ಲೋಕಾಯುಕ್ತ ಬಲೆಗೆ ಬಿದ್ದ ಶಿಗ್ಗಾಂವಿ ಏತ ನೀರಾವರಿ ಉಪ ವಿಭಾಗದ ಎಇಇ, ಜೆಇ; ಲಂಚ ಪಡೆದ ಹಣವೇಷ್ಟು?
ಧಾರವಾಡದಲ್ಲಿರುವ ಶಿಗ್ಗಾಂವಿ ಏತ ನೀರಾವರಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (AEE) ಹಾಗೂ ಕಿರಿಯ ಅಭಿಯಂತರ ಅಧಿಕಾರಿಗಳು ಜೆಇ (JE) ಲೋಕಾಯುಕ್ತ(Lokayukta) ಬಲೆಗೆ ಬಿದ್ದಿದ್ದಾರೆ.

ಹಾವೇರಿ, ಡಿ.19: ಧಾರವಾಡದಲ್ಲಿರುವ ಶಿಗ್ಗಾಂವಿ ಏತ ನೀರಾವರಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ (AEE) ಹಾಗೂ ಕಿರಿಯ ಅಭಿಯಂತರ ಅಧಿಕಾರಿಗಳು ಜೆಇ (JE) ಲೋಕಾಯುಕ್ತ(Lokayukta) ಬಲೆಗೆ ಬಿದ್ದಿದ್ದಾರೆ. ಬರೊಬ್ಬರಿ 1.50 ಲಕ್ಷ ರೂ. ಲಂಚ(bribe) ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದು, ಎಇಇ ಬಿ.ಮಂಜುನಾಥ್ 1 ಲಕ್ಷ ರೂಪಾಯಿ ಲಂಚ ಹಾಗೂ ಜೆಇ ಪ್ರಕಾಶ್ ಹೊಸಮನಿ ಎಂಬುವವರು 50 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಬಲೆಗೆ ಬಿದ್ದಿದ್ದಾರೆ. ರಸ್ತೆ ಕಾಮಗಾರಿ ಬಿಲ್ ಮೊತ್ತ ಬಿಡುಗಡೆ ಮಾಡಲು ಲಂಚ ಸ್ವೀಕರಿಸುವಾಗ ಲೋಕಾಯುಕ್ತ DySP ಬಿ.ಪಿ.ಚಂದ್ರಶೇಖರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಮಹಿಳೆಯ ತಾಳಿ ಸರ ಕದ್ದು ಪರಾರಿಯಾದ ಕಳ್ಳರು
ಹಾವೇರಿ: ಜಿಲ್ಲೆಯ ಹಾನಗಲ್ ಪಟ್ಟಣದ ಕಲ್ಕಹಕ್ಕಲ ಓಣಿಯಲ್ಲಿ ಮಹಿಳೆಯ ತಾಳಿ ಸರ ಕದ್ದು ಪರಾರಿಯಾದ ಘಟನೆ ನಡೆದಿದೆ. ಕಲ್ಲಹಕ್ಕಲ ಓಣಿಯ ಅರ್ಚನಾ ಮಂಜುನಾಥ ಅಂಬಿಗೇರ ಎಂಬ ಮಹಿಳೆಯು, ಹಾನಗಲ್ ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದ ಕಾರ್ತಿಕ ಮುಗಿಸಿ ವಾಪಸ್ ಬರುವಾಗ ಬೈಕ್ನಲ್ಲಿ ಬಂದ ಕಳ್ಳರು, ಕ್ಷಣಾರ್ಧದಲ್ಲಿ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಶಿಗ್ಗಾಂವ್ ಡಿಎಸ್ಪಿ ಮಂಜುನಾಥ, ಸಿಪಿಐ ಎಸ್ ಆರ್ ಶ್ರೀಧರ್, ಪಿಎಸ್ಐ ಯಲ್ಲಪ್ಪ ಹಿರಗಣ್ಣನವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಹಾನಗಲ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ತೋಟದ ಬಾವಿಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಶವ ಪತ್ತೆ
ಹಾವೇರಿ: ಜಿಲ್ಲೆಯ ಹಾನಗಲ್ ಪಟ್ಟಣದ ಹೊರ ವಲಯದ ಆಮಿಕೇರಿಯ ಅಡಕೆ ತೋಟದ ಬಾವಿಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಬಾಳಜ್ಜ ಗುರ್ಲಹೊಸುರ ಎಂಬುವವರ ತೋಟದ ಬಾವಿ ಇದಾಗಿದ್ದು, 35-40 ವರ್ಷ ವಯಸ್ಸಿನ ವ್ಯಕ್ತಿ ಜಿನ್ಸ್ ಪ್ಯಾಂಟ ಧರಿಸಿದ್ದಾನೆ. ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಫೋಲಿಸರು ಹಾಗೂ ಪುರಸಭೆ ಸಿಬ್ಬಂದಿಗಳು ಹೊರತೆಗೆದಿದ್ದು, ಎಡಗೈ ಮೇಲೆ ಅಪ್ಪ, ಅಮ್ಮ ರೇಣುಕಾ ಎಂದು ಹಚ್ಚೆ ಹಾಕಿದ ಗುರುತಿದೆ. ಈ ಕುರಿತು ಹಾನಗಲ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:20 pm, Tue, 19 December 23