ಬೆಳಗಾವಿ, ತುಮಕೂರು ಜಿಲ್ಲೆಗಳ ವಿಭಜನೆ ಫಿಕ್ಸ್? ಚರ್ಚೆಗೆ ಗ್ರಾಸವಾದ ರಾಜ್ಯ ಸರ್ಕಾರದ ಸುತ್ತೋಲೆ
ಬೆಳಗಾವಿ ಹಾಗೂ ತುಮಕೂರು ಜಿಲ್ಲೆ ವಿಭಜನೆಗೆ ಹೆಚ್ಚಿನ ಒತ್ತಡ ಕೇಳಿ ಬರುತ್ತಿರುವ ನಡುವೆ ರಾಜ್ಯ ಸರ್ಕಾರದಿಂದ ಹೊರಡಿಸಲಾದ ಸುತ್ತೋಲೆ ಭಾರೀ ಚರ್ಚೆಗೆ ಕಾರಣವಾಗಿದೆ. ಅಸ್ತಿತ್ವದಲ್ಲಿರುವ ಜಿಲ್ಲೆಗಳ ಮಿತಿ ಪುನರ್‌ರಚಿಸುವ ಬಗ್ಗೆ ಸುತ್ತೋಲೆಯಲ್ಲಿ ಉಲ್ಲೇಖವಾಗಿದ್ದು, ಬೆಳಗಾವಿ ಹಾಗೂ ತುಮಕೂರು ಜಿಲ್ಲೆಯ ಹೆಸರು ಉಲ್ಲೇಖವಾಗಿದೆ. ನಾಳೆ ಬಜೆಟ್‌ನಲ್ಲಿ ಹೊಸ ಜಿಲ್ಲೆಗಳ ಘೋಷಣೆಯಾಗುತ್ತಾ ಎನ್ನುವ ಕುತೂಹಲವೂ ಮೂಡಿಸಿದೆ.
ಬೆಳಗಾವಿ, ಫೆ.15: ಬೆಳಗಾವಿ (Belagavi) ಹಾಗೂ ತುಮಕೂರು (Tumkur) ಜಿಲ್ಲೆಗಳ ವಿಭಜನೆಗೆ ಹೆಚ್ಚಿನ ಒತ್ತಡ ಕೇಳಿ ಬರುತ್ತಿರುವ ನಡುವೆ ರಾಜ್ಯ ಸರ್ಕಾರದಿಂದ ಹೊರಡಿಸಲಾದ ಸುತ್ತೋಲೆ ಭಾರೀ ಚರ್ಚೆಗೆ ಕಾರಣವಾಗಿದೆ. ಅಸ್ತಿತ್ವದಲ್ಲಿರುವ ಜಿಲ್ಲೆಗಳ ಮಿತಿ ಪುನರ್‌ರಚಿಸುವ ಬಗ್ಗೆ ಸುತ್ತೋಲೆಯಲ್ಲಿ ಉಲ್ಲೇಖವಾಗಿದ್ದು, ಬೆಳಗಾವಿ ಮತ್ತು ತುಮಕೂರು ಜಿಲ್ಲೆಯ ಹೆಸರು ಉಲ್ಲೇಖವಾಗಿದೆ. ನಾಳೆ ಬಜೆಟ್‌ನಲ್ಲಿ ಹೊಸ ಜಿಲ್ಲೆಗಳ ಘೋಷಣೆಯಾಗುತ್ತಾ ಎನ್ನುವ ಕುತೂಹಲವೂ ಮೂಡಿಸಿದೆ.
ಅಸ್ತಿತ್ವದಲ್ಲಿರುವ ಜಿಲ್ಲೆಗಳ ಮಿತಿ ಪುನರ್‌ರಚಿಸುವ ಬಗ್ಗೆ ರಾಜ್ಯ ಸರ್ಕಾರವು ಫೆಬ್ರವರಿ 8 ರಂದು ಹೊರಡಿಸಿರುವ ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯಲ್ಲಿ ರಾಜ್ಯದಲ್ಲಿ ದೊಡ್ಡ ಜಿಲ್ಲೆಗಳಾಗಿರುವ ಬೆಳಗಾವಿ ಹಾಗೂ ತುಮಕೂರು ಜಿಲ್ಲೆಯ ಹೆಸರು ಉಲ್ಲೇಖವಾಗಿದ್ದು, ಸುತ್ತೋಲೆ ಬಗ್ಗೆ ಹಲವು ರೀತಿಯ ವ್ಯಾಖ್ಯಾನಗಳು ಮುನ್ನೆಲೆಗೆ ಬಂದಿವೆ.
ಇದನ್ನೂ ಓದಿ: ಪೌರ ಕಾರ್ಮಿಕ ಮಹಿಳೆಗೆ ಒಲಿದ ಬೆಳಗಾವಿ ಮಹಾನಗರ ಪಾಲಿಕೆ ಮೇಯರ್ ಪಟ್ಟ
ಬೆಳಗಾವಿ ಜಿಲ್ಲೆ ವಿಭಜನೆ ಬಗ್ಗೆ ಚರ್ಚೆ ಹಿನ್ನೆಲೆ ಎರಡೂ ಜಿಲ್ಲೆಗಳ ಜನಪ್ರತಿನಿಧಿಗಳು ಅಲರ್ಟ್ ಆಗಿದ್ದು, ಪ್ರತ್ಯೇಕ ಜಿಲ್ಲೆಗಾಗಿ ಗೋಕಾಕ್, ಚಿಕ್ಕೋಡಿ, ಬೈಲಹೊಂಗಲ, ಅಥಣಿ ಮಧ್ಯೆ ಪೈಪೋಟಿ ನಡೆಯುತ್ತಿದೆ. ಈ ಎಲ್ಲದರ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಮಂಡಿಸುತ್ತಿರುವ ಬಜೆಟ್‌ನಲ್ಲಿ ಚಿಕ್ಕೋಡಿ, ಗೋಕಾಕ್ ಜಿಲ್ಲೆ ಘೋಷಣೆ ಆಗುತ್ತಾ ಎಂದು ಕುತೂಹಲ ಮೂಡಿಸಿದೆ.
ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ತುರ್ತು ಸಭೆ
ನಾಳೆಯ ಬಜೆಟ್‌ನಲ್ಲಿ ಚಿಕ್ಕೋಡಿ, ಗೋಕಾಕ್ ಜಿಲ್ಲೆಯಾಗಿ ಘೋಷಣೆ ಸಾಧ್ಯತೆ ಹಿನ್ನೆಲೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದ ಶಾಖಾ ಮೂರುಸಾವಿರ ಮಠದಲ್ಲಿ ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ತುರ್ತು ಸಭೆ ನಡೆಸಿತು. ಸಭೆಯಲ್ಲಿ ಮಠಾಧೀಶರು, ಹೋರಾಟಗಾರರು, ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮುಖಂಡರು ಭಾಗಿಯಾದರು.
ಸರ್ಕಾರ ಬೆಳಗಾವಿ ಜಿಲ್ಲೆ ವಿಭಜನೆ ಮಾಡಬಾರದು. ಒಂದು ವೇಳೆ ವಿಭಜನೆ ಮಾಡಿದರೆ ಬೈಲಹೊಂಗಲ ಜಿಲ್ಲೆ ಘೋಷಣೆ ಮಾಡುವಂತೆ ಒತ್ತಾಯಿಸಲಾಯಿತು. ಬ್ರಿಟಿಷರ ಕಾಲದಿಂದಲೂ ಬೈಲಹೊಂಗಲ ಉಪವಿಭಾಗವಾಗಿದ್ದು, ಈ ಕಾರಣಕ್ಕೆ ಜಿಲ್ಲಾ ವಿಭಜನೆ ಮಾಡಿದರೆ ಮೊದಲು ಬೈಲಹೊಂಗಲಗೆ ಪ್ರಾಮುಖ್ಯತೆ ನೀಡುವಂತೆ ಒತ್ತಾಯಿಸಲಾಯಿತು.
ಬೈಲಹೊಂಗಲ ಕಡೆಗಣಿಸಿದರೆ ಹೋರಾಟದ ಎಚ್ಚರಿಕೆ
ಸರ್ಕಾರ ನಾಳೆ ಬಜೆಟ್‌ನಲ್ಲಿ ಬೈಲಹೊಂಗಲ ಕಡೆಗಣಿಸಿದರೆ ಅನಿರ್ದಿಷ್ಟಾವಧಿ ಹೋರಾಟದ ಎಚ್ಚರಿಕೆಯೂ ನೀಡಲಾಗಿದೆ. ಜಿಲ್ಲೆ ಮಾಡದಿದ್ದರೆ ಮತ್ತೊಂದು ಹೋರಾಟದ ಕ್ರಾಂತಿ ನಡೆಯಲಿದೆ ಎಂದು ರಾಜ್ಯ ಸರ್ಕಾರಕ್ಕೆ ಬೈಲಹೊಂಗಲ ಜಿಲ್ಲಾ ಹೋರಾಟ ಸಮಿತಿ ಎಚ್ಚರಿಕೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ