ಬೆಂಗಳೂರು: ನಮ್ಮ ಮೆಟ್ರೋ ಕಾಮಗಾರಿಯಿಂದ ಕೆಆರ್ ಪುರಂನಲ್ಲಿ ರಿಂಗ್ ರೋಡ್ ಅಧ್ವಾನ, ವಾಹನ ಸವಾರರಿಗೆ ನಿತ್ಯ ಕಿರಿಕಿರಿ
ರಾಜಧಾನಿ ಬೆಂಗಳೂರಲ್ಲಿ ಯಾವ ರಸ್ತೆಯಲ್ಲಿ ಸಂಚರಿಸಿದರೂ ಗುಂಡಿಗಳು ಜನರಿಗೆ ಭಯ ಹುಟ್ಟಿಸುತ್ತವೆ. ಒಂದೋ ರಸ್ತೆಗೆ ಸರಿಯಾಗಿ ಡಾಂಬರು ಹಾಕಿರುವುದಿಲ್ಲ, ಅಥವಾ ಹಾಕಿದ್ದರೂ ಅದರಲ್ಲಿ ದೊಡ್ಡ ದೊಡ್ಡ ಗುಂಡಿಗಳಿರುತ್ತವೆ. ಈ ಬಗ್ಗೆ ‘ಟಿವಿ9’ ಇಂದು ಗ್ರೌಂಡ್ ರಿಪೋರ್ಟ್ ಮಾಡಿದೆ.

ಬೆಂಗಳೂರು, ಸೆಪ್ಟೆಂಬರ್ 4: ಹೆಬ್ಬಾಳದಿಂದ ಕೆಆರ್ ಪುರಂ ರಿಂಗ್ ರೋಡ್ನಲ್ಲಿ (ಹೊರ ವರ್ತುಲ ರಸ್ತೆ) ನೂರಾರು ಹೊಂಡಗಳಿದ್ದು, ವಾಹನ ಸವಾರರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಮೆಟ್ರೋ ಕಾಮಗಾರಿಗಾಗಿ ದೊಡ್ಡ ದೊಡ್ಡ ಗುಂಡಿಗಳನ್ನು ತೆಗೆಯಲಾಗಿದೆ. ಆದರೆ ಗುಂಡಿಗಳನ್ನು ಮುಚ್ಚಿಲ್ಲ, ಮೊದಲು ಈ ಗುಂಡಿಗಳಿಗೆ ಬ್ಯಾರಿಕೇಡ್ಗಳನ್ನು ಹಾಕಲಾಗಿತ್ತು, ಆದರೆ ಈಗ ಬ್ಯಾರಿಕೇಡ್ ಗಳೇ ಇಲ್ಲ. ಇದರಿಂದ ದ್ವಿಚಕ್ರ ವಾಹನಗಳು ಗುಂಡಿಗೆ ಬೀಳುವ ಸಾಧ್ಯತೆಗಳಿವೆ.
ಪ್ರತಿದಿನ ಈ ರಸ್ತೆಯಲ್ಲಿ ಲಕ್ಷಾಂತರ ವಾಹನಗಳು ಸಂಚಾರ ಮಾಡುತ್ತವೆ. ಚೂರು ಯಾಮಾರಿದರೂ ಗುಂಡಿಗಳಲ್ಲಿ ಬೀಳುವುದು ನಿಶ್ಚಿತ. ಮೆಟ್ರೋ ಪಿಲ್ಲರ್ಗಳನ್ನು ಹಾಕಲು ಗುಂಡಿಗಳನ್ನು ತೆಗೆಯಲಾಗಿತ್ತು. ಕೆಲವೊಂದು ಕಡೆಗಳಲ್ಲಿ ಮಾತ್ರ ಬಿಎಂಆರ್ಸಿಎಲ್ ಗುತ್ತಿಗೆದಾರರು ಬ್ಯಾರಿಕೇಡ್ಗಳನ್ನು ಹಾಕಿದ್ದಾರೆ. ಗಾಳಿ ಮಳೆಗೆ ಈ ಬ್ಯಾರಿಕೇಡ್ಗಳು ರಸ್ತೆಗೆ ಬೀಳುತ್ತಿವೆ. ರಿಂಗ್ ರೋಡ್ ಬಾಬುಸ ಪಾಳ್ಯ ಬಳಿಯಿರುವ ರೋಡ್ನಲ್ಲಿ ವಾಹನ ಸವಾರರು ಓಡಾಡಲು ಸಾಧ್ಯವೇ ಆಗದ ಮಟ್ಟಿಗೆ ಗುಂಡಿಗಳಾಗಿವೆ.

ಮತ್ತೊಂದೆಡೆ, ರಸ್ತೆ ಮಾಡುವುದಕ್ಕಾಗಿ ಜಲ್ಲಿ ಕಲ್ಲುಗಳನ್ನು ಸುರಿದು ಹೋಗಿದ್ದು, ಇದರಲ್ಲಿ ವಾಹನಗಳು ಹೋಗಲು ಸಂಚರಿಸಲು ಆಗುತ್ತಿಲ್ಲ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಸುರಂಗ ಮಾರ್ಗ: ಯೋಜನಾ ವರದಿಗೇ ಬೇಕು ಬರೋಬ್ಬರಿ 9.45 ಕೋಟಿ ರೂ!
ಕೆಆರ್ ಪುರ ರೈಲ್ವೆ ಸ್ಟೇಷನ್ ಬಳಿ ರೋಡ್ನಲ್ಲಿರುವ ಗುಂಡಿಗಳಂತು ವಾಹನ ಸವಾರರಿಗೆ ಕಾಣಿಸುವುದೇ ಇಲ್ಲ. ಇತ್ತ ಟಿನ್ ಫ್ಯಾಕ್ಟರಿ ಬಳಿ ಮೆಟ್ರೋ ಪಿಲ್ಲರ್ಗಳ ನಿರ್ಮಾಣಕ್ಕೆ ಗುಂಡಿಗಳನ್ನು ತೆಗೆಯಲಾಗಿತ್ತು. ಆದರೆ ಕಾಮಗಾರಿ ಮುಗಿದ ಮೇಲೆ ರೋಡ್ನಲ್ಲಿ ಆಗಿರುವ ಗುಂಡಿಗಳನ್ನು ಮುಚ್ಚಿಲ್ಲ. ಇದರಿಂದ ವಾಹನ ಸವಾರರು ತುಂಬಾ ಸಮಸ್ಯೆ ಎದುರಿಸುತ್ತಿದ್ದಾರೆ.

ಒಟ್ಟಿನಲ್ಲಿ ನಗರದ ಸಾಕಷ್ಟು ಕಡೆಗಳಲ್ಲಿ ಮೆಟ್ರೋ ಕಾಮಗಾರಿಗಳಿಗಾಗಿ ತೆಗೆದಿರುವ ಗುಂಡಿಗಳನ್ನು ಇನ್ನೂ ಸರಿಯಾಗಿ ಮುಚ್ಚಿಲ್ಲ. ಇತ್ತ ರಸ್ತೆಗಳಿಗೆ ಡಾಮರೀಕರಣ ಮಾಡುತ್ತೇವೆ ಎಂದು ಜಲ್ಲಿ ಕಲ್ಲುಗಳನ್ನು ಸುರಿದಿದ್ದಾರೆ. ಕೂಡಲೇ ಅಧಿಕಾರಿಗಳು ಈ ಸಮಸ್ಯೆಯನ್ನು ಬಗಹರಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:03 am, Wed, 4 September 24



