ತುಮಕೂರಿನಲ್ಲಿ ಇಬ್ಬರು ದಲಿತರ ಸಾವು: ಜ್ಞಾನೇಂದ್ರ ಗೃಹ ಸಚಿವ ರಾಗಿರಲು ಅನರ್ಹ, ರಾಜೀನಾಮೆ ನೀಡಲಿ – ಸಿದ್ದರಾಮಯ್ಯ ಆಗ್ರಹ

| Updated By: ಸಾಧು ಶ್ರೀನಾಥ್​

Updated on: Apr 23, 2022 | 6:15 PM

Siddaramaiah tweet: ತುಮಕೂರಿನಲ್ಲಿ ಗುರುವಾರ ರಾತ್ರಿ ಇಬ್ಬರು ದಲಿತರು ಸಾವಿಗೀಡಾಗಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅತೀವ ದುಃಖ ವ್ಯಕ್ತಪಡಿಸಿದ್ದಾರೆ. ನೊಂದ ಕೆಳವರ್ಗದ ಜನರ ಮೇಲಿನ ದೌರ್ಜನ್ಯಗಳಿಗೆ ಕೊನೆಯಿಲ್ಲವಾಗಿದೆ. ತುಮಕೂರಿನಲ್ಲಿ ದಲಿತರ ಸಾವಿಗೆ ಕಾರಣರಾದವರನ್ನು ತಕ್ಷಣ ಬಂಧಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ತುಮಕೂರಿನಲ್ಲಿ ಇಬ್ಬರು ದಲಿತರ ಸಾವು: ಜ್ಞಾನೇಂದ್ರ ಗೃಹ ಸಚಿವ ರಾಗಿರಲು ಅನರ್ಹ, ರಾಜೀನಾಮೆ ನೀಡಲಿ - ಸಿದ್ದರಾಮಯ್ಯ ಆಗ್ರಹ
ಸಿದ್ದರಾಮಯ್ಯ
Follow us on

ತುಮಕೂರು: ತುಮಕೂರಿನಲ್ಲಿ (tumkur) ಗುರುವಾರ ರಾತ್ರಿ ಇಬ್ಬರು ದಲಿತರು (Dalit) ಸಾವಿಗೀಡಾಗಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (former chief minister siddaramaiah) ಅವರು ಅತೀವ ದುಃಖ ವ್ಯಕ್ತಪಡಿಸಿದ್ದಾರೆ. ನೊಂದ ಕೆಳವರ್ಗದ ಜನರ ಮೇಲಿನ ದೌರ್ಜನ್ಯಗಳಿಗೆ ಕೊನೆಯಿಲ್ಲವಾಗಿದೆ. ತುಮಕೂರಿನಲ್ಲಿ ದಲಿತರ ಸಾವಿಗೆ ಕಾರಣರಾದವರನ್ನು ತಕ್ಷಣ ಬಂಧಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಸಿದ್ದರಾಮಯ್ಯ ಅವರು ಆರಗ ಜ್ಞಾನೇಂದ್ರ ಗೃಹ ಸಚಿವರಾಗಿ ಮುಂದುವರಿಯಲು ಅನರ್ಹ, ಅವರು ತಕ್ಷಣ ರಾಜೀನಾಮೆ ನೀಡಲಿ ಎಂದು ಟ್ವೀಟ್​ ಮೂಲಕ ಸಿದ್ದರಾಮಯ್ಯ ಆಗ್ರಹ ಮಾಡಿದ್ದಾರೆ.

ಸಿದ್ದರಾಮಯ್ಯ ಟ್ವೀಟ್ ಸಾರಾಂಶ ಹೀಗಿದೆ:
My heart wrenches to see the death of 2 Dalits in Tumkur. The atrocities on the marginalized sections continues under @BJP4Karnataka govt. I urge @CMofKarnataka @BSBommai to arrest the culprits at the earliest.
My deepest condolences to the family members of the deceased.

The death of Dalits in Tumkur reflects the apathy of BJP towards Dalits, and failure to maintain Law & Order under @BJP4Karnataka govt. Home Minister @JnanendraAraga is unfit to continue & should resign immediately.
Govt should immediately announce compensation to the victims.

ಮೋಟಾರ್ ಪಂಪ್ ಸೆಟ್ ಕದಿಯಲು ಹೋಗಿ ಇಬ್ಬರು ಶವವಾಗಿ ಪತ್ತೆ
ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿರುವ ಆತ ಹಣದಾಸೆಗೆ ಬಿದ್ದು ಕಳ್ಳತನದ ಹಾದಿ ಹಿಡಿದಿದ್ದ. ತನ್ನ ಸ್ನೇಹಿತನ ಜೊತೆ ಸೇರಿ ಗ್ರಾಮದಲ್ಲಿ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದ. ತನ್ನ ಸ್ನೇಹಿತನ ಜೊತೆ ಸೇರಿ ಗುರುವಾರ ತಡರಾತ್ರಿ ಮೋಟಾರ್ ಪಂಪ್ ಸೆಟ್ ಕದಿಯಲು ಹೋದ ಇಬ್ಬರು ಬೆಳಗಾಗುವಷ್ಟರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿಯ ಪೆದ್ದನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗೀರಿಶ… ಗುಬ್ಬಿ ತಾಲೂಕಿನ ಪೆದ್ದನಹಳ್ಳಿ ನಿವಾಸಿ. ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ. ಹಣದಾಸೆಗೆ ಬಿದ್ದು ಕಳ್ಳತನದ ಹಾದಿ ಹಿಡಿದಿದ್ದ. ಕಳೆದ ಮೂರು ತಿಂಗಳ ಹಿಂದಷ್ಟೇ ಬೈಕ್ ಕದ್ದು ಮೂರು ತಿಂಗಳು ಜೈಲು ವಾಸ ಅನುಭವಿಸಿ ಹೊರಬಂದಿದ್ದ. ತನ್ನ ಚಾಳಿ ಬಿಡದ ಗಿರಿಶ್ ನಿನ್ನೆ ರಾತ್ರಿ ಮೋಟಾರ್ ಪಂಪ್ ಸೆಟ್ ಕಳ್ಳತನ ಮಾಡೋಕೆ ಅಂತ ತನ್ನ ಸ್ನೇಹಿತ ಮಂಚಲದೊರೆ ಗಿರಿಶ್ ಎಂಬಾತನನ್ನ ತನ್ನ ಊರಿಗೆ ಕರೆಸಿಕೊಂಡಿದ್ದ. ಇಬ್ಬರೂ ರಾತ್ರಿ ಒಟ್ಟಿಗೇ ಮನೆಯಲ್ಲಿ ಊಟ ಮಾಡಿ ಪೆದ್ದನಹಳ್ಳಿ ತೋಟವೊಂದರಲ್ಲಿ ಮೋಟಾರ್ ಪಂಪ್ ಸೆಟ್ ಕದಿಯಲು ಇಬ್ಬರೂ ಒಟ್ಟಿಗೇ ತೆರಳಿದ್ದಾರೆ.

ಈ ವೇಳೆ ತೋಟದ ಮಾಲೀಕನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ಇಬ್ಬರ ಬಟ್ಟೆ ಬಿಚ್ಚಿ ಹಿಗ್ಗಾಮುಗ್ಗಾ ಥಳಿಸಿ ಬೆಂಕಿ ಇಟ್ಟು ಕೊಲೆ ಮಾಡಲು ಯತ್ನಿಸಿದ್ದಾರೆ. ಬಳಿಕ ಇಬ್ಬರನ್ನೂ ಸುಮಾರು ಒಂದೂವರೆ ಕಿಲೋ ಮೀಟರ್ ದೂರದಷ್ಟು ಹೊಡೆದುಕೊಂಡು ಬಂದು, ಶವಗಳನ್ನ ಹೊತ್ತೊಯ್ದು ಊರಿನ ಸಮೀಪವಿರುವ ನೀರಿನ ಕಟ್ಟೆ ಬಳಿ ಒಬ್ಬನ ಶವ ಎಸೆದಿದ್ದಾರೆ. ಮತ್ತೊರ್ವನ ಶವವನ್ನ ನೀರಿನ ಕಟ್ಟೆಯ ರಸ್ತೆ ಪಕ್ಕ ಬಿಸಾಡಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.

ಇನ್ನು ಬೆಳಗ್ಗೆ ಊರಿನ ಗ್ರಾಮಸ್ಥರು ಎರಡು ಶವಗಳನ್ನ ನೋಡಿ ಬೆಚ್ಚಿಬಿದ್ದು ಗುಬ್ಬಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಗುಬ್ಬಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ತುಮಕೂರು ಎಸ್ ಪಿ ರಾಹುಲ್ ಕುಮಾರ್ ಶಹಪುರ್ ವಾಡ್ ಘಟನೆ ನಡೆದ ಜಾಗವನ್ನ ಪರಿಶೀಲನೆ ನಡೆಸಿ ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆಬಿಸಿದ್ದಾರೆ. ಇನ್ನು ಈ ಊರಿನ ಸುತ್ತಮುತ್ತ ಸುಮಾರು 3 ತಿಂಗಳಿಂದ ಸತತವಾಗಿ ಮೋಟಾರ್ ಪಂಪ್ ಸೆಟ್ ಗಳು ಕಳ್ಳತನ ವಾಗ್ತಿದ್ದು, ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

ಒಟ್ನಲ್ಲಿ ಮೆಲ್ನೊಟಕ್ಕೆ ರಾತ್ರಿ ಮೋಟಾರ್ ಪಂಪ್ ಸೆಟ್ ಕದಿಯಲು ಹೋದವರು ಬೆಳಗಾಗುವಷ್ಟರಲ್ಲಿ ಹೆಣವಾಗಿ ಪತ್ತೆಯಾಗಿದ್ದಾರೆ… ಸದ್ಯ ಪೊಲೀಸ್ ತನಿಖೆಯಿಂದಷ್ಟೆ ಇಬ್ಬರ ಕೊಲೆ ರಹಸ್ಯದ ಅಸಲಿ ಸತ್ಯ ಹೊರ ಬರ್ಬೇಕಿದೆ.
-ಮಹೇಶ್, ಟಿವಿ9, ತುಮಕೂರು

Published On - 6:11 pm, Sat, 23 April 22