ಬೆಂಗಳೂರು, ಹುಬ್ಬಳ್ಳಿ, ಕಲಬುರ್ಗಿಯಲ್ಲಿ ಟಿವಿ9 ಕನ್ನಡ ಎಜುಕೆಶನ್ ಸಮಿಟ್; ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿಹಾಡಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Apr 10, 2024 | 2:00 PM

Opportunity for students to explore career possibilities and courses: ಟಿವಿ9 ಕನ್ನಡ ಎಜುಕೇಶನ್ ಸಮಿಟ್ 2024 ಈ ಬಾರಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬೆಂಗಳೂರು, ಹುಬ್ಬಳ್ಳಿ ಮತ್ತು ಕಲಬುರ್ಗಿಯಲ್ಲಿ ನಡೆಯುತ್ತಿದೆ. ಏಪ್ರಿಲ್ 12ರಿಂದ 14 ಬೆಂಗಳೂರಿನಲ್ಲಿ, ಏಪ್ರಿಲ್ 27ರಿಂದ 28 ಕಲಬುರ್ಗಿ, ಇನ್ನು ಮೇ 4 ಮತ್ತು 5ರಂದು ಹುಬ್ಬಳ್ಳಿಯಲ್ಲಿ ಶಿಕ್ಷಣ ಸಮಾವೇಶ ಇರುತ್ತದೆ. ಪ್ರತಿಷ್ಠಿತ ಕಾಲೇಜು, ಡೀಮ್ಡ್ ಯೂನಿವರ್ಸಿಟಿ, ಶಿಕ್ಷಣ ಸಂಸ್ಥೆಗಳು ಈ ಶೃಂಗಸಭೆಗೆ ಬರಲಿವೆ. ಉನ್ನತ ಶಿಕ್ಷಣ ಓದಬಯಸುವ ವಿದ್ಯಾರ್ಥಿಗಳಿಗೆ ಈ ಸಮಿಟ್​ನಲ್ಲಿ ಸೂಕ್ತ ಮಾರ್ಗದರ್ಶನ ಮತ್ತು ಮಾಹಿತಿ ಸಿಗುತ್ತದೆ.

ಬೆಂಗಳೂರು, ಹುಬ್ಬಳ್ಳಿ, ಕಲಬುರ್ಗಿಯಲ್ಲಿ ಟಿವಿ9 ಕನ್ನಡ ಎಜುಕೆಶನ್ ಸಮಿಟ್; ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿಹಾಡಿ
Follow us on

ಬೆಂಗಳೂರು, ಏಪ್ರಿಲ್ 2: ಟಿವಿ9 ಕನ್ನಡ ವಾಹಿನಿ ವತಿಯಿಂದ ಶಿಕ್ಷಣ ಶಂಗಸಭೆ (TV9 Kannada Education Summit) ನಡೆಯುತ್ತಿದೆ. ವಿದ್ಯಾರ್ಥಿಗಳ ಭವಿಷ್ಯದ ದಾರಿ ಕಂಡುಕೊಳ್ಳಲು ಸಹಾಯವಾಗಿ ಮೂರು ದಿನಗಳ ಎಜುಕೇಶನ್ ಸಮಿಟ್ ಅನ್ನು ಟಿವಿ9 ಕನ್ನಡ ಆಯೋಜಿಸಿದೆ. ವಿವಿಧ ಲಭ್ಯ ಕೋರ್ಸ್​ಗಳು, ಉತ್ತಮ ಕಾಲೇಜುಗಳು, ಯೂನಿವರ್ಸಿಟಿಗಳು (deemed universities), ಶಿಕ್ಷಣ ಸಂಸ್ಥೆಗಳ ಬಗ್ಗೆ ಮಾಹಿತಿಯನ್ನು ಈ ಸಮಿಟ್​ನಲ್ಲಿ ಪಡೆಯಬಹುದು. ಹೊಸ ವೃತ್ತಿ ಅವಕಾಶಗಳ ಬಗ್ಗೆ ತಜ್ಞರ ಅಭಿಪ್ರಾಯಗಳನ್ನು ಪಡೆಯಬಹುದು. ಪ್ರತಿಷ್ಠಿತ ಕಾಲೇಜುಗಳು, ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳ ಬಳಿ ಬರಲು ಟಿವಿ9 ಕನ್ನಡ ಒಂದು ಉತ್ತಮ ವೇದಿಕೆ ಮಾಡಿದೆ. ಉನ್ನತ ಶಿಕ್ಷಣದ ಕನಸು ಹೊತ್ತ ವಿದ್ಯಾರ್ಥಿಗಳಿಗೆ ಈ ಶಿಕ್ಷಣ ಶೃಂಗಸಭೆ ಬಹಳ ಪ್ರಯೋಜನಕಾರಿ ಎನಿಸುತ್ತದೆ.

ಬೆಂಗಳೂರು, ಹುಬ್ಬಳ್ಳಿ ಮತ್ತು ಕಲಬುರ್ಗಿಯಲ್ಲಿ ಈ ಎಜುಕೇಶನ್ ಸಮಿಟ್ ನಡೆಯಲಿದೆ. ಬೆಂಗಳೂರಿನಲ್ಲಿ ಏಪ್ರಿಲ್ 12ರಿಂದ 14ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ. ಈ ಮೂರು ಸ್ಥಳಗಳಲ್ಲಿ ಯಾವ್ಯಾವ ದಿನಗಳಲ್ಲಿ ಶೃಂಗಸಭೆ ನಡೆಯುತ್ತದೆ ಎನ್ನುವ ವಿವರ ಕೊನೆಯಲ್ಲಿ ಇದೆ.

ಟಿವಿ9 ಕನ್ನಡ ಎಜುಕೇಶನ್ ಎಕ್ಸ್​ಪೋದ ಮುಖ್ಯಾಂಶಗಳು

ಎಂಜಿನಿಯರಿಂಗ್, ಮೆಡಿಸಿನ್, ಫಾರ್ಮಾ, ಕಲೆ ಮತ್ತು ವಿಜ್ಞಾನ, ಫೈರ್ ಸೇಫ್ಟಿ, ಹೋಟೆಲ್ ಮ್ಯಾನೇಜ್ಮೆಂಟ್, ಅನಿಮೇಶನ್, ಕಾಮರ್ಸ್, ಫೈನಾನ್ಸ್, ಮ್ಯಾನೇಜ್ಮೆಂಟ್ ಇತ್ಯಾದಿ ವಿವಿಧ ವಿಭಾಗಗಳಲ್ಲಿ ಲಭ್ಯ ಇರುವ ಕೋರ್ಸ್​ಗಳ ಬಗ್ಗೆ ಎಕ್ಸ್​ಪೋದಲ್ಲಿ ಮಾಹಿತಿ ಪಡೆಯಬಹುದು.

ಪ್ರತಿಷ್ಠಿತ ಮತ್ತು ಅಗ್ರಮಾನ್ಯ ಡೀಮ್ಡ್ ಯೂನಿವರ್ಸಿಟಿಗಳು ಮತ್ತು ಶಿಕ್ಷಣ ಸಂಸ್ಥೆಗಳು, ಕಾಲೇಜುಗಳ ವೃತ್ತಿಪರರೊಂದಿಗೆ ನೇರವಾಗಿ ಮಾತನಾಡಿ, ಕೋರ್ಸ್, ಅಡ್ಮಿಶನ್ ಪ್ರಕ್ರಿಯೆ ಇತ್ಯಾದಿ ಮಾಹಿತಿ ಪಡೆಯಲು ಸುವರ್ಣಾವಕಾಶ ಸಿಗುತ್ತದೆ.

ವಿವಿಧ ವೃತ್ತಿ ಸಾಧ್ಯತೆಗಳು, ಅದಕ್ಕೆ ಸಂಬಂಧಿಸಿದ ಕೋರ್ಸ್​ಗಳನ್ನು ಅವಲೋಕಿಸಬಹುದು. ಸಿಇಟಿ, ಜೆಇಇ, ನೀಟ್, ಕಾಮೆಡ್​ಕೆ ಬಗ್ಗೆ ಮಾರ್ಗದರ್ಶನ ಪಡೆಯಬಹುದು.

ಈ ಸಮಿಟ್​ನಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ಭರ್ಜರಿ ಉಡುಗೊರೆ ಸಿಗುವ ಅವಕಾಶ ತಪ್ಪಿಸಿಕೊಳ್ಳದಿರಿ…

ಟಿವಿ9 ಕನ್ನಡ ಎಜುಕೇಶನ್ ಸಮಿಟ್ 2024: ಸ್ಥಳ ಮತ್ತು ದಿನಾಂಕ

2024ರ ಏಪ್ರಿಲ್ 12ರಿಂದ 14

ಸ್ಥಳ: ತ್ರಿಪುರವಾಸಿನಿ, ಅರಮನೆ ಮೈದಾನ, ಬೆಂಗಳೂರು


 

2024ರ ಏಪ್ರಿಲ್ 27ರಿಂದ 28

ಸ್ಥಳ: ಡಾ. ಬಸವರ ಅಪ್ಪ ಸ್ಮಾರಕ ಭವನ, ಅಪ್ಪ ಕೆರೆ ಎದುರು, ಕಲಬುರ್ಗಿ


 

2024ರ ಮೇ 4ರಿಂದ 5

ಸ್ಥಳ: ಶ್ರೀನಿವಾಸ ಗಾರ್ಡನ್, ಕುಸುಗಲ್ ರಸ್ತೆ, ಹುಬ್ಬಳ್ಳಿ

 

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:42 pm, Tue, 2 April 24