ತುಮಕೂರು, ಜುಲೈ 24: ಅದೃಷ್ಟ ಯಾರಿಗೆ ಒಲಿಯುತ್ತೆ ಅನ್ನೋದನ್ನ ನಿಜಕ್ಕೂ ಯಾರ ಕೈಯಲ್ಲೂ ಊಹಿಸೋಕೂ ಆಗೋಲ್ಲ.. ಚಹಾ ಮಾರುತ್ತಿದ್ದ ಒಬ್ಬ ವ್ಯಕ್ತಿ ಇಂದು ದೇಶದ ಪ್ರಧಾನಿಯಾಗಿದ್ದಾರೆ.. ಅದೇ ಧಾಟಿಯಲ್ಲಿ ಹೇಳುವುದಾದರೆ ಚಹ ಮಾರುವವರಿಗೆ ಶುಕ್ರದೆಸೆ ತಿರುಗಿ, ದೇವಸ್ಥಾನದ ಮುಂದೆ ಟೀ ಮಾರಾಟ ಮಾಡುತ್ತಿದ್ದ ಮಹಿಳೆ (Woman) ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಯಸ್.. ಚಹ ಮಾರಾಟ ಮಾರುವವರಿಗೆ ಶುಕ್ರದೆಸೆ ಕೂಡಿ ಬಂದಿದೆ ಅಂದ್ರೆ ನಿಜಕ್ಕೂ ತಪ್ಪಾಗಲ್ಲ.. ಯಾಕಂದ್ರೆ ಒಬ್ಬ ವ್ಯಕ್ತಿ ಟೀ ಮಾರಾಟ ಮಾಡಿ ಇಂದು ದೇಶದ ಪ್ರಧಾನಿಯಾಗಿದ್ದಾರೆ.. ಅದರ ಜೊತೆಗೆ ತುಮಕೂರು ಜಿಲ್ಲೆಯಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ದೇವಸ್ಥಾನದ ಮುಂದೆ ಟೀ ಮಾರಾಟ ಮಾಡ್ತಿದ್ದ ಮಹಿಳೆ ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.. ಹೌದು.. ತುಮಕೂರು ತಾಲೂಕಿನ ಉರ್ಡಿಗೆರೆ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಯನ್ನ ನಡೆಸಲಾಯ್ತು.. ದೇವರಾಯದುರ್ಗ ದೇವಾಲಯದ ( Devarayanadurga Temple) ಬಳಿ ಟೀ (Tea Seller) ಮಾರುವ ಅನ್ನಪೂರ್ಣಮ್ಮ ಕಳೆದ ಬಾರಿ ನಡೆದ ಗ್ರಾ.ಪಂ ಚುನಾವಣೆಯಲ್ಲಿ ದೇವರಾಯನದುರ್ಗದಿಂದ ಗ್ರಾ.ಪಂ ಸದಸ್ಯರಾಗಿ ಆಯ್ಕೆಯಾಗಿದ್ರು. ಸದ್ಯ ನಡೆದ ಗ್ರಾ.ಪಂ ಅಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ತುಮಕೂರಿನ ಉರ್ಡಿಗೆರೆ ಗ್ರಾ.ಪಂ. (Urdigere Gram Panchayat) ಸದಸ್ಯರು ಅನ್ನಪೂರ್ಣಮ್ಮ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ.
ಇನ್ನು ಟೀ ಮಾರಾಟ ಮಾಡ್ತಿದ್ದ ಮೋದಿ ಇಂದು ದೇಶದ ಪ್ರಧಾನಿಯಾಗಿದ್ದಾರೆ.. ಅವರದ್ದು ದೇಶ ಅಭಿವೃದ್ಧಿ ಕನಸಾದರೆ,
ಈಕೆಯದು ಗ್ರಾಮ ಅಭಿವೃದ್ದಿಯ ಕನಸು. ಆದರೆ ಅವ್ರು ಪ್ರಧಾನಿ ಆದ್ಮೇಲೆ ಚಹ ಮಾರೋದು ಬಿಟ್ರು. ಇವ್ರು ಗ್ರಾ.ಪಂ ಅಧ್ಯಕ್ಷೆಯಾದ್ರೂ ಚಹ ಮಾರೋದು ಬಿಡಲ್ಲ. ಹೊಟ್ಟೆ ಪಾಡಿಗೆ ಚಹ, ಗ್ರಾಮ ಸೇವೆಗೆ ಗ್ರಾ.ಪಂ ಅಧ್ಯಕ್ಷೆ ಕೆಲಸ ಎಂದು ಅನ್ನಪೂರ್ಣಮ್ಮ ಅವರು ದೇವಸ್ಥಾನದ ಮುಂದೆ ಟೀ ಮಾರುವ ತಮ್ಮ ಕಾಯಕವನ್ನು ಮುಂದುವರಿಸಿದ್ದಾರೆ. ಜನರ ಕೆಲಸ ಜೊತೆ ಟೀ ಮಾರುವ ಕಾಯಕ ಮುಂದುವರೆಸಿದ್ದು ಅವರಿಗೆ ಸಂತಸ ತಂದಿದೆ ಎಂದು ಪತಿ ನರಸಿಂಹ ಪ್ರಸಾದ್ ಹೇಳಿದ್ದಾರೆ.
ಒಟ್ನಲ್ಲಿ ದೇವಸ್ಥಾನದ ಮುಂದೆ ಟೀ ಮಾರುವ ಜೊತೆಗೆ ಗ್ರಾಮ ಪಂಚಾಯತಿ ಅಭಿವೃದ್ಧಿ ಕೆಲಸಗಳ ಬಗ್ಗೆ ಹೆಚ್ಚಿನ ಒತ್ತು ಕೊಟ್ಟು ತನ್ನ ಕೆಲಸವನ್ನ ಅತ್ಯುತ್ತಮವಾಗಿ ನಿರ್ವಹಿಸೋದಾಗಿ ಅನ್ನಪೂರ್ಣಮ್ಮ ಭರವಸೆ ಕೊಟ್ಟಿದ್ದಾರೆ.. ಅವರ ಕನಸು ನನಸಾಗಿದ್ದು ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನ ಒಲಿದುಬಂದಿದ್ದಕ್ಕೆ ಅನ್ನಪೂರ್ಣಮ್ಮ ಪುಲ್ ಖುಷಿಯಾಗಿದ್ದಾರೆ.
ತುಮಕೂರು ಜಿಲ್ಲಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ