ಮನೆಗಳ್ಳತನ ತಡೆಗೆ ತುಮಕೂರು ಪೊಲೀಸರ ಮಾಸ್ಟರ್​​ ಪ್ಲ್ಯಾನ್​​: ತಂತ್ರಜ್ಞಾನ ಬಳಸಿ ಹೊಸ ವ್ಯವಸ್ಥೆ ಜಾರಿ

ಬೀಗ ಹಾಕಿದ ಮನೆಗಳನ್ನೇ ಟಾರ್ಗೆಟ್​​ ಮಾಡಿ ನಡೆಸಲಾಗುವ ಕಳ್ಳತನಗಳನ್ನು ತಡೆಯಲು ತುಮಕೂರು ಪೊಲೀಸರು ಹೊಸ ಮಾಸ್ಟರ್ ಪ್ಲಾನ್ ಜಾರಿಗೊಳಿಸಿದ್ದಾರೆ. ತಂತ್ರಜ್ಞಾನ ಬಳಸಿಕೊಂಡು ಬೀಗ ಹಾಕಿದ ಮನೆಗಳ ಮೇಲೆ ನಿಗಾ ಇಡಬಹುದಾದ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ತುಮಕೂರಲ್ಲಿ ಇದನ್ನು ಜಾರಿಗೆ ತರಲಾಗಿದೆ.

ಮನೆಗಳ್ಳತನ ತಡೆಗೆ ತುಮಕೂರು ಪೊಲೀಸರ ಮಾಸ್ಟರ್​​ ಪ್ಲ್ಯಾನ್​​: ತಂತ್ರಜ್ಞಾನ ಬಳಸಿ ಹೊಸ ವ್ಯವಸ್ಥೆ ಜಾರಿ
LHMS ವ್ಯವಸ್ಥೆ
Edited By:

Updated on: Nov 24, 2025 | 7:24 PM

ತುಮಕೂರು, ನವೆಂಬರ್​ 24: ಬೀಗ ಹಾಕಿದ ಮನೆ ಅಂದ್ರೆ ಸಾಕು ಕಳ್ಳರಿಗೆ ಖಜಾನೆ ಸಿಕ್ಕಿದಂತೆ. ಏರಿಯಾದಲ್ಲಿ ಯಾರು ಇಲ್ಲದ ಸಮಯ ನೋಡಿ ಕತ್ತಲಾದ ಬಳಿಕ ಎಂಟ್ರಿ ಕೊಟ್ಟು ಸಿಕ್ಕಿದನ್ನೆಲ್ಲ ದೊಚಿ ಪರಾರಿಯಾಗುತ್ತಾರೆ. ಇದು ಕೇವಲ ಒಂದು ಏರಯಾದ್ದೋ, ಊರಿನದ್ದೋ ಮಾತ್ರ ಸಮಸ್ಯೆಯಲ್ಲ. ರಾಜ್ಯಾದ್ಯಂತ ಇಂತಹ ಪ್ರಕರಣಗಳು ನಡೆಯುತ್ತಿರೋದು ಪೊಲಿಸರಿಗೆ ತಲೆನೋವು ತಂದಿದೆ. ಹೀಗಾಗಿ ಮನೆಗಳ್ಳತನಕ್ಕೆ ಬ್ರೇಕ್ಹಾಕುವ ನಿಟ್ಟಿನಲ್ಲಿ ತುಮಕೂರು ಜಿಲ್ಲಾ ಪೊಲೀಸರು ವಿನೂತನ ಹೆಜ್ಜೆ ಇಟ್ಟಿದ್ದಾರೆ. LHMS ಅಂದ್ರೆ ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಂ ಮುಖಾಂತರ ಬೀಗ ಹಾಕಿದ ಮನೆಗಳ ಮೇಲೆ ನಿಗಾ ವಹಿಸಲು ಮುಂದಾಗಿದ್ದಾರೆ.

ಏನಿದು ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಂ?

ದೂರದ ಊರಿನ ಪ್ರಯಾಣ ಅಥವಾ ಮತ್ಯಾವುದೋ ಕಾರಣಕ್ಕೆ ಮನೆಗೆ ಬೀಗ ಹಾಕಿ ಹೋಗುವ ಸ್ಥಳೀಯ ನಿವಾಸಿಗಳಿಗೆಂದೇ ಲಾಕ್ಡ್ ಹೌಸ್ ಮಾನಿಟರಿಂಗ್ ಸಿಸ್ಟಂ ವ್ಯವಸ್ಥೆ ಜಾರಿಗೆ ತರಲಾಗಿದೆ. ತುಮಕೂರು ನಿವಾಸಿಗಳಿಗೆಂದೇ ಅಭಿವೃದ್ಧಿಪಡಿಸಿದ ಆ್ಯಪ್​​, AI ಜೊತೆ ಅತ್ಯಾಧುನಿಕ ಮೋಷನ್ ಡಿಟೆಕ್ಷನ್ ತಂತ್ರಜ್ಞಾನ ಹೊಂದಿದೆ. ಮನೆಗೆ ಬೀಗ ಹಾಕಿ ತೆರಳುವವರು ಆ್ಯಪ್ ಮುಖಾಂತರ ಲಾಗಿನ್ ಆಗಿ ರಿಕ್ವೆಸ್ಟ್ ಕಳುಹಿಸಿದಲ್ಲಿ, ಅಂತಹ ಮನೆಗಳಿಗೆ ಪೊಲೀಸರು ಸಿಸಿ ಕ್ಯಾಮರಾ ಅಳವಡಿಸಲಿದ್ದಾರೆ. ವೈರಲೆಸ್ಕ್ಯಾಮರಾಗಳು ವೈಫೈ ಮೂಲಕ ಕಾರ್ಯಾಚರಿಸಲಿದ್ದು, ಮನೆಯ ಮೇಲೆ ಎಸ್ಪಿ ಕಚೇರಿ ಬಳಿಯ ಸ್ಮಾರ್ಟ್ ಸಿಟಿ ಕಚೇರಿಯ್ಲೇ ಕೂತು ಸಿಬ್ಬಂದಿ ನಿಗಾ ವಹಿಸಿಲಿದ್ದಾರೆ. ಅನುಮಾನಸ್ಪದ ಬೆಳವಣಿಗೆಯಾದಲ್ಲಿ ಕೂಡಲೇ ಪೊಲೀಸರಿಗೆ ಅಲರ್ಟ್ ಬರಲಿದೆ. ಕೂಡಲೇ ಸ್ಮಾರ್ಟ್ ಸಿಟಿ ಸಿಬ್ಬಂದಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಲಿದ್ದು, ಸಂದೇಶ ಆಧರಿಸಿ ಬೀಗ ಹಾಕಿದ ಮನೆಗೆ ತೆರಳಿ ಪರಿಶೀಲನೆ ನಡೆಸಲಾಗುತ್ತೆ. ಆ್ಯಪ್ಮೂಲಕ ಮಾತ್ರವಲ್ಲದೆ ಮನೆ ಮನೆಗೆ ಪೊಲೀಸ್ ಯೋಜ‌ನೆಯಡಿ ನಿಯೋಜನೆಗೊಂಡ ಸಿಬ್ಬಂದಿಗೆ ನಿವಾಸಿಗಳು ಮಾಹಿತಿ ನೀಡಿದರೂ ಅವರ ಮನೆಗಳ ಮೇಲೂ ಇದೇ ರೀತಿ ನಿಗಾವಹಿಸಲಾಗುತ್ತೆ.

ಇದನ್ನೂ ಓದಿ: ಭಿಕ್ಷುಕನ ಸೋಗಲ್ಲಿ ಮನೆಗಳ ರಾಬರಿ;  ಖಾಕಿ ಬಲೆಗೆ ಬಿದ್ದ ಮೋಸ್ಟ್​​ ವಾಂಟೆಡ್​​ ಕಳ್ಳ

ಬಹು ಸಮಯದ ಹಿಂದೆಯೇ ಈ ವ್ಯವಸ್ಥೆ ಬಗ್ಗೆ ಚಿಂತನೆ ಪೊಲೀಸರಿಗೆ ಬಂದಿತ್ತಾದರೂ ತಂತ್ರಜ್ಞಾನದ ಕೊರತೆಯಿಂದ ಇದು ಅರ್ಧಕ್ಕೆ ನಿಂತಿತ್ತು. ಆದರೆ ಈಗ ಅದು ಯಶಸ್ವಿಯಾಗಿ ಕಾರ್ಯಕರೂಪಕ್ಕೆ ಬರುತ್ತಿದೆ. ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಅಡಿ 250 ಸಿಸಿ ಕ್ಯಾಮರಾ ತೆರಿಸಿಕೊಳ್ಳಲಾಗಿದೆ. ಎಐ ಹಾಗೂ ಮೋಷನ್ ಡಿಟೆಕ್ಷನ್ ಸೇರಿದಂತೆ ಉನ್ನತ ತಂತ್ರಜ್ಞಾನಗಳ ಒಳಗೊಂಡಂತೆ LHMS ಆ್ಯಪ್ ಅಭಿವೃದ್ಧಿಪಡಿಸಿ ಕಾರ್ಯರೂಪಕ್ಕೆ ತರಲಾಗಿದೆ. ಇನ್ನು ರಾಜ್ಯದಲ್ಲೇ ಮೊಟ್ಟಮೊದಲ ಬಾರಿಗೆ ತುಮಕೂರಿನಲ್ಲಿ ಈ ವ್ಯವಸ್ಥೆ ಕಾರ್ಯರೂಪಕ್ಕೆ ಬಂದಿದ್ದು, ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗತ್ತೆ ಅನ್ನೊದನ್ನು ಕಾದು ನೋಡಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.