ಹಬ್ಬಕ್ಕೆ ಊರಿಗೆ ಹೊರಟವರಿಗೆ ಖಾಸಗಿ ಬಸ್ ಟಿಕೆಟ್ ದರ ಏರಿಕೆ ಶಾಕ್: ದುಪ್ಪಟ್ಟು ದರ ವಸೂಲಿ

ಸಾಲು-ಸಾಲು ರಜೆ ಬಂತು ಅಂದರೆ ಖಾಸಗಿ ಬಸ್​​ಗಳಿಗೆ ಹಬ್ಬವೋ ಹಬ್ಬ. ಎರಡ್ಮೂರು ಪಟ್ಟು ದರ ಏರಿಕೆ ಮಾಡಿ, ಜನರಿಂದ ವಸೂಲಿ ಶುರುವಾಗುತ್ತದೆ. ಈಗ ಮತ್ತದೇ ಚಾಳಿ ಮುಂದುವರಿದಿದ್ದು , ಗೌರಿ-ಗಣೇಶ ಹಬ್ಬಕ್ಕೆ ಊರಿಗೆ ಹೊರಡುವ ಪ್ರಯಾಣಿಕರಿಗೆ ಶಾಕ್ ಎದುರಾಗಿದೆ.

ಹಬ್ಬಕ್ಕೆ ಊರಿಗೆ ಹೊರಟವರಿಗೆ ಖಾಸಗಿ ಬಸ್ ಟಿಕೆಟ್ ದರ ಏರಿಕೆ ಶಾಕ್: ದುಪ್ಪಟ್ಟು ದರ ವಸೂಲಿ
ಹಬ್ಬಕ್ಕೆ ಊರಿಗೆ ಹೊರಟವರಿಗೆ ಖಾಸಗಿ ಬಸ್ ಟಿಕೆಟ್ ದರ ಏರಿಕೆ ಶಾಕ್: ದುಪ್ಪಟ್ಟು ದರ ವಸೂಲಿ
Follow us
| Updated By: ಗಣಪತಿ ಶರ್ಮ

Updated on: Sep 04, 2024 | 6:56 AM

ಬೆಂಗಳೂರು, ಸೆಪ್ಟೆಂಬರ್ 4: ಗೌರಿ ಗಣೇಶ, ದಸರಾ, ದೀಪಾವಳಿ, ಸಂಕ್ರಾಂತಿ ಹೀಗೆ ಹಬ್ಬಗಳ ಸೀಸನ್ ಬಂತು ಅಂದರೆ ಖಾಸಗಿ ಬಸ್ ಮಾಲೀಕರಿಗೆ ಭರ್ಜರಿ‌ ಲಾಟರಿ. ಸಿಕ್ಕಿದ್ದೇ ಚಾನ್ಸ್ ಎಂದು ಜನರಿಂದ ಸುಲಿಗೆಗೆ ಇಳಿಯುತ್ತಾರೆ. ರಜೆ ಎಂದು ಮನೆ ಕಡೆ ಹೊರಟವರ ಜೇಬಿಗೆ ಕನ್ನ ಹಾಕುತ್ತಾರೆ. ಹೀಗೆ ಅವಕಾಶ ಸಿಕ್ಕಗಾಲೆಲ್ಲ ದರ ಏರಿಸುವ ಖಾಸಗಿ ಬಸ್ ಮಾಲೀಕರು ವಿಘ್ನ ವಿನಾಯಕ ಗಣೇಶ ಹಬ್ಬಕ್ಕೆ ಎರಡ್ಮೂರು ದಿನಗಳ ರಜೆ ಇದೆ ಎಂದು ಮನೆ ಕಡೆ ಹೋಗಲು ಸಜ್ಜಾದವರಿಗೆ ಖಾಸಗಿ ಟಿಕೆಟ್ ದರ ಏರಿಕೆ ಶಾಕ್ ನೀಡಿದ್ದಾರೆ.

ಸೆಪ್ಟೆಂಬರ್ 6 ಶುಕ್ರವಾರ ಗೌರಿ ಹಬ್ಬ. 7 ರಂದು ಗಣೇಶನ ಹಬ್ಬ. ಭಾನುವಾರ ಹೇಗೂ ರಜೆ. ಹೀಗಾಗಿ ಐದರಂದು ಊರಿಗೆ ತೆರಳಲು ಜನರು ಪ್ಲಾನ್ ಮಾಡಿದ್ದಾರೆ. ಆದರೆ ಖಾಸಗಿ ಬಸ್​​​ಗಳಲ್ಲಿ ದುಪ್ಪಟ್ಟು ದರ ಏರಿಕೆ ಆಗಿರುವುದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸೆಪ್ಟೆಂಬರ್ 3ರಂದು ಖಾಸಗಿ ಬಸ್​ಗಳ ಟಿಕೆಟ್ ದರ ವಿವರ

  • ಬೆಂಗಳೂರು – ಹಾವೇರಿ: 600 – 1200 ರೂ.
  • ಬೆಂಗಳೂರು-ಗುಲ್ಬರ್ಗ : 600-1200 ರೂ.
  • ಬೆಂಗಳೂರು-ಯಾದಗಿರಿ: 600-1400 ರೂ.
  • ಬೆಂಗಳೂರು-ದಾವಣಗೆರೆ: 550-900 ರೂ.
  • ಬೆಂಗಳೂರು-ಹಾಸನ: 475-600 ರೂ.
  • ಬೆಂಗಳೂರು-ಧಾರವಾಡ: 500-1100 ರೂ.
  • ಬೆಂಗಳೂರು-ಚಿಕ್ಕಮಗಳೂರು: 500-900 ರೂ.

ಸೆಪ್ಟೆಂಬರ್ 5ರಂದು ಖಾಸಗಿ ಬಸ್ ಟಿಕೆಟ್ ದರ

  • ಬೆಂಗಳೂರು-ಹಾವೇರಿ: 1550-1600 ರೂ.
  • ಬೆಂಗಳೂರು-ಗುಲ್ಬರ್ಗ: 1200-1800 ರೂ.
  • ಬೆಂಗಳೂರು-ಯಾದಗಿರಿ: 1100-1750 ರೂ.
  • ಬೆಂಗಳೂರು-ದಾವಣಗೆರೆ: 900-2000 ರೂ.
  • ಬೆಂಗಳೂರು-ಹಾಸನ: 899-1800 ರೂ.
  • ಬೆಂಗಳೂರು-ಧಾರವಾಡ: 1200-3000 ರೂ.
  • ಬೆಂಗಳೂರು-ಚಿಕ್ಕಮಗಳೂರು: 900-1500 ರೂ.

ಗೌರಿ- ಗಣೇಶ ಹಬ್ಬದ ಪ್ರಯುಕ್ತ ಊರಿಗೆ ಹೋಗುವವರಿಗೆ ಕೆಎಸ್ಆರ್​​ಟಿಸಿ ಗುಡ್ ನ್ಯೂಸ್ ನೀಡಿದೆ. ಊರಿಗೆ ಹೋಗುವ ಪ್ರಯಾಣಿಕರಿಗಾಗಿ 1500 ಹೆಚ್ಚುವರಿ ಬಸ್​​ಗಳನ್ನು ನಿಯೋಜನೆ ಮಾಡಲಾಗಿದೆ. ಸೆ.5 ರಿಂದ ಸೆ.7 ರವರೆಗೆ ಬೆಂಗಳೂರಿನಿಂದ ಈ ಹೆಚ್ಚುವರಿ ಬಸ್​​ಗಳು ಹೊರಡಲಿವೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯ,ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಹುಬ್ಬಳ್ಳಿ, ದಾರವಾಡ, ದಾವಣಗೆರೆ ತಿರುಪತಿ, ವಿಜಯವಾಡ, ಹೈದಾರಬಾದ್​ಗೆ ವಿಶೇಷ ಕಾರ್ಯಚರಣೆ ಮಾಡಲಿವೆ.

ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪರಿಯಾಪಟ್ಟಣ, ವಿರಾಜಪೇಟೆ, ಮಡಿಕೇರಿಗೆ ವಿಶೇಷ ಬಸ್ ಕಾರ್ಯಚರಣೆ ಮಾಡಲಿದ್ದು, ತಮಿಳುನಾಡು ಮತ್ತು ಕೇರಳ ಭಾಗಗಳಿಗೆ ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣದಿಂದ ಬಸ್ ಗಳು ಹೊರಡಲಿದೆ. ಸೆ.8 ರಂದು ರಾಜ್ಯದ ವಿವಿಧ ಸ್ಥಳಗಳಿಂದ ಹೆಚ್ಚುವರಿ ಬಸ್​ಗಳು ವಾಪಸ್ಸಾಗಲಿವೆ. ಪ್ರಯಾಣಿಕರಿಗೆ ಇ- ಟಿಕೆಟ್ ಬುಕ್ಕಿಂಗ್​ಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: ಗಣೇಶ ಹಬ್ಬಕ್ಕೆ ಪ್ರಯಾಣಿಕರಿಗೆ ಕೆಎಸ್​ಆರ್​ಟಿಸಿ ಗುಡ್ ನ್ಯೂಸ್: ರಾಜ್ಯ, ಹೊರ ರಾಜ್ಯಗಳಿಗೆ 1500 ಹೆಚ್ಚುವರಿ ಬಸ್

ಈ ಮಧ್ಯೆ, ಸಾರಿಗೆ ಇಲಾಖೆ ಪ್ರತಿ ಮೂರು ತಿಂಗಳಿಗೆ ಖಾಸಗಿ ಬಸ್​​ಗಳಿಂದ ಒಂದು ಸೀಟ್​​ಗೆ 4400 ರುಪಾಯಿ ಟ್ಯಾಕ್ಸ್ ತೆಗೆದುಕೊಳ್ಳುತ್ತಿದೆ. ಕೆಎಸ್ಆರ್ಟಿಸಿ ಬಸ್​​​ಗಳಲ್ಲೂ ಗೌರಿ- ಗಣೇಶ ಹಬ್ಬದ ಸಂದರ್ಭ ಟಿಕೆಟ್ ದರ ಏರಿಕೆ ಮಾಡಲಾಗಿದೆ. ನಾವು 300 ರಿಂದ 400 ರೂಪಾಯಿಯಷ್ಟು ದರ ಏರಿಕೆ ಮಾಡಿದ್ದೇವೆ ಅಷ್ಟೇ ಎಂದು ಖಾಸಗಿ ಬಸ್ ದರ ಏರಿಕೆಯ ಬಗ್ಗೆ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಚಿತ್ರರಂಗದಲ್ಲಿ ನಟಿಯರ ನಡುವೆ ತಾರತಮ್ಯ: ಅಸಲಿ ವಿಚಾರ ತಿಳಿಸಿದ ಸಾಕ್ಷಿ ಮೇಘನ
ಚಿತ್ರರಂಗದಲ್ಲಿ ನಟಿಯರ ನಡುವೆ ತಾರತಮ್ಯ: ಅಸಲಿ ವಿಚಾರ ತಿಳಿಸಿದ ಸಾಕ್ಷಿ ಮೇಘನ
ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?
ಸಿನಿಮಾ ಬಿಡುಗಡೆ ಸಮಯದಲ್ಲಿ ನಟ ಕಿರಣ್ ರಾಜ್​ ಕಾರು ಅಪಘಾತ ಆಗಿದ್ದು ನಿಜವೇ?
ಸಿಎಂ ಕುರ್ಚಿ ಖಾಲಿ ಇಲ್ಲ: ನಾನೇ ಮುಂದುವರಿಯುತ್ತೇನೆ ಎಂದ ಸಿದ್ದರಾಮಯ್ಯ
ಸಿಎಂ ಕುರ್ಚಿ ಖಾಲಿ ಇಲ್ಲ: ನಾನೇ ಮುಂದುವರಿಯುತ್ತೇನೆ ಎಂದ ಸಿದ್ದರಾಮಯ್ಯ
ವಿಡಿಯೋ: ಊರಿನ ಗಣೇಶೋತ್ಸವದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ
ವಿಡಿಯೋ: ಊರಿನ ಗಣೇಶೋತ್ಸವದಲ್ಲಿ ಭಾಗಿಯಾದ ರಕ್ಷಿತ್ ಶೆಟ್ಟಿ
ಬೈಕ್​ನಲ್ಲಿ ಹೋಗುತ್ತಿದ್ದಾಗ ಚರಂಡಿಗೆ ಬಿದ್ದ ವ್ಯಕ್ತಿ; ವಿಡಿಯೋ ವೈರಲ್
ಬೈಕ್​ನಲ್ಲಿ ಹೋಗುತ್ತಿದ್ದಾಗ ಚರಂಡಿಗೆ ಬಿದ್ದ ವ್ಯಕ್ತಿ; ವಿಡಿಯೋ ವೈರಲ್
ಮಹಿಳೆಗೆ CM ಯೋಗ; ಕೋಡಿಶ್ರೀ ಭವಿಷ್ಯದ ಬಗ್ಗೆ ಹೆಬ್ಬಾಳ್ಕರ್ ಗರಂ ಆಗಿದ್ಯಾಕೆ?
ಮಹಿಳೆಗೆ CM ಯೋಗ; ಕೋಡಿಶ್ರೀ ಭವಿಷ್ಯದ ಬಗ್ಗೆ ಹೆಬ್ಬಾಳ್ಕರ್ ಗರಂ ಆಗಿದ್ಯಾಕೆ?
ಸಿಎಂ ಬದಲಾವಣೆ ಆಗುವುದಾದರೆ ನಾನೂ ಸ್ಪರ್ಧಿಸುವೆ: ಶಾಮನೂರು ಶಿವಶಂಕರಪ್ಪ
ಸಿಎಂ ಬದಲಾವಣೆ ಆಗುವುದಾದರೆ ನಾನೂ ಸ್ಪರ್ಧಿಸುವೆ: ಶಾಮನೂರು ಶಿವಶಂಕರಪ್ಪ
ಹಾಸನ: ಊರಿಗೆ ನುಗ್ಗಿದ ಗಜಪಡೆ, ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು
ಹಾಸನ: ಊರಿಗೆ ನುಗ್ಗಿದ ಗಜಪಡೆ, ದಿಕ್ಕಾಪಾಲಾಗಿ ಓಡಿದ ಗ್ರಾಮಸ್ಥರು
‘ನಾನು ಆರೋಗ್ಯವಾಗಿದ್ದೇನೆ’; ಹೆಲ್ತ್​ ಅಪ್​ಡೇಟ್ ಕೊಟ್ಟ ಕಿರಣ್ ರಾಜ್
‘ನಾನು ಆರೋಗ್ಯವಾಗಿದ್ದೇನೆ’; ಹೆಲ್ತ್​ ಅಪ್​ಡೇಟ್ ಕೊಟ್ಟ ಕಿರಣ್ ರಾಜ್
ಆ್ಯಪಲ್ ಐಫೋನ್ 16 ಪ್ರೊ ಮ್ಯಾಕ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತಿರಾ!!
ಆ್ಯಪಲ್ ಐಫೋನ್ 16 ಪ್ರೊ ಮ್ಯಾಕ್ಸ್ ರೇಟ್ ಕೇಳಿದ್ರೆ ಬೆಚ್ಚಿ ಬೀಳ್ತಿರಾ!!