ನಮ್ಮನ್ನು ಮದುವೆ ಆಗಲು ಯಾರೂ ಮುಂದೆ ಬರ್ತಿಲ್ಲ, ನಮಗೆ ಮದುವೆ ಮಾಡಿಸಿ: ತುಮಕೂರು ಡಿಸಿಗೆ ಯುವಕರ ಪತ್ರ!

| Updated By: preethi shettigar

Updated on: Oct 16, 2021 | 8:34 PM

ನಾವು ರೈತರಾಗಿರುವುದರಿಂದ ನಮಗೆ ವಧು ಸಿಗುತ್ತಿಲ್ಲ ಎಂದು ಹೇಳಿರುವ ಅವರು ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಬಗೆಹರಿಸುವಂತೆ ಆಗ್ರಹ ವ್ಯಕ್ತಪಡಿಸಿದ್ದಾರೆ. ಸಮಸ್ಯೆ ಬಗೆಹರಿಸಬೇಕೆಂದು ತುಮಕೂರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್​ಗೆ ಯುವಕರು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

ನಮ್ಮನ್ನು ಮದುವೆ ಆಗಲು ಯಾರೂ ಮುಂದೆ ಬರ್ತಿಲ್ಲ, ನಮಗೆ ಮದುವೆ ಮಾಡಿಸಿ: ತುಮಕೂರು ಡಿಸಿಗೆ ಯುವಕರ ಪತ್ರ!
ತುಮಕೂರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್
Follow us on

ತುಮಕೂರು: ಸರ್​​ ನಮ್ಮನ್ನ ಮದುವೆ ಆಗಲು ಯಾರೂ ಮುಂದೆ ಬರ್ತಿಲ್ಲ. ನಮಗೆ ಮದುವೆ ಮಾಡಿಸಿ ಎಂದು ಜಿಲ್ಲಾಧಿಕಾರಿಗೆ ಯುವಕರು ಪತ್ರ ಬರೆದ ಘಟನೆ ತುಮಕೂರು ಜಿಲ್ಲೆಯಲ್ಲಿ ನಡೆದಿದೆ. ತಿಪಟೂರು ತಾಲೂಕಿನ ತಿಮ್ಲಾಪುರ ಯುವಕರಿಂದ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ. ಡಿಸಿಗೆ ಪತ್ರ ಬರೆದು 7 ಯುವಕರು ಅಳಲು ತೋಡಿಕೊಂಡಿದ್ದಾರೆ. ನಾವು ರೈತರಾಗಿರುವುದರಿಂದ ನಮಗೆ ವಧು ಸಿಗುತ್ತಿಲ್ಲ ಎಂದು ಹೇಳಿರುವ ಅವರು ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಬಗೆಹರಿಸುವಂತೆ ಆಗ್ರಹ ವ್ಯಕ್ತಪಡಿಸಿದ್ದಾರೆ. ಸಮಸ್ಯೆ ಬಗೆಹರಿಸಬೇಕೆಂದು ತುಮಕೂರು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ್​ಗೆ ಯುವಕರು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.

 

ಡಿಸಿಗೆ ಪತ್ರ

ಚಿಕ್ಕಬಳ್ಳಾಪುರ: ಸಚಿವ ಸುಧಾಕರ್ ವಿರುದ್ಧ ಆಕ್ರೋಶ
ಆರೋಗ್ಯ ಸಚಿವ ಡಾ ಕೆ.ಸುಧಾಕರ್ ವಿರುದ್ಧ ಬುಗಿಲೆದ್ದ ಆಕ್ರೋಶ ಜೋರಾಗಿದೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚೇನಹಳ್ಳಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸ್ಥಳೀಯರಿಂದ ಆಕ್ರೋಶ ಕೇಳಿಬಂದಿದೆ. ರಾಷ್ಟ್ರೀಯ ಹೆದ್ದಾರಿ 234 ನ್ನ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಚೇನಹಳ್ಳಿ ಪೊಲೀಸ್ ಠಾಣೆ ಎದುರು ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುತ್ತಿದೆ. ಮಂಚೇನಹಳ್ಳಿ ಕೆರೆಯ ಕೋಡಿ ಬಳಿ ರಸಮಂಜರಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಆರೋಪ ಕೇಳಿಬಂದಿದೆ.

ಸ್ಥಳೀಯ ಗ್ರಾಮ ಪಂಚಾಯಿತಿ ಮುಖಂಡರು ಕಾರ್ಯಕ್ರಮ ಆಯೋಜಿಸಿದ್ದರು. ಈ ಕಾರ್ಯಕ್ರಮಕ್ಕೆ ಮಂಚೇನಹಳ್ಳಿ ಪೊಲೀಸರನ್ನು ಚೂ ಬಿಟ್ಟು ಅಡ್ಡಿಪಡಿಸಿದ ಆರೋಪದ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಗಿದೆ. ರಸಮಂಜರಿ ಕಲಾವಿದರು ಹಾಗೂ ಅವರ ಸಾಮಗ್ರಿಗಳನ್ನು ವಶಕ್ಕೆ ಪಡೆದು ಲಾಠಿ ಚಾರ್ಜ್ ಮಾಡಿದ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಮಂಚೇನಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಅಮಾನತ್ತಿಗೆ ಆಗ್ರಹಿಸಿದ್ದಾರೆ.

ಮಂಚೇನಹಳ್ಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿ 234 ರಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ. ವಾಹನಗಳು ಕಿಲೋಮೀಟರ್ ಗಟ್ಟಲೆ ನಿಂತುಕೊಂಡಿವೆ. ಸಂಜೆ 5 ಗಂಟೆಯಿಂದ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಲಾಗುತ್ತಿದೆ. ಮಂಚೇನಹಳ್ಳಿ ಕೆರೆ ಕೋಡಿ ಬಳಿ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮ ಅಡ್ಡಿ ಆರೋಪ ಕೇಳಿಬಂದಿದೆ. ಪೊಲೀಸರ ಹಾಗೂ ಆರೋಗ್ಯ ಸಚಿವ ಡಾ ಕೆ.ಸುಧಾಕರ್ ವಿರುದ್ಧ ಆಕ್ರೋಶ ಹೆಚ್ಚಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು: 3 ಲೀಟರ್ ಪೆಟ್ರೋಲ್ ಗಿಫ್ಟ್ ನೀಡಿ ವಧು- ವರರಿಗೆ ಶಾಕ್ ಕೊಟ್ಟ ಸ್ನೇಹಿತರು!

ಇದನ್ನೂ ಓದಿ: ತುಮಕೂರು: ಹೆರಿಗೆಯ ಬಳಿಕ ಬಾಲ್ಯವಿವಾಹ ಪತ್ತೆ; ಅಪ್ರಾಪ್ತೆ ಪತಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲು