TV9 Karnataka Summit 2023; ತಮಿಳುನಾಡುಗೆ ನೀರು ಬಿಡೋದಿಲ್ಲ ಅನ್ನೋದ್ಕಕ್ಕಿಂತ ನೀರೇ ಇಲ್ಲ ಅನ್ನೋದು ಹೆಚ್ಚು ಸೂಕ್ತ: ಸಿದ್ದರಾಮಯ್ಯ

|

Updated on: Sep 15, 2023 | 2:57 PM

ಕನಸಿನ ಕರುನಾಡು ಟಿವಿ9 ಸಮ್ಮಿಟ್ 2023: ರಾಜ್ಯದ ನೀರಾವರಿ ಸಚಿವರು ದೆಹಲಿಯಲ್ಲಿರುವ ರಾಜ್ಯ ಕಾನೂನು ತಂಡ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವರ ಜೊತೆ ಚರ್ಚಿಸಲು ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು. ರಾಜ್ಯದಲ್ಲಿ ಬೆಳೆಗಳಿಗೆ, ಕುಡಿಯುವುದಕ್ಕೆ ಮತ್ತು ಕೈಗಾರಿಕೆಗಳಿಗೆ ವರ್ಷಕ್ಕೆ 106 ಟಿಎಂಸಿ ನೀರು ಬೇಕು, ಅದರೆ ಎಲ್ಲ 4 ಜಲಾಶಯಗಳು ಸೇರಿ ಕೇವಲ 53 ಟಿಎಂಸಿ ನೀರು ಮಾತ್ರ ಲಭ್ಯವಿದೆ ಅಂತ ಅವರು ಹೇಳಿದರು.

ಬೆಂಗಳೂರು: ಕನಸಿನ ಕರುನಾಡು ಟಿವಿ9 ಸಮ್ಮಿಟ್ 2023 ನಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಟಿವಿ9 ಕನ್ನಡ ವಾಹಿನಿ ನಿರೂಪಕರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು. ಪ್ರಸ್ತುತ ವಿದ್ಯಮಾನಗಳಲ್ಲಿ ರಾಜ್ಯದ ಜನತೆ ಅದರಲ್ಲೂ ವಿಶೇಷವಾಗಿ ರೈತರನ್ನು ಕಂಗೆಡಿಸಿರುವ ಸಂಗತಿಯೆಂದರೆ; ಕುಡಿಯುವ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗುವ ಸ್ಥಿತಿ ನಿರ್ಮಾಣಗೊಂಡಿದ್ದರೂ ರಾಜ್ಯ ಸರ್ಕಾರ ತಮಿಳುನಾಡುಗೆ ಕಾವೇರಿ ನದಿ ನೀರು (Cauvery River water) ಹರಿಸುತ್ತಿರುವುದು. ಪ್ರಶ್ನೆಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ, ನಮ್ಮಲ್ಲಿ ನೀರೇ ಇಲ್ಲದಂಥ ಸ್ಥಿತಿ ಉಂಟಾಗಿದೆ, ಆದಾಗ್ಯೂ ಸುಪ್ರೀಂ ಕೋರ್ಟ್ ರಚಿಸಿರುವ ಕಾವೇರಿ ನೀರು ನಿಯಂತ್ರಣ ಮಂಡಳಿ (CWRC) ಮತ್ತು ನಿರ್ವಹಣಾ ಪ್ರಾಧಿಕಾರ (CWMA) ನೀರು ಹರಿಸಲು ಹೇಳುತ್ತಿವೆ. ರಾಜ್ಯದ ನೀರಾವರಿ ಸಚಿವರು ದೆಹಲಿಯಲ್ಲಿರುವ ರಾಜ್ಯ ಕಾನೂನು ತಂಡ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವರ ಜೊತೆ ಚರ್ಚಿಸಲು ಹೋಗಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಬೆಳೆಗಳಿಗೆ, ಕುಡಿಯುವುದಕ್ಕೆ ಮತ್ತು ಕೈಗಾರಿಕೆಗಳಿಗೆ ವರ್ಷಕ್ಕೆ 106 ಟಿಎಂಸಿ ನೀರು ಬೇಕು, ಅದರೆ ಎಲ್ಲ 4 ಜಲಾಶಯಗಳು ಸೇರಿ ಕೇವಲ 53 ಟಿಎಂಸಿ ನೀರು ಮಾತ್ರ ಲಭ್ಯವಿದೆ. ರಾಜ್ಯ ಸರ್ಕಾರ ತಮಿಳುನಾಡುಗೆ ನೀರು ಬಿಡೋದಿಲ್ಲ ಅಂತ ಹೇಳುವುದಕ್ಕಿಂತ ನಮ್ಮಲ್ಲಿ ನೀರೇ ಇಲ್ಲ ಅಂತ ಹೇಳುವುದು ಹೆಚ್ಚು ಸೂಕ್ತ ಎಂದು ಮುಖ್ಯಮಂತ್ರಿ ಹೇಳಿದರು. ಆಪರೇಷನ್ ಹಸ್ತದ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ಪಕ್ಷದ ತತ್ವಸಿದ್ಧಾಂತ ಮತ್ತು ನಾಯಕತ್ವ ಒಪ್ಪಿಕೊಂಡು ಯಾರೇ ಬಂದರೂ ಸ್ವಾಗತವಿದೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ