ಆರೋಗ್ಯದ ಬಗ್ಗೆ ಮಾಹಿತಿ ನೀಡುವ ನಾಯ್ಸ್ ಕಲರ್ಫಿಟ್ ಪ್ರೋ ಸ್ಮಾರ್ಟ್ ವಾಚ್ ಈಗ ಕಡಿಮೆ ಬೆಲೆಗೆ ಲಭ್ಯ!
ಗಡಿಯಾರದಲ್ಲಿ ಬಿಲ್ಟ್ ಇನ್ ಆಪ್ಟಿಕಲ್ ಮಾನಿಟರ್ ಇದ್ದು ಅದು ನಿಮ್ಮ ಹೃದಯ ಬಡಿತವನ್ನು ಎಡೆಬಿಡದೆ ಮಾನಿಟರ್ ಮಾಡುತ್ತಿರುತ್ತದೆ.
ಕೈಗಡಿಯಾರ ಪ್ರಿಯರಿಗೆ ಅದರಲ್ಲೂ ವಿಶೇಷವಾಗಿ ಈ ಜಮಾನಾದ ಸ್ಮಾರ್ಟ್ ವಾಚ್ ಗಳನ್ನು ಧರಿಸಲು ಬಯಸುವವರಿಗೆ ಒಂದು ಸಂತೋಷದ ಸುದ್ದಿಯಿದೆ. ಏನು ಗೊತ್ತಾ? ನಾಯ್ಸ್ ಕಲರ್ ಫಿಟ್ ಫುಲ್ ಟಚ್ ಕಂಟ್ರೋಲ್ ಸ್ಮಾರ್ಟ್ ವಾಚ್ ಈಗ ಇನ್ನಷ್ಟು ಕಡಿಮೆ ಬೆಲೆಗೆ ನಿಮ್ಮ ಕೈ ಸೇರಲಿದೆ. ಅಮೇಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ನಲ್ಲಿ ಈ ವಾಚ್ ಈಗ ರೂ 1,999 ಗಳಿಗೆ ಸಿಗಲಿದೆ. ಕೇವಲ 35ಗ್ರಾಂ ತೂಕದ ಈ ವಾಚ್ ಅಪ್ ಗ್ರೇಡೆಡ್ ಎಲ್ ಸಿ ಡಿ ಡಿಸ್ ಪ್ಲೇ, ಐಪಿ 68 ವಾಟರ್ ಪ್ರೂಫ್, ಹೃದಯ ಬಡಿತ ಮಾನಿಟರ್, ಸ್ಲೀಪ್ ಮತ್ತು ಸ್ಟೆಪ್ ಟ್ರ್ಯಾಕರ್ ಕಾಲ್, ಮೆಸೇಜ್ ಅಲರ್ಟ್ ಮತ್ತು ದೀರ್ಘ ಬ್ಯಾಟರಿ ಬಾಳಿಕೆಯೊಂದಿಗೆ ಬರುತ್ತದೆ.
ಚಿಕ್ಕ ಡಿಸ್ ಪ್ಲೇ ಸ್ಪೇಸ್ ಇದ್ದರೂ ಸುಲಭವಾಗಿ ಓದಬಹುದು ಮತ್ತು ಆಪರೇಟ್ ಮಾಡುವುದು ಸಹ ಸುಲಭವೇ. ಬಲಿಷ್ಠವಾದ ಪಾಲಿಕಾರ್ಬೋನೇಟ್ ಕೇಸ್ ಇರುವುದರಿಂದ ಕಲರ್ ಫಿಟ್ ಪ್ರೊ 2 ತೂಕದಲ್ಲಿ ಬಹಳ ಹಗುರವಾಗಿದೆ. ಈ ಗಡಿಯಾರಗಳು ನಾಲ್ಕು ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯವಿದ್ದು ಗಡಿಯಾರಕ್ಕೆ ಮ್ಯಾಚ್ ಆಗುವ ಸ್ಟ್ರ್ಯಾಪ್ಗಳನ್ನು ಒದಗಿಸಲಾಗಿದೆ.
ಗಡಿಯಾರದಲ್ಲಿ ಬಿಲ್ಟ್ ಇನ್ ಆಪ್ಟಿಕಲ್ ಮಾನಿಟರ್ ಇದ್ದು ಅದು ನಿಮ್ಮ ಹೃದಯ ಬಡಿತವನ್ನು ಎಡೆಬಿಡದೆ ಮಾನಿಟರ್ ಮಾಡುತ್ತಿರುತ್ತದೆ.
ಎಲ್ಲ ಸ್ಮಾರ್ಟ್ ವಾಚ್ಗಳನ್ನು ಫೋನ್ಗಳ ಹಾಗೆ ಚಾರ್ಜ್ ಮಾಡಬೇಕಾಗುತ್ತದೆ. ಆದರೆ ನಾಯ್ಸ್ ಕಲರ್ ಫಿಟ್ ಫುಲ್ ಟಚ್ ಕಂಟ್ರೋಲ್ ಸ್ಮಾರ್ಟ್ ವಾಚ್ ಒಮ್ಮೆ ಚಾರ್ಜ್ ಮಾಡಿದರೆ 10 ದಿನಗಳ ಕಾಲ ನಡೆಯುತ್ತದೆ.
ನಿಮ್ಮ ನಡಿಗೆ, ಓಟ, ಬೈಕ್ ಸವಾರಿ, ಟ್ರೆಡ್ ಮಿಲ್, ವರ್ಕ್-ಔಟ್, ಚಾರಣ, ಯೋಗ ಮುಂತಾದ ಎಲ್ಲ ಚಟುವಟಿಕೆಗಳನ್ನು ಕವರ್ ಮಾಡಲು 9 ಸ್ಪೋರ್ಟ್ಸ್ ಮೋಡ್ಗಳು ವಾಚ್ನಲ್ಲಿ ಲಭ್ಯವಿವೆ. ಇದು ವಾಟರ್ ಪ್ರೂಫ್ ಅಗಿರುವುದರಿಂದ ನೀರಿನಲ್ಲಿ ನೆಂದರೂ ಯಾವುದೇ ಸಮಸ್ಯೆಯಿಲ್ಲ.
ಇದನ್ನೂ ಓದಿ: Viral Video: ಆನೆ ತನ್ನ ಸ್ನೇಹಿತನೊಂದಿಗೆ ಬ್ಯಾಸ್ಕೆಟ್ಬಾಲ್ ಆಡುತ್ತಿದೆ! ವಿಡಿಯೋ ಮಜವಾಗಿದೆ ನೋಡಿ