ತುಮಕೂರು, ಫೆ.17: ಶಿರಾ-ಮಧುಗಿರಿ ರಸ್ತೆಯ ಉಲ್ಲಾಸ್ ತೋಪು ಬಳಿ ಭೀಕರ ಅಪಘಾತ(Accident)ವಾಗಿದೆ. ನಿಂತಿದ್ದ ಟ್ರ್ಯಾಕ್ಟರ್ಗೆ ಟವೆರಾ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಟವೇರಾ ಕಾರಿನಲ್ಲಿದ್ದ ರೇಖಾ ಹಾಗೂ ಚಾಲಕ ಮನು ಎಂಬುವವರು ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದ ಕಮಲಮ್ಮ, ಸಾಗರ ಮತ್ತು ಸರಸ್ವತಮ್ಮ ಸೇರಿ ನಾಲ್ವರಿಗೆ ಗಾಯವಾಗಿದ್ದು, ಶಿರಾ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಸಿಮೆಂಟ್ ಇಟ್ಟಿಗೆ ತುಂಬಿ ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ಗೆ ಕಾರು ಡಿಕ್ಕಿಯಾಗಿದೆ. ಮೃತರು, ಗಾಯಾಳುಗಳು ಶಿರಾ ತಾಲ್ಲೂಕಿನ ಯಲಿಯೂರು, ಹೆಗ್ಗನಹಳ್ಳಿ ಮೂಲದವರಾಗಿದ್ದು, ಕುನಳ್ಳಿಯ ಶನಿಮಹಾತ್ಮ ದೇವಾಲಯದಲ್ಲಿ ಪೂಜೆಮುಗಿಸಿ ವಾಪಸ್ಸಾಗ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಪತಿ ಭಾನುಪ್ರಕಾಶ್ ಶಬರಿಮಲೆಗೆ ತೆರಳಿದ ಬಳಿಕ ಶನಿಮಹಾತ್ಮ ದೇವಾಲಯಕ್ಕೆ ತೆರಳಿದ್ದರು. ಈ ಕುರಿತು ಶಿರಾ ಪೊಲೀಸ್ ಟಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಹಿಟ್ ಅಂಡ್ ರನ್ ಪ್ರಕರಣ;ಅಪಘಾತ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಬಂಧನ
ಹಾವೇರಿ: ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಿಬ್ಬಂದಿ ಬಲಿಯಾದ ಘಟನೆ ಹಾವೇರಿ ನಗರದ ಮಣಿಗಾರ ಓಣಿಯಲ್ಲಿ ನಡೆದಿದೆ.
ಸುರೇಶ್(38) ಸ್ಥಳದಲ್ಲೇ ಮೃತಪಟ್ಟರೆ, ಮತ್ತೊಬ್ಬ ಸಿಬ್ಬಂದಿಗೆ ಗಾಯವಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೋರ್ವೇಲ್ಗೆ ತ್ರಿಪೇಸ್ ಲೈನ್ ಅಳವಡಿಸುವಾಗ ಈ ದುರಂತ ನಡೆದಿದೆ. ಏಕಾಏಕಿ ವಿದ್ಯುತ್ ಕನೆಕ್ಟ್ ಮಾಡಿದ್ದರಿಂದ ಲೈನ್ಮೆನ್ ಸಾವನ್ನಪ್ಪಿದ್ದಾನೆ. ಇನ್ನು ಲೈನ್ಮನ್ ಶವ ಕಂಬದಲ್ಲಿಯೇ ನೇತಾಡುತ್ತಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ