Tumkur News: ಅಣ್ಣನ ಮಗಳ ಮೇಲೆ ಅತ್ಯಾಚಾರವೆಸಗಿದ್ದವನಿಗೆ 30 ವರ್ಷ ಜೈಲು, 1 ಲಕ್ಷ ರೂಪಾಯಿ ದಂಡ

2020ರ ಅಕ್ಟೋಬರ್​ 25ರಂದು ನಡೆದಿದ್ದ ಅತ್ಯಾಚಾರ ಪ್ರಕರಣ ಇದಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯ ನಗ್ನ ಫೋಟೋ ತೆಗೆದು ಇಟ್ಟುಕೊಂಡಿದ್ದ ಅಪರಾಧಿ, ಅತ್ಯಾಚಾರ ವಿಚಾರದ ಬಗ್ಗೆ ಬಾಯಿಬಿಟ್ಟರೆ ತಂದೆ, ತಾಯಿಯನ್ನು ಹತ್ಯೆ ಮಾಡುವೆ ಎಂದು ಬೆದರಿಕೆ ಹಾಕಿದ್ದ.

Tumkur News: ಅಣ್ಣನ ಮಗಳ ಮೇಲೆ ಅತ್ಯಾಚಾರವೆಸಗಿದ್ದವನಿಗೆ 30 ವರ್ಷ ಜೈಲು, 1 ಲಕ್ಷ ರೂಪಾಯಿ ದಂಡ
ಸಾಂದರ್ಭಿಕ ಚಿತ್ರ
Edited By:

Updated on: Jul 11, 2023 | 10:10 PM

ತುಮಕೂರು: ಅಣ್ಣನ ಮಗಳ ಮೇಲೆಯೇ ಅತ್ಯಾಚಾರವೆಸಗಿ ಬ್ಲ್ಯಾಕ್​ಮೇಲ್ ಮಾಡಿದ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ವ್ಯಕ್ತಿಗೆ ತುಮಕೂರಿನ ನ್ಯಾಯಾಲಯ 30 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಪ್ರಕರಣದ ವಿಚಾರಣೆಯನ್ನು ತುಮಕೂರಿನ ಹೆಚ್ಚುವರಿ ಸೆಷನ್ಸ್​ ನ್ಯಾಯಾಲಯ ನಡೆಸಿತ್ತು.

2020ರ ಅಕ್ಟೋಬರ್​ 25ರಂದು ನಡೆದಿದ್ದ ಅತ್ಯಾಚಾರ ಪ್ರಕರಣ ಇದಾಗಿದೆ. ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಆಕೆಯ ನಗ್ನ ಫೋಟೋ ತೆಗೆದು ಇಟ್ಟುಕೊಂಡಿದ್ದ ಅಪರಾಧಿ, ಅತ್ಯಾಚಾರ ವಿಚಾರದ ಬಗ್ಗೆ ಬಾಯಿಬಿಟ್ಟರೆ ತಂದೆ, ತಾಯಿಯನ್ನು ಹತ್ಯೆ ಮಾಡುವೆ ಎಂದು ಬೆದರಿಕೆ ಹಾಕಿದ್ದ. ಘಟನೆ ಸಂಬಂಧ ತುಮಕೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅಪರಾಧಿಗೆ ಶಿಕ್ಷೆ ವಿಧಿಸಿರುವ ಕೋರ್ಟ್, ಸಂತ್ರಸ್ತೆಗೆ 6 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ‌ ನೀಡಿದೆ. ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ನೀಡುವಂತೆ ಆದೇಶಿಸಿದೆ. ವಿಶೇಷ ಅಭಿಯೋಜಕರಾಗಿ ಕೆಎಸ್ ಆಶಾ ವಾದ ಮಂಡಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ