ಗಣೇಶ ಹಬ್ಬ ಪ್ರಯುಕ್ತ NWKRTCಯಿಂದ ಪ್ರಯಾಣಿಕರಿಗೆ ಗಿಫ್ಟ್: ಸೀಟ್ ಬುಕ್ಕಿಂಗ್ನಲ್ಲಿ ರಿಯಾತಿ
ಹಬ್ಬದ ಸಂಭ್ರಮದಲ್ಲಿ ಬಸ್ಗಳು ಫುಲ್ ರಶ್ ಇರುವುದರಿಂದ ಹೆಚ್ಚಿನ ಪ್ರಯಾಣಿಕರು ಸೀಟ್ ಬುಕ್ ಮಾಡಿಕೊಂಡು ತೆರಳುತ್ತಾರೆ. ಸೀಟ್ ಬಕ್ ಮಾಡಲು ಹೆಚ್ಚಿನ ಹಣ ನೀಡಬೇಕಾಗುತ್ತದೆ ಎಂಬ ಚಿಂತೆ ಪ್ರಯಾಣಿಕರಿಗೆ ಇರುತ್ತದೆ. ಈ ಚಿಂತೆಯನ್ನು ದೂರ ಮಾಡುವ ನಿಟ್ಟಿನಲ್ಲಿ ಎನ್ಡಬ್ಲೂಕೆಆರ್ಟಿಸಿ ಸಿಹಿ ಸುದ್ದಿ ನೀಡಿದೆ.
ಹುಬ್ಬಳ್ಳಿ, ಸೆಪ್ಟೆಂಬರ್ 04: ಗಣೇಶ ಹಬ್ಬ (Ganesha Festival), ವಾರದ ರಜೆ ಹಿನ್ನೆಲೆಯಲ್ಲಿ ಜನರು ತಮ್ಮ-ತಮ್ಮ ಊರುಗಳಿಗೆ ತೆರಳಲು ಸಿದ್ದರಾಗಿದ್ದಾರೆ. ಇದರಿಂದ ಕರ್ನಾಟಕ ಸಾರಿಗೆ ಬಸ್ಗಳಲ್ಲಿ ದಿನ ನಿತ್ಯಕ್ಕಿಂತ ಹೆಚ್ಚು ಪ್ರಯಾಣಿಕರು ಪ್ರಯಾಣ ಮಾಡುವ ಸಾಧ್ಯತೆ ಇದೆ. ಇದರಿಂದ ಬಸ್ಗಳು ಫುಲ್ ರಶ್ ಆಗಲಿವೆ. ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಮತ್ತು ಶುಲ್ಕ ಹೊರೆಯನ್ನು ತಡೆಯುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (NWKRTC) ಪ್ರಯಾಣಿಕರಿಗೆ ವಿಶೇಷ ಅನುಕೂಲ ಕಲ್ಪಿಸಿದೆ.
ಗಣೇಶ ಚತುರ್ಥಿ ಪ್ರಯುಕ್ತ ದೂರದ ಸ್ಥಳಗಳಿಂದ ತಮ್ಮ ಊರುಗಳಿಗೆ ತೆರಳುವ ಹಾಗೂ ಹಬ್ಬ ಮುಗಿಸಿ ಹಿಂದಿರುಗುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಎನ್ಡಬ್ಲೂಕೆಆರ್ಟಿಸಿ ವಿಶೇಷ ಬಸ್ ವ್ಯಸ್ಥೆ ಮಾಡಿದೆ. ಸೆಪ್ಟೆಂಬರ್ 5 ರಿಂದ 10ರವರೆಗೆ ಈ ವಿಶೇಷ ಬಸ್ಗಳು ಸಂಚರಿಸಲಿವೆ.
ಯಾವ ಯಾವ ಜಿಲ್ಲೆಗಳಿಂದ ವಿಶೇಷ ಬಸ್
ಬೆಂಗಳೂರು, ಪುಣೆ, ಹೈದರಾಬಾದ್ನಿಂದ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಚಿಕ್ಕೋಡಿ, ಉತ್ತರ ಕನ್ನಡ, ಹಾವೇರಿ, ಬಾಗಲಕೋಟೆ ಜಿಲ್ಲೆಗಳಿಗೆ ವಿಶೇಷ ಬಸ್ ಬಿಡಲಾಗಿದೆ.
ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಪ್ರಯಾಣಿಕರಿಗೆ ಕೆಎಸ್ಆರ್ಟಿಸಿ ಗುಡ್ ನ್ಯೂಸ್: ರಾಜ್ಯ, ಹೊರ ರಾಜ್ಯಗಳಿಗೆ 1500 ಹೆಚ್ಚುವರಿ ಬಸ್
ಸೀಟ್ ಬುಕ್ಕಿಂಗ್ನಲ್ಲಿ ಬಂಪರ್ ಆಫರ್
ಹಬ್ಬದ ಸಂಭ್ರಮದಲ್ಲಿ ಬಸ್ಗಳು ಫುಲ್ ರಶ್ ಇರುವುದರಿಂದ ಹೆಚ್ಚಿನ ಪ್ರಯಾಣಿಕರು ಸೀಟ್ ಬುಕ್ ಮಾಡಿಕೊಂಡು ತೆರಳುತ್ತಾರೆ. ಸೀಟ್ ಬಕ್ ಮಾಡಲು ಹೆಚ್ಚಿನ ಹಣ ನೀಡಬೇಕಾಗುತ್ತದೆ ಎಂಬ ಚಿಂತೆ ಪ್ರಯಾಣಿಕರಿಗೆ ಇರುತ್ತದೆ. ಈ ಚಿಂತೆಯನ್ನು ದೂರ ಮಾಡುವ ನಿಟ್ಟಿನಲ್ಲಿ ಎನ್ಡಬ್ಲೂಕೆಆರ್ಟಿಸಿ ಸಿಹಿ ಸುದ್ದಿ ನೀಡಿದೆ.
ಹಬ್ಬದ ಸಂಭ್ರಮ 4 ಅಥವಾ ಹೆಚ್ಚಿನ ಆಸನಗಳನ್ನು ಒಂದೇ ಸಲಕ್ಕೆ ಕಾಯ್ದಿರಿಸಿದರೆ-ಶೇ. %5 ರಿಯಾಯಿತಿ
Book 4 or more seats on a single ticket. Get 5% discount. #NWKRTC #Bus #TicketBooking #BookTicket #Discount #Airavat #Volvo #AC #Non_AC #Sleeper #Rajahamsa #PublicTransport #Travel@PriyangaMadhan pic.twitter.com/XUtU00I0Lm
— North Western Karnataka Road Transport Corporation (@nw_krtc) September 3, 2024
ಗಣೇಶ ಹಬ್ಬಕ್ಕೆ ಎನ್ಡಬ್ಲೂಕೆಆರ್ಟಿಸಿ ಪ್ರಯಾಣಿಕರಿಗೆ ಗಿಫ್ಟ್ ನೀಡಿದೆ. ಈ ಹಬ್ಬದ ಸಂದರ್ಭದಲ್ಲಿ ನಾಲ್ಕು ಅಥವಾ ನಾಲ್ಕಕ್ಕಿಂತ ಹೆಚ್ಚಿನ ಆಸನಗಳನ್ನು ಒಂದೇ ಸಲಕ್ಕೆ ಕಾಯ್ದಿರಿಸಿರಿದರೇ ಶೇ 5 ರಷ್ಟು ರಿಯಾತಿ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:40 am, Wed, 4 September 24