ಹರ್ನಿಯಾ ಆಪರೇಷನ್ ವೇಳೆ ಖಾಸಗಿ ಅಂಗಕ್ಕೆ ಗಾಯ, ಮೂಡಿಗೆರೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ದೂರು ದಾಖಲು

ಹರ್ನಿಯಾ ಆಪರೇಷನ್ ವೇಳೆ ಖಾಸಗಿ ಅಂಗಕ್ಕೆ ಗಾಯ, ಮೂಡಿಗೆರೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ದೂರು ದಾಖಲು
ಯೋಗೇಂದ್ರ

ನನ್ನ ಖಾಸಗಿ ಅಂಗಕ್ಕೆ ಗಾಯ ಮಾಡಿದ್ದಾರೆ. ಮುಂದೆ ನನ್ನ ಆರೋಗ್ಯದಲ್ಲಿ ಸಮಸ್ಯೆಯಾದರೆ ಸಿಬ್ಬಂದಿಗಳೇ ಕಾರಣ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೂಡಿಗೆರೆ ಪೊಲೀಸ್ ಠಾಣೆಗೆ ಯೋಗೇಂದ್ರ ಎಂಬುವವರು ದೂರು ಸಲ್ಲಿಸಿದ್ದಾರೆ.

TV9kannada Web Team

| Edited By: Ayesha Banu

Oct 17, 2021 | 11:16 AM

ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಎಡವಟ್ಟು ನಡೆದಿದೆ. ಹರ್ನಿಯಾ ಆಪರೇಷನ್ ವೇಳೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದು ತನ್ನ ಖಾಸಗಿ ಅಂಗಕ್ಕೆ ಗಾಯ ಮಾಡಿದ್ದಾರೆಂದು ರೋಗಿ ದೂರು ದಾಖಲಿಸಿದ್ದಾರೆ.

ನನ್ನ ಖಾಸಗಿ ಅಂಗಕ್ಕೆ ಗಾಯ ಮಾಡಿದ್ದಾರೆ. ಮುಂದೆ ನನ್ನ ಆರೋಗ್ಯದಲ್ಲಿ ಸಮಸ್ಯೆಯಾದರೆ ಸಿಬ್ಬಂದಿಗಳೇ ಕಾರಣ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೂಡಿಗೆರೆ ಪೊಲೀಸ್ ಠಾಣೆಗೆ ಯೋಗೇಂದ್ರ ಎಂಬುವವರು ದೂರು ಸಲ್ಲಿಸಿದ್ದಾರೆ. ಆದ್ರೆ ದೂರು ನೀಡಿದ್ರೂ ಆಸ್ಪತ್ರೆ ಮುಖ್ಯಾಧಿಕಾರಿ ಶಾಂಭವಿ ಉಡಾಫೆ ಉತ್ತರ ಕೊಟ್ಟು ಸುಮ್ಮನಾಗಿದ್ದಾರೆ. ಹೀಗಾಗಿ ಆಸ್ಪತ್ರೆ ಮುಖ್ಯಾಧಿಕಾರಿ ವಿರುದ್ಧ ಯೋಗೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹರಿಣಿಯಾ ಅಪರೇಷನ್ ಯಡವಟ್ಟು, ವ್ಯಕ್ತಿಯ ಖಾಸಗಿ ಅಂಗಕ್ಕೆ ಗಾಯ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯೋಗೇಂದ್ರ ಎಂಬ ವ್ಯಕ್ತಿ ಹರಿಣಿಯಾ ಅಪರೇಷನ್ ಮಾಡಿಸಿಕೊಳ್ಳಲು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ರು. ಅದರಂತೆಯೇ ದಿನಾಂಕ 12/10/2021ರಂದು ಅಪರೇಷನ್ ಕೂಡ ನಡೆಸಲಾಗಿದೆ. ಆದರೆ ಈ ಸಂದರ್ಭದಲ್ಲಿ ನನ್ನ ಖಾಸಗಿ ಅಂಗಕ್ಕೆ ಪೈಪನ್ನ ಚುಚ್ಚಿ ತೀವ್ರವಾಗಿ ಗಾಯಗೊಳಿಸಿದ್ದು, ನನ್ನ ಖಾಸಗಿ ಅಂಗದಲ್ಲಿ ಊತ ಕಾಣಿಸಿಕೊಂಡಿದ್ದು ಆರೋಗ್ಯದಲ್ಲಿ ಏರುಪೇರಾಗಿದೆ. ಈ ರೀತಿ ಯಾಕೆ ಮಾಡಿದ್ದೀರಿ ಅಂತಾ ಕೇಳಿದ್ರೆ ಬೆಂಗಳೂರು ಅಥವಾ ಮಂಗಳೂರಿನ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಆಸ್ಪತ್ರೆಯ ಮುಖ್ಯಾಧಿಕಾರಿ ಶಾಂಭವಿ ಅವರಿಗೆ ಹೇಳಿದ್ರೂ ಉಡಾಫೆ ವರ್ತನೆ ತೋರಿಸಿದ್ದಾರೆ ಅಂತಾ ಟಿವಿ9 ಡಿಜಿಟಲ್​ ಮುಂದೆ ಮಾನಸಿಕವಾಗಿ ನೊಂದಿರುವ ಯೋಗೇಂದ್ರ ತಿಳಿಸಿದ್ದಾರೆ.

ಆಸ್ಪತ್ರೆ ಸಿಬ್ಬಂದಿಗಳ ವರ್ತನೆಗೆ ಬೇಸತ್ತು ದೂರು ದಾಖಲು ತನ್ನ ಖಾಸಗಿ ಅಂಗಕ್ಕೆ ಪೆಟ್ಟು ಬಿದ್ದಿದ್ದರಿಂದ ನೊಂದಿರುವ ವ್ಯಕ್ತಿ ಮೂಡಿಗೆರೆ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ ಮಾಡಿದ್ದಾರೆ. ಮುಂದೆ ನನ್ನ ಆರೋಗ್ಯದಲ್ಲಿ ಏನಾದ್ರೂ ಏರುಪೇರು ಕಾಣಿಸಿಕೊಂಡ್ರೆ ಆಸ್ಪತ್ರೆ ಸಿಬ್ಬಂದಿಗಳೇ ಕಾರಣ. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಾ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಹರಿಣಿಯಾ ಅಪರೇಷನ್ ಮಾಡಿಸಿಕೊಳ್ಳಲು ಹೋಗಿ ಯಡವಟ್ಟು ಮಾಡಿಕೊಂಡಿರುವ ವ್ಯಕ್ತಿ ಮುಂದೆ ಏನಾಗುತ್ತೋ ಅನ್ನೋ ಆತಂಕದಲ್ಲಿಯೇ ಪ್ರತಿ ಕ್ಷಣಗಳನ್ನ ಕಳೆಯುವಂತಾಗಿದೆ. ಜನಸಾಮಾನ್ಯರು ಆಸ್ಪತ್ರೆಗೆ ಹೋದಾಗ ಸರಿಯಾಗಿ ಚಿಕಿತ್ಸೆ ನೀಡಲ್ಲ ಅನ್ನೋ ಆರೋಪ ಮೂಡಿಗೆರೆ ಸರ್ಕಾರಿ ಆಸ್ಪತ್ರೆ ವಿರುದ್ದ ಸಾಮಾನ್ಯವಾಗಿ ಆಗಾಗ ಕೇಳಿ ಬರುತ್ತಲೇ ಇರುತ್ತೆ. ಇನ್ನೂ ರೋಗಿಗಳ ಕಷ್ಟಕ್ಕೆ ಸರಿಯಾಗಿ ಸ್ಪಂದಿಸಲ್ಲ ಅನ್ನೋ ಆರೋಪ ಆಸ್ಪತ್ರೆ ಮುಖ್ಯಾಧಿಕಾರಿ ಶಾಂಭವಿ ವಿರುದ್ಧ ಈ ಹಿಂದೆ ಕೂಡ ಅನೇಕ ಬಾರಿ ಕೇಳಿ ಬಂದಿತು. ಇದೀಗ ಹರಿಣಿಯಾ ಅಪರೇಷನ್ನಿಂದ ನೊಂದಿರುವ ವ್ಯಕ್ತಿಯೊಬ್ಬರು ಠಾಣೆಯಲ್ಲಿ ದೂರು ದಾಖಲಿಸಿರೋದು ಆಸ್ಪತ್ರೆಯ ಕರ್ಮಕಾಂಡವನ್ನ ಬಟಾಬಯಲು ಮಾಡಿದೆ.

complent copy

ಕಂಪ್ಲೆಂಟ್ ಕಾಪಿ

ಇದನ್ನೂ ಓದಿ: ಚಿಕ್ಕಮಗಳೂರು: ನಾಲಿಗೆ ಬಚ್ಚಿಟ್ಟುಕೊಂಡು ದಾಖಲೆ ಮಾಡಿದ ವ್ಯಕ್ತಿ; 40ರ ಹರೆಯದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ ಸೇರಿ ಸಾಧನೆ

Follow us on

Related Stories

Most Read Stories

Click on your DTH Provider to Add TV9 Kannada