Turkey Earthquake: ಟರ್ಕಿಯಲ್ಲಿ ಬೆಂಗಳೂರಿನ ಒಬ್ಬ ವ್ಯಕ್ತಿ ನಾಪತ್ತೆ, ದೂರಸ್ಥಳದಲ್ಲಿ ಸಿಲುಕಿದ ಇತರ 10 ಮಂದಿ

|

Updated on: Feb 09, 2023 | 9:03 AM

Bengalurean Missing in Turkey: ಟರ್ಕಿ ಭೂಕಂಪದಲ್ಲಿ ಬೆಂಗಳೂರಿನ ಒಬ್ಬ ವ್ಯಕ್ತಿ ನಾಪತ್ತೆಯಾಗಿದ್ದು, ಕಳೆದ ಎರಡು ದಿನಗಳಿಂದ ಅವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಈ ವಿಚಾರವನ್ನು ಕೇಂದ್ರ ವಿದೇಶಾಂಗ ಸಚಿವಾಲಯ ದೃಢಪಡಿಸಿದೆ.

Turkey Earthquake: ಟರ್ಕಿಯಲ್ಲಿ ಬೆಂಗಳೂರಿನ ಒಬ್ಬ ವ್ಯಕ್ತಿ ನಾಪತ್ತೆ, ದೂರಸ್ಥಳದಲ್ಲಿ ಸಿಲುಕಿದ ಇತರ 10 ಮಂದಿ
ಟರ್ಕಿ ಭೂಕಂಪ
Follow us on

ಬೆಂಗಳೂರು: ಟರ್ಕಿ ಭೂಕಂಪದಲ್ಲಿ (Turkey Earthquake) ಈವರೆಗೂ 15 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿರುವುದು ಖಚಿತಪಟ್ಟಿದೆ. ಈ ದೇಶದಲ್ಲಿ ಸುಮಾರು 3 ಸಾವಿರದಷ್ಟು ಭಾರತೀಯ ವಾಸಿಸುತ್ತಿದ್ದ ಅವರ ಕುಟುಂಬದವರು ಅತಂಕದ ಮಡುವಿನಲ್ಲಿದ್ದಾರೆ. ಈ ಪೈಕಿ ಬೆಂಗಳೂರಿನ ಒಬ್ಬ ವ್ಯಕ್ತಿ (Bengalurean Missing) ನಾಪತ್ತೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಕಳೆದ ಎರಡು ದಿನಗಳಿಂದ ಇವರು ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ ಎನ್ನಲಾಗಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (Union Ministry of External Affairs) ನಿನ್ನೆ ಬುಧವಾರ ಇದನ್ನು ಖಚಿತಪಡಿಸಿದೆ. ಆದರೆ, ನಾಪತ್ತೆಯಾದ ಬೆಂಗಳೂರಿಗನ ಹೆಸರನ್ನು ಬಹಿರಂಗಪಡಿಸಲಾಗಿಲ್ಲ.

ಸಚಿವಾಲಯ ನೀಡಿರುವ ಮಾಹಿತಿ ಪ್ರಕಾರ ಬೆಂಗಳೂರಿನ ಒಬ್ಬ ವ್ಯಕ್ತಿ ನಾಪತ್ತೆಯಾಗಿರುವುದು ಮಾತ್ರವಲ್ಲ, ಭಾರತದ ಇತರ 10 ಮಂದಿ ಟರ್ಕಿಯ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ, ಇವರೆಲ್ಲರೂ ಸುರಕ್ಷಿತವಾಗಿದ್ದಾರೆನ್ನಲಾಗಿದೆ.

ಟರ್ಕಿಯಲ್ಲಿ 3 ಸಾವಿರದಷ್ಟು ಭಾರತೀಯರು ಇದ್ದಾರೆ. ಇಸ್ತಾಂಬುಲ್​ನಲ್ಲಿ 850, ಅಂಕಾರ ನಗರದಲ್ಲಿ 250 ಮಂದಿ, ಇತರ ಭಾಗಗಳಲ್ಲಿ ಉಳಿದವರು ಇದ್ದಾರೆ. 75 ಮಂದಿ ಮಾಹಿತಿ ಕೋರಿ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದಾರೆ. 10 ಮಂದಿ ದೂರ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದಾರಾದರೂ ಸುರಕ್ಷಿತವಾಗಿದ್ದಾರೆ. ಕಳೆದ ಎರಡು ದಿನಗಳಿಂದ ಒಬ್ಬ ಭಾರತೀಯ ಉದ್ಯಮಿ ಕಾಣೆಯಾಗಿದ್ದಾರೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇದನ್ನೂ ಓದಿ: Turkey-Syria earthquake: ಟರ್ಕಿಯಲ್ಲಿ ಜೂಲಿ, ರೋಮಿಯೋ, ಹನಿ, ರಾಂಬೊ, ಮಹತ್ವದ ಕಾರ್ಯಚರಣೆಯಲ್ಲಿ ಭಾರತದ ಶ್ವಾನದಳ

ಬೆಂಗಳೂರಿನ ವ್ಯಕ್ತಿ ಯಾರು?

ಟರ್ಕಿಯಲ್ಲಿ ಕಳೆದ ಎರಡು ದಿನಗಳಿಂದ ಕಾಣೆಯಾಗಿರುವ ವ್ಯಕ್ತಿಯು ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಟರ್ಕಿಗೆ ಬಿಸಿನೆಸ್ ಟ್ರಿಪ್ ಮೇಲೆ ಅವರು ಹೋಗಿದ್ದರೆನ್ನಲಾಗಿದೆ. ಆದರೆ ಅವರ ಹೆಸರನ್ನು ಸಚಿವಾಲಯ ಬಹಿರಂಗಪಡಿಸಿಲ್ಲವಾದರೂ ಆ ವ್ಯಕ್ತಿಯ ಕುಟುಂಬದ ಜೊತೆ ಸಂಪರ್ಕದಲ್ಲಿರುವುದು ತಿಳಿದುಬಂದಿದೆ.

ಮೂರು ದಿನಗಳ ಹಿಂದೆ, ಸೋಮವಾರ ಟರ್ಕಿ ಮತ್ತು ಸಿರಿಯಾ ಗಡಿಭಾಗ ಸಮೀಪದ ಪ್ರದೇಶಗಳಲ್ಲಿ 24 ಗಂಟೆ ಅಂತರದಲ್ಲಿ ನಾಲ್ಕು ಭೂಕಂಪಗಳು ಸಂಭವಿಸಿ ಭಾರೀ ಅನಾಹುತ ಸೃಷ್ಟಿಸಿವೆ. ಈಗಾಗಲೇ ಸಾವಿನ ಸಂಖ್ಯೆ 15 ಸಾವಿರ ಗಡಿದಾಟಿದೆ. ಟರ್ಕಿಯಲ್ಲಿ 10 ಸಾವಿರಕ್ಕೂ ಹೆಚ್ಚು ಕಟ್ಟಡಗಳು ಧರೆಗುರುಳಿವೆ. ಕಟ್ಟಡಗಳ ಅವಶೇಷಗಳನ್ನು ತೆಗೆದಷ್ಟೂ ಶವಗಳು ಪತ್ತೆಯಾಗುತ್ತಿವೆ. ಎರಡು ದಿನಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಈ ಟರ್ಕಿ ಭೂಕಂಪದಲ್ಲಿ ಸಾವಿನ ಸಂಖ್ಯೆ 20 ಸಾವಿರ ಗಡಿ ದಾಟಬಹುದು ಎಂದು ಅಂದಾಜು ಮಾಡಿತ್ತು. ಅದೀಗ ನಿಜವಾಗುವಂತಿದೆ. ಇನ್ನೂ ಸಾವಿರಾರು ಕಟ್ಟಡಗಳ ಅವಶೇಷಗಳನ್ನು ತೆರವುಗೊಳಿಸುವ ಕಾರ್ಯ ಆಗಬೇಕಿದೆ. ಟರ್ಕಿ ಮತ್ತು ಸಿರಿಯಾದಲ್ಲಿ ಭಾರೀ ಚಳಿ, ಮಳೆಯ ವಾತಾವರಣ ಇದ್ದು, ರಕ್ಷಣಾ ಕಾರ್ಯಾಚರಣೆಯನ್ನು ಕುಂಠಿತಗೊಳಿಸಿದೆ. ಈ ಸವಾಲುಗಳ ಮಧ್ಯೆಯೂ ರಕ್ಷಣಾ ಕಾರ್ಯಕರ್ತರು ದೃತಿಗೆಡದೆ ಕೆಲಸ ಮಾಡುತ್ತಿದ್ದಾರೆ.

ಟರ್ಕಿಗೆ ಭಾರತ ಸೇರಿದಂತೆ ಹಲವು ದೇಶಗಳು ನೆರವಿನ ಹಸ್ತ ಚಾಚಿವೆ. ಮೊನ್ನೆಯಿಂದ ಭಾರತದಿಂದ ಹಲವು ವಿಮಾನಗಳ ಮೂಲಕ ರಕ್ಷಣಾ ಸಾಮಗ್ರಿಗಳನ್ನು ಟರ್ಕಿಗೆ ಕಳುಹಿಸಿಕೊಡಲಾಗಿದೆ. ಎನ್​ಡಿಆರ್​ಎಫ್ ಪಡೆ, ಶ್ವಾನ ದಳ, ಔಷಧ, ರಕ್ಷಣಾ ಉಪಕರಣ ಇತ್ಯಾದಿಗಳನ್ನು ಭಾರತ ಟರ್ಕಿಗೆ ನೀಡಿದೆ.

Published On - 7:44 am, Thu, 9 February 23