ಕುಪ್ಪೂರು ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೆ ನೋಟಿಸ್

| Updated By: sandhya thejappa

Updated on: Sep 29, 2021 | 10:53 AM

ಶ್ರೀಗಳಿಗೆ ಕೊರೊನಾ ಸೋಂಕು ತಗುಲಿದ್ದರು ಸಾಯಿಗಂಗಾ ಆಸ್ಪತ್ರೆಯ ವೈದ್ಯರಾದ ಡಾ.ವಿಜಯರಾಘವೇಂದ್ರ ನಿರ್ಲಕ್ಷ್ಯ ವಹಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ವೈದ್ಯ ಡಾ.ವಿಜಯರಾಘವೇಂದ್ರಗೆ ಡಿಹೆಚ್ಓ ನೋಟಿಸ್ ನೀಡಿದ್ದಾರೆ.

ಕುಪ್ಪೂರು ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೆ ನೋಟಿಸ್
ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಮತ್ತು ಚಿಕಿತ್ಸೆ ನೀಡಿದ್ದ ವೈದ್ಯ
Follow us on

ತುಮಕೂರು: ಕೊರೊನಾ (Coronavirus) ಸೋಂಕಿನಿಂದ ತುಮಕೂರಿನ ಚಿಕ್ಕನಾಯಕನಹಳ್ಳಿ ತಾಲೂಕಿನ ಕುಪ್ಪೂರು ಮಠದ ಶ್ರೀ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ (Yathishwara Shivacharya Swamiji) ಮೃತಪಟ್ಟಿದ್ದರು. ಸೋಂಕು ತಗುಲಿದ್ದರು ಅದನ್ನು ಪತ್ತೆ ಹಚ್ಚದೇ ಶ್ರೀಗಳಿಗೆ ಚಿಕಿತ್ಸೆ ನೀಡಿದ್ದ ವೈದ್ಯರಿಗೆ ನೋಟಿಸ್ (Notice) ಜಾರಿ ಮಾಡಲಾಗಿದೆ. ನೋಟಿಸ್​ಗೆ ಉತ್ತರಿಸುವಂತೆ 3 ದಿನಗಳ ಕಾಲಾವಕಾಶ ನೀಡಲಾಗಿದೆ ಅಂತ ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ ಮಾಹಿತಿ ನೀಡಿದ್ದಾರೆ.

ಶ್ರೀಗಳಿಗೆ ಕೊರೊನಾ ಸೋಂಕು ತಗುಲಿದ್ದರು ಸಾಯಿಗಂಗಾ ಆಸ್ಪತ್ರೆಯ ವೈದ್ಯರಾದ ಡಾ.ವಿಜಯರಾಘವೇಂದ್ರ ನಿರ್ಲಕ್ಷ್ಯ ವಹಿಸಿದ್ದರು ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ವೈದ್ಯ ಡಾ.ವಿಜಯರಾಘವೇಂದ್ರಗೆ ಡಿಹೆಚ್ಓ ನೋಟಿಸ್ ನೀಡಿದ್ದಾರೆ. ವೈದ್ಯ ಶ್ರೀಗಳಿಗೆ ಕೊರೊನಾ ಲಕ್ಷಣವಿದ್ದರೂ ಪರೀಕ್ಷೆ ನಡೆಸದೆ ಚಿಕಿತ್ಸೆ ನಡೆಸುತ್ತಿದ್ದರಂತೆ. ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ ನಿರ್ಲಕ್ಷ್ಯ ತೋರಿದ ವೈದ್ಯ, ಆಸ್ಪತ್ರೆ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಿಹೆಚ್ಒ ಡಾ.ನಾಗೇಂದ್ರಪ್ಪ ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಸಾಯಿಗಂಗಾ ಆಸ್ಪತ್ರೆಯ ವೈದ್ಯರ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಿದ್ದಾರೆ. ಮಾಧುಸ್ವಾಮಿ ಡಿಹೆಚ್ಒಗೆ ಮೌಖಿಕ ಆದೇಶ ನೀಡಿ, ಶ್ರೀಗಳಿಗೆ ಚಿಕಿತ್ಸೆ ನೀಡಿದ ಸಂಬಂಧ ತನಿಖೆ ನಡೆಸಲು ಸೂಚಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು ಶ್ರೀಗಳು ಸಾವನ್ನಪ್ಪುವ ಮುನ್ನ 5-6 ದಿನಗಳ ಕಾಲ ಕ್ಲಿನಿಕ್​ಗೆ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ವೈದ್ಯರು ಮಠಕ್ಕೆ ಬಂದು ಚಿಕಿತ್ಸೆ ನೀಡಿದ್ದಾರೆ. ಹಾಗಾಗಿ ತನಿಖೆ ಆಗಬೇಕು. ಖಾಸಗಿ ಕ್ಲಿನಿಕ್​ಗಳು, ನರ್ಸಿಂಗ್ ಹೋಮ್ ವೈದ್ಯರುಗಳ ಇಂತಹ ನಿರ್ಲಕ್ಷ್ಯತನವನ್ನು ಸಹಿಸಲು ಸಾಧ್ಯವೇ ಇಲ್ಲ ಎಂದರು.

ಶ್ರೀಗಳೊಂದಿಗೆ ಒಡನಾಟ ಹೊಂದಿದ್ದ ಇಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಚಿಕ್ಕನಾಯಕನಹಳ್ಳಿ ವೈದ್ಯಾಧಿಕಾರಿ ಕೂಡ ಶ್ರೀಗಳಿಗೆ ಕೊರೊನಾ ಪರೀಕ್ಷೆ ನಡೆಸುವಂತೆ ತಿಳಿಸಿದ್ದರು. ಸ್ವಾಮೀಜಿಗಳು ಸಾಯಿಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ತಿಳಿಸಿದ್ದರು ಎನ್ನಲಾಗಿದೆ. ಅಲ್ಲದೆ ಯಾವುದೇ ಸೋಂಕು ಇಲ್ಲ ಎಂದು ಶ್ರೀಗಳು ಸ್ಪಷ್ಟನೆ ನೀಡಿದ್ದರು. ಸದ್ಯ ಸಾಯಿ ಗಂಗಾ ಆಸ್ಪತ್ರೆಯ ವೈದ್ಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಡಿಹೆಚ್ಓಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ

ಬೆಂಗಳೂರು: ಖಾಸಗಿ ವಿಡಿಯೋ ಸೆರೆ ಹಿಡಿದು ಬೆದರಿಕೆ; ಯುವತಿ ಮೇಲೆ ದೌರ್ಜನ್ಯವೆಸಗಿದ ಐವರ ಬಂಧನ

ಮತಾಂತರಕ್ಕೆ ಯತ್ನಿಸಿದ್ದ ನಾಲ್ವರ ವಿರುದ್ಧ ಎಫ್ಐಆರ್ ಪ್ರಕರಣ; ಪ್ರತಿದೂರು ನೀಡಲು ಮುಂದಾದ ಕ್ರೈಸ್ತ ಪಾದ್ರಿಗಳು

(Tumkur DHO has issued a notice to doctors who treated Yateshwar Shivacharya Swamiji)

Published On - 10:52 am, Wed, 29 September 21