ಮುಂದಿನ ಉಡುಪಿ-ಚಿಕ್ಕಮಗಳೂರು ಲೋಕಸಭೆ ಅಭ್ಯರ್ಥಿ ನಾನೇ ಎಂದು ಪುಕಾರು ಎಬ್ಬಿಸಿದ್ದ ಚೈತ್ರಾ ಕುಂದಾಪುರ
ಉದ್ಯಮಿಗೆ ವಂಚನೆ ಎಸಗಿದ ಆರೋಪದಡಿ ಬಂಧನಕ್ಕೊಳಗಾದ ನಂತರ ಚೈತ್ರಾ ಕುಂದಾಪುರ, ಪ್ರಭಾವಿಗಳನ್ನು ವಂಚನೆ ಜಾಲಕ್ಕೆ ಬೀಳಿಸಲು ರಾಜಕೀಯ ನವರಂಗೀಯ ಆಟಗಳನ್ನು ಆಡಿದ್ದಾರೆ. ಕೇಂದ್ರ ವಿತ್ತ ಸಚಿವೆ ನೀಡಿದ ಡೇರಿಂಗ್ ಗರ್ಲ್ ಎಂಬ ಪಟ್ಟವನ್ನೇ ದುರುಪಯೋಗ ಮಾಡಿ ಖ್ಯಾತಿ ಗಳಿಸಿದ್ದ ಚೈತ್ರಾ, ಮುಂದಿನ ಉಡುಪಿ-ಚಿಕ್ಕಮಗಳೂರು ಲೋಕಸಭೆ ಅಭ್ಯರ್ಥಿ ನಾನೇ ಎಂದು ಪುಕಾರು ಎಬ್ಬಿಸಿದ್ದರು ಎಂಬ ಮಾಹಿತಿ ತಿಳಿದುಬಂದಿದೆ.
ಉಡುಪಿ, ಸೆ.15: ಉದ್ಯಮಿಗೆ ವಂಚನೆ ಎಸಗಿದ ಆರೋಪದಡಿ ಬಂಧನಕ್ಕೊಳಗಾದ ನಂತರ ಚೈತ್ರಾ ಕುಂದಾಪುರ (Chaitra Kundapura) ಅವರ ಒಂದೊಂದೇ ಅಚ್ಚರಿಯ ವಿಚಾರ ಬೆಳಕಿಗೆ ಬರುತ್ತಿದೆ. ಪ್ರಭಾವಿಗಳನ್ನು ವಂಚನೆ ಜಾಲಕ್ಕೆ ಬೀಳಿಸಲು ರಾಜಕೀಯ ನವರಂಗೀಯ ಆಟಗಳನ್ನು ಆಡಿದ್ದಾರೆ. ಕೇಂದ್ರ ವಿತ್ತ ಸಚಿವೆ ನೀಡಿದ ಡೇರಿಂಗ್ ಗರ್ಲ್ ಎಂಬ ಪಟ್ಟವನ್ನೇ ದುರುಪಯೋಗ ಮಾಡಿ ಖ್ಯಾತಿ ಗಳಿಸಿದ್ದ ಚೈತ್ರಾ, ಮುಂದಿನ ಉಡುಪಿ-ಚಿಕ್ಕಮಗಳೂರು ಲೋಕಸಭೆ ಅಭ್ಯರ್ಥಿ ನಾನೇ ಎಂದು ಪುಕಾರು ಎಬ್ಬಿಸಿದ್ದಳು ಎಂಬ ಮಾಹಿತಿ ತಿಳಿದುಬಂದಿದೆ.
ತನಗೆ ಕೇಂದ್ರದ ಪ್ರಭಾವಿ ಸಚಿವರ ಪರಿಚಯವಿರುವುದಾಗಿ ಹೇಳಿಕೊಂಡಿದ್ದ ಚೈತ್ರಾ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮುಂದಿನ ಚುನಾವಣೆಗೆ ಟಿಕೆಟ್ ಇಲ್ಲ. ಮುಂದಿನ ಉಡುಪಿ-ಚಿಕ್ಕಮಗಳೂರು ಲೋಕಸಭೆ ಅಭ್ಯರ್ಥಿ ನಾನೇ ಎಂದು ಪುಕಾರು ಎಬ್ಬಿಸಿದ್ದರು ಎಂದು ತಿಳಿದುಬಂದಿದೆ.
ಗೋವಿಂದ ಪೂಜಾರಿಗೂ ಹೀಗೆಯೇ ನಂಬಿಸಿದ್ದ ಚೈತ್ರಾ ಮತ್ತು ಸಹಚರರು, ತನ್ನ ಬಿಲ್ಡಪ್ ಹೆಚ್ಚಿಸಿಕೊಳ್ಳಲು ಜೊತೆಗೆ ಇತರ ಯುವಕರನ್ನ ಇರಿಸಿಕೊಂಡಿದ್ದರು. ತನಗೆ ಲೋಕಸಭೆ ಟಿಕೆಟ್ ಎಂದು ಹಲವರನ್ನು ನಂಬಿಸಿದ್ದ ಚೈತ್ರಾಳ ಮಾತನ್ನು ನಂಬಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಹಣ ನೀಡಿದ್ದರು.
ಇದನ್ನೂ ಓದಿ: ಚೈತ್ರಾ ಕುಂದಾಪುರ ಖ್ಯಾತಿಗೆ ಕಾರಣವಾಗಿತ್ತು ಆ ಒಂದು ಟ್ವೀಟ್! ಇದನ್ನು ನಂಬಿ ವಂಚನೆ ಜಾಲಕ್ಕೆ ಬಿದ್ದ ಉದ್ಯಮಿ
ಕರಾವಳಿಯಲ್ಲಿ ಹಿಂದುತ್ವ ಪರ ಮಾರ್ಕೆಟಿಂಗ್ ಹೊಂದಿರದ ಚೈತ್ರಾ, ಉತ್ತರ ಕರ್ನಾಟಕ ಭಾಗದ ಹಲವೆಡೆ ಭಾರೀ ಬೇಡಿಕೆಯ ಭಾಷಣಗಾರ್ತಿಯಾಗಿದ್ದರು. ಆ ಭಾಗಗಳಲ್ಲಿ ಜನರಿಂದ ಅಕ್ಕ ಎಂದು ಕರೆಸಿಕೊಳ್ಳುತ್ತಿದ್ದರು. ಹಲವು ಹಿಂದೂ ಪರ, ಬಿಜೆಪಿ ಪರ ಸಭೆಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ್ದರು.
ಆದರೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚೈತ್ರಾ ಅವರಿಗೆ ಮಾರ್ಕೆಟಿಂಗ್ ಇರಲಿಲ್ಲ. ಇವರಿಂದ ಬಿಜೆಪಿಯ ನಾಯಕರು, ಪರಿವಾರದ ಸಂಘಟನೆಗಳು ಅಂತರ ಕಾಯ್ದುಕೊಂಡಿದ್ದರು. ಬಿಜೆಪಿ ಸರಕಾರದ ಅವಧಿಯಲ್ಲಿ 2021 ರ ಅಕ್ಟೋಬರ್ 5 ರಂದು ಸುರತ್ಕಲ್ನಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಚೈತ್ರಾ, ಕೋಮು ಪ್ರಚೋದನೆ ಹಾಗೂ ಕೋಟಿ ಚೆನ್ನಯ್ಯರಿಗೆ ಅವಮಾನ ಮಾಡಿದ ಆರೋಪ ಕೇಳಿ ಬಂದಿತ್ತು.
ಪ್ರಕರಣ ಸಂಬಂಧ ಚೈತ್ರಾ ಕುಂದಾಪುರ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಅಂದು ಬಜರಂಗದಳ ವತಿಯಿಂದ ನಡೆದಿದ್ದ ಹಿಂದೂ ಜನಜಾಗೃತಿ ಸಭೆ ನಂತರ ಚೈತ್ರಾ ಅವರು ಕರಾವಳಿಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:00 am, Fri, 15 September 23