Lakshmi Hebbalkar: ಗೃಹಲಕ್ಷ್ಮಿ ಯೋಜನೆಯರಿಂದ ಬಡ ಮಹಿಳೆಯರಿಗೆ ಹೇಗೆ ಲಾಭ? ವಿವರ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್

Lakshmi Hebbalkar ಕನಸಿನ ಕರುನಾಡು ಟಿವಿ9 ಸಮ್ಮಿಟ್​ 2023: ಹೈಕಮಾಂಡ್ ಕೊಟ್ಟ ಖಾತೆಯನ್ನು ನಿಭಾಯಿಸುವ ಆಸೆ ವ್ಯಕ್ತಪಡಿಸಿದ್ದೆ. ಗೃಹಲಕ್ಷ್ಮಿ ಯೋಜನೆ ಜಾರಿಗೆ ಸಂಪುಟ ಸಚಿವರು ಸಹಾಯ ಮಾಡಿದ್ರು. ಗೃಹಲಕ್ಷ್ಮಿ ತಾಂತ್ರಿಕ ಸಮಸ್ಯೆ ಬಗೆಹರಿಸಲು ಈಗಾಗಲೇ ಸೂಚಿಸಿದ್ದೇವೆ. 1.14 ಕೋಟಿ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿದ್ದಾರೆ ಎಂದು ಹೆಬ್ಬಾಳ್ಕರ್ ಹೇಳಿದರು.

Lakshmi Hebbalkar: ಗೃಹಲಕ್ಷ್ಮಿ ಯೋಜನೆಯರಿಂದ ಬಡ ಮಹಿಳೆಯರಿಗೆ ಹೇಗೆ ಲಾಭ? ವಿವರ ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್
ಲೆಕ್ಷ್ಮೀ ಹೆಬ್ಬಾಳ್ಕರ್
Follow us
|

Updated on:Sep 15, 2023 | 3:53 PM

ಬೆಂಗಳೂರು, ಸೆಪ್ಟೆಂಬರ್ 15: ಅಸ್ತಿತ್ವದಲ್ಲಿರುವ ಯಾವುದೇ ಯೋಜನೆಗಳನ್ನು ಕಡಿತಗೊಳಿಸದೆ ಉಚಿತ ಗ್ಯಾರಂಟಿ ಭರವಸೆಗಳನ್ನು ಈಡೇರಿಸುತ್ತಿದ್ದೇವೆ. ಇಡೀ ದೇಶದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಫೈನಾನ್ಸ್​ ಎಕ್ಸ್​​​ಪರ್ಟ್ ಎನ್ನುತ್ತಾರೆ. ಗ್ಯಾರಂಟಿ ಯೋಜನೆಯನ್ನು ಹೇಗೆ ನಿಭಾಯಿಸಬೇಕು ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತು ಎಂದು ಮಹಿಳಾ ಮತ್ತು ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ (Lakshmi Hebbalkar) ಹೇಳಿದರು. ಕಾಂಗ್ರೆಸ್​ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದು 100 ದಿನಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಟಿವಿ9 ಕನ್ನಡ ಬೆಂಗಳೂರಿನ ಲಲಿತ್​ ಅಶೋಕ್​​​ ಹೋಟೆಲ್​ನಲ್ಲಿ ಆಯೋಜಿಸಿರುವ ಕನಸಿನ ಕರುನಾಡು (TV9 Karnataka Summit 2023) ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಹೈಕಮಾಂಡ್ ಕೊಟ್ಟ ಖಾತೆಯನ್ನು ನಿಭಾಯಿಸುವ ಆಸೆ ವ್ಯಕ್ತಪಡಿಸಿದ್ದೆ. ಗೃಹಲಕ್ಷ್ಮಿ ಯೋಜನೆ ಜಾರಿಗೆ ಸಂಪುಟ ಸಚಿವರು ಸಹಾಯ ಮಾಡಿದ್ರು. ಗೃಹಲಕ್ಷ್ಮಿ ತಾಂತ್ರಿಕ ಸಮಸ್ಯೆ ಬಗೆಹರಿಸಲು ಈಗಾಗಲೇ ಸೂಚಿಸಿದ್ದೇವೆ. 1.14 ಕೋಟಿ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿದ್ದಾರೆ. 8ರಿಂದ 9 ಲಕ್ಷ ಫಲಾನುಭವಿಗಳಿಗೆ ಇನ್ನೂ ಹಣ ಸಿಕ್ಕಿಲ್ಲ. ಯಾಕೆ ಹಣ ಬಂದಿಲ್ಲವೆಂದು ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು. ಅಂಗನವಾಡಿ & ಆಶಾ ಕಾರ್ಯಕರ್ತೆಯರು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದರು.

ವಿಪಕ್ಷಗಳು 5 ಗ್ಯಾರಂಟಿಗಳನ್ನು ಜಾರಿ ಮಾಡಲು ಆಗಲ್ಲ ಎಂದು ಆರೋಪಿಸಿದ್ದವು. ಆದ್ರೆ ಮೊದಲ ಸಂಪುಟದಲ್ಲೇ 5 ಗ್ಯಾರಂಟಿಗಳಿಗೆ ಒಪ್ಪಿಗೆ ನೀಡಲಾಯ್ತು. ಈಗಾಗಲೇ ನಾವು 4 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಶೀಘ್ರದಲ್ಲೇ 5ನೇ ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡುತ್ತೇವೆ. ವಿರೋಧ ಪಕ್ಷಗಳು ಟೀಕೆ ಮಾಡುತ್ತಲೇ ಇರಲಿ ಎಂದು ಅವರು ತಿಳಿಸಿದರು. ವಿಪಕ್ಷಗಳು ಟೀಕೆ ಮಾಡುತ್ತಿರಲಿ. ಮಾತಾಡುವುದು ಜನ್ಮಸಿದ್ಧ ಹಕ್ಕು. ಅವರು ಮಾತನಾಡುತ್ತಾ, ಟೀಕೆ ಮಾಡುತ್ತಾ ಇರಲಿ. ನಾವು ನಮ್ಮ ಕೆಲಸ ಮಾಡಿಕೊಂಡು ಮುಂದುವರಿಯುತ್ತೇವೆ ಎಂದು ಹೆಬ್ಬಾಳ್ಕರ್ ಹೇಳಿದರು. ನೂರು ದಿನದ ಆಡಳಿತಲ್ಲಿ ಕೊಟ್ಟ ಭಾಷೆಯನ್ನು ಉಳಿಸಿಕೊಂಡು ಸಾಗುತ್ತಿದ್ದೇವೆ ಎಂದು ಅವರು ಹೇಳಿದರು.

ಇದನ್ನೂ ಓದಿ: Priyank Kharge: ಕರ್ನಾಟಕ ನವೋದ್ಯಮದ, ಆವಿಷ್ಕಾರದ ಕಾಶಿ; ಸ್ಟಾರ್ಟಪ್​​​ನಲ್ಲಿಯೂ ಬೆಂಗಳೂರು ಮುಂದೆ ಎಂದ ಪ್ರಿಯಾಂಖ್ ಖರ್ಗೆ

ಗೃಹಲಕ್ಷ್ಮಿ ಯೋಜನೆಯ ಸಕಾರಾತ್ಮಕ ಅಂಶಗಳ ಕುರಿತು ಉಲ್ಲೇಖಿಸಿದ ಹೆಬ್ಬಾಳ್ಕರ್ ಅವರು, ಇದರಿಂದ ಬಡ ಮಹಿಳೆಯರ ಜೀವನಕ್ಕೆ ಅನುಕೂಲವಾಗುತ್ತಿದೆ. ಮಕ್ಕಳ ಶಿಕ್ಷಣಕ್ಕೂ ನೆರವಾಗುತ್ತಿದೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:46 pm, Fri, 15 September 23