ಕೊರೊನಾ ಮೂರನೇ ಅಲೆ ಆತಂಕ; ಇಂದಿನಿಂದ ತುಮಕೂರಿನಲ್ಲಿ ನಿಷೇಧಾಜ್ಞೆ ಜಾರಿ

| Updated By: sandhya thejappa

Updated on: Aug 12, 2021 | 9:33 AM

ದೇವಾಸ್ಥಾನಗಳಲ್ಲಿ ದೈನಂದಿನ ಪೂಜೆ ಹೊರತುಪಡಿಸಿ ಅಮಾವಾಸ್ಯೆ ಪೂಜೆ, ಧಾರ್ಮಿಕ ಸೇವೆಗಳು, ಉತ್ಸವಗಳು ಜಾತ್ರೆಗಳನ್ನ ಜಿಲ್ಲಾಡಳಿತ ಬಂದ್ ಮಾಡಿ ಆದೇಶ ನೀಡಿದೆ. ಅರ್ಚಕರು ಮಾತ್ರ ಸಾಂಪ್ರದಾಯಿಕ ಪೂಜೆ ಮಾಡಬಹುದು.

ಕೊರೊನಾ ಮೂರನೇ ಅಲೆ ಆತಂಕ; ಇಂದಿನಿಂದ ತುಮಕೂರಿನಲ್ಲಿ ನಿಷೇಧಾಜ್ಞೆ ಜಾರಿ
ಸಾಂಕೇತಿಕ ಚಿತ್ರ
Follow us on

ತುಮಕೂರು: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಆತಂಕ ಶುರುವಾಗಿದೆ. ಜುಲೈ ತಿಂಗಳಲ್ಲಿ ಇಳಿಮುಖ ಕಂಡಿದ್ದ ಕೊರೊನಾ ಸೋಂಕಿತರ ಸಂಖ್ಯೆ ಇದೀಗ ಮತ್ತೆ ಹೆಚ್ಚಾಗುತ್ತಿದೆ. ಆಗಸ್ಟ್ 15ರ ಬಳಿಕ ರಾಜ್ಯದಲ್ಲಿ ಮತ್ತೆ ಕಠಿಣ ನಿಯಮಗಳು ಜಾರಿಯಾಗುವ ಸಾಧ್ಯತೆಯೂ ಇದೆ. ಹೀಗಾಗಿ ಕೊರೊನಾ ಸೋಂಕನ್ನು ನಿಯಂತ್ರಿಸಲು ತುಮಕೂರು ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ. ಇಂದಿನಿಂದ (ಆಗಸ್ಟ್ 12) ತುಮಕೂರು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ಆದೇಶ ಹೊರಡಿಸಿದ್ದಾರೆ. ಪ್ರವಾಸಿತಾಣ, ದೇಗುಲಗಳಿಗೆ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ದೇವಾಸ್ಥಾನಗಳಲ್ಲಿ ದೈನಂದಿನ ಪೂಜೆ ಹೊರತುಪಡಿಸಿ ಅಮಾವಾಸ್ಯೆ ಪೂಜೆ, ಧಾರ್ಮಿಕ ಸೇವೆಗಳು, ಉತ್ಸವಗಳು ಜಾತ್ರೆಗಳನ್ನ ಜಿಲ್ಲಾಡಳಿತ ಬಂದ್ ಮಾಡಿ ಆದೇಶ ನೀಡಿದೆ. ಅರ್ಚಕರು ಮಾತ್ರ ಸಾಂಪ್ರದಾಯಿಕ ಪೂಜೆ ಮಾಡಬಹುದು. ಆದರೆ ಭಕ್ತರಿಗೆ ದೇವಾಲಯಗಳಿಗೆ ಬರಲು ಅವಕಾಶವಿರಲ್ಲ. ಶನಿವಾರ, ಭಾನುವಾರ, ಸೋಮವಾರ ಮತ್ತು ಸಾರ್ವತ್ರಿಕ ರಜಾ ದಿನಗಳಂದು ಪ್ರೇಕ್ಷಣೀಯ ಪ್ರದೇಶಗಳಾದ ದೇವರಾಯನದುರ್ಗ, ನಾಮದ ಚಿಲುಮೆ, ಬಸದಿಬೆಟ್ಟ, ರಾಮದೇವರಬೆಟ್ಟ, ಸಿದ್ದರಬೆಟ್ಟ ಸೇರಿದಂತೆ ಹಲವು ಪ್ರವಾಸಿತಾಣಗಳನ್ನು ಸಂಪೂಣ್ ಬಂದ್ ಮಾಡಲಾಗಿದೆ.

ವಸತಿ ಗೃಹಗಳಲ್ಲಿ ತಂಗಲು ಬಯಸುವ ಹೊರ ರಾಜ್ಯದವರು 72 ಗಂಟೆಯೊಳಗೆ ಆರ್​ಟಿಪಿಸಿಆರ್ (RTPCR) ಟೆಸ್ಟ್ ನೆಗಟಿವ್ ರಿಪೋರ್ಟ್ ಕಡ್ಡಾಯವಾಗಿ ತರಬೇಕು ಅಂತ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಕೊವಿಡ್ 19 ಮೂರನೇ ಅಲೆಯನ್ನು ನಿಯಂತ್ರಿಸಲು ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ನಿನ್ನೆ ನಡೆದ ಜಿಲ್ಲಾ ವಿಪತ್ತು, ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಈ ಕ್ರಮಗಳನ್ನು ನಿರ್ಧರಿಸಲಾಗಿದೆ.

ಇದನ್ನೂ ಓದಿ

ತಾಂತ್ರಿಕ ದೋಷದಿಂದ ಇಒಎಸ್-3 ಉಪಗ್ರಹ ಕಕ್ಷೆಗೆ ತಲುಪುವಲ್ಲಿ ವಿಫಲ!

Sleeping Tips: ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ? ಈ ಅಭ್ಯಾಸಗಳನ್ನು ಅನುಸರಿಸಿ

(Tumkur District Administration Prohibition Enacted for controlling Corona third wave)