್ರ)
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 28, 2022 | 2:20 PM

ಕಳೆದ ಮೂರ್ನಾಲ್ಕು ವರ್ಷಗಳಿಂದ ಪೆಟ್ರೋಲಿಯಂ ಉತ್ಪನ್ನಗಳ (Petrolium Products) ಬೆಲೆ ಸತತವಾಗಿ ಏರುಗತಿಯಲ್ಲಿದೆ. ದೇಶದ ಬಹುತೇಕ ಎಲ್ಲ ಪ್ರಮುಖ ನಗರಗಳಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ₹ 100 ದಾಟಿದೆ. ಮಿತವ್ಯಯಿ ಮತ್ತು ಪರಿಸರ ಸ್ನೇಹಿ ಎನ್ನುವ ಕಾರಣಕ್ಕೆ ಜನರು ಎಲೆಕ್ಟ್ರಿಕ್ ವಾಹನಗಳ (Electric Vehicles) ಖರೀದಿಗೆ ಆಸಕ್ತಿ ತೋರಿಸುತ್ತಿದ್ದಾರೆ. ಎಲೆಕ್ಟ್ರಿಕ್ ವಾಹನ ಖರೀದಿಯಿಂದ ನಿಮ್ಮ ಮನೆ ಬಜೆಟ್​ (Home Expence) ಮೇಲಿರುವ ಪೆಟ್ರೋಲ್ ಹೊರ ತಗ್ಗುವುದಷ್ಟೇ ಅಲ್ಲ, ನಿಮ್ಮ ತೆರಿಗೆ ಹೊರೆಯೂ ಇಳಿಯಲಿದೆ. ಎಲೆಕ್ಟ್ರಿಕ್ ವಾಹನ ಕೊಳ್ಳುವವರು ತೆರಿಗೆ ಉಳಿತಾಯ ಹೇಗೆ ಮಾಡಬಹುದು ಎನ್ನುವ ಬಗ್ಗೆ ಇಲ್ಲಿದೆ ವಿವರ. ಭಾರತದ ತೆರಿಗೆ ಕಾನೂನುಗಳು ಕಾರುಗಳನ್ನು ಐಷಾರಾಮಿ ಉತ್ಪನ್ನಗಳು ಎಂದೇ ಪರಿಗಣಿಸುತ್ತವೆ. ಹೀಗಾಗಿಯೇ ಕಾರ್ ಖರೀದಿ ವೇಳೆ ಸಾಲ ಪಡೆದರೆ ತೆರಿಗೆ ವಿಚಾರದಲ್ಲಿ ಯಾವುದೇ ರಿಯಾಯ್ತಿ ಸಿಗುವುದಿಲ್ಲ. ಒಟ್ಟಾರೆ ತೆರಿಗೆ ರಿಯಾಯ್ತಿ ನಿಯಮಗಳಲ್ಲಿ (Income Tax Rules) ಈ ಅಂಶವನ್ನು ಬದಲಾವಣೆ ಮಾಡಬೇಕು ಎಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿಬರುತ್ತಲೇ ಇದೆ. ವಾಹನ ತಯಾರಿಕಾ ಕಂಪನಿಗಳು, ಬ್ಯಾಂಕ್ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಹಾಗೂ ಗ್ರಾಹಕರ ಈ ಬೇಡಿಕೆಗೆ ಸರ್ಕಾರ ಈವರೆಗೆ ಸೊಪ್ಪು ಹಾಕಿಲ್ಲ. ಆದರೆ ಎಲೆಕ್ಟ್ರಾನಿಕ್ ವಾಹನಗಳ ವಿಚಾರದಲ್ಲಿ ಮಾತ್ರ ತುಸು ರಿಯಾಯ್ತಿ ನೀಡಲು ಮುಂದಾಗಿದೆ.

ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಖರೀದಿಗೆ ಉತ್ತೇಜನ ನೀಡಬೇಕು ಎನ್ನುವ ಉದ್ದೇಶದಿಂದ ಆದಾಯ ತೆರಿಗೆ ನಿಯಮದ ಸೆಕ್ಷನ್ 80ಇಇಬಿ ಅನ್ವಯ ₹ 1,50,000 ಮೊತ್ತಕ್ಕೆ ತೆರಿಗೆ ವಿನಾಯ್ತಿಯನ್ನು ಸರ್ಕಾರ ಘೋಷಿಸಿದೆ. ದ್ವಿಚಕ್ರ ವಾಹನ ಮತ್ತು ಕಾರುಗಳ ಖರೀದಿಗೂ ಈ ವಿನಾಯ್ತಿ ಅನ್ವಯವಾಗಲಿದೆ ಎನ್ನುವುದು ಗಮನಾರ್ಹ ಸಂಗತಿ.

ಅರ್ಹತೆಗೆ ಮಾನದಂಡ ವೈಯಕ್ತಿಕ ತೆರಿಗೆದಾರರಿಗೆ ಮಾತ್ರ ಈ ವಿನಾಯ್ತಿ ಸಿಗಲಿದೆ. ನೀವು ಒಂದು ವೇಳೆ ಹಿಂದೂ ಅವಿಭಜಿತ ಕುಟುಂಬ (Hindu Undivided Family – HUF), ಪಾಲುದಾರಿಕೆ ಸಂಸ್ಥೆ, ಕಂಪನಿ ಅಥವಾ ಇತರ ಯಾವುದೇ ರೀತಿಯ ತೆರಿಗೆ ಪಾವತಿದಾರರಾಗಿದ್ದರೆ ಈ ನಿಯಮದಡಿ ವಿನಾಯ್ತಿ ಸಿಗುವುದಿಲ್ಲ.

ದೇಶದ ಎಲ್ಲ ನಾಗರಿಕರಿಗೂ ಒಮ್ಮೆ ಮಾತ್ರ ಈ ವಿನಾಯ್ತಿ ಪಡೆದುಕೊಳ್ಳಲು ಅವಕಾಶವಿದೆ. ಅಂದರೆ ಈ ಹಿಂದೆ ಎಲೆಕ್ಟ್ರಿಕ್ ವಾಹನ ಖರೀದಿ ಮಾಡಿರದ, ಇದೇ ಮೊದಲ ಬಾರಿಗೆ ಎಲೆಕ್ಟ್ರಿಕ್ ವಾಹನ ಖರೀದಿ ಮಾಡುವ ವ್ಯಕ್ತಿ ಈ ಯೋಜನೆಯಡಿ ತೆರಿಗೆ ವಿನಾಯ್ತಿ ಪಡೆದುಕೊಳ್ಳಬಹುದು. ನೀವು ಎಲೆಕ್ಟ್ರಿಕ್ ವಾಹನ ಖರೀದಿಸಲು ಸಾಲ ಪಡೆದ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಪಾವತಿ ಮಾಡುವ ಬಡ್ಡಿಗೆ ಮಾತ್ರ ಈ ವಿನಾಯ್ತಿ ಅನ್ವಯವಾಗುತ್ತದೆ. ಏಪ್ರಿಲ್ 1, 2019ರಿಂದ ಮಾರ್ಚ್ 31, 2023ರ ಅವಧಿಯಲ್ಲಿ ಕಟ್ಟುವ ಎಲೆಕ್ಟ್ರಿಕ್ ವಾಹನ ಖರೀದಿ ಸಾಲದ ಮೇಲಿನ ಬಡ್ಡಿಗೆ ಈ ವಿನಾಯ್ತಿ ಲಾಗೂ ಆಗುತ್ತದೆ. ನೀವು ಈಗಾಗಲೇ ಸಾಲದ ಮೇಲೆ ಎಲೆಕ್ಟ್ರಿಕ್ ವಾಹನ ಖರೀದಿಸಿದ್ದಲ್ಲಿ ಈ ವರ್ಷದ ತೆರಿಗೆ ಪಾವತಿಗೆ, ಅಂದರೆ 2021-22ರ ಆರ್ಥಿಕ ವರ್ಷದಲ್ಲಿ ಕಟ್ಟುವ ಸಾಲದ ಮೇಲಿನ ಬಡ್ಡಿಗೆ ತೆರಿಗೆ ವಿನಾಯ್ತಿ ಪಡೆದುಕೊಳ್ಳಬಹುದಾಗಿದೆ.

ಎಲೆಕ್ಟ್ರಿಕ್ ವಾಹನ ಖರೀದಿಗೆ FAME ಉತ್ತೇಜನ ಪ್ಯಾರೀಸ್​ನ ಹವಾಮಾನ ಘೋಷಣೆಯ ನಂತರ ಭಾರತ ಸರ್ಕಾರವು ಎಲೆಕ್ಟ್ರಿಕ್ ವಾಹನ ಖರೀದಿಗೆ ಹೆಚ್ಚು ಉತ್ತೇಜನ ನೀಡುತ್ತಿದೆ. ರಾಜ್ಯ ಸರ್ಕಾರಗಳು ರಿಯಾಯ್ತಿ, ಸಬ್ಸಿಡಿಗಳನ್ನು ಘೋಷಿಸಬೇಕೆಂದು ಸೂಚನೆ ನೀಡಿದೆ. ರಿಜಿಸ್ಟ್ರೇಶನ್ ಅಥವಾ ನವೀಕರಣ ಸಮಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಶುಲ್ಕ ವಿನಾಯ್ತಿಯನ್ನು ಸಾರಿಗೆ ಇಲಾಖೆ ಕಳೆದ ಆಗಸ್ಟ್ ತಿಂಗಳಲ್ಲಿ ಘೋಷಿಸಿತ್ತು.

ಇದರ ಜೊತೆಗೆ ಸರ್ಕಾರವು ಶೇ 5ರ ಜಿಎಸ್​ಟಿ ವಿನಾಯ್ತಿಯನ್ನೂ ಘೋಷಿಸಿದೆ. FAME-2 (Faster Adoption and Manufacturing of Hybrid and Electric Vehicles) ಯೋಜನೆಯ ಅನ್ವಯ ಕಾರ್​ಗಳಿಗೆ ₹ 1.5 ಲಕ್ಷದಷ್ಟು, ದ್ವಿಚಕ್ರ ವಾಹನಗಳಿಗೆ ಶೇ 40ರಷ್ಟು ಸಬ್ಸಿಡಿ ಪಡೆದುಕೊಳ್ಳಲು ಅವಕಾಶವಿದೆ. ಬಹುತೇಕ ಎಲೆಕ್ಟ್ರಿಕ್ ವಾಹನ ತಯಾರಿಕಾ ಕಂಪನಿಗಳು ಈ ಸಬ್ಸಿಡಿ ಕ್ಲೇಮ್ ಮಾಡಿಕೊಂಡ ನಂತರದ ಮೊತ್ತವನ್ನೇ ಗ್ರಾಹಕರಿಂದ ಪಡೆದುಕೊಳ್ಳುತ್ತಿವೆ. ಹೀಗಾಗಿ ಸಹಾಯಧನ ಘೋಷಣೆಯಾದ ನಂತರ ಎಲೆಕ್ಟ್ರಿಕ್ ವಾಹನಗಳ ಬೆಲೆಯೂ ತುಸು ಕಡಿಮೆಯಾಗಿದೆ. ಇದರ ಜೊತೆಗೆ ಕೆಲ ರಾಜ್ಯ ಸರ್ಕಾರವು FAME-2 ಹೊರತುಪಡಿಸಿದ ಒಂದಿಷ್ಟು ಸಬ್ಸಡಿಗಳನ್ನು ಘೋಷಿಸಿದೆ. ದೆಹಲಿ, ಗುಜರಾತ್, ಅಸ್ಸಾಮ್, ಬಿಹಾರ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಗರಿಷ್ಠ ₹ 1.5 ಲಕ್ಷದಷ್ಟು ಸಬ್ಸಿಡಿ ಪಡೆದುಕೊಳ್ಳಲು ಅವಕಾಶವಿದೆ. ಕರ್ನಾಟಕದಲ್ಲಿ ರಸ್ತೆ ತೆರಿಗೆ ಪಾವತಿಯಿಂದ ಎಲೆಕ್ಟ್ರಿಕ್ ವಾಹನಗಳಿಗೆ ಸಂಪೂರ್ಣ ವಿನಾಯ್ತಿಯಿದೆ. ಆದರೆ ಯಾವುದೇ ನೇರ ಅಥವಾ ಪರೋಕ್ಷ ಪ್ರೋತ್ಸಾಹಕಗಳು ಲಭ್ಯವಿಲ್ಲ.

ಒಂದು ಲೆಕ್ಕಾಚಾರ ಮಾಡೋಣ ನೀವು ಒಂದು ₹ 7.46 ಲಕ್ಷ ಮೌಲ್ಯದ ಒಂದು ಎಲೆಕ್ಟ್ರಿಕ್ ಕಾರ್ ಖರೀದಿ ಮಾಡಿದ್ದೀರಿ ಎಂದಿಟ್ಟುಕೊಳ್ಳೋಣ. ಮಹೀಂದ್ರ ಕಂಪನಿಯ e2o plus P4 ಎಲೆಕ್ಟ್ರಿಕ್ ವಾಹನ ಇದೇ ಬೆಲೆಗೆ ಸಿಗುತ್ತದೆ. ಶೇ 10.25ರ ಬಡ್ಡಿದರದಲ್ಲಿ ನೀವು ಸಾಲ ಪಡೆದುಕೊಂಡರೆ ನಿಮ್ಮ ಮಾಸಿಕ ಇಎಂಐ ₹ 15,947 ಆಗುತ್ತದೆ. ಇದರಲ್ಲಿ ₹ 9,500 ಅಸಲಿಗೆ ಹೋದರೆ ₹ 6,374 ಬಡ್ಡಿಗೆ ಹೋಗುತ್ತದೆ. ಒಂದು ಆರ್ಥಿಕ ವರ್ಷದಲ್ಲಿ ಬಡ್ಡಿ ಕಟ್ಟಲು ನೀವು ಎಷ್ಟು ಹಣ ವ್ಯಯಿಸಿದಿರಿ ಎನ್ನುವ ಲೆಕ್ಕಾಚಾರ ಆಧರಿಸಿ ನಿಮಗೆ ಅದರ ಸಂಪೂರ್ಣ ಮೊತ್ತಕ್ಕೆ ತೆರಿಗೆ ವಿನಾಯ್ತಿ ಸಿಗುತ್ತದೆ.

ಇದನ್ನೂ ಓದಿ: Best Electric Bike: ಕೇವಲ 1 ಲಕ್ಷ ರೂ.ನಲ್ಲಿ ಖರೀದಿಸಬಹುದು ಅತ್ಯುತ್ತಮ ಎಲೆಕ್ಟ್ರಿಕ್ ಬೈಕ್

ಇದನ್ನೂ ಓದಿ: Simple One Electric Scooter: ಸಿಂಪಲ್​ ಒನ್ ಎಲೆಕ್ಟ್ರಿಕ್ ಸ್ಕೂಟರ್ ದರ ಮತ್ತಿತರ ವಿವರದ​ ಬಗ್ಗೆ ಇಲ್ಲಿದೆ ಮಾಹಿತಿ

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM