ತುಮಕೂರು: ತಂದೆಯಿಂದಲೇ ನಿರಂತರ ಅತ್ಯಾಚಾರ, 3 ತಿಂಗಳ ಗರ್ಭಿಣಿಯಾದ 14 ವರ್ಷದ ಮಗಳು

ಅನ್ಯರಿಂದ, ಕೆಟ್ಟ ದೃಷ್ಟಿಯಿಂದ ಮಗಳನ್ನು ಕಾಪಾಡಬೇಕಿದ್ದ ತಂದೆಯೇ ಪೈಶಾಚಿಕ ಕೃತ್ಯ ಎಸಗಿದ್ದಾನೆ. ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆದಿದ್ದು ಬಾಲಕಿ 3 ತಿಂಗಳ ಗರ್ಭಿಣಿಯಾಗಿದ್ದಾಳೆ. ತುಮಕೂರಿನ ಹೊನ್ನವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತುಮಕೂರು: ತಂದೆಯಿಂದಲೇ ನಿರಂತರ ಅತ್ಯಾಚಾರ, 3 ತಿಂಗಳ ಗರ್ಭಿಣಿಯಾದ 14 ವರ್ಷದ ಮಗಳು
ಅತ್ಯಾಚಾರ
Edited By:

Updated on: Sep 04, 2024 | 8:46 AM

ತುಮಕೂರು, ಸೆ​.04: ಹೆಣ್ಣುಮಕ್ಕಳಿಗೆ ಅಪ್ಪನೇ ಸೂಪರ್ ಹೀರೋ ಎಂಬ ಮಾತುಗಳು ನಾವು ಹಾಗಾಗ ಕೇಳುತ್ತಿರುತ್ತೇವೆ. ಅದರಂತೆ ಹೆಣ್ಣುಮಕ್ಕಳು ಅಪ್ಪನ ಮೇಲೆ ವಿಶೇಷ ಪ್ರೀತಿಯನ್ನು ಇಟ್ಟಿರುತ್ತಾರೆ. ಆದರೆ ಇಲ್ಲಿ ನಡೆದ ಘಟನೆಯೊಂದು ಅಪ್ಪ ಎಂಬ ಪದಕ್ಕೆ ಮಸಿ ಬಳಿದಂತಿದೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಹೊನ್ನವಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಂದೆಯಿಂದಲೇ ಮಗಳ ಮೇಲೆ ನಿರಂತರ ಅತ್ಯಾಚಾರ ನಡೆದಿರುವ ಘಟನೆ ನಡೆದಿದೆ. ಅಷ್ಟೇ ಅಲ್ಲದೆ 14 ವರ್ಷದ ಮಗಳು ಗರ್ಭ ಧರಿಸಿದ್ದಾಳೆ.

ಎಂಟು ತಿಂಗಳ ಹಿಂದೆ ಕೂಲಿ ಕೆಲಸಕ್ಕಾಗಿ ಹೊರ ರಾಜ್ಯದಿಂದ ಬಂದಿದ್ದ ಕುಟುಂಬ ಹೊನ್ನವಳ್ಳಿಯಲ್ಲಿ ನೆಲೆಸಿದೆ. ಇತ್ತೀಚೆಗೆ ಬಾಲಕಿಯ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದ ಕಾರಣ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಘಟನೆ ಬೆಳಕಿಗೆ ಬಂದಿದೆ. ತನ್ನ ಮಗಳ ಮೇಲೆಯೇ ತಂದೆ ಕ್ರೌರ್ಯ ಮೆರೆದಿರುವುದು ತಿಳಿಯುತ್ತಿದ್ದಂತೆ ಪೋಕ್ಸೋ ಪ್ರಕರಣ ಹಾಗೂ ಅತ್ಯಾಚಾರ ಆರೋಪ ಅಡಿ ಕೇಸ್ ದಾಖಲಾಗಿದೆ. ಬಾಲಕಿ ಮೂರು ತಿಂಗಳ ಗರ್ಭಿಣಿಯಾಗಿದ್ದಾಳೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿಯಿಂದ ಕೆಆರ್ ಪುರಂನಲ್ಲಿ ರಿಂಗ್ ರೋಡ್ ಅಧ್ವಾನ, ವಾಹನ ಸವಾರರಿಗೆ ನಿತ್ಯ ಕಿರಿಕಿರಿ

ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಕಾಮುಕ ಅರೆಸ್ಟ್

ಚಿತ್ರದುರ್ಗ ಜಿಲ್ಲೆ ಅಬ್ಬೇನಹಳ್ಳಿಯ ಮಾನಸಿಕ ಅಸ್ವಸ್ಥೆಯನ್ನ ಅತ್ಯಾಚಾರ ಎಸಗಿ ಕೊಲೆ ಮಾಡಿ ಪರಾರಿ ಆಗಿದ್ದ, ಕಾಮುಕ ಅರೆಸ್ಟ್ ಆಗಿದ್ದಾನೆ. ವಿಜಯನಗರ ಜಿಲ್ಲೆ ಕೂಡ್ಲಿಗಿಯ ತಿಪ್ಪೇನಹಳ್ಳಿಯಲ್ಲಿ ಆಗಸ್ಟ್ 31ರಂದು ಬೆತ್ತಲೆ ಸ್ಥಿತಿಯಲ್ಲಿ ಯುವತಿ ಶವ ಪತ್ತೆಯಾಗಿತ್ತು. ಆರೋಪಿ ಓಬಣ್ಣ ತಪ್ಪೊಪ್ಪಿಕೊಂಡಿದ್ದು ಪೊಲೀಸರು ಜೈಲಿಗಟ್ಟಿದ್ದಾರೆ.

‘ಬರೀ ಕೊಲೆ ಅಲ್ಲ ರೇಪ್ & ಮರ್ಡರ್’

ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೀದರ್​ನ ಗುಣತೀರ್ಥವಾಡಿ ಗ್ರಾಮದ ಯುವತಿ ಶವವಾಗಿ ಪತ್ತೆಯಾಗಿದ್ಲು. ಕಿಡಿಗೇಡಿಗಳು ಯುವತಿ ಮೇಲೆ ಅತ್ಯಾಚಾರ ಎಸೆಗಿ ಕೊಂದಿದ್ದಾರೆಂದು ಸಂಬಂಧಿಕರು ಆರೋಪಿಸಿದ್ದಾರೆ. ಬಸವಕಲ್ಯಾಣ ಪಟ್ಟಣದ ವಾಲ್ಮೀಕಿ ವೃತ್ತದ ಬಳಿ, ಆರೋಪಿಗಳನ್ನ ಬಂಧಿಸುವಂತೆ ಗ್ರಾಮಸ್ಥರು ಪ್ರತಿಭಟಿಸಿದ್ರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:44 am, Wed, 4 September 24