AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಮಕೂರು: ವಿಚಾರಣೆಗೆಂದು ಠಾಣೆಗೆ ಕರೆತಂದ ವ್ಯಕ್ತಿ ಲಾಕಪ್​​​ನಲ್ಲೇ ಡೆತ್? ಕೆರಳಿದ ಗ್ರಾಮಸ್ಥರು..!

ತುಮಕೂರಿನ ಹುಳಿಯಾರು ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆತಂದಿದ್ದ ಕಾಂತರಾಜು ಸಾವನ್ನಪ್ಪಿದ್ದಾರೆ. ಪೊಲೀಸರ ಹಲ್ಲೆಯಿಂದಲೇ ಸಾವು ಸಂಭವಿಸಿದೆ ಎಂದು ಯಳನಾಡು ಗ್ರಾಮಸ್ಥರು ಆರೋಪಿಸಿದ್ದು, ಶವವನ್ನು ಠಾಣೆಯೊಳಗೆ ಇಟ್ಟು ಪ್ರತಿಭಟನೆ ನಡೆಸಿದ್ದಾರೆ. ಯುಗಾದಿ ಜೂಜಾಟದ ಆರೋಪದಡಿ ವಶಕ್ಕೆ ಪಡೆಯಲಾಗಿತ್ತು. ಪೊಲೀಸರು ಹಲ್ಲೆ ಆರೋಪ ನಿರಾಕರಿಸಿದ್ದು, ಸಿಸಿಟಿವಿ ಪರಿಶೀಲನೆ ನಡೆಯುತ್ತಿದೆ. ಘಟನೆ ಬಗ್ಗೆ ತನಿಖೆ ಮುಂದುವರಿದಿದೆ.

ತುಮಕೂರು: ವಿಚಾರಣೆಗೆಂದು ಠಾಣೆಗೆ ಕರೆತಂದ ವ್ಯಕ್ತಿ ಲಾಕಪ್​​​ನಲ್ಲೇ ಡೆತ್? ಕೆರಳಿದ ಗ್ರಾಮಸ್ಥರು..!
ಮೃತ ಕಾಂತರಾಜು
Jagadisha B
| Edited By: |

Updated on: Mar 20, 2026 | 7:20 AM

Share

ತುಮಕೂರು, ಮಾ.20: ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆಂದು ಕರೆತಂದಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಪೊಲೀಸರ ಹಲ್ಲೆಯಿಂದಲೇ ಸಾವು ಸಂಭವಿಸಿದೆ ಎಂದು ಆರೋಪಿಸಿ ಗ್ರಾಮಸ್ಥರು ಠಾಣೆಯೊಳಗೆ ಶವವಿಟ್ಟು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ಯಳನಾಡು ಗ್ರಾಮದಲ್ಲಿ ನಿನ್ನೆ ಸಂಜೆ ಜೂಜಾಟ ನಡೆಯುತ್ತಿದೆ ಎಂಬ ದೂರು ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಧಾವಿಸಿದ ಹುಳಿಯಾರು ಪೊಲೀಸರು, ಸಿದ್ಧರಾಮೇಶ್ವರ ದೇವಸ್ಥಾನದ ಗುಡಿಗೌಡರಾದ ಕಾಂತರಾಜು ಸೇರಿದಂತೆ ಆರು ಮಂದಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು.ಪೊಲೀಸರು ವಿಚಾರಣೆ ನಡೆಸುವ ವೇಳೆ ಕಾಂತರಾಜು ಅವರ ಮೇಲೆ ಹಲ್ಲೆ ಮಾಡಿದ್ದಾರೆ, ಇದರಿಂದ ಅವರು ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂಬುದು ಮೃತನ ಗೆಳೆಯರು ಮತ್ತು ಗ್ರಾಮಸ್ಥರ ಗಂಭೀರ ಆರೋಪವಾಗಿದೆ.

ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಯಳನಾಡು ಗ್ರಾಮಸ್ಥರು ಠಾಣೆಗೆ ಮುತ್ತಿಗೆ ಹಾಕಿ, ಶವವನ್ನು ಠಾಣೆಯೊಳಗೇ ಇಟ್ಟು ಪೊಲೀಸರ ವಿರುದ್ಧ ಘೋಷಣೆ ಕೂಗಿದರು.ಘಟನಾ ಸ್ಥಳಕ್ಕೆ ಮಾಜಿ ಸಚಿವ ಮಾಧುಸ್ವಾಮಿ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಆಲಿಸಿದರು. ತುಮಕೂರು ಎಸ್ಪಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಾಯು ಗುಣಮಟ್ಟ: ಮಲೆನಾಡಿನಲ್ಲಿ ಶುದ್ಧ ಗಾಳಿ! ನಿಮ್ಮ ನಗರದ AQI ಎಷ್ಟಿದೆ?

ಪೊಲೀಸರ ಮಾಹಿತಿ ಪ್ರಕಾರ, ಸಂಜೆ 5 ಗಂಟೆಗೆ ಆರು ಮಂದಿಯನ್ನು ಕರೆತರಲಾಗಿತ್ತು. ರಾತ್ರಿ 8:30ಕ್ಕೆ ವಿಚಾರಣೆ ಮುಗಿಸಿ ಕಳುಹಿಸಿದ ಬಳಿಕ ಕಾಂತರಾಜು ಅವರು ಠಾಣೆಯಿಂದ ಹೊರಬಂದ ಮೇಲೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಸದ್ಯ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆಯುತ್ತಿದ್ದು, ಮೃತರ ಕುಟುಂಬಸ್ಥರಿಂದ ದೂರು ಪಡೆಯುವ ಪ್ರಕ್ರಿಯೆ ಮುಂದುವರಿದಿದೆ ಎಂದು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿ.ಕೆ. ಶಿವಕುಮಾರ್
ಪತ್ನಿ ಸಮೇತ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸಿಎಂ ಡಿ.ಕೆ. ಶಿವಕುಮಾರ್
ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್​​ ಮಾಡಿ ಪ್ರತಿಭಟನೆ
ದಲಿತರ ಮೇಲೆ ದಬ್ಬಾಳಿಕೆ ಆರೋಪ: ಗ್ರಾಮದ ರಸ್ತೆ ಬಂದ್​​ ಮಾಡಿ ಪ್ರತಿಭಟನೆ
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!
ಮೊಬೈಲ್ ಕಸಿದು ಪರಾರಿಯಾಗಲು ಯತ್ನಿಸಿದವ‌ ಕ್ಷಣ ಮಾತ್ರದಲ್ಲಿ ಸಾವು!
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
ನೀಟ್ ಪರೀಕ್ಷೆಗೆ ಇನ್ನೊಂದೇ ದಿನ ಬಾಕಿ; ಕಟ್ಟುನಿಟ್ಟಿನ ಭದ್ರತಾ ವ್ಯವಸ್ಥೆ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
JDS ಶಾಸಕರ ಅಡ್ಡಮತದಾನದ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಹೇಳಿದ್ದೇನು ನೋಡಿ
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ಬಿಗ್ ಬಾಸ್ ಕಾಂಪಿಟೇಷನ್​ ವಿಡಿಯೋ ಕಳುಹಿಸಲು ಕೊನೆಯ ದಿನಾಂಕ ತಿಳಿಸಿದ ಕಲರ್ಸ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತಾಯಿ ಆನೆ ಮಡಿಲಲ್ಲಿ ಮಲಗಿದ್ದ ಮರಿಗಳ ಕ್ಯೂಟ್ ದೃಶ್ಯ ವೈರಲ್
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ದುರಂತ: ಬಿಹಾರ, ತಮಿಳುನಾಡಿನ ಇಬ್ಬರು ನಾಪತ್ತೆ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಮೂಗು ಹೇಳುತ್ತೆ ನಿಮ್ಮ ವ್ಯಕ್ತಿತ್ವ! ಸಾಮುದ್ರಿಕ ಶಾಸ್ತ್ರ ಹೇಳೋದೇನು ನೋಡಿ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ
ಈ ರಾಶಿಯವರಿಗೆ ಮಧ್ಯಾಹ್ನ 12:20 ರಿಂದ ಶುಭ ಕಾಲ ಆರಂಭ