ಬೆಂಗಳೂರಿನಲ್ಲಿ ಅಕ್ಕನ ಜತೆ ಸಂಬಂಧ ಬೆಳೆಸಲು ಯತ್ನಿಸಿದ ಯುವಕನ ಹತ್ಯೆ! ಆಟೋದಲ್ಲಿ ಶವವನ್ನು ಪೊಲೀಸ್ ಠಾಣೆಗೆ ತಂದ ಆರೋಪಿಗಳು

ಬೆಂಗಳೂರಿನಲ್ಲಿ ಅಕ್ಕನ ಜತೆ ಸಂಬಂಧ ಬೆಳೆಸಲು ಯತ್ನಿಸಿದ ಯುವಕನ ಹತ್ಯೆ! ಆಟೋದಲ್ಲಿ ಶವವನ್ನು ಪೊಲೀಸ್ ಠಾಣೆಗೆ ತಂದ ಆರೋಪಿಗಳು
ಕೊಲೆ ಮಾಡಿ ಶವವನ್ನು ಆಟೋದಲ್ಲಿ ತಂದಿದ್ದಾರೆ, ಕೊಲೆಯಾದ ಭಾಸ್ಕರ್

ಯುವಕನ್ನು ಕೊಲೆ ಮಾಡಿ ನಾಲ್ವರು ಆತನ ಶವವನ್ನು ಪೊಲೀಸ್ ಠಾಣೆಗೆ ತಂದಿದ್ದಾರೆ. ಈ ಪ್ರಕರಣ ಸಂಬಂಧ ಮುನಿರಾಜು(24), ಮಾರುತಿ(22), ಮುನಿರಾಜು(24), ಮಾರುತಿ(22) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

TV9kannada Web Team

| Edited By: sandhya thejappa

Oct 17, 2021 | 12:57 PM

ಬೆಂಗಳೂರು: ಅಕ್ಕನ ಜತೆ ಸಂಬಂಧ ಬೆಳೆಸಲು ಯತ್ನಿಸಿದ ಯುವಕನನ್ನು ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿ ನಡೆದಿದೆ. ಯುವಕನನ್ನು ಹತ್ಯೆಗೈದು ಶವವನ್ನು ಆರೋಪಿಗಳು ಠಾಣೆಗೆ ತಂದಿದ್ದಾರೆ. 24 ವರ್ಷದ ಭಾಸ್ಕರ್ ಎಂಬುವವನನ್ನು ಕೊಲೆಗೈಯಲಾಗಿದ್ದು, ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟಿಲ್, ನಿನ್ನೆ ಮಧ್ಯರಾತ್ರಿ ನಂತರ ಎಪಿ ನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿ ಹೊಸೂರು ಬಳಿಯ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿಸಿದ್ದಾರೆ.

ಯುವಕನ್ನು ಕೊಲೆ ಮಾಡಿ ನಾಲ್ವರು ಆತನ ಶವವನ್ನು ಪೊಲೀಸ್ ಠಾಣೆಗೆ ತಂದಿದ್ದಾರೆ. ಈ ಪ್ರಕರಣ ಸಂಬಂಧ ಮುನಿರಾಜು(24), ಮಾರುತಿ(22), ಮುನಿರಾಜು(24), ಮಾರುತಿ(22) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆ ನಡೆದಿದ್ದು ಏಕೆ? ಭಾಸ್ಕರ್ ಎಂಬುವವನು ಮುನಿರಾಜು ಅಕ್ಕನಿಗೆ ಹತ್ತಿರ ಆಗಲು ಪ್ರಯತ್ನಿಸುತ್ತಿದ್ದ. ಇದೇ ವಿಚಾರಕ್ಕೆ ಮಹಿಳೆ ಮತ್ತು ಗಂಡನ ನಡುವೆ ಗಲಾಟೆಯಾಗುತ್ತಿತ್ತು. 15 ದಿನದ ಹಿಂದೆ ಮುನಿರಾಜು ಅಕ್ಕ ಪತಿ ಮನೆ ಬಿಟ್ಟು ಬಂದಿದ್ದಳು. ಮಾಲೂರಿನಲ್ಲಿದ್ದ ಪತಿ ಮನೆ ಬಿಟ್ಟು ಮುನಿರಾಜು ಅಕ್ಕ ಬಂದಿದ್ದಳು. ಚಂದ್ರಶೇಖರ್ ಲೇಔಟ್​ನಲ್ಲಿ ಬಂದು ವಾಸಿಸುತ್ತಿದ್ದಳು. ಮಹಿಳೆಗೆ ಬೇರೆ ಮನೆ ಮಾಡಿಕೊಡ್ತೇನೆ ಅಂತ ಭಾಸ್ಕರ್ ಹೇಳಿದ್ದ. ಈ ವಿಚಾರವನ್ನು ಮಹಿಳೆಯ ಮಗ ಸೋದರ ಮಾವ ಮುನಿರಾಜುಗೆ ಮಾಹಿತಿ ನೀಡುತ್ತಾನೆ.

ಮುನಿರಾಜು ಆಟೋದಲ್ಲಿ ಇಬ್ಬರು ಸ್ನೇಹಿತರೊಂದಿಗೆ ತೆರಳಿದ್ದ. ಅಲ್ಲದೇ ಭಾಸ್ಕರ್ ಕೂಡ ಆಟೋದಲ್ಲಿ ಮಹಿಳೆ ಜೊತೆ ತೆರಳುತ್ತಿದ್ದ. ಸುಂಕದಕಟ್ಟೆ ಬಳಿ ಆಟೋ ತಡೆದು ಅಕ್ಕನನ್ನು ಕರೆತಂದಿದ್ದರು. ನಂತರ ಭಾಸ್ಕರ್​ನನ್ನು ಕೆಬ್ಬೆಹಾಳಕ್ಕೆ ಕರೆದೊಯ್ದಿದ್ದರು. ಆರೋಪಿಗಳು 2 ಗಂಟೆಗಳ ಕಾಲ ಹಲ್ಲೆ ಮಾಡಿದ್ದಾರೆ. ಆರೋಪಿ ಮುನಿರಾಜು ಭಾಸ್ಕರ್ ತಲೆಗೆ, ಹಣೆಗೆ ಗುದ್ದಿದ್ದಾರೆ. ಹೊಡೆದ ರಭಸಕ್ಕೆ ಭಾಸ್ಕರ್ ಮೂರ್ಛೆ ಹೋಗಿದ್ದಾನೆ. ನಾಟಕ ಮಾಡ್ತಿದ್ದಾನೆಂದು ಆರೋಪಿಗಳು ಕೇರ್ ಮಾಡಿರಲಿಲ್ಲ. ಸ್ವಲ್ಪ ಹೊತ್ತಿನ ಬಳಿಕ ಮೃತಪಟ್ಟಿರುವುದು ಗೊತ್ತಾಗಿದೆ.

ಇನ್ನು ಕೊಲೆ ಮಾಡಿದ ನಂತರ ಆರೋಪಿಗಳು ಆಟೋದಲ್ಲಿ ಭಾಸ್ಕರ್ ಶವದ ಜೊತೆ ಠಾಣೆಗೆ ಬಂದಿದ್ದಾರೆ. ಪೊಲೀಸ್ ಠಾಣೆಗೆ ಬಂದು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ಪ್ರಕರಣ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಾಸ್ಕರ್ ಯಾರು? ಮೃತ ವ್ಯಕ್ತಿ ಹೊಸೂರು ಬಳಿಯ ಗಾರ್ಮೆಂಟ್ಸ್​ನಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಒಂದು ಮಹಿಳೆಯ ಜೊತೆಗೆ ಪರಿಚಯ ಆಗಿದೆ. ಆಕೆಯ ಜೊತೆಗೆ ಸ್ನೇಹ ಬೆಳೆಯುತ್ತದೆ. ನಂತರ ಮಹಿಳೆ ತನ್ನ ಮನೆ ಬಿಟ್ಟು ತಾಯಿ ಮನೆಯಲ್ಲಿ ಇದ್ದಳು. ಆಗ ಭಾಸ್ಕರ್ ಮಹಿಳೆಯನ್ನ ಬೇರೆ ಮನೆ ಮಾಡಿಕೊಡುತ್ತೇನೆ ಎಂದು ಆಟೋದಲ್ಲಿ ಕರೆದುಕೊಂಡು ಹೋಗುತ್ತಿದ್ದ. ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಮಹಿಳೆ ತಮ್ಮ ಮುನಿರಾಜು, ಅಕ್ಕನನ್ನು ಮನೆಗೆ ತಂದು ಬಿಡುತ್ತಾನೆ. ಈ ವೇಳೆ ಮಹಿಳೆ ತಮ್ಮ ಆಟೋ ಅಡ್ಡಗಟ್ಟಿ ಕೆಬ್ಬೆಹಾಳ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟಿಲ್ ತಿಳಿಸಿದ್ದಾರೆ.

ಹೊಸೂರು ಮೂಲದ ಭಾಸ್ಕರ್ 31 ವರ್ಷದ ಮಹಿಳೆ ಜೊತೆ ಸ್ನೇಹ ಬೆಳೆಸಲು ಮುಂದಾಗಿದ್ದ. ಮಹಿಳೆಗೆ 13 ಹಾಗೂ 11 ವರ್ಷದ ಮಕ್ಕಳಿದ್ದಾರೆ. ಚಂದ್ರಶೇಖರ್ ಲೇಔಟ್ ತಾಯಿಯ ಮನೆಯಲ್ಲಿ ಮಹಿಳೆ ಇದ್ದರು. ನಿನ್ನೆ ಸಂಜೆ 3 ಗಂಟೆಗೆ ಭಾಸ್ಕರ್ ಬೆಂಗಳೂರಿಗೆ ಬಂದಿದ್ದ. ಮನೆ ಬಳಿ ಬಂದು ಮಹಿಳೆ ಜೊತೆ ಮಾತುಕತೆ ನಡೆಸಿದ್ದ. 7 ಗಂಟೆ ಸುಮಾರಿಗೆ ಬೆಂಗಳೂರು ಮನೆಯಿಂದ ಹೊರಟಿದ್ದ. ಬಾಡಿಗೆ ಆಟೋ ಪಡೆದು ಹೊರಡಲು ಮುಂದಾಗಿದ್ದ. ಈ ವೇಳೆ ಬಟ್ಟೆ ತೆಗೆದುಕೊಂಡು ಹೋಗ್ತಿದ್ದಾಳೆ ಅಂತಾ ಮಗು ಮಾವನಿಗೆ ಹೇಳಿದೆ. ಈ ವೇಳೆ ಆಟೋ ಅಡ್ಡಗಟ್ಟಿ ತಮ್ಮ ಅಕ್ಕನನ್ನು ಮನೆಗೆ ಬಿಟ್ಟು ಬಂದಿದ್ದ.

ಮೂರ್ನಾಲ್ಕು ಬಾರಿ ಠಾಣೆ ಬಳಿ ಬಂದಿದ್ದ ಆರೋಪಿಗಳು ರಾತ್ರಿ ವೇಳೆ ಆರೋಪಿಗಳು ಮೂರ್ನಾಲ್ಕು ಬಾರಿ ಠಾಣೆ ಬಳಿ ಬಂದಿದ್ದಾರೆ. ಪೊಲೀಸರ ಮುಂದೆ ಶರಣಾಗೋದಾ ಬೇಡ್ವಾ ಎಂದು ಮೂರ್ನಾಲ್ಕು ಬಾರಿ ಠಾಣೆ ಬಳಿ ಬಂದು ಹೋಗಿದ್ದಾರೆ. ನಂತರ ಠಾಣೆಯಿಂದ ಸ್ವಲ್ಪ ದೂರ ಆಟೋ ನಿಲ್ಲಿಸಿ ಯೋಚನೆ ಮಾಡಿದ್ದಾರೆ. ಅಯ್ಯೋ ಪೊಲೀಸರು ಎಲ್ಲಿ ಹೋದರು ಬಿಡೋದಿಲ್ಲ. ಸುಮ್ನೆ ನಾವೆ ಒಪ್ಪಿಕೊಂಡು ಹೋಗೋದೆ ಸರಿ ಎಂದು ಠಾಣೆ ಬಳಿ ಬಂದಿದ್ದಾರೆ.

ನಾನು ಯಾವುದೇ ತಪ್ಪು ಮಾಡಿಲ್ಲ. ಭಾಸ್ಕರ್ ನನ್ನನ್ನು ಬಲವಂತವಾಗಿ ಪೀಡಿಸುತ್ತಿದ್ದ ಅಂತ ಈ ಪ್ರಕರಣದ ಬಗ್ಗೆ ಮಹಿಳೆ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ

ಹರ್ನಿಯಾ ಆಪರೇಷನ್ ವೇಳೆ ಖಾಸಗಿ ಅಂಗಕ್ಕೆ ಗಾಯ, ಮೂಡಿಗೆರೆ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ವಿರುದ್ಧ ದೂರು ದಾಖಲು

‘ಕೋಟಿಗೊಬ್ಬ 3’ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ವಿತರಕ ಖಾಜಾಪೀರ್ ದೂರು; ಪೊಲೀಸ್​ ಠಾಣೆ ಮೆಟ್ಟಿಲೇರಿದ ರಿಲೀಸ್​ ಕಿರಿಕ್​

Follow us on

Related Stories

Most Read Stories

Click on your DTH Provider to Add TV9 Kannada