Baal Aadhaar Card: ನವಜಾತ ಶಿಶುವಿಗೇ ಪಡೆಯಿರಿ ಬಾಲ್ ಆಧಾರ್ ಕಾರ್ಡ್; ಅರ್ಜಿ ಸಲ್ಲಿಕೆ ಹಂತಹಂತ ಮಾಹಿತಿ ಇಲ್ಲಿದೆ

ಯೂನಿಕ್ ಐಡಿಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ (UIDAI)ದಿಂದ 5 ವರ್ಷದೊಳಗಿನ ಮಕ್ಕಳಿಗೆ ನೀಲಿ ಬಣ್ಣದ ಆಧಾರ್​ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಅಂದ ಹಾಗೆ ಪೋಷಕರು ತಮ್ಮ ನವಜಾತ ಶಿಶುವಿಗೇ 12 ಅಂಕಿಯ ಆಧಾರ್ ಸಂಖ್ಯೆಯನ್ನು ಪಡೆಯಬಹುದಾಗಿದೆ. ಬಾಲ್ ಆಧಾರ್ ಕಾರ್ಡ್ (Baal Aadhaar Card) ಅಪ್ಲೈ ಮಾಡುವುದಕ್ಕೆ ಪೋಷಕರು ಮಗುವಿನ ಜನನ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಹಾಗೂ ಜತೆಗೆ ತಂದೆ- ತಾಯಿಗಳ ಪೈಕಿ ಒಬ್ಬರ ಆಧಾರ್ ಕಾರ್ಡ್ ಮಾಹಿತಿ ನೀಡಬೇಕಾಗುತ್ತದೆ. ಇನ್ನು ನವಜಾತ ಶಿಶುವಿಗೇ ಆಧಾರ್ ಬೇಕು […]

Baal Aadhaar Card: ನವಜಾತ ಶಿಶುವಿಗೇ ಪಡೆಯಿರಿ ಬಾಲ್ ಆಧಾರ್ ಕಾರ್ಡ್; ಅರ್ಜಿ ಸಲ್ಲಿಕೆ ಹಂತಹಂತ ಮಾಹಿತಿ ಇಲ್ಲಿದೆ
ಬಾಲ್ ಆಧಾರ್ ಕಾರ್ಡ್
Follow us
TV9 Web
| Updated By: Srinivas Mata

Updated on:Jul 27, 2021 | 3:27 PM

ಯೂನಿಕ್ ಐಡಿಂಟಿಫಿಕೇಷನ್ ಅಥಾರಿಟಿ ಆಫ್ ಇಂಡಿಯಾ (UIDAI)ದಿಂದ 5 ವರ್ಷದೊಳಗಿನ ಮಕ್ಕಳಿಗೆ ನೀಲಿ ಬಣ್ಣದ ಆಧಾರ್​ ಕಾರ್ಡ್ ವಿತರಣೆ ಮಾಡಲಾಗುತ್ತಿದೆ. ಅಂದ ಹಾಗೆ ಪೋಷಕರು ತಮ್ಮ ನವಜಾತ ಶಿಶುವಿಗೇ 12 ಅಂಕಿಯ ಆಧಾರ್ ಸಂಖ್ಯೆಯನ್ನು ಪಡೆಯಬಹುದಾಗಿದೆ. ಬಾಲ್ ಆಧಾರ್ ಕಾರ್ಡ್ (Baal Aadhaar Card) ಅಪ್ಲೈ ಮಾಡುವುದಕ್ಕೆ ಪೋಷಕರು ಮಗುವಿನ ಜನನ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಹಾಗೂ ಜತೆಗೆ ತಂದೆ- ತಾಯಿಗಳ ಪೈಕಿ ಒಬ್ಬರ ಆಧಾರ್ ಕಾರ್ಡ್ ಮಾಹಿತಿ ನೀಡಬೇಕಾಗುತ್ತದೆ. ಇನ್ನು ನವಜಾತ ಶಿಶುವಿಗೇ ಆಧಾರ್ ಬೇಕು ಎಂದಾದಲ್ಲಿ ಜನನ ಪ್ರಮಾಣ ಪತ್ರಕ್ಕಾಗಿ ಕಾಯಬೇಕು ಎಂಬ ಅಗತ್ಯ ಸಹ ಇಲ್ಲ. ಆಸ್ಪತ್ರೆಯ ಡಿಸ್​ಚಾರ್ಜ್ ಸರ್ಟಿಫಿಕೇಟ್ ಸಲ್ಲಿಸಿದರೆ ಸಾಕು, ಆಧಾರ್ ದೊರೆಯುತ್ತದೆ. UIDAIನ ಟ್ವಿಟ್ಟರ್ ಹ್ಯಾಂಡಲ್​ನಿಂದ ಇದನ್ನೇ ಟ್ವೀಟ್ ಕೂಡ ಮಾಡಲಾಗಿದೆ.

ನಿಮ್ಮ ಮಗುವಿನ ಆಧಾರ್ ನೋಂದಣಿ ಮಾಡಬೇಕು ಅಂದರೆ ಜನನ ಪ್ರಮಾಣ ಪತ್ರ ಅಥವಾ ಆಸ್ಪತ್ರೆಯಿಂದ ಡಿಸ್​ಚಾರ್ಜ್ ಸ್ಲಿಪ್ ಮತ್ತು ತಂದೆ-ತಾಯಿಗಳ ಪೈಕಿ ಒಬ್ಬರ ಆಧಾರ್ ಕಾರ್ಡ್ ಸಾಕು ಎನ್ನಲಾಗಿದೆ. ಅಂದರೆ ಪೋಷಕರು ಜನನ ಪ್ರಮಾಣಪತ್ರಕ್ಕಾಗಿ ಕೂಡ ಕಾಯುವ ಅಗತ್ಯ ಇಲ್ಲ. ಆಸ್ಪತ್ರೆಯ ಡಿಸ್​ಚಾರ್ಜ್ ಪ್ರಮಾಣಪತ್ರ ಜತೆಗೆ ತಂದೆ-ತಾಯಿ ಇಬ್ಬರ ಪೈಕಿ ಒಬ್ಬರ ಆಧಾರ್ ಕಾರ್ಡ್ ಸಾಕು. ಆ ಮೂಲಕ ತಮ್ಮ ನವಜಾತ ಶಿಶುವಿನ ಆಧಾರ್ ಕಾರ್ಡ್​ಗೆ ಅಪ್ಲೈ ಮಾಡಬಹುದು.

UIDAI ಮಾಹಿತಿ ನೀಡಿರುವಂತೆ, ಮಗುವಿನ ಆಧಾರ್​ ಕಾರ್ಡ್ ನೋಂದಣಿ ಮಾಡುವಾಗ ಬೆರಳಚ್ಚು, ಐರಿಸ್ ಸ್ಕ್ಯಾನ್ ಮಾಡುವುದಿಲ್ಲ. ಕೇವಲ ಫೋಟೋಗ್ರಾಫ್ ಮಾತ್ರ ತೆಗೆದುಕೊಳ್ಳಲಾಗುತ್ತದೆ. ಅಂದಹಾಗೆ ಆ ಮಗುವಿಗೆ 5 ವರ್ಷ ತುಂಬಿದ ಮೇಲೆ ಬಯೋಮೆಟ್ರಿಕ್ಸ್ ಅಪ್​ಡೇಟ್​ ಮಾಡಬೇಕಾಗುತ್ತದೆ. ಪೋಷಕರು ತಮ್ಮ ಮಕ್ಕಳ ಆಧಾರ್ ಆನ್​ಲೈನ್ ಹಾಗೂ ಆಫ್​ಲೈನ್ ಎರಡೂ ಬಗೆಯಲ್ಲೂ ಮಾಡಬಹುದು. ಆಫ್​ಲೈನ್​ನನಲ್ಲಿ ಮಾಡಬೇಕಾದರೆ ಹತ್ತಿರಸ ಆಧಾರ್​ ಎನ್​ರೋಲ್​ಮೆಂಟ್ ಕೇಂದ್ರಕ್ಕೆ ಭೇಟಿ ನೀಡಿ, ಅರ್ಜಿ ತುಂಬಿದ ಮೇಲೆ ಎಲ್ಲ ಮುಖ್ಯ ದಾಖಲಾತಿಗಳನ್ನು ನೀಡಬೇಕು.

ನವಜಾತ ಶಿಶುವಿನ ಆಧಾರ್​ ಕಾರ್ಡ್​ಗೆ ಆನ್​ಲೈನ್​ನಲ್ಲಿ ಅಪ್ಲೈ ಮಾಡುವುದು ಹೇಗೆ? UIDAI ವೆಬ್​ಸೈಟ್​ಗೆ ಭೇಟಿ ನೀಡಬೇಕು. ನೋಂದಣಿ ಲಿಂಕ್ ಮೇಲೆ ಕ್ಲಿಕ್ ಮಾಬೇಕು ಹಾಗೂ ಅಲ್ಲಿ ಕೇಳಲಾದ ಮಾಹಿತಿಗಳನ್ನು ಭರ್ತಿ ಮಾಡಬೇಕು.

ಹಂತಹಂತವಾದ ಮಾಹಿತಿ ಇಲ್ಲಿದೆ: 1. UIDAI ವೆಬ್​ಸೈಟ್​ ಆದ uidai.gov.inಗೆ ಲಾಗ್ ಇನ್ ಆಗಬೇಕು. 2. ಆಧಾರ್ ಕಾರ್ಡ್ ನೋಂದಣಿ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. 3. ಮಗವಿನ ಹೆಸರು, ಪೋಷಕರ ಫೋನ್ ನಂಬರ್, ಇ-ಮೇಲ್ ಐಡಿ ಮತ್ತು ಇತರ ವೈಯಕ್ತಿಕ ಮಾಹಿತಿಗಳನ್ನು ನಮೂದಿಸಬೇಕು. 4. ನವಜಾತ ಶಿಶುವಿಗೆ ಸಂಬಂಧಿಸಿದ ವಿಳಾಸ, ಜಿಲ್ಲೆ, ರಾಜ್ಯ ಮತ್ತು ಇತರ ಮಾಹಿತಿಗಳನ್ನು ಭರ್ತಿ ಮಾಡಬೇಕು. 5. Fix Appointment ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. 6. ಆಧಾರ್ ಕಾರ್ಡ್ ನೋಂದಣಿಗೆ ದಿನಾಂಕ ನಿಗದಿ ಮಾಡಿಕೊಳ್ಳಬೇಕು. 7. ಮುಂದಿನ ಹಂತಕ್ಕಾಗಿ ಹತ್ತಿರದ ಆಧಾರ್ ನೋಂದಣಿ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬೇಕು.

ಆನ್​ಲೈನ್​ನಲ್ಲಿ ಅರ್ಜಿಯನ್ನು ಸಲ್ಲಿಸುವ ಮುನ್ನ ಮತ್ತು ಭೇಟಿಗೆ ಸಮಯ ನಿಗದಿ ಮಾಡಿಕೊಳ್ಳುವ ಮುಂಚೆ ಮಗುವಿನ ಜನನ ದಿನಾಂಕವನ್ನು ಪೋಷಕರು ಸರಿಯಾಗಿ ಪರೀಕ್ಷಿಸಿಕೊಳ್ಳಬೇಕು. ಏಕೆಂದರೆ, ಇದನ್ನು ತಿದ್ದುಪಡಿ ಅಥವಾ ಅಪ್​ಡೇಟ್​ ಮಾಡಲು ಸಾಧ್ಯವಿರುವುದು ಒಮ್ಮೆ ಮಾತ್ರ.

ಇದನ್ನೂ ಓದಿ: Aadhaar card: ಆಧಾರ್ ಕಾರ್ಡ್​ನಲ್ಲಿ ನಿಮ್ಮ ಹೆಸರು ತಪ್ಪಿದ್ದರೆ ಆನ್​ಲೈನ್​ನಲ್ಲಿ ಸರಿ ಪಡಿಸುವುದು ಹೇಗೆ?

(How To Apply For Baal Aadhaar Card For Children Below Age Of 5 Years Here Is The Step By Step Details)

Published On - 3:26 pm, Tue, 27 July 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ