‘ಕೋಟಿಗೊಬ್ಬ 3’ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ವಿತರಕ ಖಾಜಾಪೀರ್ ದೂರು; ಪೊಲೀಸ್ ಠಾಣೆ ಮೆಟ್ಟಿಲೇರಿದ ರಿಲೀಸ್ ಕಿರಿಕ್
‘ಕೋಟಿಗೊಬ್ಬ 3’ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಮತ್ತು ವಿತರಕ ಖಾಜಾಪೀರ್ ನಡುವಿನ ಕಿರಿಕ್ ತಾರಕಕ್ಕೇರಿದೆ. ಖಾಜಾಪೀರ್ ಅವರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸೂರಪ್ಪ ಬಾಬು ವಿರುದ್ಧ ಎಫ್ಐಆರ್ ದಾಖಲಾಗಿದೆ.
ಚಿತ್ರದುರ್ಗದ ಸಿನಿಮಾ ವಿತರಕ ಖಾಜಾಪೀರ್ ಅವರಿಗೆ ‘ಕೋಟಿಗೊಬ್ಬ 3’ ನಿರ್ಮಾಪಕ ಸೂರಪ್ಪ ಬಾಬು (ಎಂ.ಬಿ. ಬಾಬು) ಅವರು ಫೋನ್ ಕರೆ ಮೂಲಕ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು, ಅದರ ಆಡಿಯೋ ಕ್ಲಿಪ್ ಕೂಡ ಲಭ್ಯವಾಗಿದೆ. ಈಗ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಖಾಜಾಪೀರ್ ದೂರು ದಾಖಲಿಸಿದ್ದಾರೆ. ಐಪಿಸಿ ಕಲಂ 506 ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
‘ಕೋಟಿಗೊಬ್ಬ 3’ ಚಿತ್ರದ ರಿಲೀಸ್ಗೆ ಗುರುವಾರ (ಅ.14) ವಿಘ್ನ ಎದುರಾಗಿದ್ದ ಹಿನ್ನೆಲೆಯಲ್ಲಿ ಅಭಿಮಾನಿಗಳು ನಿರಾಸೆಯಿಂದ ವಾಪಸ್ ತೆರಳಿದ್ದರು. ಇದರಿಂದ ಚಿತ್ರಕ್ಕೆ ಭಾರಿ ನಷ್ಟ ಉಂಟಾಯಿತು. ಇದಕ್ಕೆಲ್ಲ ಕೆಲವು ವಿತರಕರ ಮೋಸವೇ ಕಾರಣ ಎಂದು ನಿರ್ಮಾಪಕ ಸೂರಪ್ಪ ಬಾಬು ಆರೋಪಿಸಿದ್ದರು. ಅಲ್ಲದೇ, ತೊಂದರೆ ನೀಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿ ಕಾನೂನು ಸಮರ ಸಾರುವುದಾಗಿ ಹೇಳಿದ್ದರು. ಆದರೆ ಈಗ ಚಿತ್ರದುರ್ಗದ ವಿತರಕ ಖಾಜಾಪೀರ್ ಅವರು ಸೂಪರ್ ಬಾಬು ವಿರುದ್ಧ ಕೊಲೆ ಬೆದರಿಕೆ ಆರೋಪ ಹೊರಿಸಿದ್ದಾರೆ.
ಇದನ್ನೂ ಓದಿ:
‘ಕೋಟಿಗೊಬ್ಬ 3’ ರಿಲೀಸ್ ಮಾಡಬೇಡಿ ಅಂತ ಚಿತ್ರಮಂದಿರಕ್ಕೆ ಫೋನ್ ಮಾಡಿದ್ರು: ಸುದೀಪ್ ಸ್ಫೋಟಕ ಆರೋಪ
‘ಕೋಟಿಗೊಬ್ಬ 4’ ಮಾಡುವ ಬಗ್ಗೆ ಸೂರಪ್ಪ ಬಾಬು ಮಾತು; ಸುದೀಪ್ ಅಭಿಮಾನಿಗಳೇ ಇಲ್ಲಿ ಕೇಳಿ