Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯುತ್​ ತಂತಿ ತುಳಿದು ತಾಯಿ-ಮಗು ಸಾವು: ಜನರ ಕಣ್ಣಿಗೆ ಮಂಕು ಬೂದಿ ಎರಚಿತೆ ಬೆಸ್ಕಾಂ? ಲೋಕಾಯುಕ್ತ ತನಿಖೆಯಲ್ಲಿ ಸತ್ಯಾಂಶ ಬಯಲು

ಬೆಂಗಳೂರಿನ ಕಾಡುಗೋಡಿಯಲ್ಲಿ ಪಾದಾಚಾರಿ ಮಾರ್ಗದಲ್ಲಿ ವಿದ್ಯುತ್​ ತಂತಿ ತುಳಿದು ತಾಯಿ-ಮಗು ಮೃತಪಟ್ಟಿದ್ದರು. ಅವಘಡ ಸಂಭವಿಸಲು ಬೆಸ್ಕಾಂ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ ಕೇಳಿಬಂದಿತ್ತು. ಬಳಿಕ ಬೆಸ್ಕಾಂ ಅವಘಡಕ್ಕೆ ಕಾರಣವೇನೆಂದು ಹೇಳಿತ್ತು. ಆದರೆ ಲೋಕಾಯುಕ್ತ ತನಿಖಾ ವರದಿ ಬೇರೆಯದ್ದೇ ಹೇಳುತ್ತಿದ್ದು, ಬೆಸ್ಕಾಂ ಸುಳ್ಳು ಹೇಳಿತೇ ಎಂಬ ಪ್ರಶ್ನೆ ಉದ್ಭವವಾಗಿದೆ.

ವಿದ್ಯುತ್​ ತಂತಿ ತುಳಿದು ತಾಯಿ-ಮಗು ಸಾವು: ಜನರ ಕಣ್ಣಿಗೆ ಮಂಕು ಬೂದಿ ಎರಚಿತೆ ಬೆಸ್ಕಾಂ? ಲೋಕಾಯುಕ್ತ ತನಿಖೆಯಲ್ಲಿ ಸತ್ಯಾಂಶ ಬಯಲು
ಲೋಕಾಯುಕ್ತ
Follow us
Shivaprasad
| Updated By: ವಿವೇಕ ಬಿರಾದಾರ

Updated on:Dec 08, 2023 | 12:46 PM

ಬೆಂಗಳೂರು, ಡಿಸೆಂಬರ್​​​ 08: ನಗರದ ವೈಟ್​ಫೀಲ್ಡ್​​​ನ ಕಾಡುಗೋಡಿಯಲ್ಲಿ ಪಾದಾಚಾರಿ ಮಾರ್ಗದಲ್ಲಿ ವಿದ್ಯುತ್​ ತಂತಿ ತುಳಿದು ತಾಯಿ-ಮಗು ಮೃತಪಟ್ಟಿದ್ದ ಪ್ರಕರಣವನ್ನು ಲೋಕಾಯುಕ್ತ (Lokayukta) ತನಿಖೆ ನಡೆಸಿದ್ದು, ಮಹತ್ವದ ಅಂಶ ರಿವೀಲ್ ಆಗಿದೆ. ವಿದ್ಯುತ್​​ ತಂತಿ ತುಂಡಾಗಲು ಇಲಿ ಕಾರಣ ಎಂದು ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ ನಿಯಮಿತ (BESCOM) ಅಧಿಕಾರಿಗಳು ಹೇಳಿದ್ದರು. ಆದರೆ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಲೋಕಾಯುಕ್ತ ವರದಿ ಹೇಳುತ್ತಿದೆ. ಹಾಗಾದರೆ ಬೆಸ್ಕಾಂ ಅಧಿಕಾರಿಗಳು ಹೇಳಿದ್ದು ಸುಳ್ಳೆ? ಎಂಬ ಪ್ರಶ್ನೆ ಉದ್ಭವಾಗಿದೆ.

ಲೋಕಾಯುಕ್ತ ಎಸ್​ಪಿ ಶ್ರೀನಾಥ್ ಮಹದೇವ ಜೋಷಿ ಅವರ ನೇತೃತ್ವದಲ್ಲಿ ತನಿಖೆ ನಡೆದಿದೆ. ಲೋಕಾಯುಕ್ತ ಎಸ್​ಪಿ ಶ್ರೀನಾಥ್ ಮಹದೇವ ಜೋಷಿ ಅವರು ಖುದ್ದು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ಪೊಲೀಸರು ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿದ್ದು, ಇಂದು (ಡಿ.08) ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ವರದಿ ಸಲ್ಲಿಸಲಿದ್ದಾರೆ.

ಬೆಸ್ಕಾಂ ಅಧಿಕಾರಿಗಳು ಹೇಳಿದ್ದೇನು?

ವೈಟ್​ಫೀಲ್ಡ್​​​ನ ಕಾಡುಗೋಡಿಯಲ್ಲಿ ಟ್ರಾನ್ಸ್ಫಾರ್ಮರ್ ಒಳಗಡೆ ಇಲಿ ಹೋಗಿತ್ತು. ಇದರಿಂದ 11KV ವಿದ್ಯುತ್ ತಂತಿ ತುಂಡಾಗಿ ಕೆಳಗೆ ಬಿದ್ದಿತ್ತು. ಈ ವಿದ್ಯುತ್​ ತಂತಿಯನ್ನು ತುಳಿದ ಪರಿಣಾಮ ತಾಯಿ-ಮಗು ಸಜೀವ ದಹನವಾಗಿದ್ದಾರೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳಿ ಕೈ ತೊಳೆದುಕೊಂಡಿದ್ದರು.

ಇದನ್ನೂ ಓದಿ: ವಿದ್ಯುತ್​​ ತಂತಿ ತುಳಿದು ತಾಯಿ-ಮಗು ಸಾವು: ಬೆಸ್ಕಾಂನ ಐವರು ಅಧಿಕಾರಿಗಳು ಸಸ್ಪೆಂಡ್​​​

ಬೆಸ್ಕಾಂ ಹೇಳಿಕೆ ಬಳಿಕ ಲೋಕಾಯುಕ್ತ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿತ್ತು. ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಕೆಆರ್​ ಸರ್ಕಲ್ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ಏಳು ಜನ ಅಧಿಕಾರಿಗಳಿಗೆ ಲೋಕಾಯುಕ್ತ ನೋಟಿಸ್ ನೀಡಿತ್ತು. ಪ್ರಕರಣ ಸಂಬಂಧ ಎರಡು ವಾರದಲ್ಲಿ ಸಂಪೂರ್ಣ ವರದಿ ನೀಡುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಆದೇಶ ಹೊರಡಿಸಿದ್ದರು.

ಏನಿದು ಪ್ರಕರಣ

ಸೌಂದರ್ಯ (23) ಮತ್ತು ಒಂಬತ್ತು ತಿಂಗಳ ಮಗು ಸುವಿಕ್ಷಾ ಲಿಯಾ ಭಾನುವಾರ (ನವೆಂಬರ್​ 19) ರಂದು ಬೆಳಿಗ್ಗೆ 5.30 ರ ಸುಮಾರಿಗೆ ತಮಿಳುನಾಡಿನಿಂದ ಬೆಂಗಳೂರಿನ ವೈಟ್​ಫೀಲ್ಡ್​​​ನ ಕಾಡುಗೋಡಿಗೆ ಬಂದಿಳಿದಿದ್ದರು. ತಾಯಿ ಸೌಂದರ್ಯ ಮಗುವಿನೊಂದಿಗೆ ಪಾದಾಚಾರಿ ಮಾರ್ಗದಲ್ಲಿ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಪಾದಚಾರಿ ಮಾರ್ಗದಲ್ಲಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ಗಮನಿಸದೆ ತುಳಿದಿದ್ದಾರೆ.

ಇದರಿಂದ ವಿದ್ಯುತ್​ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪತಿ ಸಂತೋಷ್ ಕುಮಾರ್ ಅವರು, ಪತ್ನಿ ಮತ್ತು ಮಗುವನ್ನು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಿರಲಿಲ್ಲ. ಘಟನಾ ಸ್ಥಳದಲ್ಲಿ ಅವರ ಲಗೇಜ್-ಟ್ರಾಲಿ ಬ್ಯಾಗ್ ಮತ್ತು ಇತರ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:37 pm, Fri, 8 December 23