Crime News: ದುರ್ಗಾ ಮೂರ್ತಿ ವಿಸರ್ಜನೆ ವೇಳೆ ನದಿಯಲ್ಲಿ ಮುಳುಗಿ ಐವರು ಭಕ್ತರು ಸಾವು

ಧೋಲ್ಪುರದ ಬಸ್ಡಿ ಪೊಲೀಸ್ ಠಾಣಾ ವ್ಯಾಪ್ತಿಯ ಭೂತೇಶ್ವರ ಮಹಾದೇವ್ ಬಳಿ ಹಾದುಹೋಗುವ ಪಾರ್ವತಿ ನದಿಯಲ್ಲಿ ವಿಗ್ರಹ ವಿಸರ್ಜನೆಯ ಸಮಯದಲ್ಲಿ ಈ ಘಟನೆ ನಡೆದಿದೆ.

Crime News: ದುರ್ಗಾ ಮೂರ್ತಿ ವಿಸರ್ಜನೆ ವೇಳೆ ನದಿಯಲ್ಲಿ ಮುಳುಗಿ ಐವರು ಭಕ್ತರು ಸಾವು
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Oct 16, 2021 | 1:48 PM

ಜೈಪುರ: ರಾಜಸ್ಥಾನದ ಧೋಲ್‌ಪುರದಲ್ಲಿ ಪಾರ್ವತಿ ನದಿಯಲ್ಲಿ ದುರ್ಗಾ ಮೂರ್ತಿ ವಿಸರ್ಜನೆಯ ವೇಳೆ ಆಗ್ರಾ ಮೂಲದ ಐವರು ಮುಳುಗಿ ಸಾವನ್ನಪ್ಪಿದ್ದಾರೆ. ನವರಾತ್ರಿ ಹಿನ್ನೆಲೆಯಲ್ಲಿ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಈ ದುರಂತ ಸಂಭವಿಸಿದ್ದು, ದುರ್ಗಾ ಮೂರ್ತಿಯನ್ನು ವಿಸರ್ಜನೆ ಮಾಡಲು ಐವರು ಆಗ್ರಾದ ಭಾವನಾಪುರ ಗ್ರಾಮದಿಂದ ಧೋಲ್​ಪುರಕ್ಕೆ ಬಂದಿದ್ದರು.

ಹಬ್ಬದ ಸಂಭ್ರಮದಲ್ಲಿದ್ದ ಮೃತರ ಕುಟುಂಬಸ್ಥರಿಗೆ ಈ ಘಟನೆಯಿಂದ ಭಾರೀ ಆಘಾತವಾಗಿದ್ದು, ಸಾವನ್ನಪ್ಪಿದ ಐವರು ಕೂಡ ಯುವಕರಾಗಿದ್ದಾರೆ. ಶೋಧ ಕಾರ್ಯಾಚರಣೆ ಬಳಿಕ ಆ ಐವರ ಶವಗಳನ್ನು ಹೊರಗೆ ತೆಗೆಯಲಾಗಿದೆ. ಡೈವರ್‌ಗಳ ಸಹಾಯದಿಂದ 5 ದೇಹಗಳನ್ನು ನದಿಯಿಂದ ಹೊರಗೆ ತೆಗೆಯಲಾಗಿದೆ. ಮೃತಪಟ್ಟವರೆಲ್ಲರೂ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಜಗ್ನೇರ್ ಪೊಲೀಸ್ ಠಾಣಾ ಪ್ರದೇಶದ ನಿವಾಸಿಗಳಾಗಿದ್ದಾರೆ.

ಧೋಲ್ಪುರದ ಬಸ್ಡಿ ಪೊಲೀಸ್ ಠಾಣಾ ವ್ಯಾಪ್ತಿಯ ಭೂತೇಶ್ವರ ಮಹಾದೇವ್ ಬಳಿ ಹಾದುಹೋಗುವ ಪಾರ್ವತಿ ನದಿಯಲ್ಲಿ ವಿಗ್ರಹ ವಿಸರ್ಜನೆಯ ಸಮಯದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ವಿಗ್ರಹ ವಿಸರ್ಜನೆಯ ಸಮಯದಲ್ಲಿ ಐವರು ಯುವಕರು ನದಿಯಲ್ಲಿ ಮುಳುಗಿದ್ದಾರೆ. ಸ್ಥಳೀಯರು ಘಟನೆಯನ್ನು ಪೊಲೀಸರಿಗೆ ಮತ್ತು ಆಡಳಿತಕ್ಕೆ ತಿಳಿಸಿದ್ದಾರೆ. ಸುಮಾರು 12ಕ್ಕೂ ಹೆಚ್ಚು ಯುವಕರ ಗುಂಪು ದುರ್ಗಾ ಮೂರ್ತಿಯನ್ನು ಹಿಡಿದುಕೊಂಡು ಪಾರ್ವತಿ ನದಿ ನೀರಿನಲ್ಲಿ ಇಳಿದಿತ್ತು. ಆದರೆ, ನದಿಯೊಳಗಿನ ನೀರು ಹೆಚ್ಚಾಗಿ, ಬಲವಾದ ಪ್ರವಾಹವಿದ್ದುದರಿಂದ ಅವರಲ್ಲಿ ಐವರು ಯುವಕರು ಮುಳುಗಿದ್ದಾರೆ.

ಇದನ್ನೂ ಓದಿ: ಕಾಂಗೋ ನದಿಯಲ್ಲಿ ಮುಳುಗಿದ ಹಡಗು; 50ಕ್ಕೂ ಹೆಚ್ಚು ಜನರು ಸಾವು, ಇನ್ನೂ 70 ಮಂದಿಗಾಗಿ ಹುಡುಕಾಟ

ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ವೇಳೆ ಹಿಂದೂ ದೇವಸ್ಥಾನದ ಮೇಲೆ ದಾಳಿ; ಮೂವರು ಸಾವು

Published On - 1:45 pm, Sat, 16 October 21