ತುಮಕೂರು: ಆಸ್ತಿಗಾಗಿ ತನ್ನ ತಾಯಿಯನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಮಗ, ಸೊಸೆ
ಸಿಡಿಪಿಒ ಆಗಿ ನಿವೃತ್ತರಾಗಿದ್ದ ತನ್ನ ತಾಯಿಯನ್ನೇ ಮಗ ಹಾಗೂ ಈತನ ಪತ್ನಿ ಆಸ್ತಿಗಾಗಿ ಮನೆಯ ಕೊಠಡಿಯಲ್ಲಿ ಕಳೆದ 11 ತಿಂಗಳಿನಿಂದ ಕೂಡಿ ಹಾಕಿದ ಅಮಾನವೀಯ ಘಟನೆ ತುಮಕೂರು ನಗರದ ಶಿರಾ ಗೇಟ್ನ ಸಾಡೆಪುರದಲ್ಲಿ ನಡೆದಿದೆ. 50 ಸಾವಿರ ರೂ. ನಿವೃತ್ತಿ ವೇತನ ಪಡೆಯುತ್ತಿರುವ ಪಂಕಜಾಕ್ಷಿ, 12 ಮನೆ ಸೇರಿದಂತೆ ಒಟ್ಟು ಆಸ್ತಿಗೆ ಹಕ್ಕುದಾರರಾಗಿದ್ದಾರೆ.
ತುಮಕೂರು, ಫೆ.17: ಮಗ ತನ್ನ ಪತ್ನಿಯೊಂದಿಗೆ ಸೇರಿಕೊಂಡು ಆಸ್ತಿಗಾಗಿ ತನ್ನ ತಾಯಿಯನ್ನೇ ಮನೆಯ ಕೊಠಡಿಯಲ್ಲಿ ಕಳೆದ 11 ತಿಂಗಳಿನಿಂದ ಕೂಡಿ ಹಾಕಿದ ಘಟನೆ ತುಮಕೂರು (Tumkur) ನಗರದ ಶಿರಾ ಗೇಟ್ನ ಸಾಡೆಪುರದಲ್ಲಿ ನಡೆದಿದೆ. ಸಿಡಿಪಿಒ ಆಗಿ ನಿವೃತ್ತರಾಗಿದ್ದ ಪಂಕಜಾಕ್ಷಿ (80) ಮಗನಿಂದ ದಿಗ್ಬಂಧನಕ್ಕೊಳಗಾದ ದುರ್ದೈವಿ.
ಸಿಡಿಪಿಒ ಆಗಿ ನಿವೃತ್ತರಾಗಿರುವ ತುಮಕೂರು ನಗರದ ಶಿರಾ ಗೇಟ್ನ ಸಾಡೆಪುರದ ನಿವಾಸಿಯಾಗಿರುವ ಪಂಕಜಾಕ್ಷಿ ಅವರಿಗೆ 50 ಸಾವಿರ ರೂ. ನಿವೃತ್ತಿ ವೇತನ ಬರುತ್ತಿದೆ. ಇದರ ಜೊತೆಗೆ 12 ಮನೆ ಸೇರಿ ಒಟ್ಟು ಆಸ್ತಿಗೆ ಹಕ್ಕುದಾರರಾಗಿದ್ದಾರೆ. ಈ ಆಸ್ತಿಗಾಗಿ ಮಗ ಜೇಮ್ ಸುರೇಶ್ ಹಾಗೂ ಈತನ ಪತ್ನಿ ಆಶಾ, ಪಂಕಜಾಕ್ಷಿ ಅವರಿಗೆ ಹಿಂಸೆ, ಕಿರುಕುಳ ನೀಡುತ್ತಿದ್ದಾರೆ. ಅಲ್ಲದೆ, ಕಳೆದ 11 ತಿಂಗಳಿನಿಂದ ಮನೆಯ ಕೊಠಡಿಯಲ್ಲಿ ಕೂಡಿ ಹಾಕಿದ್ದಾರೆ.
ತನ್ನ ತಾಯಿಗೆ ಬರುತ್ತಿದ್ದ 50 ಸಾವಿರ ರೂಪಾತಿ ನಿವೃತ್ತಿ ವೇತನವನ್ನು ನಾಲ್ವರು ಮಕ್ಕಳು ಬಳಸುತ್ತಿದ್ದರು. ಈಗಾಗಲೇ ತಾಯಿ ಬಳಿ ಇದ್ದ ಒಡವೆಗಳನ್ನು ಕೂಡ ಮಕ್ಕಳು ಪಡೆದಿದ್ದಾರೆ. ಸದ್ಯ ಮನೆಗಳನ್ನ ಮಕ್ಕಳ ಹೆಸರಿಗೆ ಮಾಡಿಕೊಡಲು ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿದೆ. ಮನೆಗೆ ಬೀಗ ಜಡಿದು ದಿಗ್ಬಂದನ ಮಾಡಲಾಗಿತ್ತು.
ಇದನ್ನೂ ಓದಿ: ದೆಹಲಿಯಲ್ಲಿ ವಾರಗಳ ಕಾಲ ಮಹಿಳೆ ಮೇಲೆ ಅತ್ಯಾಚಾರ, ಬಿಸಿ ಆಹಾರ ಪದಾರ್ಥಗಳ ಮೈಮೇಲೆ ಸುರಿದು ಚಿತ್ರಹಿಂಸೆ
ವಿಚಾರ ತಿಳಿದ ಸ್ಥಳಿಯರು ಸಾಂತ್ವಾನ ಕೇಂದ್ರ ಸಖಿ ಕೇಂದ್ರ ಹಾಗೂ ಹಿರಿಯ ನಾಗರೀಕರ ಸಹಾಯವಾಣಿ ಕೇಂದ್ರಕ್ಕೆ ಮಾಹಿತಿ ನೀಡಿದ್ದಾರೆ. ಅದರಂತೆ ವನಜಾಕ್ಷಿ ನಿವಾಸಕ್ಕೆ ಆಗಮಿಸಿದ ತುಮಕೂರು ನಗರ ಪೊಲೀಸರು ಹಾಗೂ ಸಾಂತ್ವಾನ ಕೇಂದ್ರ ಅಧಿಕಾರಿಗಳು ವನಜಾಕ್ಷಿ ಅವರನ್ನು ರಕ್ಷಿಸಿ ಸಾಂತ್ವಾನ ಕೇಂದ್ರಕ್ಕೆ ಕರೆದುದೊಯ್ದಿದ್ದಾರೆ.
ಸಖಿ ಕೇಂದ್ರದಲ್ಲಿ ಎರಡು ದಿನ ಚಿಕಿತ್ಸೆ ನೀಡಲಾಗಿದ್ದು, ಬಳಿಕ ತಾಯಿಯನ್ನು ರಕ್ಷಣೆ ಮಾಡಿದ ಬಗ್ಗೆ ಅಧಿಕಾರಿಗಳು ಮಕ್ಕಳಿಗೆ ಮಾಹಿತಿ ನೀಡಿದ್ದಾರೆ. ಹೀಗಿದ್ದರೂ ಮಕ್ಕಳು ಬಾರದ ಹಿನ್ನೆಲೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಮೊರೆ ಹೀಗಿರುವ ಅಧಿಕಾರಿಗಳು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸರಿಗೆ ದೂರು ನೀಡಿದ್ದಾರೆ.
ಬಳಿಕ ನ್ಯಾಯಾಧೀಶರು ಹಾಗೂ ಸಾಂತ್ವಾನ ಕೇಂದ್ರದ ಸಿಬ್ಬಂದಿ ವೃದ್ದೆಯನ್ನ ಮನೆಗೆ ಕರೆದುಕೊಂಡು ಹೋಗಲಾಗಿದೆ. ತಾಯಿಯನ್ನ ಸರಿಯಾಗಿ ನೋಡಿಕೊಳ್ಳುವಂತೆ ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದು, ಸರಿಯಾಗಿ ನೋಡಿಕೊಳ್ಳುವುದಾಗಿ ಮಕ್ಕಳು ಹೇಳಿಕೊಂಡಿದ್ದಾರೆ. ಆ ಮೂಲಕ ಪ್ರಕರಣ ಇತ್ಯರ್ಥಗೊಂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ