ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದು ಸಶಸ್ತ್ರ ಪೋಲಿಸ್ ಪೇದೆ ಹುದ್ದೆಗೆ ಆಯ್ಕೆ ಆಗಿದ್ದ ಆರೋಪಿಗೆ ಶಿಕ್ಷೆ ವಿಧಿಸಿದ ಕೋರ್ಟ್
ಸುಳ್ಳು ಜಾತಿ ಪ್ರಮಾಣ ಪತ್ರ(False caste certificate) ಪಡೆದು ಸಶಸ್ತ್ರ ಪೋಲಿಸ್ ಪೇದೆ ಹುದ್ದೆಗೆ ಆಯ್ಕೆ ಆಗಿದ್ದ ಆರೋಪಿಗೆ ಹಾವೇರಿ (Haveri)ಯ ಒಂದನೆಯ ಅಧಿಕ ಜಿಲ್ಲಾ ಸತ್ರ ನ್ಯಾಯಲಯ ಏಳು ವರ್ಷ ಶಿಕ್ಷೆ ಹಾಗೂ ಮೂವತ್ತು ಸಾವಿರ ರೂ. ದಂಡ ವಿಧಿಸಿದೆ.
ಹಾವೇರಿ, ಡಿ.20: ಸುಳ್ಳು ಜಾತಿ ಪ್ರಮಾಣ ಪತ್ರ(False caste certificate) ಪಡೆದು ಸಶಸ್ತ್ರ ಪೋಲಿಸ್ ಪೇದೆ ಹುದ್ದೆಗೆ ಆಯ್ಕೆ ಆಗಿದ್ದ ಆರೋಪಿಗೆ ಹಾವೇರಿ (Haveri)ಯ ಒಂದನೆಯ ಅಧಿಕ ಜಿಲ್ಲಾ ಸತ್ರ ನ್ಯಾಯಲಯ ಏಳು ವರ್ಷ ಶಿಕ್ಷೆ ಹಾಗೂ ಮೂವತ್ತು ಸಾವಿರ ರೂ. ದಂಡ ವಿಧಿಸಿದೆ. ಹಿರೆಕೆರೂರ ತಾಲೂಕಿನ ಬೊಗಾವಿ ಗ್ರಾಮದ ಸೋಮಶೇಖರ್ ಶಿಕ್ಷೆಗೊಳಗಾದ ಪೇದೆ. ಇನ್ನು ಈ ಘಟನೆ ಕುರಿತು ದಾವಣಗೆರೆ ನಾಗರಿಕ ಜಾರಿ ನಿರ್ದೇಶನಾಲಯದ ತನಿಖಾಧಿಕಾರಿ ಡಿಎಸ್ಪಿ ಜಯರತ್ನಮ್ಮ ಅವರು ತನಿಖೆ ನಡೆಸಿ ದೋಷಾರೊಪಣ ಪಟ್ಟಿ ಸಲ್ಲಿಸಿದ್ದರು. ಇದೀಗ ವಿಚಾರಣೆ ಬಳಿಕ ನ್ಯಾಯಾದೀಶರಾದ ಜಿ.ಎಲ್ ಲಕ್ಷೀನಾರಾಯಣ ಅವರು ತಿರ್ಪು ನೀಡಿ ಆದೇಶಿಸಿದ್ದಾರೆ.
ನಕಲಿ ಜಾತಿ ಪ್ರಮಾಣ ಪತ್ರ ಪಡೆದವರಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದ ಸರ್ಕಾರ
ಕೆಲ ತಿಂಗಳುಗಳ ಹಿಂದೆ ಬೇಡ ಜಂಗಮ ಜಾತಿ ಹೆಸರಿನಲ್ಲಿ ಎಸ್ಸಿ ಜಾತಿ ಪ್ರಮಾಣ ಪತ್ರ ಪಡೆದವರಿಗೆ ರಾಜ್ಯ ಸರ್ಕಾರ ಬಿಸಿ ಮುಟ್ಟಿಸಲು ಮುಂದಾಗಿತ್ತು. ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಕುಟುಂಬ ಸಂಕಷ್ಟದಲ್ಲಿತ್ತು. ರಾಜ್ಯದಲ್ಲಿ 2010 ರಿಂದ ಬೇಡ ಜಂಗಮ ಎಸ್ಸಿ ಜಾತಿ ಪ್ರಮಾಣ ಪತ್ರ ಪಡೆದವರ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಲು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಿಂದ ಪ್ರಾದೇಶಿಕ ಆಯುಕ್ತರಿಗೆ ಪತ್ರ ರವಾನಿಸಲಾಗಿದೆ. ಸುಳ್ಳು ಬೇಡ, ಜಂಗಮ, ಎಸ್ಸಿ ಜಾತಿ ಪ್ರಮಾಣ ಪತ್ರ ನೀಡಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನ ತಕ್ಷಣಕ್ಕೆ ಸೇವೆಯಿಂದ ಅಮಾನತು ಅಥವಾ ವಾರ್ಷಿಕ ವೇತನ ಕಡಿತಗೊಳಿಸಿ ಸೇವಾ ಪುಸ್ತಕದಲ್ಲಿ ದಾಖಲು ಮಾಡಲು ನಿರ್ಧಾರ ಮಾಡಿತ್ತು.
ಇದನ್ನೂ ಓದಿ:ಮಾಜಿ ಶಾಸಕ ರೇಣುಕಾಚಾರ್ಯ ಪುತ್ರಿ ಜಾತಿ ಪ್ರಮಾಣ ಪತ್ರ ಪ್ರಕರಣ ಮತ್ತೆ ಮುನ್ನೆಲೆಗೆ
ಪ್ರಾದೇಶಿಕ ಆಯುಕ್ತರ ಮೂಲಕ ಆಯಾ ಜಿಲ್ಲಾಧಿಕಾರಿಗಳಿಂದ ಮಾಹಿತಿ ಸಂಗ್ರಹಕ್ಕೆ ಕಂದಾಯ ಇಲಾಖೆ ನಿರ್ಧಾರ ಮಾಡಿದ್ದು, ರಾಜ್ಯದಲ್ಲಿ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ಪಡೆದವರು ಹಾಗೂ ಅವರ ಮೂಲ ಶಾಲಾ ದಾಖಲಾತಿ ಪರಿಶೀಲನೆ ಮಾಡಿ ವರದಿ ನೀಡುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಂದ ಪ್ರಾದೇಶಿಕ ಅಸಯುಕ್ತರಿಗೆ ಪತ್ರ ಬರೆಯಲಾಗಿತ್ತು. ಹೀಗಾಗಿ ಸರ್ಕಾರದ ನಿರ್ಧಾರದಿಂದಾಗಿ ರೇಣುಕಾಚಾರ್ಯ ಕುಟುಂಬಕ್ಕೆ ಸಂಕಷ್ಟಕ್ಕೆ ಸಿಲುಕಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ