Karnataka Dam Water Level: ತುಂಗಭದ್ರಾ ಡ್ಯಾಂ ಭರ್ತಿ, ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ವಿವರ ಹೀಗಿದೆ

|

Updated on: Jul 27, 2024 | 7:58 AM

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಮಳೆ ಚೆನ್ನಾಗಿ ಆಗುತ್ತಿದೆ. ಇದರಿಂದ ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿನ ಒಳಹರಿವು ಹೆಚ್ಚಾಗಿದೆ. ಕೆಲವು ಜಲಾಶಯ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ತುಂಗಭದ್ರಾ, ಕೆಆರ್​​ಎಸ್​, ಹಾರಂಗಿ, ಘಟಪ್ರಭಾ ಜಲಾಶಯಗಳು ಭರ್ತಿಯಾಗಿವೆ. ಹೆಚ್ಚುವರಿ ನೀರನ್ನು ಹೊರ ಹರಿಸಾಲಾಗುತ್ತಿದೆ. ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ವಿವರ ಇಲ್ಲಿದೆ.

Karnataka Dam Water Level: ತುಂಗಭದ್ರಾ ಡ್ಯಾಂ ಭರ್ತಿ, ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ ವಿವರ ಹೀಗಿದೆ
ತುಂಗಭದ್ರಾ ಜಲಾಶಯ
Follow us on

ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿಯ ತುಂಗಭದ್ರಾ ಜಲಾಶಯಕ್ಕೆ 87766 ಕ್ಯೂಸೆಕ್ ಒಳಹರಿವು ಇದೆ. ಜಲಾಶಯದಿಂದ ನದಿಗೆ ಅಪಾರ ನೀರು ಬಿಡುಗಡೆ ಮಾಡಲಾಗುತ್ತಿದೆ. ಡ್ಯಾಂನಿಂದ ಈಗ ನದಿಗೆ 84,149 ಕ್ಯೂಸೆಕ್ ನೀರು ನದಿಗೆ ಬಿಡಲಾಗುತ್ತಿದೆ. 105.788 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿರುವ ಜಲಾಶಯದಲ್ಲಿ ಸದ್ಯ 101 ಟಿಎಂಸಿ ನೀರು ಸಂಗ್ರಹವಾಗಿದೆ. ಹಾಗಾದರೆ ತುಂಗಭದ್ರಾ ಜಲಾಶಯ ಸೇರಿದಂತೆ ರಾಜ್ಯದ 14 ಜಲಾಶಯಗಳ ನೀರಿನ ಮಟ್ಟ (Karnataka Dam Water Level) ವಿವರ ಇಲ್ಲಿದೆ.

ಜಲಾಶಯಗಳ ನೀರಿನ ಮಟ್ಟ
ಕರ್ನಾಟಕದ ಪ್ರಮುಖ ಜಲಾಶಯಗಳು (Dam) ಗರಿಷ್ಠ ನೀರಿನ ಮಟ್ಟ (ಮೀ) ಒಟ್ಟು ಸಾಮರ್ಥ್ಯ (ಟಿಎಂಸಿ) ಇಂದಿನ ನೀರಿನ ಮಟ್ಟ (ಟಿಎಂಸಿ) ಕಳೆದ ವರ್ಷದ ನೀರಿನ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್) ಹೊರಹರಿವು (ಕ್ಯೂಸೆಕ್ಸ್)
ಆಲಮಟ್ಟಿ ಜಲಾಶಯ (Almatti Dam) 519.60 123.08 83.49 82.49 2,04,098 2,66,586
ತುಂಗಭದ್ರಾ ಜಲಾಶಯ (Tungabhadra Dam) 497.71 105.79 101.73 40.14 87,766 84,149
ಮಲಪ್ರಭಾ ಜಲಾಶಯ (Malaprabha Dam) 633.80 37.73 25.46 15.77 21,606 194
ಕೆ.ಆರ್.ಎಸ್ (KRS Dam) 38.04 49.45 48.82 26.81 66,945 74,021
ಲಿಂಗನಮಕ್ಕಿ ಜಲಾಶಯ (Linganamakki Dam) 554.44 151.75 108.40 58.63 65,167 1,853
ಕಬಿನಿ ಜಲಾಶಯ (Kabini Dam) 696.13 19.52 18.41 18.16 19,729 19,250
ಭದ್ರಾ ಜಲಾಶಯ (Bhadra Dam) 657.73 71.54 57.54 38.65 35,318 202
ಘಟಪ್ರಭಾ ಜಲಾಶಯ (Ghataprabha Dam) 662.91 51.00 46.30 26.50 33,385 26,900
ಹೇಮಾವತಿ ಜಲಾಶಯ (Hemavathi Dam) 890.58 37.10 35.22 25.94 52,999 63,580
ವರಾಹಿ ಜಲಾಶಯ (Varahi Dam) 594.36 31.10 14.66 9.16 7,537 0
ಹಾರಂಗಿ ಜಲಾಶಯ (Harangi Dam)​​ 871.38 8.50 7.44 6.61 9,288 13,916
ಸೂಫಾ (Supa Dam) 564.00 145.33 86.89 64.78 35,786 0
ನಾರಾಯಣಪುರ ಜಲಾಶಯ (Narayanpura Dam) 492.25 33.31 26.86 82.51 2,04,098 2,66,586
ವಾಣಿವಿಲಾಸ ಸಾಗರ (VaniVilas Sagar Dam) 652.24 30.42 17.89 24.80 0 147

ತುಂಗಭದ್ರಾ ಜಲಾಶಯದಿಂದ ಹೊರಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಗಂಗಾವತಿ ತಾಲೂಕಿನ ಕಂಪ್ಲಿ ಸೇತುವೆ ಮುಳಗಡೆಯಾಗಿದೆ. ಗಂಗಾವತಿ-ಕಂಪ್ಲಿ ನಡುವಿನ ಸಂಪರ್ಕ ಕಡಿತಗೊಂಡಿದೆ. ಆನೇಗೊಂದಿಯಲ್ಲಿರುವ ಶ್ರೀಕೃಷ್ಣದೇವರಾಯ ಸಮಾದಿ ಮಂಟಪ ಜಲಾವೃತಗೊಂಡಿದೆ. ನವವೃಂದಾವನ ಗಡ್ಡೆ, ವಿರುಪಾಪುರಗಡ್ಡೆ, ಋಷಿಮುಖ ಪರ್ವತಕ್ಕೆ ಸಂಪರ್ಕ ಕಡಿತವಾಗಿದೆ. ಹೊರಹರಿವು ಹೆಚ್ಚಾದರೆ ರೈತರ ಜಮೀನಿಗೆ ನೀರು ನುಗ್ಗುವ ಸಾಧ್ಯತೆ ಇದೆ. ತುಂಗಭದ್ರಾ ನದಿ ತೀರದ ಗ್ರಾಮಸ್ಥರು ಎಚ್ಚರಿಕೆಯಿಂದಿರಲು ಸೂಚನೆ ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ