AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತಾಂತರಕ್ಕೆ ಯತ್ನಿಸಿದ್ದ ನಾಲ್ವರ ವಿರುದ್ಧ ಎಫ್ಐಆರ್ ಪ್ರಕರಣ; ಪ್ರತಿದೂರು ನೀಡಲು ಮುಂದಾದ ಕ್ರೈಸ್ತ ಪಾದ್ರಿಗಳು

ಹಿಂದೂ ಸಂಘಟನೆ ಕಾರ್ಯಕರ್ತರು ಠಾಣೆಗೆ ಆಗಮಿಸಿದ್ದು, ಕೌಂಟರ್ ಕೇಸ್ ತೆಗೆದುಕೊಳ್ಳಬಾರದೆಂದು ಒತ್ತಾಯಿಸಿದ್ದಾರೆ. ಈ ವಿಚಾರವಾಗಿ ಸೈದಾಪುರ ಪೊಲೀಸ್ ಠಾಣೆಯಲ್ಲಿ ಡಿವೈಎಸ್​ಪಿ ಸಂತೋಷ್ ಬನ್ನಟ್ಟಿ ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.

ಮತಾಂತರಕ್ಕೆ ಯತ್ನಿಸಿದ್ದ ನಾಲ್ವರ ವಿರುದ್ಧ ಎಫ್ಐಆರ್ ಪ್ರಕರಣ; ಪ್ರತಿದೂರು ನೀಡಲು ಮುಂದಾದ ಕ್ರೈಸ್ತ ಪಾದ್ರಿಗಳು
ಡಿವೈಎಸ್ಪಿ ಸಂತೋಷ್ ಬನ್ನಟ್ಟಿ ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರ ನಡುವೆ ವಾಗ್ವಾದ
TV9 Web
| Edited By: |

Updated on:Sep 29, 2021 | 10:40 AM

Share

ಯಾದಗಿರಿ: ಜಿಲ್ಲೆಯಲ್ಲಿ ಮತಾಂತರಕ್ಕೆ ಯತ್ನಿಸುತ್ತಿದ್ದ ನಾಲ್ವರ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಿಸಲಾಗಿದೆ. ಆದರೆ ಈಗ ಪ್ರತಿದೂರು ನೀಡಲು ಕ್ರೈಸ್ತ ಪಾದ್ರಿ ಕಡೆಯವರು ಮುಂದಾಗಿದ್ದಾರೆ. ಯಾದಗಿರಿ ಜಿಲ್ಲೆಯ ಸೈದಾಪುರ ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ ನಡೆದಿದ್ದು, ಕೌಂಟರ್ ಕೇಸ್ ದಾಖಲಿಸುವಂತೆ ಕ್ರೈಸ್ತ ಪಾದ್ರಿಗಳು ಮತ್ತು ಅವರ ಕಡೆಯವರು ಒತ್ತಾಯಿಸಿದ್ದಾರೆ.

ಈ ವಿಷಯ ತಿಳಿಯುತ್ತಿದ್ದಂತೆ ಹಿಂದೂ ಸಂಘಟನೆ ಕಾರ್ಯಕರ್ತರು ಠಾಣೆಗೆ ಆಗಮಿಸಿದ್ದು, ಕೌಂಟರ್ ಕೇಸ್ ತೆಗೆದುಕೊಳ್ಳಬಾರದೆಂದು ಒತ್ತಾಯಿಸಿದ್ದಾರೆ. ಈ ವಿಚಾರವಾಗಿ ಸೈದಾಪುರ ಪೊಲೀಸ್ ಠಾಣೆಯಲ್ಲಿ ಡಿವೈಎಸ್​ಪಿ ಸಂತೋಷ್ ಬನ್ನಟ್ಟಿ ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.

ಅಂತಿಮವಾಗಿ ಹಿಂದೂ ಸಂಘಟನೆಗಳ ಹೊರಾಟಕ್ಕೆ ಮಣಿದ ಪೊಲೀಸರು, ಸೈದಾಪುರ ಪೊಲೀಸ್ ಠಾಣೆಯಲ್ಲಿ ಕೌಂಟರ್ ಕೇಸ್ ದಾಖಲಿಸಿಲ್ಲ. ಮತಾಂತರ ಮಾಡಿದವರ ವಿರುದ್ಧ ಧ್ವನಿ ಎತ್ತಿದ್ದಕ್ಕೆ ನಮ್ಮ ಮೇಲೆ ಕೇಸ್ ಹಾಕಿದರೆ ಹೇಗೆ ಎಂದು ಹಿಂದೂ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೂ ಕೂಡ ಮತಾಂತರಕ್ಕೆ ಸಂಬಂಧಪಟ್ಟಂತೆ ಹಾಸನದಲ್ಲೂ ಇಂತದ್ದೆ ಒಂದು ಘಟನೆ ನಡೆದಿತ್ತು. ಹಾಸನ: ಮತಾಂತರಕ್ಕೆ ಯತ್ನಿಸುತ್ತಿದ್ದ ಆರೋಪದಡಿ ಸಾರ್ವಜನಿಕರು ಮಹಿಳೆಯೋರ್ವಳನ್ನು ತರಾಟೆಗೆ ತೆಗೆದುಕೊಂಡ ಘಟನೆ ಹಾಸನ ನಗರದ ಮಹಾರಾಜ ಪಾರ್ಕ್ನಲ್ಲಿ ನಡೆದಿದೆ. ರಾಧಮ್ಮ ಎಂಬ ಮಹಿಳೆಯ ಮೇಲೆ ಮತಾಂತರಕ್ಕೆ ಯತ್ನಿಸುತ್ತಿದ್ದ ಆರೋಪ ಕೇಳಿಬಂದಿದೆ. ಸ್ಥಳಕ್ಕೆ ಬಂದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜತೆಗೆ ಸ್ಥಳೀಯರು ಮತಾಂತರ ಯತ್ನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಆರೋಪಿತ ಮಹಿಳೆ ಪ್ರತಿದಿನ ಉದ್ಯಾನವನಕ್ಕೆ ಆಗಮಿಸಿ ಅಲ್ಲಿಗೆ ಬರುತ್ತಿದ್ದ ಸ್ಥಳೀಯರನ್ನು ಮತಾಂತರವಾಗುವಂತೆ ಪುಸಲಾಯಿಸುತ್ತಿದ್ದರು ಎಂದು ಆರೋಪ ಕೇಳಿಬಂದಿದೆ. ಈ ವಿಷಯ ಇಂದು ಸ್ಥಳೀಯರ ಮೂಲಕ ಹಿಂದೂಪರ ಸಂಘಟನೆಗಳಿಗೆ ತಿಳಿದಿದೆ.  ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಮಹಿಳೆಯ ಬಳಿ ಇದ್ದ ಮತಾಂತರಕ್ಕೆ ಬಳಸುವ ಪುಸ್ತಕಗಳು ಮತ್ತು ಕರ ಪತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಹಾಸನದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಮತಾಂತರದ ಆರೋಪ; 70 ರಿಂದ 80 ಮಕ್ಕಳನ್ನು ಸೇರಿಸಿ ಕ್ರೈಸ್ತ ಪ್ರಾರ್ಥನೆ ಮಾಡಿದ ವಿಡಿಯೋ ವೈರಲ್

ಹಾಸನದಲ್ಲಿ ಮತಾಂತರಕ್ಕೆ ಯತ್ನ ಆರೋಪ; ಹಿಂದೂಪರ ಸಂಘಟನೆಗಳಿಂದ ತರಾಟೆ; ಕೇಸ್ ದಾಖಲು

Published On - 8:02 am, Wed, 29 September 21