ತುಮಕೂರಿನಲ್ಲಿ ಬಸ್-ಗೂಡ್ಸ್ ಮಧ್ಯೆ ಭೀಕರ ಅಪಘಾತ! ಸ್ಥಳದಲ್ಲೇ ನಾಲ್ವರ ಸಾವು

ಮ್ಯಾಕ್ಸಿ ಕ್ಯಾಬ್​ನಲ್ಲಿ ತರಕಾರಿ ಹೂಗಳು ತುಂಬಿಕೊಂಡು ಹೋಗುತಿದ್ದರು. ಈ ವೇಳೆ ಖಾಸಗಿ ಬಸ್ ಶಿವಮೊಗ್ಗದಿಂದ ಬೆಂಗಳೂರಿನತ್ತ ಬರುತ್ತಿತ್ತು. ಈ ವೇಳೆ ಎರಡು ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತುಮಕೂರಿನಲ್ಲಿ ಬಸ್-ಗೂಡ್ಸ್ ಮಧ್ಯೆ ಭೀಕರ ಅಪಘಾತ! ಸ್ಥಳದಲ್ಲೇ  ನಾಲ್ವರ ಸಾವು
ಬಸ್ನೊಳಗೆ ಸಿಲುಕಿರುವ ಮೃತದೇಹ

ತುಮಕೂರು: ಬಸ್-ಗೂಡ್ಸ್ ವಾಹನ ಮಧ್ಯೆ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಈ ಘಟನೆ ತುಮಕೂರು ತಾಲೂಕಿನ ಗೊಲ್ಲಹಳ್ಳಿಯ ಬಳಿ ಸಂಭವಿಸಿದೆ. ತುಮಕೂರು-ಶಿವಮೊಗ್ಗ ಹೆದ್ದಾರಿಯಲ್ಲಿ ಭೀಕರ ಅಪಘಾತ ನಡೆದು ಕವಿತಾ(38), ದರ್ಶನ್(22), ದಿವಾಕರ್(25), ಕೃಷ್ಣಮೂರ್ತಿ(25) ಮೃತಪಟ್ಟಿದ್ದಾರೆ. ಮತ್ತೊಬ್ಬರ ಸ್ಥಿತಿ ಗಂಭೀರವಾಗಿದೆ. ಮೃತರು ಮ್ಯಾಕ್ಸಿ ಕ್ಯಾಬ್​ನಲ್ಲಿ ತುಮಕೂರಿನ ಮಾರುಕಟ್ಟೆಯಿಂದ ಚಿಕ್ಕನಾಯಕನಹಳ್ಳಿ ಕಡೆಗೆ ಹೋಗುತ್ತಿದ್ದರು. ಈ ವೇಳೆ ಅಪಘಾತ ನಡೆದಿದೆ.

ಮ್ಯಾಕ್ಸಿ ಕ್ಯಾಬ್​ನಲ್ಲಿ ತರಕಾರಿ ಹೂಗಳು ತುಂಬಿಕೊಂಡು ಹೋಗುತಿದ್ದರು. ಈ ವೇಳೆ ಖಾಸಗಿ ಬಸ್ ಶಿವಮೊಗ್ಗದಿಂದ ಬೆಂಗಳೂರಿನತ್ತ ಬರುತ್ತಿತ್ತು. ಈ ವೇಳೆ ಎರಡು ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ ಶವ ತೆರವು ಕಾರ್ಯ ನಡೆಸಿದ್ದಾರೆ.

ಮೃತರು ತುಮಕೂರಿನ ಮಾರುಕಟ್ಟೆಗೆ ಹೂ ತರುತ್ತಿದ್ದ ರೈತರು ಎನ್ನಲಾಗಿದೆ. ಬೆಳಗಿನ ಜಾವ 5.30ರ ಸಮಯದಲ್ಲಿ ಅಪಘಾತ ನಡೆದಿದೆ. ಸ್ಥಳಕ್ಕೆ ತುಮಕೂರು ಎಸ್ ಪಿ ರಾಹುಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರೈತರು ಪ್ರತಿದಿನ ಹೂವಿನ ವ್ಯಾಪಾರಕ್ಕೆ ತುಮಕೂರಿಗೆ ಬರುತ್ತಿದ್ದರು. ಹೂ ಕೊಂಡು ತುರುವೇಕೆರೆ, ಚಿಕ್ಕನಾಯಕನಹಳ್ಳಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ದಿನ ಬಸ್​ನಲ್ಲಿ ತುಮಕೂರಿಗೆ ಬರುತ್ತಿದ್ದರು. ಕ್ಯಾಬ್ ಮೃತ ಮಹಿಳೆ ಕವಿತಾಗೆ ಸೇರಿದ್ದಾಗಿದೆ. ಇನ್ನು ಕವಿತಾರವರ ಮಗ ದರ್ಶನ್ ಡ್ರೈವ್ ಮಾಡುತ್ತಿದ್ದರಂತೆ.

ಇದನ್ನೂ ಓದಿ

ಕನ್ಯೆ ನೋಡಲು ಬಂದಿದ್ದ ಯುವಕ ಸಾವು; ಮಗನ ಶವ ಕಂಡು ಕಣ್ಣೀರಿಟ್ಟ ಕುಟುಂಬಸ್ಥರು

ಹರ್ನಿಯಾ ಆಪರೇಷನ್ ವೇಳೆ ಖಾಸಗಿ ಅಂಗಕ್ಕೆ ಗಾಯ, ಮೂಡಿಗೆರೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ದೂರು ದಾಖಲು

Click on your DTH Provider to Add TV9 Kannada