ಬೀರೂರಿನ ಮೈಲಾರಲಿಂಗ ಸ್ವಾಮಿಯ ಕಾರ್ಣಿಕ, ‘ಸಿಂಹಾಸನವನ್ನು ಗಿಣಿಗಳು ಕುಟುಕಿದವು… ಎಚ್ಚರ ಎಚ್ಚರ’
ಕಾರ್ಣಿಕ ಯಾವಾಗಲೂ ಒಗಟಿನ ರೂಪದಲ್ಲಿ ಇರುತ್ತದೆ. ಅದನ್ನು ಹಿರಿಯರು ಅರ್ಥೈಸುತ್ತಾರೆ. ಮೈಲಾರಲಿಂಗ ಸ್ವಾಮಿಯ ಕಾರ್ಣಿಕ ದೇಶದ ಆಗುಹೋಗುಗಳನ್ನು ಸೂಚಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಕಾರ್ಣಿಕಗಳ ಬಗ್ಗೆ ನಿಮಗೆ ಗೊತ್ತಿದೆ. ಜಾತ್ರಾ ಮಹೋತ್ಸವಗಳಲ್ಲಿ, ಪಲ್ಲಕ್ಕಿ ಉತ್ಸವಗಳಲ್ಲಿ ಕಾರ್ಣಿಕಗಳನ್ನು ಹೇಳುತ್ತಾರೆ. ಒಂದು ನಿರ್ದಿಷ್ಟ ದೇವಸ್ಥಾನದ ದೇವರು ಜಾತ್ರೆ ಇಲ್ಲವೇ ಉತ್ಸವದಲ್ಲು ಯಾವುದಾದರೊಬ್ಬ ಭಕ್ತನ ದೇಹವನ್ನು ಪ್ರವೇಶಿಸಿ ಅವನ ಮೂಲಕ ಮುಂದಾಗಲಿರುವುದರ ಬಗ್ಗೆ ಹೇಳಿಸುತ್ತಾನೆ. ಕಾರ್ಣಿಕ ನುಡಿದದ್ದ್ದು ನಿಜವಾಗುತ್ತದೆ ಎಂದು ಭಕ್ತರು ನಂಬುತ್ತಾರೆ. ಆದರೆ ನಾಸ್ತಿಕರು ಇಂಥ ಕಾರ್ಣಿಕಗಳನ್ನು ನಂಬುವುದಿಲ್ಲ ಮತ್ತು ಕಾರ್ಣಿಕ ಕುರಿತು ಹಗುರವಾದ ಕಾಮೆಂಟ್ಗಳನ್ನು ಮಾಡುತ್ತಾರೆ. ಬಿಡಿ ಚರ್ಚೆಯ ವಿಷಯ ಖಂಡಿತವಾಗಿಯೂ ಇದಲ್ಲ.
ಶನಿವಾರದಂದು ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ಮೈಲಾರಲಿಂಗ ಸ್ವಾಮಿ ಕಾರ್ಣೀಕ ಹೇಳಿರುವುದು ವರದಿಯಾಗಿದೆ. ಹಿಂದಿನ ದಿನ ಅಂದರೆ ಶುಕ್ರವಾರ ರಾತ್ರಿ ಮೈಲಾರಲಿಂಗ ದೇವಸ್ಥಾನದಲ್ಲಿ ಪಲ್ಲಕ್ಕಿ ಉತ್ಸವ ನಡೆದಿದೆ. ಉತ್ಸವ ರಾತ್ರಿಯಿಡೀ ನಡೆದಂತೆ ಕಾಣುತ್ತದೆ. ಯಾಕೆಂದರೆ ಕಾರ್ಣಿಕ ನುಡಿದದ್ದು ಬೆಳಗಿನ ಜಾವ ಸುಮಾರು 5.30 ಕ್ಕೆ.
ಕಾರ್ಣಿಕ ನುಡಿಯುವ ದಶರಥ ಪೂಜಾರ್ ಅವರು ಸಾವಿರಾರು ಭಕ್ತರು ಸಮ್ಮುಖದಲ್ಲಿ, ‘ಸಿಂಹಾಸನಕ್ಕೆ ಗಿಣಿಗಳು ಕುಟುಕಿದವು, ದಾನವರು ಮಾನವರಿಗೆ ಕಂಟಕವಾದರರು, ಇಟ್ಟ ರಾಮಬಾಣಕ್ಕೆ ಹುಸಿಯಿಲ್ಲ, ರಾಮರಾಜ್ಯಕ್ಕೆ ಎಲ್ಲರೂ ಹೊಡೆದರು, ಸರ್ವರೂ ಎಚ್ಚರದಿಂದರಬೇಕು,’ ಎಂದು ಕಾರ್ಣಿಕ ನುಡಿದರು.
ಕಾರ್ಣಿಕ ಯಾವಾಗಲೂ ಒಗಟಿನ ರೀತಿಯಲ್ಲಿ ಇರುತ್ತದೆ. ಅದನ್ನು ಹಿರಿಯರು ಅರ್ಥೈಸುತ್ತಾರೆ. ಮೈಲಾರಲಿಂಗ ಸ್ವಾಮಿಯ ಕಾರ್ಣಿಕ ದೇಶದ ಆಗುಹೋಗುಗಳನ್ನು ಸೂಚಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮುಂದಿನ ವಾರದಿಂದಲೇ ಬಿಸಿಯೂಟ ಪುನರಾರಂಭ: ಆದರೆ ಶಿಕ್ಷಣ ಸಚಿವರ ಕ್ಷೇತ್ರದಲ್ಲೇ ಹುಳು ಹಿಡಿದ ಆಹಾರ ಪತ್ತೆ! ವಿಡಿಯೋ ವೈರಲ್