ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಇಂದು (ಸೆ.15) ಟವಿ9 ಕನ್ನಡ “ಕನಸಿನ ಕರುನಾಡು” ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಮಹಾನಾಯಕರು, ಸಿನಿಮಾ ತಾರೆಯರು ಭಾಗಿಯಾಗಲಿದ್ದಾರೆ. ಶುಕ್ರವಾರ ಇಡೀ ದಿನ ಈ ಕಾರ್ಯಕ್ರಮ ಟಿವಿ9ನಲ್ಲಿ ನೇರಪ್ರಸಾರವಿರಲಿದೆ. ಅಲ್ಲದೇ ಸರ್ಕಾರ ಕೂಡ ಇತ್ತೀಚಿಗೆ ಮೈಸೂರಿನಲ್ಲಿ ಬೃಹತ್ ಕಾರ್ಯಕ್ರಮ ಮಾಡಿ ಭಾಗ್ಯ ಲಕ್ಷ್ಮಿ ಯೋಜನೆಗೆ ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಸಂಸದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗಿಯಾಗಿದ್ದರು.
ಸೆ.18ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ನಿಗದಿ ಆಗಿದೆ. ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಸಿಡಬ್ಲ್ಯುಆರ್ಸಿ ಆದೇಶಿಸಿದೆ. ಸಿಡಬ್ಲ್ಯುಆರ್ಸಿ ಆದೇಶಕ್ಕೆ ಕರ್ನಾಟಕ, ತಮಿಳುನಾಡು ಒಪ್ಪಿಗೆ ನೀಡಿಲ್ಲ. ಹೀಗಾಗಿ ಸೆಪ್ಟೆಂಬರ್ 18ರಂದು ಸಭೆ ನಡೆಸಲು CWMA ತೀರ್ಮಾನಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಮೈತ್ರಿ ಆಶಾದಾಯಕವಾಗಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನಾವು ದೊಡ್ಡ ಆಪರೇಷನ್ ಮಾಡುತ್ತೇವೆ ಎಂದು ಶಾಸಕ ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ದೇಶಾದ್ಯಂತ ಸಂಚರಿಸಿ ತಜ್ಞರ ಜೊತೆ ಚರ್ಚೆ ನಡೆಸಿ ಎನ್ಇಪಿ ತಂದಿದ್ದೆವು. ಹೊಸದಾಗಿ ಬಂದ ಸರ್ಕಾರ ಯಾವುದನ್ನೂ ಪರಿಶೀಲಿಸದೆ NEP ಹಿಂಪಡೆದಿದೆ. ಕಾಂಗ್ರೆಸ್ ಪಕ್ಷ ಒಂದು ಸಮುದಾಯದ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಹೇಳಿದ್ದಾರೆ.
ಪೇ ಸಿಎಂ, 40 ಪರ್ಸೆಂಟ್ ಕಮಿಷನ್ ಆರೋಪ ಪರಿಣಾಮ ಬೀರಿತು. ವಿಪಕ್ಷಗಳ ಆರೋಪವನ್ನು ಗಂಭೀರವಾಗಿ ಪರಿಗಣಿಸದಿದ್ದರಿಂದ ಸೋತೆವು ಎಂದು ‘ಕನಸಿನ ಕರುನಾಡು’ ಕಾರ್ಯಕ್ರಮದಲ್ಲಿ ಶಾಸಕ ಡಾ.ಅಶ್ವತ್ಥ್ ನಾರಾಯಣ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸರಗಳ್ಳತನ ಪ್ರಕರಣ ಬಹಳ ಕಡಿಮೆಯಾಗಿದೆ. ರಾಜ್ಯದಲ್ಲಿ ಇತರೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆಸ್ತಿ ವಿವಾದಕ್ಕೆ ಗಲಾಟೆ, ಖಾಸಗಿ ವಿಚಾರಕ್ಕೆ ಕೊಲೆ ಪ್ರಕರಣ ನಡೆದ ನಂತರ ಗೊತ್ತಾಗುತ್ತೆ ಎಂದು ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಮಂಗಳೂರು, ಉಡುಪಿ ಭಾಗದಲ್ಲಿ ಕೆಲವರಿಗೆ ನಾವೇ ಪೊಲೀಸ್ ಎಂಬ ಭಾವನೆ ಇದೆ. ಅಂಥವರ ವಿರುದ್ಧ ಕ್ರಮಕ್ಕಾಗಿ ಆ್ಯಂಟಿ ಕಮ್ಯುನಲ್ ವಿಂಗ್ ಆರಂಭಿಸಿದ್ದೇವೆ. ನಾನು ಮಂಗಳೂರಿಗೆ ಭೇಟಿ ನೀಡಿದಾಗ ದೂರು ನೀಡಿದರು ಎಂದು ಸಚಿವ ಪರಮೇಶ್ವರ್ ಹೇಳಿದ್ದಾರೆ.
ಒಂದೊಂದು ಕ್ರಮಕೈಗೊಂಡಾಗ ಅದು ಜನರಿಗೆ, ಸರ್ಕಾರಕ್ಕೆ ಒಳ್ಳೆಯದಾಗಬೇಕು. ಆ ದೃಷ್ಟಿಯಲ್ಲಿ ಕೆಲವೊಮ್ಮೆ ಕಠಿಣ ಕ್ರಮಗಳನ್ನು ಸಹ ತೆಗೆದುಕೊಳ್ಳಬೇಕಾಗುತ್ತದೆ. ಯಾರಿಗೂ ಅನ್ಯಾಯವಾಗಬಾರದು. ಪೊಲೀಸರ ದೃಷ್ಟಿಯಲ್ಲಿ ಎಲ್ಲರು ಸಮಾನರು. ಎಲ್ಲರನ್ನು ಒಂದು ರೀತಿಯಾಗಿ ಕಾಣಬೇಕು ಎಂದು ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಸಮಾಜದಲ್ಲಿ ಶಾಂತಿ ಇರಬೇಕು, ಭಯಮುಕ್ತ ಸಮಾಜ ನಿರ್ಮಾಣವಾಗಬೇಕು ಎಂದು ‘ಕನಸಿನ ಕರುನಾಡು’ ಕಾರ್ಯಕ್ರಮದಲ್ಲಿ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಕ್ಕಳಿಗೆ ಅಗತ್ಯವಿರುವ ಪಠ್ಯ ಬೋಧನೆ ಮಾಡಿದರೆ ಸಾಕು. ನಾವು ಪ್ರಣಾಳಿಕೆಯಲ್ಲಿ ಹೇಳಿದಂತೆ ಪಠ್ಯ ಪರಿಷ್ಕರಣೆ ಮಾಡಿದ್ದೇವೆ. ಆದರೆ ಬಿಜೆಪಿಯವರು ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದು ತಿರುಚಿದರು. ಆಪರೇಷನ್ ಕಮಲ ಮೂಲಕ ಬಿಜೆಪಿಯವರು ಅಧಿಕಾರಕ್ಕೆ ಬಂದಿದ್ದು, ಸಾಂವಿಧಾನ ಬಾಹಿರವಾಗಿ ಅಧಿಕಾರಕ್ಕೆ ಬಂದವರು ಪಠ್ಯ ತಿರುಚಿದ್ದರು ಎಂದು ಹೇಳಿದ್ದಾರೆ.
ನಾವು ಅಧಿಕಾರಕ್ಕೆ ಬಂದರೆ ಪಠ್ಯ ಪರಿಷ್ಕರಣೆ ಮಾಡುವುದಾಗಿ ಹೇಳಿದ್ದೆವು. ಅಧಿಕಾರ ಸ್ವೀಕರಿಸಿದ ಬಳಿಕ ಮೊದಲು ಪಠ್ಯ ಪರಿಷ್ಕರಣೆಗೆ ಸಹಿ ಮಾಡಲಾಗಿದೆ. ಪಠ್ಯ ಪರಿಷ್ಕರಣೆ ಕಡತಕ್ಕೆ ಮೊದಲು ಸಹಿ ಮಾಡಿದ್ದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
N Cheluvarayaswamy: ಬರಪೀಡಿತ 195 ತಾಲೂಕುಗಳ ರೈತರಿಗೆ ಪರಿಹಾರದ ಹಣ ನೀಡುತ್ತೇವೆ: ಸಚಿವ ಚಲುವರಾಯಸ್ವಾಮಿ
N Cheluvarayaswamy: ಬರಪೀಡಿತ 195 ತಾಲೂಕುಗಳ ರೈತರಿಗೆ ಪರಿಹಾರದ ಹಣ ನೀಡುತ್ತೇವೆ: ಸಚಿವ ಚಲುವರಾಯಸ್ವಾಮಿ
ನಮ್ಮ ಸರ್ಕಾರ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಜುಲೈನಲ್ಲಿ ಸ್ವಲ್ಪ ಮಳೆಯಾಗಿದೆ, ಆಗಸ್ಟ್ನಲ್ಲಿ ಮಳೆಯಾಗಿಲ್ಲ. ಸೆಪ್ಟೆಂಬರ್ ತಿಂಗಳಲ್ಲಿ ಸ್ವಲ್ಪ ಸೋನೆ ಮಳೆಯಾಗಿದೆ. ರೈತರ ಬಿತ್ತನೆ ಮಾಡಿರುವ ಬೆಳೆ ಕೈಸೇರುವ ಸಾಧ್ಯತೆ ಕಡಿಮೆಯಿದೆ. ನಮ್ಮ ಸರ್ಕಾರ ಬರ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲಿದೆ ಎಂದು ಹೇಳಿದರು.
ರಾಜ್ಯದ ಜನತೆ ಕಾಂಗ್ರೆಸ್ ಪಕ್ಷಕ್ಕೆ ಒಟ್ಟು 135 ಸ್ಥಾನ ಕೊಟ್ಟಿದ್ದಾರೆ. ರಾಜ್ಯದ ಜನರಿಗೆ ನಾವು ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದೇವೆ ಎಂದು ‘ಕನಸಿನ ಕರುನಾಡು’ ಕಾರ್ಯಕ್ರಮದಲ್ಲಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಎಲ್ಲಾ ದೇಶಗಳಲ್ಲಿ ನೆರ ತೆರಿಗೆ ಜಾಸ್ತಿ ಇರಬೇಕು. ಅದೇ ರೀತಿಯಾಗಿ ಜಿಎಸ್ಟಿ ಕಡಿಮೆ ಇರಬೇಕು. ಆದರೆ ನಮ್ಮ ದೇಶದಲ್ಲಿ ಅದು ಊಲ್ಟಾ ಇದೆ. ಶ್ರೀಮಂತರು ಕಟ್ಟುತ್ತಿರುವ ತೆರಿಗೆಯನ್ನು ಕಟ್ಟು ಮಾಡಿ, ಜನರು ಕಟ್ಟುವ ತೆರಿಗೆಗಳನ್ನು ಜಾಸ್ತಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಬಿಜೆಪಿಯವರ ರೀತಿ ನಾವು ಬೆಂಕಿ ಇಡುವ ರಾಜಕಾರಣ ಮಾಡುತ್ತಿಲ್ಲ. ಮಕ್ಕಳ ಶುಲ್ಕ ಕಟ್ಟಲು ಕಷ್ಟ ಪಡುತ್ತಿರುವವರಿಗೆ ಅನುಕೂಲ ಆಗುತ್ತಿದೆ. ಬಡವರಿಗೆ ಅನುಕೂಲ ಮಾಡಿಕೊಡಲು ‘ಗೃಹಲಕ್ಷ್ಮೀ’ ಯೋಜನೆ ಜಾರಿ ಮಾಡಲಾಗಿದೆ. ಗ್ಯಾರಂಟಿ ಯೋಜನೆಗಳು ಶೇ.90ರಷ್ಟು ಅರ್ಹ ಫಲಾನುಭವಿಗಳಿಗೆ ತಲುಪಿವೆ. ಶೇಕಡಾ 10ರಷ್ಟು ಶ್ರೀಮಂತರಿಗೂ ತಲುಪಿರಬಹುದು ಎಂದು ಹೇಳಿದ್ದಾರೆ.
ಗ್ಯಾರಂಟಿಗಳ ಮೂಲಕ ದುಡಿಯುವ ವರ್ಗವನ್ನು ಬಲಪಡಿಸಿದ್ದೇವೆ. ಗ್ಯಾರಂಟಿಗಳನ್ನು ಜಾರಿ ಮಾಡಿದರೂ ಆರ್ಥಿಕ ಶಿಸ್ತನ್ನು ಕಾಪಾಡಿದ್ದೇವೆ ಎಂದು ‘ಕನಸಿನ ಕರುನಾಡು’ ಕಾರ್ಯಕ್ರಮದಲ್ಲಿ ಸಚಿವ ಕೃಷ್ಣಭೈರೇಗೌಡ ಹೇಳಿದ್ದಾರೆ.
ನಮ್ಮ ಸಾರಿಗೆ ಇಲಾಖೆ ಬೇರೆ ರಾಜ್ಯದ ಇಲಾಖೆಗಳಿಗೆ ಹೋಲಿಸಿದರೆ, ಅತಿ ಹೆಚ್ಚು ವಾಹನಗಳು ನಮ್ಮಲ್ಲಿವೆ.
ನಾವು ಉತ್ತಮ ಸೌಲಭ್ಯಗಳನ್ನು ನೀಡುತ್ತಿದ್ದೇವೆ. ಉತ್ತಮ ಸಾರಿಗೆ ಸಂಸ್ಥೆಗಳಲ್ಲಿ ನಮ್ಮದು ಒಂದು. ಅದರಲ್ಲಿಯೂ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ. 400ಕ್ಕೂ ಹೆಚ್ಚು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು 40 ವರ್ಷಗಳಲ್ಲಿ ಪಡೆದುಕೊಂಡಿದೆ ಎಂದು ಹೇಳಿದರು.
2020ರಲ್ಲಿ ರಾಜ್ಯದಲ್ಲಿ ನಮ್ಮ ಸರ್ಕಾರ ಇರಲಿಲ್ಲ. ಈ ಹಿಂದೆ ಪ್ರತಿಭಟನೆ ನಡೆದಾಗ ಕೆಲವರನ್ನು ವಜಾ ಮಾಡಲಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಯಾರನ್ನೂ ಕೆಲಸದಿಂದ ವಜಾಗೊಳಿಸಿಲ್ಲ. ವಜಾಗೊಂಡಿದ್ದ ಬೇರೆ ನಿಗಮದ ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಹೇಳಿದ್ದಾರೆ.
ಶಕ್ತಿ ಯೋಜನೆಯಿಂದ ಸಾಧಕಗಳೇ ಜಾಸ್ತಿ. ಸರ್ಕಾರ ರಚನೆ ಆಗಿ 15 ದಿನದಲ್ಲಿ ನಾವು ಈ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ನಮ್ಮಲ್ಲಿ 24 ಸಾವಿರಕ್ಕೂ ಹಚ್ಚು ಬಸ್ಗಳಿವೆ. ಒಂದು ಲಕ್ಷ 9 ಸಾವಿರ ಕೆಲಸಗಾರರಿದ್ದಾರೆ. ಅದರಲ್ಲಿ 10ರಿಂದ 12 ಸಾವಿರ ಕೆಲಸಗಾರರು ನಿವೃತ್ತಿ ಆಗಿದ್ದು, ಸದ್ಯದಲ್ಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಸ್ಯಾಂಡಲ್ವುಡ್ನಲ್ಲಿ ಸ್ವರ್ಣಯುಗ ಹಿಂದೆಯೂ ಇತ್ತು. ಈಗಲೂ ಇದೆ. ನಾವು ಅದನ್ನು ಒಂದು ಚಿತ್ರದ ಯಶಸ್ಸಿನಲ್ಲಿ ಕಾಣುತ್ತೇವೆ. ಡಾ. ರಾಜ್ಕುಮಾರ್ ಅವರು ಇದ್ದಾಗ ವರ್ಷಕ್ಕೆ 14 ಸಿನೆಮಾಗಳು ಬಿಡುಗಡೆಗೊಳ್ಳುತ್ತಿದ್ದು, ಎಲ್ಲವು ಸೂಪರ್ ಹಿಟ್ ಆಗುತ್ತಿದ್ದವು ಎಂದು ನಟ ರಾಜ್ ಬಿ. ಶೆಟ್ಟಿ ಹೇಳಿದ್ದಾರೆ.
‘ಕನಸಿನ ಕರುನಾಡು’ ಕಾರ್ಯಕ್ರಮದಲ್ಲಿ ‘ಸ್ಯಾಂಡಲ್ವುಡ್ ಸ್ವರ್ಣಯುಗ’ ವಿಷಯ ಕುರಿತು ನಟ ರಾಜ್ ಬಿ. ಶೆಟ್ಟಿ ಮತ್ತು ನಟಿ ಶಾನ್ವಿ ಶ್ರೀವಾಸ್ತವ ಸಂವಾದದಲ್ಲಿ ಭಾಗಿಯಾಗಿದ್ದಾರೆ.
Lakshmi Hebbalkar: ಗೃಹಲಕ್ಷ್ಮಿ ಯೋಜನೆಯರಿಂದ ಬಡ ಮಹಿಳೆಯರಿಗೆ ಹೇಗೆ ಲಾಭ? ವಿವರ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್
Lakshmi Hebbalkar: ಗೃಹಲಕ್ಷ್ಮಿ ಯೋಜನೆಯರಿಂದ ಬಡ ಮಹಿಳೆಯರಿಗೆ ಹೇಗೆ ಲಾಭ? ವಿವರ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್
ವಿಪಕ್ಷಗಳು 5 ಗ್ಯಾರಂಟಿಗಳನ್ನು ಜಾರಿ ಮಾಡಲು ಆಗಲ್ಲ ಎಂದಿದ್ದವು. ಆದರೆ ಮೊದಲ ಸಂಪುಟದಲ್ಲೇ 5 ಗ್ಯಾರಂಟಿಗಳಿಗೆ ಒಪ್ಪಿಗೆ ನೀಡಲಾಯಿತು. ಈಗಾಗಲೇ ನಾವು 4 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಶೀಘ್ರದಲ್ಲೇ 5ನೇ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡುತ್ತೇವೆ. ವಿರೋಧ ಪಕ್ಷಗಳು ಟೀಕೆ ಮಾಡುತ್ತೇ ಇರಲಿ ಎಂದರು.
ಗೃಹಲಕ್ಷ್ಮೀ ಯೋಜನೆ ಜಾರಿಗೆ ಸಂಪುಟ ಸಚಿವರು ಸಹಾಯ ಮಾಡಿದರು. ಗೃಹಲಕ್ಷ್ಮೀ ತಾಂತ್ರಿಕ ಸಮಸ್ಯೆ ಬಗೆಹರಿಸಲು ಈಗಾಗಲೇ ಸೂಚಿಸಿದ್ದೇವೆ. 1.14 ಕೋಟಿ ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. 8 ರಿಂದ 9 ಲಕ್ಷ ಫಲಾನುಭವಿಗಳಿಗೆ ಇನ್ನೂ ಹಣ ಸಿಕ್ಕಿಲ್ಲ ಎಂದರು.
100 ದಿನದ ಆಡಳಿತದಲ್ಲಿ ಕೊಟ್ಟ ಮಾತು ಉಳಿಸಿಕೊಂಡಿದ್ದು ಸಂತಸ ಎಂದು ‘ಕನಸಿನ ಕರುನಾಡು’ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೇಳಿದ್ದಾರೆ. ಲಲಿತ್ ಅಶೋಕ್ ಹೋಟೆಲ್ನಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಹೈಕಮಾಂಡ್ ಕೊಟ್ಟ ಖಾತೆಯನ್ನು ನಿಭಾಯಿಸುವ ಆಸೆ ವ್ಯಕ್ತಪಡಿಸಿದ್ದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಆರ್ಥಿಕವಾಗಿ ಟೇಕಾಫ್ ಆಗಿದೆ. ನಮ್ಮ ಕೆಲಸ ಉದ್ಯೋಗವನ್ನು ಸೃಷ್ಠಿ ಮಾಡುವುದು ಅದರ ಮೇಲೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಎಂದು ಗ್ರಾಮೀಣಾಭಿವೃದ್ಧಿ, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
100 ದಿನದಲ್ಲಿ ನಮ್ಮ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಂಡಿದೆ. ನಮ್ಮ ಯೋಜನೆಗಳು ತಂತ್ರಜ್ಞಾನದ ಮೂಲಕ ಜನರಿಗೆ ತಲುಪಿದೆ. ತಂತ್ರಜ್ಞಾನದ ಅರಿವಿಗೆ ಬಾಪೂಜಿ ಸೇವಾ ಕೇಂದ್ರ ತೆರೆದಿದ್ದೇವೆ. ಗ್ರಾಮಾಂತರ ಪ್ರದೇಶದ ಜನರಿಗೆ ಬಾಪೂಜಿ ಸೇವಾ ಉಪಯುಕ್ತವಾಗಿದೆ ಎಂದು ಗ್ರಾಮೀಣಾಭಿವೃದ್ಧಿ, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬೆಂಗಳೂರಿನಲ್ಲಿ ಸ್ಟಾರ್ಟ್ಅಪ್ಗಳು ಮುಂಚೂಣಿಯಲ್ಲಿವೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಸರ್ಕಾರದ ಬಹುತೇಕ ಕೆಲಸ ಆನ್ಲೈನ್ ಮೂಲಕ ನಡೆಯುತ್ತಿದ್ದು, ರಾಜ್ಯದಲ್ಲಿ ಈಗ ಇ-ಗವರ್ನೆನ್ಸ್ ವ್ಯವಸ್ಥೆ ಇದೆ. ತಂತ್ರಜ್ಞಾನದ ಜ್ಞಾನ ಇಲ್ಲದವರಿಗೆ ಬಾಪೂ ಸೇವಾ ಕೇಂದ್ರ ತೆರೆಯಲಾಗಿದೆ. ನಮಗೆ ಪಂಚಾಯಿತಿ ಸಭೆಗಳ ಬಗ್ಗೆ ಪೋರ್ಟಲ್2ರಲ್ಲಿ ಮಾಹಿತಿ ಸಿಗುತ್ತೆ ಎಂದು ಗ್ರಾಮೀಣಾಭಿವೃದ್ಧಿ, ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಚುನಾವಣೆ ಮತದಾರರಿಗೆ ಬಿಟ್ಟಿದ್ದು, ನಿರ್ಧಾರ ಜನರಿಗೆ ಸೇರಿಸಿದ್ದು. ಕುಮಾರಸ್ವಾಮಿ ಮಾಡಿರುವ ಆರೋಪಗಳ ಬಗ್ಗೆ ಮಾತನಾಡಿದ ಅವರು ಪೆನ್ಡ್ರೈವ್ ಹೊರಗೆ ಬರಬೇಕು. ಇನ್ನೂ ಕೂಡ ಪೆನ್ಡ್ರೈವ್ನಲ್ಲಿ ಏನಿದೆ ಅಂತ ಹೇಳಿಲ್ಲ. ಪೆನ್ಡ್ರೈವ್ ಕಾಲಿ ಇದೆ ಹೀಗಾಗಿಯೇ ಬಿಡುಗಡೆ ಮಾಡಿಲ್ಲ ಎಂದು ಸಚಿವ ಕೆಜೆ ಜಾರ್ಜ ಹೇಳಿದರು.
ತೋಟದ ಮನೆಗಳಿಗೆ ವಿದ್ಯುತ್ ಕೊಡಬೇಕು. ಆದರೆ ಸಮಸ್ಯೆ ಏನಂದ್ರೆ ಈ ವಿದ್ಯುತ್ ಮೂಲಕ ಪಂಪಸೆಟ್ ಉಪಯೋಗಿಸುತ್ತಾರೆ. ರೈತರಿಗೆ ಹಗಲಿನಲ್ಲೇ ಉತ್ತಮವಾದ ವಿದ್ಯುತ್ ನೀಡಲು ಕ್ರಮವಹಿಸುತ್ತಿದ್ದೇವೆ ಎಂದು ಸಚಿವ ಕೆಜೆ ಜಾರ್ಜ್ ಹೇಳಿದರು.
ವಿದ್ಯುತ್ ಬಿಲ್ ಏರಿಕೆಯನ್ನು ಬಿಜೆಪಿ ಸರ್ಕಾರ ಮಾಡಿದೆ. ಮಳೆ ಆಗದಿದ್ದರೇ ವಿದ್ಯುತ್ ಉತ್ಪಾದನೆಯಲ್ಲಿ ಸ್ವಲ್ಪ ಸಮಸ್ಯೆಯಾಗಬಹುದು. ಆದರೂ ಇದಕ್ಕೆ ಪ್ಲಾನ್ ಮಾಡಿದ್ದೇವೆ. ಜನರಿಗೆ ತೊಂದರೆಯಾಗಬಹುದು. ಗೃಹಜ್ಯೋತಿ ಯೋಜನೆಯಿಂದ ನಮ್ಮ ಇಲಾಖೆಗೆ ನಷ್ಟ ಆಗಿಲ್ಲ. ರೈತರ ಪಂಪಸೆಟ್ಗಳಿಗೆ ವಿದ್ಯುತ್ ನೀಡುವ ಕೆಲಸ ಆಗುತ್ತಿದೆ.
ಗೃಹ ಜ್ಯೋತಿ ಗ್ಯಾರೆಂಟಿ ಯೋಜನೆಯನ್ನ ಹೇಗೆ ನಿಭಾಯಿಸಿದ್ರಿ?
ಕೆಜೆ ಜಾರ್ಜ್: ಇದು ನಮ್ಮ ಪಕ್ಷದ ಕನಸಿನ ಯೋಜನೆ. ಈ ಐಡಿಯಾವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರದ್ದು. ಈ ಯೋಜನೆ ಜಾರಿಗೆಗೆ ಸವಾಲು ಇರಲಿಲ್ಲ. ಜನ ಬೆಂಬಲದಿಂದ ನಮಗೆ ಕಷ್ಟವಾಗಲಿಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಹಕಾರದಿಂದ ಸಾಧ್ಯವಾಯಿತು. ಯೋಜನೆ ಜಾರಿಗೆ ತರಲು ಸಾಕಷ್ಟು ಚರ್ಚೆ ತಂದರು. ಕರ್ನಾಟಕದಲ್ಲಿ ಗರಿಷ್ಠ 53 ಯುನಿಟ್ ಬಳಕೆ ಆಗುತ್ತದೆ. 10 ಯುನಿಟ್ ಹೆಚ್ಚಿಗೆ ಕೊಡೋಣ ಅಂತ ಹೇಳಿದ್ದು, ಮುಖ್ಯಮಂತ್ರಿಗಳು. ಈ ಯೋಜನೆ ಜಾರಿ ಮಾಡುವಾಗ ಸಾಕಷ್ಟು ಸವಾಲು ಆಗಿತ್ತು.
ಆಪರೇಷನ್ ಹಸ್ತದ ಬಗ್ಗೆ ಏನಂತಿರಿ?
ಡಿಕೆ ಶಿವಕುಮಾರ್: ನಮ್ಮ ಪಕ್ಷಕ್ಕೆ ಬರುವವರ ದೊಡ್ಡ ಪಟ್ಟಿ ಇದೆ. ಮುಂದಿನ ದಿನಗಳಲ್ಲಿ ಇನ್ನ ಅನೇಕರು ಬರುತ್ತಾರೆ. ಅವರು ಬಯಸಿ ಬರುತ್ತಿದ್ದಾರೆ. ಜೆಡಿಎಸ್-ಬಿಜೆಪಿ ಮೈತ್ರಿ ಬಗ್ಗೆ ಜನರು ತೀರ್ಮಾನ ಮಾಡುತ್ತಾರೆ. ಲೋಕಸಭಾ ಚುನಾವಣೆ ಎಷ್ಟು ಸ್ಥಾನ ಗೆಲ್ಲುತ್ತೇವೆ ಅಂತ ಮುಹೂರ್ತ ನೋಡಿ ಹೇಳುತ್ತೇನೆ.
ಡಿಕೆ ಶಿವಕುಮಾರ್: ಟ್ರಾಫಿಕ್ ಸಮಸ್ಯೆಗೆ ಪೆರಿಫೆರಲ್ ರಿಂಗ್ ರಸ್ತೆ ಪರಿಹಾರವಾಗಲಿದೆ. ಫ್ಲೈಓವರ್, ಸುರಂಗ ರಸ್ತೆ ಮಾಡಿದರೆ ಟ್ರಾಫಿಕ್ ಸಮಸ್ಯೆ ಬಗೆಹರಿಯುತ್ತೆ. ಬೆಂಗಳೂರಿನ ಪ್ರತಿ ವಾರ್ಡ್ಗೆ ಯುವ ಐಎಎಸ್ ಅಧಿಕಾರಿಗಳ ನೇಮಕ ಮಾಡುತ್ತೇವೆ. ಬೆಂಗಳೂರಿಗರ ಆಸ್ತಿ ಮೌಲ್ಯದ ಬಗ್ಗೆ ಇ-ಸ್ವತ್ತು ಮಾಡಿಸುತ್ತೇವೆ. ಪ್ರತಿಯೊಬ್ಬರ ಮನೆ ಬಾಗಿಲಿಗೆ ಇ-ಸ್ವತ್ತು ದಾಖಲೆ ತಲುಪಿಸುತ್ತೇವೆ. ಸರ್ಕಾರಕ್ಕೆ ತೆರಿಗೆ ಕಟ್ಟುವವರಿಗೆ ನಾವು ಸೌಲಭ್ಯ ಕಲ್ಪಿಸಬೇಕಾಗಿದೆ. ಆಸ್ತಿ ಮೌಲ್ಯಮಾಪನ ಮಾಡಿಸಿದರೆ ತೆರಿಗೆ ವಂಚಕರು ಗೊತ್ತಾಗುತ್ತೆ. ಎತ್ತಿನಹೊಳೆ ಯೋಜನೆ ಮೂಲಕ ತಿಪ್ಪಗೊಂಡನಹಳ್ಳಿಗೆ ನೀರು ತರುತ್ತೇವೆ. ತಿಪ್ಪಗೊಂಡನಹಳ್ಳಿ ತಲುಪಿದ ನಂತರ ಮುಂದಿನ ಯೋಜನೆಗೆ ನಿರ್ಧಾರ ಎಂದರು.
ಡಿಕೆ ಶಿವಕುಮಾರ್: ಕಸ ವಿಲೇವಾರಿಗೆ ಶಾಶ್ವತ ಮುಕ್ತಿ ಕೊಡಲು ಯೋಜನೆ ರೂಪಿಸುತ್ತಿದ್ದೇನೆ. ಈ ಸಂಬಂಧ ನಾನು ಹೈದರಾಬಾದ್ ಹೋಗುತ್ತೀದ್ದೇನೆ. ಮುಂದಿನ ದಿನಗಳಲ್ಲಿ ಅನುಷ್ಠಾನಗೊಳಿಸುತ್ತೇವೆ ಎಂದರು.
ಟ್ರಾಫಿಕ್ನಿಂದ ವರ್ಷಕ್ಕೆ 20 ಸಾವಿರ ಕೋಟಿ ನಷ್ಟವಾಗುತ್ತಿದೆ. ಇದಕ್ಕೆ ಪರಿಹಾರ?
ಡಿಕೆ ಶಿವಕುಮಾರ್: ನೈಸ್ ರಸ್ತೆ ಆಗಬಾರದೆಂದು ತಡೆದಿದ್ದಾರೆ. ನಿಮ್ಮ ಸ್ವಾರ್ಥ ರಾಜಕಾರಣಕ್ಕಾಗಿ ತಡೆದಿದ್ದಾರೆ. ರಿಂಗ್ ರೋಡ್ ತರಲು 26 ಸಾವಿರ ಕೋಟಿ ರೂ. ಬೇಕು. ಟ್ರಾಫಿಕ್ ನಿವಾರಣೆಗೆ ಹಲವು ಯೋಜನೆಗಳನ್ನು ರೂಪಿಸಿದ್ದೇನೆ. ಜಾರಿಗೆ ತರುತ್ತೇನೆ.
ಬೆಂಗಳೂರು ಕಟ್ಟುವ ಕಾರ್ಯ ಮುಂದುವರೆಯುತ್ತಿದೆಯಾ?
ಡಿಕೆ ಶಿವಕುಮಾರ್: ಬದಲಾವಣೆ ಮಾಡಲು ಬೆಂಗಳೂರು ನಗರಾಭಿವೃದ್ಧಿ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಬೆಂಗಳೂರನ್ನು ಪ್ಲಾನ್ ಮಾಡಿ ಆಗಿ ಕಟ್ಟಿಲ್ಲ. ಒಂದೇ ದಿನದಲ್ಲಿ ಬೆಂಗಳೂರು ಕಟ್ಟಲು ಆಗಲ್ಲ. 70 ಸಾವಿರ ಜನರು ಅಭಿಪ್ರಾಯ ನೀಡಿದ್ದಾರೆ. 1. ನಗರದಲ್ಲಿರುವ ಕಸದ ಸಮಸ್ಯೆ ನಿವಾರಣೆ ಮಾಡಬೇಕು. 2. ಟ್ರಾಫಿಕ್ ಮುಕ್ತವಾಗಿಸಲು ಯೋಜನೆ ರೂಪಿಸುತ್ತಿದ್ದೇವೆ 3. ತೆರೆಗೆದಾರರಿಗೆ ಉತ್ತಮ ಮೂಲಭೂತ ಸೌಕರ್ಯ ನೀಡಬೇಕು. 4. ಹೊರಗಡೆಯಿಂದ ಬರುವ ಜನರನ್ನು ತಡೆಯಬೇಕು. ಈ ಮೂಲಕ ಬೆಂಗಳೂರಿನ ಒತ್ತಡ ತಡೆಯಬೇಕು.
ಜಾಗತಿಕ ನಗರ ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಹೇಗೆ ಮಾಡುತ್ತೀರಿ?
ಡಿಕೆ ಶಿವಕುಮಾರ್: ಬೆಂಗಳೂರು ದೇಶದ ಆಸ್ತಿ. ವಿದೇಶಿಗರು ಬೆಂಗಳೂರ ಮುಖಾಂತರ ಭಾರತವನ್ನು ನೋಡುತ್ತಾರೆ. ಅಟಲ್ ಬಿಹಾರ್ ವಾಜಪೇಯಿ ಅವರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಡಿಗಲ್ಲು ಹಾಕಿದರು. ವಿದೇಶ ನಾಯಕರು ಮೊದಲು ಬೆಂಗಳೂರಿಗೆ ಬರುತ್ತಿದ್ದಾರೆ. ಜಗತ್ತು ಬೆಂಗಳೂರನ್ನು ನೋಡುತ್ತಿದ್ದಾರೆ. ಬೆಂಗಳೂರನ್ನು ಅಭಿವೃದ್ಧಿ ಮಾಡುವುದು ನಮ್ಮ ಕರ್ತವ್ಯ.
ಆಪರೇಷನ್ ಹಸ್ತ ಬೇಕಾ?
ಸಿಎಂ ಸಿದ್ದರಾಮಯ್ಯ: ಬೇರೆ ಪಕ್ಷದ ನಾಯಕರನ್ನು ಸೆಳೆಯಲು ಆಪರೇಷನ್ ಹಸ್ತ ವಿಚಾರವಾಗಿ ಮಾತನಾಡಿ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಬಂದರೂ ಸ್ವಾಗತ ಎಂದರು.
ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ವಿಚಾರವಾಗಿ
ಸಿಎಂ ಸಿದ್ದರಾಮಯ್ಯ: ನಮ್ಮಲ್ಲಿ ನೀರು ಕಡಿಮೆ ಇದೆ. ನಮಗೆ ಕುಡಿಯುವ ನೀರು, ಕೃಷಿ ಮತ್ತು ಕೈಗಾರಿಕೆಗೆ 106 ಟಿಎಂಸಿ ನೀರು ಬೇಕು. ಆದರೆ ನಮ್ಮಲ್ಲಿ 53 ಟಿಎಂಸಿ ನೀರು ಮಾತ್ರ ಇದೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮತ್ತು ಪ್ರಾಧಿಕಾರಕ್ಕೆ ಮನವರಿಕೆ ಮಾಡಲು ಜಲಸಂಪನ್ಮೂಲ ಸಚಿವರು ದೆಹಲಿಗೆ ಹೋಗಿದ್ದಾರೆ ಎಂದರು
ಐದು ಗ್ಯಾರೆಂಟಿ ಜಾರಿಗೆಗೆ ಅಧಿಕಾರಿಗಳಿಗೆ ನೀಡುವ ಟಾರ್ಗೆಟ್, ಗುರಿ ಮೀರಿದೆಯಾ?
ಸಿಎಂ ಸಿದ್ದರಾಮಯ್ಯ: ನಾವು ಗುರಿ ಮೀರಿದ ಟಾರ್ಗೆಟ್ ನೀಡಿಲ್ಲ. ಕಮರ್ಷಿಯಲ್ ಟ್ಯಾಕ್ಸ್ ಶೇ 20 ರಷ್ಟು ಆಗಿದೆ. ಇದನ್ನು ಶೇ 24 ರಷ್ಟು ಮಾಡುತ್ತೇವೆ.
ಲೋಕಸಭಾ ಚುನಾವಣೆಯಲ್ಲಿ ಎಷ್ಟು ಸ್ಥಾನದಲ್ಲಿ ಗೆಲ್ಲುತ್ತೀರಿ?
ಸಿಎಂ ಸಿದ್ದರಾಮಯ್ಯ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನದಲ್ಲಿ ಗೆಲ್ಲುತ್ತೇವೆ.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಬಗ್ಗೆ ಏನಂತಿರಿ?
ಸಿಎಂ ಸಿದ್ದರಾಮಯ್ಯ: ಅವರಿಗೆ ಅನಾಥಪ್ರಜ್ಞೆ ಕಾಡುತ್ತಿದೆ. ಇವರನ್ನು ಸೋಲಿಸಿ ನಾವು ಗೆದ್ದೇ ಗೆಲ್ಲುತ್ತೇವೆ.
ಈ ರೀತಿ ಉಚಿತ ಯೋಜನೆಗಳನ್ನು ಎಲ್ಲ ರಾಜ್ಯದಲ್ಲಿ ಅನುಷ್ಠಾನಗೊಳಿಸಲು ಆಗತ್ತಾ?
ಸಿಎಂ ಸಿದ್ದರಾಮಯ್ಯ: ಅನುಷ್ಠಾನಗೊಳಿಸಲು ಆಗುತ್ತೆ. ಆದರೆ ಆರ್ಥಿಕ ಬದ್ಧತೆ ಇರಬೇಕು. ಆಯವ್ಯಯ ಕಟ್ಟುನಿಟ್ಟಾಗಿ ಇದ್ದರೇ ಅನುಷ್ಠಾನಗೊಳಿಸಲು ಸಾಧ್ಯ ಎಂದು ಹೇಳಿದರು.
ಐದು ಗ್ಯಾರೆಂಟಿಗಳು ಅಗತ್ಯ ಇಲ್ಲದವರಿಗೂ ಲಭಿಸುತ್ತಿದೆಯಾ?
ಸಿಎಂ ಸಿದ್ದರಾಮಯ್ಯ: ಐದು ಯೋಜನೆಗಳು ಅಗತ್ಯವಿದ್ದರಿಗೆ ಮಾತ್ರ ಲಭಿಸುತ್ತಿದೆ. ಶಕ್ತಿ ಯೋಜನೆಯಿಂದ ಮಧ್ಯಮ ವರ್ಗದ ಹೆಣ್ಣು ಮಕ್ಕಳಿಗೆ ಅನುಕೂಲವಾಗಿದೆ. ಇದರಿಂದ ಆರ್ಥಿಕ ಚಟುವಟಿಗೆ ಹೆಚ್ಚಾಗಿದೆ. ವ್ಯಾಪಾರ ಜಾಸ್ತಿ ಆಗಿದೆ. ಮಹಿಳಾ ಕಾರ್ಮಿಕರಿಗೆ ಹಣ ಉಳಿಯುತ್ತದೆ. ಹೀಗಾಗಿ ಮತಕ್ಕಾಗಿ, ಖುಷಿ ಪಡಿಸಲು ಮಾಡಿದಂತಹ ಕಾರ್ಯಕ್ರಮಗಳಲ್ಲ. ಆರ್ಥಿಕ, ಸಾಮಾಜಿಕವಾಗಿ ಶಕ್ತಿ ತುಂಬಲು ಈ ಕಾರ್ಯಕ್ರಮ ಮಾಡಲಾಗಿದೆ ಎಂದರು.
ಐದು ಗ್ಯಾರೆಂಟಿಗಳನ್ನು ಜಾರಿಗೆ ತರುತ್ತಿದ್ದೀರಿ, ರಾಜ್ಯದ ಹಣಕಾಸನ್ನು ಹೇಗೆ ನಿಭಾಯಿಸುತ್ತೀರಿ?
ಸಿಎಂ ಸಿದ್ದರಾಮಯ್ಯ: ನಮ್ಮ ಸರ್ಕಾರದ ಬಜೆಟ್ 3.20 ಲಕ್ಷ ಕೋಟಿ ರೂ. ಹೀಗಾಗಿ ಆರ್ಥಿಕ ಹಿಡಿತ ನಮ್ಮಲ್ಲಿದೆ. ಯಾವುದೇ ತೊಂದರೆ ಆಗುವುದಿಲ್ಲ.
ಮುಂದಿನ 5 ವರ್ಷವೂ ಇವು ಜಾರಿಗೆ ಇರುತ್ತವಾ?
ಸಿಎಂ ಸಿದ್ದರಾಮಯ್ಯ: ನಮಗೆ ಐದು ವರ್ಷ ಜನ ಅವಕಾಶ ಕೊಟ್ಟಿದ್ದಾರೆ. ಐದೂ ವರ್ಷವೂ ಇವು ಜಾರಿಗೆಯಲ್ಲಿರುತ್ತವೆ ಎಂದು ಹೇಳಿದರು.
ಬೆಂಗಳೂರು: ಗ್ಯಾರೆಂಟಿ ಜಾರಿ ಮಾಡಿದರೇ ರಾಜ್ಯ ದಿವಾಳಿಯಾಗುತ್ತದೆ ಎಂದು ಕುಹಕವಾಡಿದ್ದರು. ಯಾವುದೇ ಕಾರಣಕ್ಕೂ ರಾಜ್ಯ ದಿವಾಳಿಯಾಗುವುದಿಲ್ಲ. ಕರ್ನಾಟಕವನ್ನು ಅಭಿವೃದ್ಧಿ ರಾಜ್ಯ ಮಾಡುತ್ತೇವೆ. ಇಡೀ ದೇಶದಲ್ಲಿ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುತ್ತೇವೆ.
ಬೆಂಗಳೂರು: ನಾನು ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 165 ಭರವಸೆಗಳಲ್ಲಿ 158 ಭರವಸೆ ಈಡೇರಿಸಿದ್ದೇನೆ. ಈ ಬಾರಿಯೂ 5 ಗ್ಯಾರಂಟಿಗಳಲ್ಲಿ 4 ಗ್ಯಾರಂಟಿ ಜಾರಿ ಮಾಡಿದ್ದೇವೆ. ಮುಂದಿನ ವರ್ಷ ಜನವರಿಯಲ್ಲಿ 5ನೇ ಗ್ಯಾರಂಟಿ ಜಾರಿ ಮಾಡುತ್ತೇವೆ. ಸಾಮಾಜಿಕ, ಆರ್ಥಿಕವಾಗಿ ದುರ್ಬಲ ಇದ್ದವರಿಗೆ ಶಕ್ತಿ ತುಂಬಬೇಕಿದೆ. ಗ್ಯಾರಂಟಿ ಜಾರಿ ಮಾಡಲು ಆಗಲ್ಲ ಎಂದು ಅಪಹಾಸ್ಯ ಮಾಡಿದ್ದರು. ರಾಜ್ಯ ದಿವಾಳಿ ಆಗುತ್ತೆ ಎಂದು ಅಪಹಾಸ್ಯ ಮಾಡಿದ್ದರು ಎಂದರು.
ಬೆಂಗಳೂರು: ಜುಲೈ 1ರಂದು ಗೃಹಜ್ಯೋತಿ ಯೋಜನೆ ಜಾರಿ ಮಾಡಿದ್ದೇವೆ. ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ವರೆಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಆ.30ರಂದು ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಿದ್ದೇವೆ. ಆ.30ರಂದು ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಿದ್ದೇವೆ. ದೇಶದಲ್ಲಿ ಇಷ್ಟು ದೊಡ್ಡ ಯೋಜನೆ ಯಾವ ರಾಜ್ಯವೂ ಜಾರಿ ಮಾಡಿಲ್ಲ. ಯುವನಿಧಿ ಗ್ಯಾರೆಂಟಿ ಜನವರಿಗೆ ಜಾರಿಗೆ ಬರುತ್ತದೆ ಎಂದು ಹೇಳಿದರು.
ಬೆಂಗಳೂರು: ಅಧಿಕಾರ ಸ್ವೀಕರಿಸಿದ ದಿನವೇ ಐದು ಗ್ಯಾರಂಟಿಗಳನ್ನು ಅನುಷ್ಠಾನ ತರಲು ತೀರ್ಮಾನ ಮಾಡಿದೆವು. ಜೂನ್ 11ರಂದು ಶಕ್ತಿ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ಉಚಿತವಾಗಿ ಪ್ರತಿದಿನ 50 ಲಕ್ಷ ಮಹಿಳೆಯರು ಸಂಚರಿಸುತ್ತಿದ್ದಾರೆ. ಇನ್ನು ಹೆಚ್ಚುವರಿ ಅಕ್ಕಿ ಪೂರೈಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇವು. ಕೇಂದ್ರ ಸರ್ಕಾರದ ಬಳಿಕ ನಾವೇನು ಉಚಿತವಾಗಿ ಅಕ್ಕಿ ಕೇಳಿರಲಿಲ್ಲ. ಆದರೂ ಸಹ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಪೂರೈಕೆ ಮಾಡಲಿಲ್ಲ. ಆಹಾರ ಸಚಿವ ಮುನಿಯಪ್ಪ ಅವರು ಹೋಗಿ ಮನವಿ ಮಾಡಿದರೂ ಕೊಡಲಿಲ್ಲ. ಹೀಗಾಗಿ ಹೆಚ್ಚುವರಿ 5 ಕೆಜಿ ಅಕ್ಕಿ ಬದಲು 170 ರೂ. ನೀಡುತ್ತಿದ್ದೇವೆ ಎಂದು ತಿಳಿಸಿದರು.
ಬೆಂಗಳೂರು: ರಾಜಕೀಯ ಪಕ್ಷಗಳು ಸಾಮಾಜಿಕ, ಆರ್ಥಿಕ ಎಲ್ಲ ಕ್ಷೇತ್ರದಲ್ಲೂ ಅಭಿವೃದ್ಧಿ ಮಾಡುತ್ತೇವೆ ಎಂದು ಪ್ರಣಾಳಿಕೆ ಮೂಲಕ ಜನರಿಗೆ ಭರವಸೆ ನೀಡುತ್ತವೆ. ಚುನಾವಣೆ ವೇಳೆ ನಾವು ಸಹ ಪ್ರಣಾಳಿಕೆಯನ್ನು ಜನರ ಮುಂದೆ ಇಟ್ಟಿದ್ದೇವು. 2023ರ ವಿಧಾನಸಭೆ ಚುನಾವಣೆಯಲ್ಲಿ ಜನ ನಮಗೆ ಅಧಿಕಾರ ನೀಡಿದ್ದಾರೆ. ಸಮಾಜದಲ್ಲಿ ಶಾಂತಿ ವ್ಯವಸ್ಥೆಯನ್ನು ತರುತ್ತೇವೆ. ರಾಜ್ಯದ ಜನರಿಗೆ ಕೊಟ್ಟ ಈಡೇರಿಸುತ್ತೇವೆ ಎಂದು ಮಾತು ಕೊಟ್ಟಿದ್ದೇವೆ. ಇದನ್ನು ಈಡೇರಿಸುತ್ತೇವೆ ಎಂದು ಹೇಳಿದರು.
ಬೆಂಗಳೂರು: ಟಿವಿ9‘ಕನಸಿನ ಕರುನಾಡು' ಶೃಂಗಸಭೆ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿ, ಬಳಿಕ ಮಾತನಾಡಿದ ಅವರು ಇಂದು ವಿಶ್ವ ಪ್ರಜಾಪ್ರಭುತ್ವ ದಿನ. ದೇಶದ ಜನತೆಗೆ ವಿಶ್ವ ಪ್ರಜಾಪ್ರಭುತ್ವದ ದಿನದ ಶುಭಾಶಯಗಳು ಎಂದು ಶುಭಕೋರಿದರು.
ಬೆಂಗಳೂರು: ಟವಿ9 ಕನ್ನಡ ಕನಸಿನ ಕರುನಾಡು ಕಾರ್ಯಕ್ರಮಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಟಿವಿ9 ಸಿಇಒ ಬರುಣ್ ದಾಸ್ ಅವರು ಸ್ವಾಗತಿಸಿದರು. ಬಳಿಕ ಮಾತನಾಡಿದ ಅವರು ಕರ್ನಾಟಕ ಅಭಿವೃದ್ಧಿಗೆ ಹೆಸರುವಾಸಿಯಾಗಿದೆ. ಕರ್ನಾಟಕದ ಭವಿಷ್ಯ ಪೀಳಿಗೆಗೆ ಉತ್ತಮ ವೇದಿಕೆಯಾಗಿದೆ ಎಂದರು.
ಬೆಂಗಳೂರು: ಸರ್ಕಾರ 100 ದಿನಗಳ ಪೂರೈಸಿದ ಹಿನ್ನೆಲೆಯಲ್ಲಿ ಇಂದು (ಸೆ.15) ಟವಿ9 ಕನ್ನಡ “ಕನಸಿನ ಕರುನಾಡು” ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದರು.
ಬೆಂಗಳೂರು: ಟಿವಿ9 ಕನಸಿನ ಕರುನಾಡು ಕಾರ್ಯಕ್ರಮದಲ್ಲಿ ಸಚಿವರಾದ ಕೆಜೆ ಜಾರ್ಜ್, ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಮಧು ಬಂಗಾರಪ್ಪ, ಲಕ್ಷ್ಮೀ ಹೆಬ್ಬಾಳ್ಕರ್ ಭಾಗಿಯಾಗಲಿದ್ದಾರೆ.
ಬೆಂಗಳೂರು: ಟಿವಿ9 ಕನಸಿನ ಕರುನಾಡು ಕಾರ್ಯಕ್ರಮದಲ್ಲಿ ಬಿಜೆಪಿ ಶಾಸಕ ಅಶ್ವತ್ ನಾರಾಯಣ ಕೂಡ ಭಾಗಿಯಾಗಲಿದ್ದಾರೆ.
ಬೆಂಗಳೂರು: ಸರ್ಕಾರ 100 ದಿನಗಳ ಪೂರೈಸಿದ ಹಿನ್ನೆಲೆಯಲ್ಲಿ ಇಂದು (ಸೆ.15) ಟವಿ9 ಕನ್ನಡ “ಕನಸಿನ ಕರುನಾಡು” ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗಿಯಾಗುತ್ತಾರೆ.
ಬೆಂಗಳೂರು: ಸರ್ಕಾರ 100 ದಿನಗಳ ಪೂರೈಸಿದ ಹಿನ್ನೆಲೆಯಲ್ಲಿ ಇಂದು (ಸೆ.15) ಟವಿ9 ಕನ್ನಡ “ಕನಸಿನ ಕರುನಾಡು” ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್, ಬಿಜೆಪಿ ನಾಯಕರು ಭಾಗಿಯಾಗುತ್ತಾರೆ.
ಬೆಂಗಳೂರು: ಸರ್ಕಾರ 100 ದಿನಗಳ ಪೂರೈಸಿದ ಹಿನ್ನೆಲೆಯಲ್ಲಿ ಇಂದು (ಸೆ.15) ಟವಿ9 ಕನ್ನಡ "ಕನಸಿನ ಕರುನಾಡು" ವಿಶೇಷ ಕಾರ್ಯಕ್ರಮ ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಮಹಾನಾಯಕರು, ಸಿನಿಮಾ ತಾರೆಯರು ಭಾಗಿಯಾಗಲಿದ್ದಾರೆ. ಶುಕ್ರವಾರ ಇಡೀ ದಿನ ಈ ಕಾರ್ಯಕ್ರಮ ಟಿವಿ9ನಲ್ಲಿ ನೇರ ಪ್ರಸಾರವಿರಲಿದೆ.
Published On - 8:41 am, Fri, 15 September 23