
ತುಮಕೂರು, ಅಕ್ಟೋಬರ್ 24: ತುಮಕೂರು (Tumakuru) ಜಿಲ್ಲೆಯಲ್ಲಿ ಸುಮಾರು ಶೇ96 ರಷ್ಟು ಜಾತಿ ಗಣತಿ (Caste Census) ಮುಗಿದಿದೆ. ಶಿಕ್ಷಕರು ಸಮೀಕ್ಷೆ ಎಂಬ ಸಂಕಷ್ಟದಿಂದ ಬಚಾವ್ ಆಗಿದ್ದಾರೆ. ಆದರೆ ಇದೀಗ ಬಾಕಿ ಉಳಿದ ಮನೆಗಳ ಸಮೀಕ್ಷೆ ಗ್ರಾಮ ಪಂಚಾಯತಿ ಹೆಗಲಿಗೆ ಹಾಕಲಾಗಿದೆ. ವಾಟರ್ ಮ್ಯಾನ್ಗಳಿಗೂ ಸಹ ಸರ್ವೆ ಮಾಡಲು ತರಬೇತಿ ನೀಡಲಾಗಿದ್ದು, ಇದು ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡುವಂತಾಗಿದೆ.
ತುಮಕೂರು ಜಿಲ್ಲೆಯಲ್ಲಿ ಒಟ್ಟು ಶೇ.96ರಷ್ಟು ಜಾತಿ ಗಣತಿ ಸರ್ವೆ ಮುಗಿದಿದೆ. ಇನ್ನು ಸುಮಾರು ಶೇ4 ರಷ್ಟು ಸರ್ವೆ ಕಾರ್ಯ ಬಾಕಿ ಉಳಿದಿದೆ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬಾಕಿ ಉಳಿದ ಮನೆಗಳನ್ನು ಪತ್ತೆ ಹಚ್ಚುವ ಕೆಲಸ ಗ್ರಾಮ ಪಂಚಾಯತಿಗೆ ವಹಿಸಲಾಗಿದೆ.
ಇದನ್ನೂ ಓದಿ: ಅ. 31ರವರೆಗೆ ಜಾತಿ ಗಣತಿ ಅವಧಿ ವಿಸ್ತರಣೆ: ಸಮೀಕ್ಷೆ ಕಾರ್ಯದಿಂದ ಶಿಕ್ಷಕರ ಕೈಬಿಟ್ಟ ಸರ್ಕಾರ
ಕೇವಲ ಮನೆಗಳನ್ನು ಪತ್ತೆ ಹಚ್ಚುವ ಕೆಲಸ ಮಾತ್ರ ಅಲ್ಲದೇ, ಆ ಮನೆಗಳ ಸಮೀಕ್ಷೆಯನ್ನು ಪಂಚಾಯತಿಯವರೇ ಮಾಡಬೇಕಿದೆ. ಪಿಡಿಒ, ಸೆಕ್ರೆಟರಿ, ಕಂಪ್ಯೂಟರ್ ಆಪರೇಟರ್, ವ್ಯಾಟರ್ ಮ್ಯಾನ್ ಗಳಿಗೂ ಸರ್ವೆ ಮಾಡುವ ಜವಾಬ್ದಾರಿ ವಹಿಸಲಾಗಿದೆ. ಹೀಗಾಗಿ ಎಲ್ಲಾ ಗ್ರಾಮ ಪಂಚಾಯತಿಗಳ ಪಿಡಿಒಗಳು ವಾಟರ್ ಮ್ಯಾನ್ ಸೇರಿದಂತೆ ಇತರ ಸಿಬ್ಬಂದಿಗಳ ಮೊಬೈಲ್ನಲ್ಲಿ ಆ್ಯಪ್ ಹಾಕಿ ಕೊಟ್ಟು ತರಬೇತಿ ನೀಡಲಾಗಿದೆ.
ಸರ್ವೆ ಕೆಲಸದ ಹಲವು ಎಡರು ತೊಡರುಗಳಿಂದ ಶಿಕ್ಷಕ ವರ್ಗ ಈಗ ಬಚಾವ್ ಆಗಿದ್ದಾರೆ. ವಿದ್ಯಾವಂತರಾದ ಶಿಕ್ಷಕರಿಗೂ ಈ ಸರ್ವೆ ಆ್ಯಪ್ ಸರಿಯಾಗಿ ಅರ್ಥ ಆಗಿಲ್ಲ. ಹಾಗಾಗಿ ಹಲವು ಸಮಸ್ಯೆಗಳು ಎದುರಿಸಬೇಕಾಯಿತು. ಈ ನಡುವೆ ಕನಿಷ್ಠ ಎಸ್ಎಸ್ಎಲ್ಸಿ ಅನ್ನು ಪಾಸ್ ಆಗದ ವಾಟರ್ ಮ್ಯಾನ್ಗಳಿಗೆ ಸಮೀಕ್ಷೆ ಮಾಡಲು ಹೇಳಿದೆರೆ ಹೇಗೆ ಎಂಬ ಜಿಜ್ಞಾಸೆ ಹುಟ್ಟಿದೆ. ವಾಟರ್ ಮ್ಯಾನ್ಗಳು ಮಾಡುವ ಸರ್ವೆ ಎಷ್ಟರ ಮಟ್ಟಿಗೆ ವಿಶ್ವಾಸಾರ್ಹವಾಗಿರುತ್ತದೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.
ಇದನ್ನೂ ಓದಿ: ಜಾತಿ ಗಣತಿ ಡೆಡ್ಲೈನ್ ಅ.7ಕ್ಕೆ ಅಂತ್ಯ: ಅವಧಿ ಮುಂದೂಡುತ್ತಾ ಸರ್ಕಾರ? ಎಲ್ಲೆಲ್ಲಿ ಎಷ್ಟಾಯ್ತು ಸಮೀಕ್ಷೆ? ಮಾಹಿತಿ ಇಲ್ಲಿದೆ
ಜಿಲ್ಲೆಯಲ್ಲಿ ಸುಮಾರು 332 ಗ್ರಾಮ ಪಂಚಾಯತಿಗಳಿವೆ. ಸಾವಿರಕ್ಕೂ ಹೆಚ್ಚು ವಾಟರ್ ಮ್ಯಾನ್ಗಳಿದ್ದಾರೆ. ಅವರೆಲ್ಲರಿಗೂ ಸರ್ವೆ ಜವಾಬ್ದಾರಿ ಕೊಡಲಾಗಿದ್ದು, ಮುಂದಿನ ದಿನಗಳಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿ ಆಗತ್ತೆ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.