ಕೊಟ್ಟಿಗೆಗೆ ತಗುಲಿದ ಬೆಂಕಿ: 200 ಕೋಳಿ, 50 ಕುರಿ, 6 ಹಸು ಸಜೀವದಹನ

| Updated By: ವಿವೇಕ ಬಿರಾದಾರ

Updated on: Dec 12, 2023 | 10:11 AM

ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಕೊಟ್ಟಿಗೆಯಲ್ಲಿದ್ದ 200 ಕೋಳಿ, 50 ಕುರಿ ಮತ್ತು 6 ಹಸುಗಳು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ರಾಮಘಟ್ಟ ಗ್ರಾಮದಲ್ಲಿ ನಡೆದಿದೆ. ರೈತ ಚೇತನ್ ಕುಮಾರ್‌ ಎಂಬುವರಿಗೆ ಸೇರಿದ ಹಸು, ಕುರಿ, ಕೋಳಿಗಳು ಮೃತಪಟ್ಟಿವೆ.

ಕೊಟ್ಟಿಗೆಗೆ ತಗುಲಿದ ಬೆಂಕಿ: 200 ಕೋಳಿ, 50 ಕುರಿ, 6 ಹಸು ಸಜೀವದಹನ
ಆಕಸ್ಮಿಕ ಬೆಂಕಿ ತಗುಲಿ ಹಸುಗಳು ಸಾವು
Follow us on

ತುಮಕೂರು, ಡಿಸೆಂಬರ್ 12: ಚಿಕ್ಕನಾಯಕನಹಳ್ಳಿ (Chikkanayakanhalli) ತಾಲೂಕಿನ ರಾಮಘಟ್ಟ ಗ್ರಾಮದಲ್ಲಿ ಕೊಟ್ಟಿಗೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ 200 ಕೋಳಿ (Chicken), 50 ಕುರಿ (Sheep), 6 ಹಸುಗಳು (Cows) ಸಜೀವದಹನವಾಗಿವೆ. ರೈತ ಚೇತನ್ ಕುಮಾರ್‌ ಎಂಬುವರಿಗೆ ಸೇರಿದ ಹಸು, ಕುರಿ, ಕೋಳಿಗಳು ಮೃತಪಟ್ಟಿವೆ. ಹಸು, ಕುರಿ, ಕೋಳಿ ಕಳೆದುಕೊಂಡ ರೈತ ಚೇತನ್ ಕುಟುಂಬ ಕಂಗಾಲಾಗಿದೆ. ಸೋಮವಾರ (ಡಿ.11) ರಾತ್ರಿ ಘಟನೆ ನಡೆದಿದ್ದು, ಈವರೆಗೆ ತಹಶೀಲ್ದಾರ್‌, ಪಿಡಿಒ, ಪಶು ಇಲಾಖೆಯ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಭೇಟಿ ನೀಡಿಲ್ಲ.

ಕೊಟ್ಟಿಗೆಗೆ ಬೆಂಕಿ ಬಿದ್ದು ಒಂಬತ್ತು ಹಸುಗಳು ಮೃತ

ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರು ಹೊರವಲಯದ ಹುಲಿಮಂಗಲ ಗ್ರಾಮದಲ್ಲಿ ದನದ ಕೊಟ್ಟಿಗೆಗೆ ಬೆಂಕಿ ಬಿದ್ದು ಒಂಬತ್ತು ಹಸುಗಳು ಮೃತಪಟ್ಟಿದ್ದವು. ಉಳಿದ ಐದು ಹಸುಗಳ ಸ್ಥಿತಿ ಚಿಂತಾಜನಕವಾಗಿತ್ತು. ಕೊಟ್ಟಿಗೆಯಲ್ಲಿ 15 ಹಸುಗಳನ್ನ ಕಟ್ಟಿಹಾಕಲಾಗಿತ್ತು. ಇದೆ ಕೊಟ್ಟಿಗೆಯಲ್ಲಿ ಎರಡು ಬೈಕ್​ಗಳನ್ನು ಕೂಡ ನಿಲ್ಲಿಸಲಾಗಿತ್ತು. ಬೆಂಕಿಯ ಕೆನ್ನಾಲಿಗೆ ಹಸುಗಳ ಜೊತೆ ಬೈಕ್​ಗಳು ಕೂಡ ಸುಟ್ಟು ಭಸ್ಮವಾಗಿವೆ. ಸ್ಥಳಕ್ಕೆ ಪಶುವೈದ್ಯರ ತಂಡ ಹಾಗೂ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:58 am, Tue, 12 December 23