ಕಲಬುರಗಿ: ಸಾಲ ಕೊಟ್ಟ ಹಣ ವಾಪಸ್ ಕೇಳಿದಕ್ಕೆ ಸ್ನೇಹಿತನ ಕೊಲೆ; ಮೂವರ ಬಂಧನ

ಅವರೆಲ್ಲರು ಒಂದೇ ಏರಿಯಾದ ಹುಡುಗರು, ಮೇಲಾಗಿ ಎಲ್ಲರೂ ಕುಚಿಕು ಸ್ನೇಹಿತರು. ಕಷ್ಟಕ್ಕೆ ಎಂದು ಸ್ನೇಹಿತನ ಬಳಿ ಅವರು ಹಣವನ್ನ ಸಾಲದ ರೂಪದಲ್ಲಿ ಪಡೆದಿದ್ದರು. ಸಾಲ ಕೊಟ್ಟವ ಹಣ ವಾಪಸ್ ಕೇಳಿದಕ್ಕೆ ಸ್ನೇಹಿತರೆಲ್ಲರೂ ಸೇರಿಕೊಂಡು ಗೆಳೆಯನನ್ನೇ ಬರ್ಬರವಾಗಿ ಕೊಲೆ ಮಾಡಿ ಎಸ್ಕೇಪ್ ಆದ ಘಟನೆ ಕಲಬುರಗಿಯಲ್ಲಿ ನಡೆದಿತ್ತು. ಇದೀಗ ಪರಾರಿಯಾಗಿದ್ದ ಮೂರು ಜನ ಹಂತಕ ಸ್ನೇಹಿತರನ್ನ ಪೊಲೀಸರು ಲಾಕ್ ಮಾಡಿ ಕಂಬಿ ಹಿಂದೆ ಕಳುಹಿಸಿದ್ದಾರೆ.

ಕಲಬುರಗಿ: ಸಾಲ ಕೊಟ್ಟ ಹಣ ವಾಪಸ್ ಕೇಳಿದಕ್ಕೆ ಸ್ನೇಹಿತನ ಕೊಲೆ; ಮೂವರ ಬಂಧನ
ಮೃತ ರೋಹನ್​, ಬಂಧಿತ ಆರೋಪಿಗಳು
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 17, 2024 | 3:08 PM

ಕಲಬುರಗಿ, ಫೆ.17: ಕೊಟ್ಟ ಸಾಲ ವಾಪಸ್​​ ಕೇಳಿದಕ್ಕೆ ಜೊತೆಗಿದ್ದ ಸ್ನೇಹಿತನನ್ನೇ ಕೊಲೆ ಮಾಡಿದ ಘಟನೆ ಕಲಬುರಗಿ (Kalaburagi) ನಗರದ ಆಶ್ರಯ ಕಾಲೋನಿಯಲ್ಲಿ ನಡೆದಿತ್ತು. ರೋಹನ್ ಮೃತ ರ್ದುದೈವಿ. ಫೆಬ್ರವರಿ 6 ರಂದು ಸುನೀಲ್ ಸಿಂಗ್ , ಭಗತ್ ಸಿಂಗ್  ಸೊಹೇಲ್ ಎಂಬುವವರು ಜೊತೆಗಿದ್ದ ಸ್ನೇಹಿತ ರೋಹನ್ ಎಂಬಾತನನ್ನ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಕೊಲೆಯ ಬಳಿಕ ನಾಲ್ಕು ಜನ ಆರೋಪಿಗಳು ಎಸ್ಕೇಪ್ ಆಗಿದ್ದರು. ಕೊಲೆ ಪ್ರಕರಣವನ್ನ ದಾಖಲಿಸಿಕೊಂಡ ಚೌಕ್ ಪೊಲೀಸರು, ಇದೀಗ ಮೂರು ಜನ ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ದಾರೆ.

ಇನ್ನು ಕೊಲೆಯಾದ ರೋಹನ್​ ಸೇರಿದಂತೆ ಹತ್ಯೆ ಮಾಡಿದವರು ಕೂಡ ಸ್ನೇಹಿತರು. ಈ ಸುನೀಲ್ ಸಿಂಗ್ ಹಾಗೂ ಭಗತ್ ಸಿಂಗ್ ಎಂಬುವವರು ರೋಹನ್ ಬಳಿ ಎರಡ್ಮೂರು ಸಾವಿರ ರೂಪಾಯಿ ಹಣವನ್ನ ಸಾಲದ ರೂಪದಲ್ಲಿ ಪಡೆದುಕೊಂಡಿದ್ದರು. ಸಾಲವಾಗಿ ಕೊಟ್ಟ ಹಣವನ್ನ ತಿಂಗಳುಗಳು ಕಳೆದರೂ ಕೂಡ ವಾಪಸ್ ನೀಡಿರಲಿಲ್ಲ. ಹಾಗಾಗಿ ಕಳೆದ ಮಂಗಳವಾರ ರೋಹನ್ ತನ್ನ ಸ್ನೇಹಿತರಿಗೆ ದುಡ್ಡು ಕೊಡುವಂತೆ ತಾಕೀತು ಮಾಡಿದ್ದಾನೆ. ಆಗ ಈ ಸುನೀಲ್ ಸಿಂಗ್ ,ಮತ್ತು ಭಗತ್ ಸಿಂಗ್ ಗ್ಯಾಂಗ್ ಮಂಗಳವಾರ ರಾತ್ರಿ ರೋಹನ್ ಕರೆ ಮಾಡಿ ಮನೆಯಿಂದ ಕರೆಯಿಸಿಕೊಂಡು ಸೈಯದ್ ಚಿಂಚೋಳಿ ಕ್ರಾಸ್ ಬಳಿ ಕರೆದುಕೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು.

ಇದನ್ನೂ ಓದಿ:ಕಡೂರಿನಲ್ಲಿ ಬೆಂಗಳೂರಿನ ಕ್ಯಾಬ್ ಡ್ರೈವರ್ ಕೊಲೆ: ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು

ಸದ್ಯ ಕೊಲೆ ಮಾಡಿದ ಮೂರು ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ತಲೆ ಮರೆಸಿಕೊಂಡ ಮತ್ತೊಬ್ಬ ಆರೋಪಿ ಮೋಹನ್‌ಗಾಗಿ ಚೌಕ್ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅದೇನೆ ಇರಲಿ ಕಷ್ಟ ಎಂದಾಗ ಸ್ನೇಹಿತ ಬೇಕು, ಅದೇ ಸ್ನೇಹಿತನಿಗೆ ಕಷ್ಟ ಬಂದಿದೆ ಎಂದಾಗ ಕೊಟ್ಟ ದುಡ್ಡು ವಾಪಸ್ ಕೇಳಿರೋದಕ್ಕೆ ಕೊಲೆ ಮಾಡಿರುವುದು ನಿಜಕ್ಕೂ ದುರುಂತವೇ ಸರಿ.

ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ