ತುಮಕೂರು, ಡಿ.21: ಹೆರಿಗೆ ಮಾಡಿಸಲು 3 ಸಾವಿರ ಲಂಚ(bribe)ಕ್ಕೆ ಬೇಡಿಕೆಯಿಟ್ಟಿದ್ದ ಸರ್ಕಾರಿ ವೈದ್ಯನೊಬ್ಬ ಲೋಕಾಯುಕ್ತ(Lokayukta) ಬಲೆಗೆ ಬಿದ್ದ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ಸರ್ಕಾರಿ ಆಸ್ಪತ್ರೆ(Turuvekere government hospital)ಯಲ್ಲಿ ನಡೆದಿದೆ. ಡಾ.ಹರಿಪ್ರಸಾದ್ ಸಿಕ್ಕಿಬಿದ್ದ ವೈದ್ಯ. ಹನುಮಂತಪ್ಪ ಎಂಬುವರ ಬಳಿ ಹೆರಿಗೆ ಮಾಡಿಸಲು ಹಣಕ್ಕೆ ಬೇಡಿಕೆಯಿಟ್ಟಿದ್ದನಂತೆ. ಹೀಗಾಗಿ ಆತ ಲೋಕಾಯುಕ್ತ ಅಧಿಕಾರಿಗಳ ಮೊರೆ ಹೋಗಿದ್ದ. ಇಂದು ಹೆರಿಗೆಗೂ ಮುನ್ನ ಹಣ ಪಡೆಯುವಾಗ ರೆಡ್ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಈ ಕುರಿತು ತುಮಕೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿಯ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (ಎಇಇ) ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ. ವಿದ್ಯುತ್ ಗುತ್ತಿಗೆದಾರ ಪ್ರದೀಪ್ ಎಂಬುವವರ ಬಳಿ ವಿದ್ಯುತ್ ಕಾಮಗಾರಿಯ ವರ್ಕ್ ಆರ್ಡರ್ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಿನ್ನಲೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ ಕಾಮಗಾರಿ ವರ್ಕ್ ಆರ್ಡರ್ ಕೊಡಲು 20 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ಎಇಇ ರಮೇಶ್ನನ್ನು ಹಿಡಿದಿದ್ದಾರೆ.
ಇದನ್ನೂ ಓದಿ:ಗದಗ ಗಣಿ ಇಲಾಖೆ ಮೇಲೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ದಾಳಿ: ಕಂಗಾಲಾದ ಅಧಿಕಾರಿಗಳು
ಇನ್ನು ಮೊನ್ನೆಯಷ್ಟೇ (ಡಿ.19) ಧಾರವಾಡದಲ್ಲಿರುವ ಶಿಗ್ಗಾಂವಿ ಏತ ನೀರಾವರಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹಾಗೂ ಕಿರಿಯ ಅಭಿಯಂತರ ಅಧಿಕಾರಿಗಳು ಜೆಇ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. ಬರೊಬ್ಬರಿ 1.50 ಲಕ್ಷ ರೂ. ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದು, ಎಇಇ ಬಿ.ಮಂಜುನಾಥ್ 1 ಲಕ್ಷ ರೂಪಾಯಿ ಲಂಚ ಹಾಗೂ ಜೆಇ ಪ್ರಕಾಶ್ ಹೊಸಮನಿ ಎಂಬುವವರು 50 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಬಲೆಗೆ ಬಿದ್ದಿದ್ದರು. ಇದೀಗ ಮತ್ತಿಬ್ಬರು ಸರ್ಕಾರಿ ವೈದ್ಯರು ಬಲೆಗೆ ಬಿದ್ದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:33 pm, Thu, 21 December 23