ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಮಹಿಳೆಯರ ಸಾವು: ಮೀನುಗಾರರ ಸಮಯಪ್ರಜ್ಞೆಯಿಂದ ಬದುಕಿದ ಐವರು!
ಗುಳೇದಗುಡ್ಡ ಪಟ್ಟಣದ ಗಂಜಿಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ಲಲಿತಾ ಕತ್ತಿ ಮತ್ತು ಅನುಪಮಾ ದೊಡ್ಡಮನಿ ಅವರನ್ನು ರಕ್ಷಿಸಲು ಆರು ಜನ. ಕೆರೆಗೆ ಧುಮಿಕಿದ್ದರು. ಕೆರೆಯಲ್ಲಿ ಅವರೂ ಪರಡತೊಡಗಿದಾಗ ಐವರನ್ನು ರಕ್ಷಿಸಲಾಗಿದೆ. ಸ್ಥಳೀಯರು ಹಾಗೂ ಮೀನುಗಾರಿಂದ ಈ ಐವರ ರಕ್ಷಣೆಯಾಗಿದೆ.
ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡದ ಗಂಜಿಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಲಲಿತಾ ಕತ್ತಿ(37) ಮತ್ತು ಅನುಪಮಾ ದೊಡ್ಡಮನಿ(20) ಜಲಸಮಾಧಿಯಾದವರು. ಅನುಪಮಾ ಬಿಇ ವಿದ್ಯಾರ್ಥಿನಿ. ಇವರಿಬ್ಬರೂ ಸೋದರ ಸೊಸೆ ಮತ್ತು ಅತ್ತೆ. ಕೆರೆಯಲ್ಲಿ ಬಿದ್ದ ಮಹಿಳೆಯನ್ನು ರಕ್ಷಿಸಲು ಹೋಗಿದ್ದ ಆರು ಜನರನ್ನು ಸ್ಥಳೀಯರು ಮತ್ತು ಮೀನುಗಾರರಿಂದ ಐವರ ರಕ್ಷಣೆಯಾಗಿದೆ. ಒಂದೇ ಕುಟುಂಬದ ವ್ಯಕ್ತಿ, ನಾಲ್ವರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ. ಗುಳೇದಗುಡ್ಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಗುಳೇದಗುಡ್ಡ ಪಟ್ಟಣದ ಗಂಜಿಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ಲಲಿತಾ ಕತ್ತಿ ಮತ್ತು ಅನುಪಮಾ ದೊಡ್ಡಮನಿ ಅವರನ್ನು ರಕ್ಷಿಸಲು ಆರು ಜನ. ಕೆರೆಗೆ ಧುಮಿಕಿದ್ದರು. ಕೆರೆಯಲ್ಲಿ ಅವರೂ ಪರದಾಡತೊಡಗಿದಾಗ ಐವರನ್ನು ರಕ್ಷಿಸಲಾಗಿದೆ. ಸ್ಥಳೀಯರು ಹಾಗೂ ಮೀನುಗಾರಿಂದ ಈ ಐವರ ರಕ್ಷಣೆಯಾಗಿದೆ. ಎಲ್ಲರೂ ಗುಳೇದಗುಡ್ಡ ಪಟ್ಟಣದ ನಿವಾಸಿಗಳು. ಸ್ಥಳೀಯರು ಮತ್ತು ಮೀನುಗಾರರು ಸಯಪ್ರಜ್ಞೆಯಿಂದ ನೀರಿಗೆ ಬಿದ್ದವರ ಬಾಯಿಂದ ಬಾಯಿಗೆ ಬಾಯಿಂದ ಉಸಿರು ನೀಡಿ ಬದುಕಿಸಲು ಹರಸಾಹಸ ಪಟ್ಟಿದ್ದಾರೆ. ಅದರಿಂದ ಇಬ್ಬರು ಮಹಿಳೆಯರು ಬದುಕುಳಿದಿದ್ದಾರೆ.
Also Read: ಚಿಕ್ಕಬಳ್ಳಾಪುರ: ಗೆಳೆಯನ ಮೀನು ತಿನ್ನುವ ಆಸೆ ಪೂರೈಸಲು ಮೀನು ಹಿಡಿಯಲು ಕೆರೆಗಿಳಿದ ವ್ಯಕ್ತಿ ಮರಳಿ ಬರಲೇ ಇಲ್ಲ!
Also Read: ಮೈಸೂರಿನಲ್ಲಿ ಜೂಜು ಅಡ್ಡೆ ಮೇಲೆ ದಾಳಿ; ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆರೆಗೆ ಹಾರಿದ್ದ ವ್ಯಕ್ತಿ ಸಾವು (two women drown in guledgudda ganjigere lake 5 rescued by locals)
Kolar Muduvadi ಕೋಡಿ ಒಡೆಯೋ ಭೀತಿ! ಕುಸಿಯುತ್ತಿದೆ ತಡೆ ಗೋಡೆ!
Published On - 1:57 pm, Sat, 16 October 21