ಕನ್ಯೆ ನೋಡಲು ಬಂದಿದ್ದ ಯುವಕ ಸಾವು; ಮಗನ ಶವ ಕಂಡು ಕಣ್ಣೀರಿಟ್ಟ ಕುಟುಂಬಸ್ಥರು

ಕನ್ಯೆ ನೋಡಲು ಬಂದಿದ್ದ ಯುವಕ ಸಾವು; ಮಗನ ಶವ ಕಂಡು ಕಣ್ಣೀರಿಟ್ಟ ಕುಟುಂಬಸ್ಥರು
ಪ್ರತಾಪ್ ನಾಯಕ್

ಪ್ರತಾಪ್ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ತರಿಗೆದೊಡ್ಡಿ ಗ್ರಾಮದ ಯುವಕ. ಕುಟುಂಬದವರು ಸೇರಿ ನಿನ್ನೆ ಬಲಕುಂದಿ ತಾಂಡಾಕ್ಕೆ ಕನ್ಯೆ ನೋಡಲು ಬಂದಿದ್ದರು. ಸಂಜೆ ಬಹಿರ್ದೆಸೆಗಾಗಿ ಕಾಲುವೆ ಬಳಿಗೆ ಹೋಗಿದ್ದಾಗ ಈ ಘಟನೆ ನಡೆದಿದೆ.

TV9kannada Web Team

| Edited By: preethi shettigar

Oct 17, 2021 | 12:36 PM

ಬಾಗಲಕೋಟೆ: ಅಳಿಯನಿಗೆ ಕನ್ಯೆಯನ್ನು ನೋಡಲು ಹೋಗಿದ್ದ ಯುವಕ, ಕಾಲು ಜಾರಿ ಕಾಲುವೆಗೆ ಬಿದ್ದು ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಬಲಕುಂದಿ ತಾಂಡಾದಲ್ಲಿ ನಡೆದಿದೆ. ಮೊದಲು ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲ್ಲೂಕಿನ ಗದಗೇರಿ ಗ್ರಾಮದಲ್ಲಿ ಪ್ರತಾಪ್​ಗೆ ಕನ್ಯೆ ನೋಡಿದ್ದರು. ಬಳಿಕ ಪ್ರತಾಪ್​ನ ಅಳಿಯನಿಗೆ ಕನ್ಯೆ ನೋಡಲು ಬಾಗಲಕೋಟೆಗೆ ಆಗಮಿಸಿದ್ದಾರೆ. ಈ ವೇಳೆ ಬಯಲು ಬಹಿರ್ದೆಸೆಗೆ ಹೋಗಿದ್ದಾಗ ಕಾಲೂವೆಯಲ್ಲಿ ಕಾಲುಜಾರಿ ಬಿದ್ದು ಪ್ರತಾಪ್ ನಾಯಕ್(24) ಸಾವನ್ನಪ್ಪಿದ್ದಾರೆ. ಇಳಕಲ್ ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಪ್ರತಾಪ್ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ತರಿಗೆದೊಡ್ಡಿ ಗ್ರಾಮದ ಯುವಕ. ಕುಟುಂಬದವರು ಸೇರಿ ನಿನ್ನೆ ಬಲಕುಂದಿ ತಾಂಡಾಕ್ಕೆ ಕನ್ಯೆ ನೋಡಲು ಬಂದಿದ್ದರು. ಸಂಜೆ ಬಹಿರ್ದೆಸೆಗಾಗಿ ಕಾಲುವೆ ಬಳಿಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಇತ್ತೀಚಿಗೆ ಸುರಿದ ಮಳೆಯಿಂದ ಕಾಲೂವೆಯಲ್ಲಿ ನೀರು ಬಂದಿತ್ತು. ಇದರಿಂದಾಗಿ ಯುವಕ ಬಲಿಯಾಗಿದ್ದಾರೆ. ಇಂದು (ಅಕ್ಟೋಬರ್ 17) ಬೆಳಿಗ್ಗೆ ಅಗ್ನಿಶಾಮಕ ಸಿಬ್ಬಂದಿ ಶವ ಹೊರತೆಗೆದಿದ್ದಾರೆ. ಮೃತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಚಾಮರಾಜನಗರ: ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಶಿವಪುರದಲ್ಲಿ ನಡೆದಿದೆ. ರೈತರೊಬ್ಬರ ಜಮೀನಿನಲ್ಲಿ ಮೂವರು ಯುವಕರು ಭೇಟೆಯಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ವಿದ್ಯುತ್ ತಂತಿ ಸ್ಪರ್ಶಿಸಿ ಕುಮಾರ್(22) ಸಾವನ್ನಪ್ಪಿದ್ದಾನೆ. ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಮಹಿಳೆಯರ ಸಾವು: ಮೀನುಗಾರರ ಸಮಯಪ್ರಜ್ಞೆಯಿಂದ ಬದುಕಿದ ಐವರು!

Crime News: ದುರ್ಗಾ ಮೂರ್ತಿ ವಿಸರ್ಜನೆ ವೇಳೆ ನದಿಯಲ್ಲಿ ಮುಳುಗಿ ಐವರು ಭಕ್ತರು ಸಾವು

Follow us on

Related Stories

Most Read Stories

Click on your DTH Provider to Add TV9 Kannada