ರಾಜಕೀಯ ಭವಿಷ್ಯದ ಬಗ್ಗೆ ಯಾವುದನ್ನೂ ನಿರ್ಧರಿಸದ ಸೋಮಣ್ಣ ನಿಸ್ಸಂದೇಹವಾಗಿ ಗೊಂದಲದಲ್ಲಿದ್ದಾರೆ!
ಸೋಮಣ್ಣ ಅವರ ಒಂದು ಕಾಲು ಬಿಜೆಪಿಯಲ್ಲಿದ್ದರೆ ಮತ್ತೊಂದು ಕಾಂಗ್ರೆಸ್ ಅಂಗಳದಲ್ಲಿರುವಂತಿದೆ. ಕಳೆದ ವಾರವೇ ಅವರು ತಮ್ಮ ಮುಂದಿನ ರಾಜಕೀಯ ನಡೆ ಬಗ್ಗೆ ಘೋಷಿಸುವುದಾಗಿ ಹೇಳಿ ಅದನ್ನು ಮುಂದೂಡಿದ್ದರು. ತುಮಕೂರು ಕ್ಷೇತ್ರದ ಟಿಕೆಟ್ ನೀಡುವ ಪಕ್ಷದ ಕಡೆ ವಾಲುವ ಲಕ್ಷಣಗಳು ಅವರು ಪದೇಪದೆ ಜಿಲ್ಲೆಗೆ ನೀಡುವ ಭೇಟಿಗಳು ಖಾತರಿಪಡಿಸುವಂತಿವೆ!
ತುಮಕೂರು: ಹಿರಿಯ ಬಿಜೆಪಿ ನಾಯಕ ವಿ ಸೋಮಣ್ಣ (V Somanna) ಅವರ ಮನಸ್ಸಿನಲ್ಲಿ ಏನಿದೆಯೋ ಅಂತ ಅರ್ಥಮಾಡಿಕೊಳ್ಳೋದು ಬಹಳ ಕಷ್ಟ ಸ್ವಾಮಿ. ಕೆಲವು ಸಲ ದಾರ್ಶನಿಕನಂತೆ (visionary) ಮಾತಾಡುತ್ತಾರೆ ಮತ್ತೊಮ್ಮೆ ವೇದಾಂತಿಯ (philosopher) ಹಾಗೆ. ಅವರ ಮಾತು ಕೇಳಿಸಿಕೊಳ್ಳುತ್ತಿದ್ದರೆ ರಾಜಕೀಯದಿಂದ ಇಷ್ಟರಲ್ಲೇ ಸನ್ಯಾಸ ತೆಗೆದುಕೊಳ್ಳದ್ದಾರೇನೋ ಅನಿಸುತ್ತೆ. ಇವತ್ತು ಸೋಮಣ್ಣ ಪುನಃ ತುಮಕೂರಿಗೆ ಬಂದಿದ್ದರು. ಕಳೆದೆರಡು ವಾರಗಳಲ್ಲಿ ನಗರಕ್ಕೆ (ಜಿಲ್ಲೆಗೆ) ಇದು ಅವರ ಮೂರನೇ ಭೇಟಿ. ಹೈಕಮಾಂಡ್ ಏನಾದರೂ ಲೋಕ ಸಭಾ ಚುನಾವಣೆಗೆ ತುಮಕೂರು ಕ್ಷೇತ್ರದ ಟಿಕೆಟ್ ನೀಡುವುದಾಗಿ ಹೇಳಿದೆಯೇ? ಅದಕ್ಕೆ ಅವರು ನೀಡುವ ಪ್ರತಿಕ್ರಿಯೆ ಸಹಾನುಭೂತಿ ಗಿಟ್ಟಿಸುವಂತಿರುತ್ತದೆ. ನಾನೆಷ್ಟರವನು, ನನಗಿಂತ ಘಟಾನುಘಟಿ ನಾಯಕರಿದ್ದಾರೆ, ಅವರೆಲ್ಲಿ ನಾನೆಲ್ಲಿ ಅನ್ನುತ್ತಾರೆ. ಆಮೇಲೆ ಅವರು ಧಾರ್ಮಿಕ ಮನೋಭಾವ ಪ್ರದರ್ಶಿಸಿ ತಾವು ಬೆಂಗಳೂರಲ್ಲಿ ತಿಗಳರ ಸಮಾಜಕ್ಕಾಗಿ ಕಟ್ಟಿಸಿದ ದೇವಸ್ಥಾನಗಳ ಗುಣಗಾನ ಮಾಡುತ್ತಾರೆ. ಅವರ ಜೊತೆಯಲ್ಲಿದ್ದರುವರು ಪ್ರಾಯಶಃ ತಿಗಳರ ಸಮಾಜದವರಿರಬಹುದು, ಅವರಿಗೆ ನೀವೊಮ್ಮೆ ಬಂದ ದೇವಸ್ಥಾನಗಳನ್ನು ನೋಡಬೇಕು ಅನ್ನುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾರಿಗುಡಿ ದೇವಾಲಯಕ್ಕೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್ಕುಮಾರ್: ವಿಡಿಯೋ

ರಿಷಬ್ ಶೆಟ್ಟಿ ಶಿವಾಜಿ ಪಾತ್ರ ಮಾಡುವುದು ಬೇಡ: ವಾಟಾಳ್ ನಾಗರಾಜ್

ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!

ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
