ತುಮಕೂರು: ಶ್ರೀಗಂಧ ಮರ ಕಡಿಯುತ್ತಿರುವುದು ತಿಳಿದು ಪರಿಶೀಲನೆಗೆ ಮುಂದಾದಾಗ ಏಕಾಏಕಿ ದಾಳಿ ನಡೆಸಿದವರ ಮೇಲೆ ಅರಣ್ಯ ಇಲಾಖೆಯ ಅಧಿಕಾರಿ ಫೈರಿಂಗ್ ನಡೆಸಿ, ಓರ್ವ ಶ್ರೀಗಂಧದ ಮರ ಕಡಿಯುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಕೆಂಕೆರೆಯಲ್ಲಿ ನಡೆದಿದೆ. ಹುಲಿಯೂರು ದುರ್ಗ ವ್ಯಾಪ್ತಿಯ ಕೆಂಕೆರೆ ಮೀಸಲು ಅರಣ್ಯ ಪ್ರದೇಶದಲ್ಲಿ ಇಬ್ಬರು ವ್ಯಕ್ತಿಗಳು ಶ್ರೀಗಂಧದ ಮರ ಕಡಿಯುತ್ತಿದ್ದರು. ಇದೇ ಪ್ರದೇಶದಲ್ಲಿ ಗಸ್ತಿನಲ್ಲಿದ್ದ ಅರಣ್ಯಾಧಿಕಾರಿಗೆ ವಿಷಯ ತಿಳಿದು ಪರಿಶೀಲನೆಗೆ ಮುಂದಾದರು. ಅದರೆ ಶ್ರೀಗಂಧದ ಮರ ಕಡಿಯುತ್ತಿದ್ದವರು ಏಕಾಏಕಿ ದಾಳಿ ಮಾಡಲು ಯತ್ನಿಸಿದರು. ಹೀಗಾಗಿ ಅಧಿಕಾರಿ ಗುಂಡು ಹಾರಿಸಿದರು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಹುಲಿಯೂರು ದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ವೈ. ಎಸ್ ಪಾಟೀಲ್, ಎಸ್ಪಿ ರಾಹುಲ್ ಕುಮಾರ್ ಶಹಪೂರ್ ವಾಡ್, ಡಿಎಫ್.ಒ ರಮೇಶ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ನಿನ್ನೆ ರಾತ್ರಿಯಿಂದ ಮರ ಕಡಿಯುವ ಶಬ್ಧ ಬರುತ್ತಿತ್ತು. ಶಬ್ದ ಆಲಿಸಿದ ಡಿಆರ್.ಎಫ್ ಮಹೇಶ್ ಹಾಗೂ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಬೆಳಗ್ಗೆ 9.30ರ ಸುಮಾರಿಗೆ ಕಳ್ಳರ ತಂಡ ಶ್ರೀಗಂಧದ ಮರ ಕಡಿಯುತ್ತಿರುವ ಸ್ಥಳ ಪತ್ತೆಯಾಗಿದೆ. ಈವೇಳೆ ಅರಣ್ಯಾಧಿಕಾರಿಗಳು ಮೂವರು ಕಳ್ಳರ ತಂಡ ಶ್ರೀಗಂಧ ಮರ ಕಡಿಯುತ್ತಿರುವುದನ್ನು ಕಂಡಿದ್ದಾರೆ. ತಕ್ಷಣವೇ ಮರ ಕಡಿಯುವುದನ್ನು ನಿಲ್ಲಿಸಿ ಶರಣಾಗುವಂತೆ ಡಿಆರ್ ಎಫ್ ಮಹೇಶ್ ಸೂಚನೆ ನೀಡಿದ್ದಾರೆ. ಅರಣ್ಯಾಧಿಕಾರಿಗಳ ಸೂಚನೆಗೆ ಕ್ಯಾರೆ ಎನ್ನದ ಖದೀಮರು ಅರಣ್ಯ ಸಿಬ್ಬಂದಿ ಶೇಖರ್ ಮೇಲೆ ಮರ ಕಡಿಯುತ್ತಿದ್ದ ಆಯುಧದಿಂದ ಹಲ್ಲೆಗೆ ಯತ್ನಿಸಿದ್ದಾರೆ. ಆಗ ಅರಣ್ಯಾಧಿಕಾರಿ ಮಹೇಶ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚನೆ ನೀಡಿದ್ದಾರೆ. ಆದರೆ ಅವರ ಸೂಚನೆ ಪಾಲಿಸದ ಕಾರಣ ವಿಧಿಯಿಲ್ಲದೇ ಅರಣ್ಯಾಧಿಕಾರಿ ಮಹೇಶ್ ಗುಂಡು ಹಾರಿಸಿದ್ದಾರೆ.
ಓರ್ವನಿಗೆ ಗುಂಡು ತಗಲು ಸಾವನ್ನಪ್ಪಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಸಾವನಪ್ಪಿದ ಆರೋಪಿಯ ಗುರುತು ಪತ್ತೆಯಾಗಿಲ್ಲ. ತುಮಕೂರು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ಮೂರು ದಿನಗಳ ಕಾಲ ಶವವನ್ನು ಶವಗಾರದಲ್ಲಿ ಇಡಲಾಗುವುದು. ಮೂರು ದಿನದಲ್ಲಿ ಗುರುತು ಪತ್ತೆಯಾದರೆ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ಘಟನೆಯ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ ಎಂದು ಡಿಸಿ ವೈಎಸ್ ಪಾಟೀಲ್ ತಿಳಿಸಿದರು.
ಇದನ್ನೂ ಓದಿ:
(Tumkur Firing on sandalwood lumber by a forest officer a man died)
Published On - 5:59 pm, Sat, 21 August 21