
ಬೆಂಗಳೂರು: ಕ್ವಾರಂಟೈನ್‌ನ ಕರಾಳ ವ್ಯವಸ್ಥೆಯನ್ನ ಟಿವಿ9 ಬಯಲಿಗೆಳೆದಿದೆ. ಈ ಕರಾಳ ನೆಟ್‌ವರ್ಕ್ ಹೇಗಿದೆ..? ಹೇಗೆ ಕೆಲಸ ಮಾಡ್ತಿದೆ. ಕ್ವಾರಂಟೈನ್ ಕೇಂದ್ರದಲ್ಲಿರೋ ಕರಾಳ ಕಥೆಗಳನ್ನ ಒಂದೊಂದಾಗಿ ಬಿಚ್ಚಿಟ್ಟಿದೆ.
ಕ್ವಾರಂಟೈನ್ ಕರಾಳ ಕಥೆ ನಂ.1:
ಹೋಟೆಲ್ ಕ್ವಾರಂಟೈನ್ ಆದವ್ರಿಗೆ ಸ್ವ್ಯಾಬ್ ಟೆಸ್ಟಿಂಗ್‌ನ್ನೇ ಮಾಡ್ತಿಲ್ಲ. ಪ್ರಯಾಣಿಕರು, ಸಂಪರ್ಕಿತರನ್ನ 7 ದಿನಗಳು ಕ್ವಾರಂಟೈನ್ ಮಾಡ್ಬೇಕು. ಕ್ವಾರಂಟೈನ್ ಆದ ದಿನದಿಂದ ಐದನೇ ದಿನಕ್ಕೆ ಸ್ವಾಬ್ ಟೆಸ್ಟ್ ಮಾಡ್ಬೇಕು. ಆದ್ರೆ, ಕ್ವಾರಂಟೈನ್‌ನಲ್ಲಿದ್ದವರಿಗೆ ಗಂಟಲು ದ್ರವ ಪರೀಕ್ಷೆಯೇ ನಡೀತಿಲ್ಲ.
ಕ್ವಾರಂಟೈನ್ ಕರಾಳ ಕಥೆ ನಂ. 2:
ಗಂಟಲು ದ್ರವ ಪರೀಕ್ಷೆ ಮಾಡಿದ್ರೂ ಅವರಿಗೆ ಫಲಿತಾಂಶ ಹೇಳುತ್ತಿಲ್ಲ. ಕ್ವಾರಂಟೈನ್‌ಗಾಗಿ ಆರೋಗ್ಯ ಇಲಾಖೆಯ ನಿಯಮಗಳನ್ನ ರೂಪಿಸಿದೆ. ಆದ್ರೆ, ಈ ಕ್ವಾರಂಟೈನ್ ನಿಯಮಗಳು ಪಾಲನೆ ಆಗುತ್ತಲೇ ಇಲ್ಲ. ಸ್ಯಾಂಪಲ್ ನೆಗೆಟಿವ್ ಬಂದ್ರೆ, ಹೋಟೆಲ್ ರೂಂ ಖಾಲಿ ಮಾಡಿಸ್ಬೇಕು. ಹೋಟೆಲ್ ರೂಂ ಖಾಲಿ ಮಾಡಿಸಿ ಐಸೋಲೇಷನ್‌ಗೆ ಕಳಿಸಬೇಕು
ಆದ್ರೆ, ನೆಗೆಟಿವ್ ರಿಸಲ್ಟ್ ಬಂದ್ರೂ ಕ್ವಾರಂಟೈನ್‌ನಲ್ಲಿದ್ದವ್ರಿಗೆ ತಿಳಿಸ್ತಿಲ್ಲ.
ಕ್ವಾರಂಟೈನ್ ಕರಾಳ ಕಥೆ ನಂ. 3:
ಆರೋಗ್ಯ ಇಲಾಖೆ ನಿಯಮದ ಪ್ರಕಾರ 7 ದಿನ ಮಾತ್ರ ಕ್ವಾರಂಟೈನ್ ಮಾಡಬೇಕು. ಕ್ವಾರಂಟೈನ್ ಆದ 5ನೇ ದಿನ ಗಂಟಲು ದ್ರವ ಪರೀಕ್ಷೆ ನಡೆಸಬೇಕು. 7 ದಿನಗಳ ಅವಧಿ ಮುಗಿದ ಮೇಲೆ ವಾಪಸ್ ಕಳಿಸಬೇಕು. ಆದ್ರೆ, ಈ ಕ್ವಾರಂಟೈನ್ ಅವಧಿ ಪೂರ್ಣಗೊಂಡ್ರೂ ವಾಪಸ್ ಕಳಿಸ್ತಿಲ್ಲ.
ಹಾಗಾದ್ರೆ, ಕ್ವಾರಂಟೈನ್‌ನಲ್ಲಿದ್ದವರನ್ನ ಯಾಕೆ ಹೊರಗೆ ಕಳಿಸ್ತಿಲ್ಲ? ಹೊರಗೆ ಕಳಿಸಲು ಇರೋ ಸಮಸ್ಯೆ ಏನು? ಆ ಸ್ಫೋಟಕ ಜಾಲವನ್ನ ಟಿವಿ9 ಬಯಲು ಮಾಡಿದೆ.
ಬ್ರೋಕರ್ಸ್:
ಕರ್ನಾಟಕದಲ್ಲಿ ಕ್ವಾರಂಟೈನ್ ಹಿಂದೆ ಬಹುದೊಡ್ಡ ದಂಧೆ ನಡೀತಿದೆ. ವ್ಯವಸ್ಥಿತವಾಗಿ, ಅನುಮಾನ ಬರದಂತೆ ಕರಾಳ ಜಾಲ ವ್ಯಾಪಿಸಿದೆ. ಕ್ವಾರಂಟೈನ್ ಕೇಂದ್ರಗಳಲ್ಲೂ ಮಧ್ಯವರ್ತಿಗಳಿದ್ದಾರೆ. ಹೋಟೆಲ್, ಬ್ರೋಕರ್‌ಗಳು, ಅಧಿಕಾರಿಗಳ ಮಧ್ಯೆ ಸೀಕ್ರೆಟ್ ಸೆಟ್ಟಿಂಗ್ ನಡೆದಿದೆ.
ಈ ದಂಧೆಯ ಚೈನ್ ಲಿಂಕ್ ಸರ್ಕಾರಿ ಅಧಿಕಾರಿಗಳಿಂದ್ಲೇ ಶುರುವಾಗುತ್ತೆ. ಕ್ವಾರಂಟೈನ್ ಕೇಂದ್ರ ನಿಗದಿಗೆ ಬ್ರೋಕರ್‌ಗಳನ್ನ ಹಿಡಿದಿರುವ ಅಧಿಕಾರಿಗಳು, ಬ್ರೋಕರ್‌ಗಳ ಮುಖಾಂತರ ಕ್ವಾರಂಟೈನ್‌ಗೆ ರೂಂ ಬುಕಿಂಗ್ ಮಾಡಿಸ್ತಾರೆ. ಇಷ್ಟು ಜನಕ್ಕೆ ಕೊಠಡಿ ಬೇಕೆಂದು ಅಧಿಕಾರಿಗಳು ಮಧ್ಯವರ್ತಿಗಳಿಗೆ ಹೇಳ್ತಾರೆ. ಹೋಟೆಲ್‌ಗಳ ಜೊತೆಗೆ ಸಂಪರ್ಕ ಇಟ್ಟುಕೊಂಡಿರುವ ಬ್ರೋಕರ್‌ಗಳು ಮಧ್ಯವರ್ತಿಗಳು ಹೋಟೆಲ್‌ಗಳ ಜೊತೆ ಮಾತನಾಡಿ ವ್ಯವಹಾರ ಕುದುರಿಸ್ತಾರೆ. ಈ ವ್ಯವಹಾರ ಕುದುರಿಸಲು ಮಧ್ಯವರ್ತಿಗಳು ಕಮಿಷನ್ ಪಡೆಯುತ್ತಿದ್ದಾರೆ.
ದಂಧೆ ಹೇಗೆ ನಡೀತಿದೆ:
ಒಂದೇ ಬಾರಿಗೆ 14 ದಿನಗಳ ಹಣ ಪೀಕುತ್ತಿರುವ ಹೋಟೆಲ್ ಮಾಲೀಕರು ಕ್ವಾರಂಟೈನ್‌ಗೆ ಮೊದಲೇ 14 ದಿನಗಳ ಬಾಡಿಗೆ ಅಡ್ವಾನ್ಸ್ ಪಡೆಯುತ್ತಾರೆ. 7 ದಿನದಲ್ಲೇ ನೆಗೆಟಿವ್ ರಿಪೋರ್ಟ್ ಬಂದ್ರೆ ರೂಂ ಖಾಲಿ ಮಾಡಿಸಬೇಕು. ಹೋಟೆಲ್ ರೂಂ ಖಾಲಿ ಮಾಡುವಾಗ ಉಳಿದ ಹಣವನ್ನ ಕೊಡಬೇಕು. 14 ದಿನ ಕ್ವಾರಂಟೈನ್ ಆದ್ರೆ, ಕಟ್ಟಿದ ಅಷ್ಟೂ ದುಡ್ಡು ಹೋಟೆಲ್ ಪಾಲು. ಇದೇ ಕಾರಣಕ್ಕೆ 7 ದಿನಗಳ ಕ್ವಾರಂಟೈನ್ ಮುಗಿದ್ರೂ ವಾಪಸ್ ಕಳಿಸ್ತಿಲ್ಲ. ಕ್ವಾರಂಟೈನ್ ಆದವ್ರಿಂದಲೇ ದುಡ್ಡು ಹೊಡೆಯಲು ಖತರ್ನಾಕ್ ಪ್ಲ್ಯಾನ್ ಮಾಡಲಾಗುತ್ತಿದೆ.
5ಸ್ಟಾರ್ ಹೋಟೆಲ್ ರೂಂನ 1 ದಿನದ ಬಾಡಿಗೆ 3 ಸಾವಿರ ರೂ. ಇಬ್ಬರು ತಂಗುವ ಒಂದು ಕೊಠಡಿಗೆ 3,700 ರೂಪಾಯಿ ನಿಗದಿ. ಮಧ್ಯಾಹ್ನದ ಊಟಕ್ಕೆ 550 ರೂಪಾಯಿ, ರಾತ್ರಿ ಊಟಕ್ಕೆ ₹550, ಒಂದು ದಿನಕ್ಕೆ ಊಟ, ರೂಂ ಸೇರಿ ಅಂದಾಜು ₹4100 ಆಗುತ್ತೆ. ಅಂದ್ರೆ, 14 ದಿನಕ್ಕೆ ಅಂದಾಜು 57ರಿಂದ 60 ಸಾವಿರ ರೂಪಾಯಿ. 3ಸ್ಟಾರ್ ಹೋಟೆಲ್‌ಗೆ ದಿನಕ್ಕೆ ಉಪಾಹಾರ ಸಮೇತ ₹1,500. ಇಬ್ಬರು ತಂಗುವ ರೂಂಗೆ ಒಂದು ದಿನಕ್ಕೆ ₹1,750 ನಿಗದಿ ಮಾಡ್ತಾರೆ. ಮಧ್ಯಾಹ್ನದ ಊಟಕ್ಕೆ 175, ರಾತ್ರಿ ಊಟಕ್ಕೆ 175 ರೂಪಾಯಿ. ಒಂದು ದಿನಕ್ಕೆ ಊಟ, ರೂಂ ಸೇರಿ ಅಂದಾಜು 2 ಸಾವಿರ ರೂ. ಅಂದ್ರೆ, 14 ದಿನಕ್ಕೆ ಅಂದಾಜು 28ರಿಂದ 30 ಸಾವಿರ ರೂಪಾಯಿ. ಸಾಮಾನ್ಯ ಹೋಟೆಲ್‌ಗೆ ಒಂದು ದಿನಕ್ಕೆ ₹700ರಿಂದ ₹900. ಉಪಾಹಾರ ಮತ್ತು ಮೂರು ಹೊತ್ತು ಊಟ ಸೇರಿಸಿ ಬಾಡಿಗೆ 14 ದಿನಕ್ಕೆ ಅಂದಾಜು 12ರಿಂದ 15 ಸಾವಿರ ರೂಪಾಯಿ.
Published On - 10:26 am, Thu, 28 May 20