ರೈತ ಮಹಿಳೆಯ ಮೇಲೆ ಮಹಿಳಾ ಪಿಎಸ್‌ಐ ದರ್ಪ ಪ್ರಕರಣ; ಟಿವಿ9ನಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಪಿಎಸ್ಐ ವರ್ಗಾವಣೆ

ಟಿವಿ9 ನಲ್ಲಿ ವರದಿ ಪ್ರಸಾರವಾದ ಬೆನ್ನೆಲೆ ಗುರುಮಠಕಲ್‌ ಠಾಣೆ ಪಿಎಸ್‌ಐ ಗಂಗಮ್ಮನನ್ನು ನಾರಾಯಣಪುರ ಠಾಣೆಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ರೈತ ಮಹಿಳೆಯ ಮೇಲೆ ಮಹಿಳಾ ಪಿಎಸ್‌ಐ ದರ್ಪ ಪ್ರಕರಣ; ಟಿವಿ9ನಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಪಿಎಸ್ಐ ವರ್ಗಾವಣೆ
ಪಿಎಸ್ಐ ಗಂಗಮ್ಮ
Follow us
TV9 Web
| Updated By: preethi shettigar

Updated on:Sep 29, 2021 | 1:46 PM

ಯಾದಗಿರಿ: ರೈತ ಮಹಿಳೆಯ ಮೇಲೆ ಮಹಿಳಾ ಪಿಎಸ್‌ಐ ದರ್ಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಟಿವಿ9 ಡಿಜಿಟಲ್​ನಲ್ಲಿ ಸುದ್ದಿ ಪ್ರಸಾರವಾಗಿತ್ತು. ವರದಿ ಪ್ರಸಾರವಾದ ಬೆನ್ನೆಲೆ ಗುರುಮಠಕಲ್‌ ಠಾಣೆ ಪಿಎಸ್‌ಐ ಗಂಗಮ್ಮನನ್ನು ಯಾದಗಿರಿ ಜಿಲ್ಲೆಯ ನಾರಾಯಣಪುರ ಠಾಣೆಗೆ ವರ್ಗಾವಣೆ ಮಾಡಿ ಎಸ್​ಪಿ ಡಾ.ವೇದಮೂರ್ತಿ ಆದೇಶ ಹೊರಡಿಸಿದ್ದಾರೆ. ಜನರ ಜತೆ ಶಿಸ್ತಿನಿಂದ ವರ್ತಿಸದ ಕಾರಣ ನೀಡಿ ವರ್ಗಾವಣೆ ಮಾಡಲಾಗಿದ್ದು, ಇಷ್ಟೇ ಅಲ್ಲದೇ ತನಿಖೆ ವೇಳೆ ತಪ್ಪು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್​ಪಿ ಡಾ.ವೇದಮೂರ್ತಿ ತಿಳಿಸಿದ್ದಾರೆ.

ರೈತ ಮಹಿಳೆಯ ಮೇಲೆ ಮಹಿಳಾ ಪಿಎಸ್‌ಐ ದರ್ಪ ರೈತ ಮಹಿಳೆಯ ಮೇಲೆ ಮಹಿಳಾ ಪಿಎಸ್‌ಐ ದರ್ಪ ತೋರಿಸಿದ್ದು, ಲೇಡಿ ಪಿಎಸ್‌ಐ ತಳ್ಳಿದ್ದ ಹಿನ್ನೆಲೆ ರೈತ ಮಹಿಳೆ ಗಾಯಗೊಂಡಿದ್ದಾರೆ. ಮಹಿಳೆ ಕೈ, ಬೆನ್ನಿನ ಭಾಗದಲ್ಲಿ ಗಂಭೀರ ಗಾಯವಾಗಿದೆ. ಸದ್ಯ ಗಾಯಾಳು ಮಹಿಳೆ ಗುರುಮಿಠಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾದಗಿರಿ ಜಿಲ್ಲೆ ಗುರುಮಿಠಕಲ್ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಿನ್ನೆ ಪಿಎಸ್‌ಐ ಮಹಿಳೆಯನ್ನು ತಳ್ಳಿದ್ದಾರೆ.

ಶೆಂಗಾ ಬೀಜ ಪಡೆಯಲು ಬಂದಿದ್ದ ಮಹಿಳೆಯನ್ನು ಲೇಡಿ ಪಿಎಸ್ಐ ತಳ್ಳಿದ್ದು, ಮಾರುದ್ದ ಕುರ್ಚಿ ಮುರಿಯುವ ಹಾಗೆ ಹೋಗಿ ಮಹಿಳೆ ಬಿದ್ದಿದ್ದಾಳೆ. ಗುರುಮಠಕಲ್‌ ಠಾಣೆಯ ಪಿಎಸ್ಐ ಗಂಗಮ್ಮ ರೈತ ಮಹಿಳೆ ಮಣೆಮ್ಮ ಮೇಲೆ ಹಲ್ಲೆ ಮಾಡಿದ್ದಾರೆ. ಹಿಂಗಾರು ಬಿತ್ತನೆಯ ಬೀಜ ಪಡೆಯಲು ಬಂದಿದ್ದ ವೇಳೆ ಸಾಲಾಗಿ ನಿಂತಿಲ್ಲ ಎನ್ನುವ ಕಾರಣಕ್ಕೆ ಜಾಡಿಸಿ ತಳ್ಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸದ್ಯ ಲೇಡಿ ಪಿಎಸ್ಐ ದರ್ಪಕ್ಕೆ ಸಾರ್ವಜನಿಕ ವಲಯದಲ್ಲಿ ಬಾರಿ ಆಕ್ರೋಶ ವ್ಯಕ್ತವಾಗಿದೆ.

ಬೇಕೆಂದು ಮಹಿಳೆಯನ್ನು ತಳ್ಳಿಲ್ಲ ಎಂದ ಪಿಎಸ್ಐ ರೈತ ಮಹಿಳೆ ಮೇಲೆ ಮಹಿಳಾ ಪಿಎಸ್ಐ ದರ್ಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾದಗಿರಿ ಎಸ್‌ಪಿ ಡಾ.ವೇದಮೂರ್ತಿ ಪ್ರತಿಕ್ರಿಯೆ ನೀಡಿದ್ದು, ತನಿಖೆ ನಡೆಯುತ್ತಿದೆ. ಪಿಎಸ್‌ಐ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ತನಿಖೆ ವೇಳೆ ಬೇಕೆಂದು ಮಹಿಳೆಯನ್ನು ತಳ್ಳಿಲ್ಲ ಎಂದು ಮಹಿಳಾ ಪಿಎಸ್ಐ ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ರೈತ ಸಂಪರ್ಕ ಕೇಂದ್ರದ ಬಳಿ ಜನ ಕ್ಯೂನಲ್ಲಿ ನಿಂತಿದ್ದರು. ಈ ವೇಳೆ ಮಹಿಳೆ ಏಕಾಏಕಿ ಮುಂದೆ ನುಗ್ಗಿ ಬಂದಿದ್ದರು. ಇದೇ ಕಾರಣಕ್ಕೆ ಕ್ಯೂನಲ್ಲಿ ಇದ್ದ ಜನ ಗಲಾಟೆ ಮಾಡಿದರು. ಈ ವೇಳೆ ಮಹಿಳೆಯನ್ನು ಹಿಂದಕ್ಕೆ ಹೋಗಲು ಹೇಳಿದರು. ಮಹಿಳೆ ಹೋಗದ ಹಿನ್ನೆಲೆ ಪಿಎಸ್‌ಐ ತಳ್ಳಿದ್ದಾರೆ. ಹೀಗಾಗಿ ಮಹಿಳಾ ಪಿಎಸ್‌ಐಗೆ ಎಚ್ಚರಿಕೆ ನೀಡಿದ್ದೇನೆ ಎಂದು ಯಾದಗಿರಿ ಎಸ್‌ಪಿ ಡಾ.ವೇದಮೂರ್ತಿ ತಿಳಿಸಿದ್ದಾರೆ.

ಇದನ್ನೂ ಓದಿ:

ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ; ಗೋಣಿಬೀಡು ಠಾಣೆಯ ಪಿಎಸ್​ಐ ಅರ್ಜುನ್​ಗೆ 14 ದಿನಗಳ ನ್ಯಾಯಾಂಗ ಬಂಧನ

ರೈತ ಮಹಿಳೆ‌ ಮೇಲೆ ಲೇಡಿ ಪಿಎಸ್ಐ ದರ್ಪ; ಗುರುಮಿಠಕಲ್ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು

Published On - 1:36 pm, Wed, 29 September 21

ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಆಮರಣಾಂತ ಉಪವಾಸ ಸತ್ಯಾಗ್ರಹ, ಪ್ರಶಾಂತ್ ಕಿಶೋರ್ ಬಂಧನ
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
ಈ ವಾರದ ಟಾಸ್ಕ್​ ಗೆದ್ದರೆ ಸಿಗಲಿದೆ ಡೈರೆಕ್ಟ್​ ಫಿನಾಲೆಗೆ ಏರುವ ಟಿಕೆಟ್
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
Daily Devotional: ಪಚ್ಚ ಕರ್ಪೂರದ ಮಹತ್ವ ಮತ್ತು ಉಪಯೋಗ ತಿಳಿಯಿರಿ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಈ ರಾಶಿಯವರಿಗೆ ಇಂದು ಹಣಕಾಸಿನ ವಿಷಯದಲ್ಲಿ ಒಳ್ಳೆಯದಾಗುತ್ತೆ
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್
ಚೈತ್ರಾ ಕುಂದಾಪುರ ವಿಚಾರದಲ್ಲಿ ಉಲ್ಟಾ ಹೊಡೆತ ರಜತ್; ಸುದೀಪ್​ಗೂ ಇದು ಶಾಕ್