ಟಿವಿ9 ಕನ್ನಡ ಡಿಜಿಟಲ್ ಲೈವ್ ಬ್ಲಾಗ್ 19-01-2021

sandhya thejappa
|

Updated on:Jan 20, 2021 | 8:59 AM

ಟಿವಿ9 ಕನ್ನಡ ಡಿಜಿಟಲ್ ಲೈವ್ ಬ್ಲಾಗ್ 19-01-2021
ಬಿ.ಎಸ್​.ಯಡಿಯೂರಪ್ಪ (ಸಂಗ್ರಹ ಚಿತ್ರ)

ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಸಂಗತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ. ಸುದ್ದಿಯ ಸಂಪೂರ್ಣ ವಿವರ ವೆಬ್​ಸೈಟ್​ನ ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ. ಓದಲು ಮರೆಯದಿರಿ.

LIVE NEWS & UPDATES

The liveblog has ended.
  • 19 Jan 2021 07:36 PM (IST)

    ಇಂಗ್ಲೆಂಡ್​ ವಿರುದ್ಧದ ಮೊದಲ 2 ಟೆಸ್ಟ್​ಗೆ ಆಡಲಿರುವ ಟೀಂ ಇಂಡಿಯಾ ಆಟಗಾರರ ಹೆಸರು ಪ್ರಕಟ

    ಇಂಗ್ಲೆಂಡ್​ ವಿರುದ್ಧದ ಮೊದಲ 2 ಟೆಸ್ಟ್​ನಲ್ಲಿ ಆಡಲಿರುವ ಟೀಂ ಇಂಡಿಯಾ ಆಟಗಾರರ ಹೆಸರು ಪ್ರಕಟವಾಗಿದೆ. ವಿರಾಟ್​ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಇಶಾಂತ್ ಶರ್ಮಾ ತಂಡಕ್ಕೆ ಮರಳಿದ್ದಾರೆ.

  • 19 Jan 2021 07:03 PM (IST)

    ನಾಳೆ‌ ಕಾಂಗ್ರೆಸ್ ಮತ್ತು ರೈತರಿಂದ ರಾಜಭವನ ಚಲೋ

    ಕೃಷಿ ಕಾಯ್ದೆ ವಿರೋಧಿಸಿ ನಾಳೆ ಕಾಂಗ್ರೆಸ್​ ಪಕ್ಷ ಮತ್ತು ರೈತ ಸಂಘಟನೆಗಳಿಂದ ರಾಜಭವನ ಚಲೋ ನಡೆಸಲು ನಿರ್ಧರಿಸಲಾಗಿದೆ. ಮೆರವಣಿಗೆ ಮಾಡುವವರಿಗೆ ಈಗಾಗಲೇ ಸೂಚನೆ ನೀಡಿದ್ದೇವೆ. ಕೊವಿಡ್​ 19 ಮಾರ್ಗಸೂಚಿ ಪಾಲಿಸುವಂತೆ ಸಂಘಟಕರಿಗೆ ಹೇಳಿದ್ದೇವೆ ಎಂದು ಸಂಚಾರ ವಿಭಾಗ ಜಂಟಿ‌ ಪೊಲೀಸ್ ಆಯುಕ್ತ ರವಿಕಾಂತೇಗೌಡ ಹೇಳಿದ್ದಾರೆ. ಮೆರವಣಿಗೆ ಇದ್ದರೂ ಸಂಚಾರ ಮಾರ್ಗದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

  • 19 Jan 2021 06:58 PM (IST)

    ಮಹಾಯೋಗಿ ವೇಮನ ಏರಿದ ಎತ್ತರ ಅನನ್ಯವಾದದು – ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ

    ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಆಯೋಜಿಸಿರುವ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮಕ್ಕೆ ಸಿಎಂ ಬಿ.ಎಸ್​.ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಹುಟ್ಟಿನಿಂದ ಎಲ್ಲರೂ ಸಮಾನರೆನ್ನುವವನೇ ಸರ್ವಶ್ರೇಷ್ಠನು ಎಂಬ ಉನ್ನತ ಚಿಂತನೆ ಹೊಂದಿದವರು ವೇಮನರು. ಯುವಕರಿಗೆ ವೇಮನ ಪದ್ಯದವನ್ನು ಅಧ್ಯಯನ ಮಾಡಲು, ಸಂಶೋಧನೆ ಮಾಡಲು ಅವಕಾಶ ಒದಗಿಸಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಬಿಡಿಎ ಅಧ್ಯಕ್ಷ ಎಸ್.ಆರ್‌‌.ವಿಶ್ವನಾಥ್, ಶಾಸಕ ಸತೀಶ್ ರೆಡ್ಡಿ, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಉಪಸ್ಥಿತರಿದ್ದರು.

  • 19 Jan 2021 05:52 PM (IST)

    ಗುರುವಾರ ಖಾತೆಗಳ ಹಂಚಿಕೆ: ಸಿಎಂ

    ನೂತನ ಸಚಿವರಿಗೆ ಗುರುವಾರ ಖಾತೆಗಳನ್ನು ಹಂಚಿಕೆ ಮಾಡಲಾಗುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ತಿಳಿಸಿದರು.

  • 19 Jan 2021 05:47 PM (IST)

    ಸಂಸತ್ ಭವನದಲ್ಲಿ ಸಬ್ಸಿಡಿ ಊಟದ ವ್ಯವಸ್ಥೆ ರದ್ದು

    ಸಂಸತ್ ಭವನದ ಕ್ಯಾಂಟೀನ್‌ನಲ್ಲಿದ್ದ ಸಬ್ಸಿಡಿ ಊಟದ ವ್ಯವಸ್ಥೆಯನ್ನು ರದ್ದುಗೊಳಿಸಲಾಗಿದೆ ಎಂದು ಲೋಕಸಭೆ ಸ್ಪೀಕರ್ ‌ ಓಂ ಬಿರ್ಲಾ ತಿಳಿಸಿದ್ದಾರೆ.

  • 19 Jan 2021 05:45 PM (IST)

    ಕೊರೊನಾ ಲಸಿಕೆಗಳು ಸುರಕ್ಷಿತ ಎಂದು ಸಾಬೀತಾಗಿದೆ: ಡಾ.ಬಲರಾಮ್ ಭಾರ್ಗವ

    ಸುಮಾರು 5 ಲಕ್ಷ ಜನರಿಗೆ ಕೊರೊನಾ ಲಸಿಕೆ ನೀಡಲಾಗಿದ್ದು,  ಲಸಿಕೆಗಳು ಸುರಕ್ಷಿತ ಎಂದು ಸಾಬೀತಾಗಿದೆ. ವ್ಯಾಕ್ಸಿನ್ ಕೊರೊನಾ ಸೋಂಕು ಬರದಂತೆ ತಡೆಯುತ್ತದೆ ಎಂದು ICMR ಯ ಮಹಾನಿರ್ದೇಶಕ ಡಾ.ಬಲರಾಮ್ ಭಾರ್ಗವ ಹೇಳಿದ್ದಾರೆ.

  • 19 Jan 2021 05:36 PM (IST)

    141 ಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ

    ರೂಪಾಂತರಿ ಕೊರೊನಾ ಸೋಂಕಿತರ ಸಂಖ್ಯೆ 141ಕ್ಕೇರಿಕೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ.

  • 19 Jan 2021 05:20 PM (IST)

    ಅಂದನ ಬಾಳಿಗೆ ಆಸರೆಯಾದ ಅಭಿನಯ ಚಕ್ರವರ್ತಿ

    ಹಾಡು ಹಾಡಿ‌ ಜೀವನ‌ ಮಾಡುತ್ತಿರುವ ಗುಲ್ಬರ್ಗಾ ಮೂಲದ ಔರಾದ್ ಗ್ರಾಮದ ಯವಕ ಮೈಕ್ ಸ್ಪೀಕರ್ ಕೊಡಿಸಿ ಎಂದು ಮನವಿ ಮಾಡಿದ್ದರು. ಸುದೀಪ್ ಗಮನಕ್ಕೆ ವಿಷಯ ತಲುಪಿದ್ದು, ಅವರಿಗೆ ಮೈಕ್ ಹಾಗು ಸ್ಪೀಕರ್ ಕೊಡಿಸುವ ಕೆಲಸ ಮಾಡಿದ್ದಾರೆ.

  • 19 Jan 2021 05:15 PM (IST)

    ಎಟಿಎಂ ಮಿಷನ್ ಹೊತ್ತೊಯ್ದ ಕಳ್ಳರು

    ತುಮಕೂರು ತಾಲ್ಲೂಕಿನ ಹೆಗ್ಗೆರೆಯಲ್ಲಿ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ನ ಎಟಿಎಂ ಮಿಷನ್​ನ ಇಬ್ಬರು ಹೊತ್ತೊಯ್ದಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

  • 19 Jan 2021 05:10 PM (IST)

    ಲಸಿಕೆಯಿಂದ ಗಂಭೀರ ಅಡ್ಡ ಪರಿಣಾಮವಾಗಿಲ್ಲ: ವಿ.ಕೆ.ಪೌಲ್

    ಬಹಳ ವೇಗವಾಗಿ ಮತ್ತು ಸುಸೂತ್ರವಾಗಿ ಲಸಿಕೆ ನೀಡಲಾಗುತ್ತಿದೆ. ನಿಮ್ಮ ಮತ್ತು ನಿಮ್ಮ ಕುಟುಂಬದ ರಕ್ಷಣೆಗಾಗಿ ಲಸಿಕೆ ನೀಡಲಾಗುತ್ತಿದೆ. ದಯವಿಟ್ಟು ಮುಂದೆ ಬಂದು ಲಸಿಕೆ ಪಡೆಯಿರಿ ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ಮನವಿ ಮಾಡಿದ್ದಾರೆ.

  • 19 Jan 2021 04:56 PM (IST)

    ಯತ್ನಾಳ್​ ವಿರುದ್ಧ ಮತ್ತೆ ಹರಿಹಾಯ್ದ ಡಿ.ವಿ.ಸದಾನಂದಗೌಡ

    ಯತ್ನಾಳ್​ಗೆ ಮಂತ್ರಿಗಿರಿ ಬೇಕಿದೆ, ಅದಕ್ಕಾಗಿ ಇಂತಹ ವರ್ತನೆ ತೋರುತ್ತಿದ್ದಾರೆ. ನಾನು ಅಧ್ಯಕ್ಷನಾಗಿದ್ದಾಗಲೂ ಇದೇ ರೀತಿ ನಡವಳಿಕೆ ತೋರಿದ್ದರು. ಆದರೆ ಇಂತಹ ಒತ್ತಡಕ್ಕೆ ಪಕ್ಷ ಯಾವುದೇ ಸೊಪ್ಪು ಹಾಕಲ್ಲ. ಇನ್ಮುಂದೆ ಪಕ್ಷದ ವಿರುದ್ಧ ಮಾತಾಡಿದರೆ ಕೇಂದ್ರದ ನಾಯಕರು ಕ್ರಮಕೈಗೊಳ್ಳುತ್ತಾರೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸದಾನಂದಗೌಡ ಹೇಳಿಕೆ ನೀಡಿದ್ದಾರೆ.

  • 19 Jan 2021 04:51 PM (IST)

    ಯಡಿಯೂರಪ್ಪನವರ ಬಗ್ಗೆ ಅಪಾರ ಗೌರವವಿದೆ: ರೇಣುಕಾಚಾರ್ಯ

    ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ನಿವಾಸದಲ್ಲಿ ಚರ್ಚೆ ನಡೆಸಿದ ರೇಣುಕಾಚಾರ್ಯರವರು 2 ಗಂಟೆ ಕಾಲ ಚರ್ಚಿಸಿದ್ದೇನೆ. ಸದ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದೇನೆ. ಈ ನಡುವೆ ಸಿಎಂ ಯಡಿಯೂರಪ್ಪ ಕೂಡ ಕರೆ ಮಾಡಿದ್ದರು. ಯಡಿಯೂರಪ್ಪನವರ ವಿರುದ್ಧ ಮಾತನಾಡುವುದು ಸರಿಯಲ್ಲ. ಸಿಎಂ ಯಡಿಯೂರಪ್ಪನವರ ಬಗ್ಗೆ ಅಪಾರ ಗೌರವ ಇದೆ. ನನಗಿಂತ ಹಿರಿಯರು ಇದ್ದಾರೆ ಅವರನ್ನು ಮಂತ್ರಿ ಮಾಡಲಿ. ಬೆಂಗಳೂರಿಗೆ ತೆರಳಿ ಯಡಿಯೂರಪ್ಪರನ್ನು ಭೇಟಿ ಮಾಡುತ್ತೀನಿ ಎಂದು ಹೇಳಿದ್ದಾರೆ.

  • 19 Jan 2021 04:43 PM (IST)

    ಕಾಲೇಜು ಪ್ರಾಂಶುಪಾಲರಿಗೆ ಮನವಿ ಪತ್ರ ಸಲ್ಲಿಸಿದ ಧ್ರುವ ಅಭಿಮಾನಿಗಳು

    ಮುಂದಿನ ತಿಂಗಳು ಪೊಗರು ಸಿನಿಮಾ ಬಿಡುಗಡೆ ಹಿನ್ನೆಲೆ ಸಿನಿಮಾ ನೋಡಲು ರಜೆ ಕೊಡಿ ಎಂದು ಎಸ್ಇಎಸ್ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

  • 19 Jan 2021 04:35 PM (IST)

    ಸ್ವಯಂಕೃತ ಆತ್ಮಹತ್ಯೆ ನಡವಳಿಕೆ ಮೋದಿಯದ್ದಾಗಿದೆ: ಕೆ.ಹೆಚ್.ಮುನಿಯಪ್ಪ

    ಹಿಟ್ಲರ್, ಮುಸಲೋನಿ ಇತಿಹಾಸ ನೋಡಿದ್ದೇವೆ. ಅಂತಹ ನಿರ್ಧಾರಗಳನ್ನು ಮೋದಿ ತೆಗೆದುಕೊಳ್ಳುತ್ತಾರೆ. ಪ್ರಧಾನಿ ಮೋದಿ ರೈತ ವಿರೋಧಿ ಕಾನೂನು ತಂದಿದ್ದಾರೆ ಎಂದು ಹೇಳಿಕೆ ನೀಡಿದ ಕೇಂದ್ರದ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪ ಸ್ವಯಂಕೃತ ಆತ್ಮಹತ್ಯೆ ನಡವಳಿಕೆ ಮೋದಿಯದ್ದಾಗಿದೆ. ಶೇ.70ರಷ್ಟು ಜನರ ಜೀವದ ಜೊತೆ ಆಟವಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

  • 19 Jan 2021 04:28 PM (IST)

    ಉಪವಾಸ ಸತ್ಯಾಗ್ರಹಕ್ಕೆ ಅಣ್ಣಾ ಹಜಾರೆ ನಿರ್ಧಾರ

    ಧರಣಿ ನಿರತ ರೈತರಿಗೆ ಬೆಂಬಲ ಸೂಚಿಸಿ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹಕ್ಕೆ ನಿರ್ಧರಿಸಿದ್ದಾರೆ.

  • 19 Jan 2021 04:26 PM (IST)

    ಜೋಶಿ ಭೇಟಿಯಾದ ರೇಣುಕಾಚಾರ್ಯ

    ದೆಹಲಿಯಲ್ಲಿ ಸಚಿವ ಪ್ರಹ್ಲಾದ್‌ ಜೋಶಿ ಮನೆಗೆ ಭೇಟಿ ನೀಡಿ ರೇಣುಕಾಚಾರ್ಯ ಚರ್ಚೆ ನಡೆಸಿದರು.

  • 19 Jan 2021 04:19 PM (IST)

    ಕೆಂಪೇಗೌಡ ಏರ್ ಪೋರ್ಟ್​ನಲ್ಲಿ ಕಂತೆ ಕಂತೆ ಹಣ

    ಸಿಐಎಸ್​ಎಫ್ ಪೊಲೀಸರ ಭರ್ಜರಿ ಕಾರ್ಯಾಚರಣೆಯಿಂದ ಕೇಂದ್ರ ಸರ್ಕಾರದ ಅಧಿಕಾರಿ ದಂಪತಿ ಬಳಿಯಿದ್ದ ಕಂತೆ ಕಂತೆ ಹಣವನ್ನು ಅಧಿಕಾರಿಯ ಪತ್ನಿ ಕೆಂಪೇಗೌಡ ಏರ್ ಪೋರ್ಟ್​ನ ಬಾತ್ ರೂಂ ನಲ್ಲಿ ಬಿಸಾಡಿದ ಮಾಹಿತಿ ತಿಳಿದುಬಂದಿದೆ. ಎರಡು ದುಬಾರಿ ಮೊಬೈಲ್, ಆಫಲ್ ವಾಚ್, ಒಂದು ಸೂಟ್ ಕೇಸ್, ಬ್ಯಾಗ್​ನಲ್ಲಿದ್ದ  74 ಲಕ್ಷದ 81 ಸಾವಿರ  ರೂ.ಹಣವನ್ನು ಜಪ್ತಿ ಮಾಡಲಾಗಿದೆ.

  • 19 Jan 2021 04:08 PM (IST)

    ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ಕೊಡಬೇಕು: ಶಿವನಗೌಡ ನಾಯಕ್

    ಇಡೀ ಸಚಿವ ಸಂಪುಟ ಪುನಾರಚನೆ ಮಾಡಲು ಆಗ್ರಹಿಸಿ 20 ತಿಂಗಳಿಂದ ಸಚಿವರಾದವನ್ನು ಸಂಪುಟದಿಂದ ಕೈಬಿಡಿ. 32 ಜನ ಹೊಸಬರಿಗೆ ಸಂಪುಟದಲ್ಲಿ ಅವಕಾಶ ಕೊಡಿ. ಹಿರಿತನದ ಆಧಾರದ ಮೇಲೆ ಸಚಿವ ಸ್ಥಾನ ಕೊಡಬೇಕು ಎಂದು ಬೆಂಗಳೂರಿನ ದೇವದುರ್ಗ ಶಾಸಕ ಶಿವನಗೌಡ ನಾಯಕ್ ಹೇಳಿದ್ದಾರೆ.

  • 19 Jan 2021 04:04 PM (IST)

    ಭಾರತ ತಂಡಕ್ಕೆ ಶುಭಾಶಯ ಕೋರಿದ ಜಗನ್‌ಮೋಹನ್ ರೆಡ್ಡಿ

    ಇತ್ತೀಚಿನ ದಿನಗಳಲ್ಲಿನ ಭಾರತ ತಂಡದಿಂದ ಅತಿ ವಿರಳ ಹಾಗೂ ಅದ್ಭುತ ಸಾಧನೆಯಾಗಿದೆ ಎಂದು ಆಂಧ್ರ ಪ್ರದೇಶದ ಸಿಎಂ ವೈ.ಎಸ್.ಜಗನ್‌ಮೋಹನ್ ರೆಡ್ಡಿ ಸಂತಸ ವ್ಯಕ್ತಪಡಿಸಿದ್ದಾರೆ.

  • 19 Jan 2021 03:59 PM (IST)

    ಟೀಂ ಇಂಡಿಯಾವನ್ನು ಯಾವುದೇ ಕಾರಣಕ್ಕೂ ಕಡೆಗಣಿಸಬೇಡಿ: ಆಸ್ಟ್ರೇಲಿಯಾ ಕೋಚ್ ಸಲಹೆ

    130 ಕೋಟಿ ಪೈಕಿ 11 ಮಂದಿ ಆಯ್ಕೆಯಾಗಿ ಬಂದಿದ್ದಾರೆ. ಹೀಗಾಗಿ ಟೀಂ ಇಂಡಿಯಾವನ್ನು ಕಡೆಗಣಿಸೋಕೆ ಹೋಗಬೇಡಿ. ಭಾರತೀಯ ಕ್ರಿಕೆಟಿಗರನ್ನು ಹಗುರವಾಗಿ ಪರಿಗಣಿಸಲೇಬೇಡಿ ಎಂದು  ಆಸ್ಟ್ರೇಲಿಯಾ ತಂಡಕ್ಕೆ ಕೋಚ್ ಜಸ್ಟಿನ್ ಲ್ಯಾಂಗರ್ ಸಲಹೆ ನೀಡಿದ್ದಾರೆ.

  • 19 Jan 2021 03:55 PM (IST)

    ಬೆಂಗಳೂರಿಗೆ ವಾಪಸಾದ ಸಿಎಂ ಬಿಎಸ್​ವೈ

    ಉಡುಪಿ ಜಿಲ್ಲಾ ಪ್ರವಾಸದಿಂದ ಸಿಎಂ ಬಿ.ಎಸ್​.ಯಡಿಯೂರಪ್ಪ ಬೆಂಗಳೂರಿಗೆ ವಾಪಸಾಗಿದ್ದಾರೆ.

  • 19 Jan 2021 03:49 PM (IST)

    ಡಿಕೆ‌ಶಿ ಹೇಳಿಕೆಗೆ ಡಾ.ಸುಧಾಕರ್ ತಿರುಗೇಟು

    ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ಎಲ್ಲಾ ಶಾಸಕರು ಘರ್ ವಾಪಸ್ಸಿ ಅಗಲಿದ್ದಾರೆ ಎಂಬ ಡಿ.ಕೆ‌.ಶಿವಕುಮಾರ್ ಹೇಳಿಕೆಗೆ ನಾವು ಈಗ ಸಕ್ರಿಯ ರಾಜಕಾರಣಿಗಳು, ನಾವ್ಯಾಕೆ ಬಿಜೆಪಿ ತೊರೆಯಬೇಕು? ಅದು ನಿಷ್ಕ್ರಿಯವಾಗಿರುವ ರಾಜಕಾರಣಿಗಳು ಕಾಂಗ್ರೆಸ್ ಸೇರ್ಪಡೆ ಆಗಬಹುದು. ಆದರೆ ನಾವಲ್ಲ ಎಂದು ಹೇಳಿಕೆ ನೀಡಿದ್ದಾರೆ.

  • 19 Jan 2021 03:39 PM (IST)

    ರೆಬೆಲ್ ಜೆಡಿಎಸ್ ಶಾಸಕರಿಗೆ ಕುಮಾರಸ್ವಾಮಿ ಟಾಂಗ್

    ಜೆಡಿಎಸ್ ಕೋರ್ ಕಮಿಟಿಯಲ್ಲಿ ಜಿ.ಟಿ.ದೇವೇಗೌಡರ ಹೆಸರು ಕೈಬಿಟ್ಟ ವಿಚಾರಕ್ಕೆ ಸಂಬಂಧಿಸಿ ಪಕ್ಷದ ಸಂಘಟನೆ ಬಗ್ಗೆ ಅವರಿಗೆ ಆಸಕ್ತಿಯಿಲ್ಲ. ಅವರೇ ಹೇಳಿದ್ದಾರೆ ನನಗೆ ನನ್ನ ಕ್ಷೇತ್ರ ಮುಖ್ಯ ಅಂತಾ. ಪಕ್ಷದ ಸಂಘಟನೆಗೆ ಸಮಯ ಕೊಡಲು ಆಗಲ್ಲ ಎಂದಿದ್ದಾರೆ. ಈಗ ಅವರಿಗೆ ಕ್ಷೇತ್ರದ ಬಗ್ಗೆ ಗಮನಬಂದಿದೆ. ಹಾಗಾಗಿ ಕೇವಲ ವಿಸಿಟಿಂಗ್ ಕಾರ್ಡ್ ಗಾಗಿ ನಾನು ಅವಕಾಶ ಕೊಡ್ಲ? ಇಲ್ಲಿ ವಯಸ್ಸಿನ ವಿಚಾರ ಬರಲ್ಲ, ಹೊರಟ್ಡಿಯವರಿಗೆ ವಯಸ್ಸಾಗಿಲ್ಲವಾ? ಎಂದು ಕುಮಾರಸ್ವಾಮಿ  ಹೇಳಿಕೆ ನೀಡಿದ್ದಾರೆ.

  • 19 Jan 2021 03:27 PM (IST)

    ಬೃಹತ್ ಪ್ರತಿಭಟನೆ: ಟ್ರಾಫಿಕ್ ಜಾಂ ಫಿಕ್ಸ್

    ನಾಳೆ ಕಾಂಗ್ರೆಸ್ ವತಿಯಿಂದ ರಾಜಭವನ ಚಲೋ ಬೃಹತ್ ಪ್ರತಿಭಟನೆ ಹಿನ್ನೆಲೆ ಬೆಂಗಳೂರಿನ ಹೃದಯ ಭಾಗದಲ್ಲಿ ಟ್ರಾಫಿಕ್ ಜಾಂ ಆಗುವ ಸಾಧ್ಯತೆ ಹೆಚ್ಚಿದೆ.

  • 19 Jan 2021 03:20 PM (IST)

    ಮಾಹಿತಿ ಸೋರಿಕೆಯ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ

    ಪಾಕ್​ನ ಬಾಲಾಕೋಟ್ ದಾಳಿ ಮಾಹಿತಿ ಸೋರಿಕೆ ವಿಚಾರಕ್ಕೆ ಸಂಬಂಧಿಸಿ ನಾಲ್ಕೈದು ಜನರಿಗೆ ಮಾತ್ರ ದಾಳಿಯ ಬಗ್ಗೆ ಮಾಹಿತಿ ಇರುತ್ತದೆ. ಪ್ರಧಾನಿ, ಕೇಂದ್ರ ಗೃಹ ಸಚಿವರು, ರಕ್ಷಣಾ ಇಲಾಖೆ ಸಚಿವ, ವಾಯು ಸೇನೆ ಮುಖ್ಯಸ್ಥರಿಗೆ ಮಾತ್ರ ಈ ಬಗ್ಗೆ ಗೊತ್ತಿರುತ್ತದೆ. ಆದ್ರೆ ಅರ್ನಾಬ್ ಗೋಸ್ವಾಮಿಗೆ ದಾಳಿಗೂ ಮುಂಚೆ ಮಾಹಿತಿ ಗೊತ್ತಿದ್ದರೆ ಅದು ಕ್ರಿಮಿನಲ್ ಕೃತ್ಯ. ಅರ್ನಾಬ್‌ಗೆ ಗೊತ್ತಿದ್ರೆ ಪಾಕಿಸ್ತಾನಕ್ಕೂ ಮಾಹಿತಿ ಗೊತ್ತಿರುತ್ತದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

  • 19 Jan 2021 03:15 PM (IST)

    ವಿಜಯ ಸಾಧಿಸಿದ ಭಾರತದ ತಂಡಕ್ಕೆ ರಾಮನಾಥ ಕೋವಿಂದ್ ಶುಭಾಶಯ

    ಭಾರತದ ತಂಡದಿಂದ ಆಸ್ಟ್ರೇಲಿಯಾದಲ್ಲಿ‌ದಾಖಲೆಯ ವಿಜಯಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಶುಭಾಶಯ ಕೋರಿದ್ದು, ಯುವ ತಂಡ‌ ವಿಶಿಷ್ಟ ಕೌಶಲ್ಯದಿಂದ ಅದ್ಭುತ ಸಾಧನೆ ಮಾಡಿದೆ. ತಂಡದ ಈ ಸಾಧನೆ ಭಾರತಕ್ಕೆ ಹೆಮ್ಮೆ ಮೂಡಿಸಿದೆ ಎಂದು ರಾಷ್ಟ್ರಪತಿಗಳು ಟ್ವೀಟ್​ ಮಾಡಿದ್ದಾರೆ.

  • 19 Jan 2021 03:10 PM (IST)

    ಕೃಷಿ ಕಾಯ್ದೆ ಪ್ರತಿಭಟನೆ: ಜನವರಿ 21 ಕ್ಕೆ ಮೊದಲ ಸಭೆ ನಿಗದಿ

    ಕೃಷಿ ಕಾಯ್ದೆ ಬಗ್ಗೆ ಹೋರಾಟ ನಡೆಸುತ್ತಿರುವ ರೈತರೊಂದಿಗೆ ಮೊದಲ ಸಭೆಯನ್ನು ಜನವರಿ 21 ರಂದು ನಿಗದಿಪಡಿಸಲಾಗಿದೆ ಎಂದು  ಸುಪ್ರೀಂ ಕೋರ್ಟ್​ನ ನೇಮಕ ಸಮಿತಿಯ ಸದಸ್ಯ ಅನಿಲ್ ​ಘನ್​ವಾತ್​ ತಿಳಿಸಿದ್ದಾರೆ.

  • 19 Jan 2021 03:04 PM (IST)

    ಸುಪ್ರೀಂ ಕೋರ್ಟ್‌ನಲ್ಲೂ ಟೀಂ ಇಂಡಿಯಾ ಗೆಲುವಿನ ಬಗ್ಗೆ ಚರ್ಚೆ

    ನಾನು ಈಗಷ್ಟೇ ಟೆಸ್ಟ್​ನಲ್ಲಿ ಭಾರತದ ಗೆಲುವನ್ನು ನೋಡಿದೆ ಎಂದು ಹಿರಿಯ ವಕೀಲ ಮುಕುಲ್ ರೋಹ್ಟಗಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ನಿಜಕ್ಕೂ ಇದು ಅತ್ಯಂತ ಅರ್ಹ ಗೆಲುವು ಎಂದರು.

  • 19 Jan 2021 02:56 PM (IST)

    ಟೀಂ ಇಂಡಿಯಾಗೆ ಅಭಿನಂದನೆ ಸಲ್ಲಿಸಿದ ಸಿಎಂ ಬಿಎಸ್‌ವೈ

    ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾಗೆ ಟ್ವೀಟ್ ಮೂಲಕ  ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದನೆ ಸಲ್ಲಿಸಿದ್ದಾರೆ.

  • 19 Jan 2021 02:53 PM (IST)

    ಮೀನಿನ ಬಲೆಗೆ ಆನೆ ಸಿಕ್ಕಿಕೊಂಡ ಪ್ರಕರಣ ಸುಖಾಂತ್ಯ

    ಸತತ 8 ಗಂಟೆಗಳ ಕಾಲದ ಕಾರ್ಯಚರಣೆಯಲ್ಲಿ ಮೈಸೂರು ಜಿಲ್ಲೆ ಸರಗೂರು ತಾಲೂಕಿನ ನುಗು ಜಲಾಶಯದಲ್ಲಿ ಮೀನಿನ ಬಲೆಗೆ ಸಿಕ್ಕಿಕೊಂಡ ಆನೆಯನ್ನು ರಕ್ಷಿಸಲಾಗಿದೆ.

  • 19 Jan 2021 02:50 PM (IST)

    ಭಾರತ ಕ್ರಿಕೆಟ್ ತಂಡಕ್ಕೆ ಶುಭ ಕೋರಿದ ಪ್ರಧಾನಿ

    ಭಾತರ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಗೆಲವು ಸಾಧಿಸಿದ ಭಾರತ ಕ್ರಿಕೆಟ್​ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದರು.

  • 19 Jan 2021 02:44 PM (IST)

    ಕಾಮಗಾರಿ ಕಳಪೆ: ನಾಗರಿಕ ಹಕ್ಕುಗಳ ವೇದಿಕೆಯಿಂದ ಪ್ರತಿಭಟನೆ

    ಶಿವಮೊಗ್ಗದ ಪಿಎಂಎವೈ ನಗರ ಯೋಜನೆಯ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆಯೆಂದು ತನಿಖೆಗೆ ಆಗ್ರಹಿಸಿ ಶಾಂತಿನಗರ ನಾಗರಿಕ ಹಕ್ಕುಗಳ ವೇದಿಕೆಯಿಂದ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಯುತ್ತಿದೆ.

  • 19 Jan 2021 02:36 PM (IST)

    ನೀವೇನು ಆಕಾಶದಿಂದ ಧರೆಗಿಳಿದು ಬಂದಿದ್ದೀರಾ? ಬಿ.ಸಿ.ಪಾಟೀಲ್​ಗೆ ರೈತರ ಪ್ರಶ್ನೆ

    ನೀವು ಹೇಳಿದ್ದನ್ನೆಲ್ಲಾ ಕೇಳಿ ಕೊಂಡು ಕೈಮುಗಿದು ನಿಲ್ಲಬೇಕಾ? ನೀವು ರೈತರು ಬೆಳೆದ ಅನ್ನ ತಿಂದು ಮಜಾ ಮಾಡುತ್ತಿದ್ದೀರಿ. ಹಸಿರು ಶಾಲು ಹಾಕಿಕೊಂಡು ರೈತರ ಮರ್ಯಾದೆ ಕಳೆಯುತ್ತಿದ್ದೀರಿ. ನೀವೇನು ಆಕಾಶದಿಂದ ಧರೆಗಿಳಿದು ಬಂದಿದ್ದೀರಾ? ನಿಮ್ಮ ಸರ್ಕಾರ ಮತ್ತು ನಿಮ್ಮ ನಡವಳಿಕೆಗೆ ನಾಚಿಕೆಯಾಗಬೇಕು ಎಂದು ಮೈಸೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್‌ಗೆ ರೈತರು ಬೆವರಿಳಿಸಿದರು.

  • 19 Jan 2021 02:32 PM (IST)

    ಬಿ.ಸಿ.ಪಾಟೀಲ್ ವಿರುದ್ಧ ರೈತರು ಕಿಡಿ

    ಯಾವ ಕಾಲದಲ್ಲಿ ಭತ್ತ ನಾಟಿ ಮಾಡುತ್ತಾರೆಂಬುದೇ ಗೊತ್ತಿಲ್ಲ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಸಾಮಾನ್ಯ ಪರಿಜ್ಞಾನವೂ ಇಲ್ಲ. ಆಡಳಿತ ನಡೆಸಲು ಗೊತ್ತಿಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಿ ಎಂದು ಸಚಿವ ಬಿ.ಸಿ.ಪಾಟೀಲ್​ಗೆ ರೈತರು ತರಾಟೆಗೆ ತೆಗೆದುಕೊಂಡರು.

  • 19 Jan 2021 02:27 PM (IST)

    ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ ಕಾರಜೋಳ

    ರಾಜ್ಯದಲ್ಲಿ ಮೀಸಲಾತಿ ಪಾದಯಾತ್ರೆಗಳ ವಿಚಾರಕ್ಕೆ ಸಂಬಂಧಿಸಿ, ಆಯಾ ಜನಾಂಗದವರು ಮೀಸಲಾತಿ ಸಿಗಬೇಕು ಅಂತ ನಿರಂತರವಾಗಿ ಪ್ರಯತ್ನ ಮಾಡುತ್ತಿರುತ್ತಾರೆ. ನಮ್ಮ ದೇಶದಲ್ಲಿ ಸಂವಿಧಾನವಿದೆ. ಸಂವಿಧಾನ ಪ್ರಕಾರವೇ ಮಾಡಬೇಕು. ಕುಲಶಾಸ್ತ್ರ ಅಧ್ಯಯನದ ಪ್ರಕಾರ ಅರ್ಹತೆ ಇದ್ದವರಿಗೆ ಮೀಸಲಾತಿ ಸಿಗುತ್ತದೆ ಎಂದು ಪರೋಕ್ಷವಾಗಿ ಕಾರಜೋಳ ವಿರೋಧ ವ್ಯಕ್ತಪಡಿಸಿದ್ದಾರೆ.

  • 19 Jan 2021 02:25 PM (IST)

    ಭಾರತ ಟೆಸ್ಟ್ ಸರಣಿ ಗೆಲುವು: ಕೊಪ್ಪಳದಲ್ಲಿ ಸಂಭ್ರಮಾಚರಣೆ

    ಆಸ್ಟ್ರೇಲಿಯಾ ವಿರುದ್ಧ ಭಾರತ ಗೆಲವು ಸಾಧಿಸಿದ್ದು, ಕೊಪ್ಪಳ ನಗರದ ಸಾರ್ವಜನಿಕ ಮೈದಾನದಲ್ಲಿ ಕ್ರಿಕೆಟ್ ಆಟಗಾರರು ಕೇಕ್ ಕತ್ತರಿಸಿ ಸಂಭ್ರಮಿಸಿದರು.

  • 19 Jan 2021 02:20 PM (IST)

    ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆ: ಸಿಎಂ ಬಿಎಸ್‌ವೈ

    ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸರ್ಕಾರ ಶ್ರಮಿಸುತ್ತದೆ. 2 ದಿನದಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತೇವೆ. ಅಲ್ಲದೇ ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆ ಮಾಡುತ್ತೇವೆ ಎಂದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಸಿಎಂ ಬಿಎಸ್‌ವೈ ಹೇಳಿಕೆ ನೀಡಿದ್ದಾರೆ.

  • 19 Jan 2021 02:15 PM (IST)

    ಟೀಂ ಇಂಡಿಯಾ ಐತಿಹಾಸಿಕ ಗೆಲುವು: ಟ್ವೀಟ್ ಮೂಲಕ ಶುಭಾಶಯ ತಿಳಿಸಿದ ಕೊಹ್ಲಿ

    ಇದೊಂದು ಅತ್ಯದ್ಭುತ ಗೆಲುವಾಗಿದೆ. ನಮ್ಮನ್ನು ಅವಮಾನಿಸಿದವರಿಗೆ ಇದು ತಿರುಗೇಟು ಎಂದು ಕೊಹ್ಲಿ ಹೇಳಿ ಟ್ವೀಟ್ ಮೂಲಕ ತಂಡಕ್ಕೆ ಶುಭಾಶಯ ತಿಳಿಸಿದರು.

  • 19 Jan 2021 02:12 PM (IST)

    ಮೂರು ಕೃಷಿ ಕಾಯಿದೆ ವಾಪಸ್ ಪಡೆಯಲೇಬೇಕು: ರಾಹುಲ್

    ಸರ್ಕಾರ ತನ್ನ ಅಹಂಕಾರದಿಂದ ರೈತರನ್ನು ಮೂರ್ಖರನ್ನಾಗಿ ಮಾಡಲು ಯತ್ನಿಸುತ್ತಿದೆ. ಪ್ರಧಾನಿಗಿಂತ ರೈತರು ಚೆನ್ನಾಗಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ. ದೇಶದ ಆರ್ಥಿಕತೆ ಉತ್ತಮ‌ ಸ್ಥಿತಿಯಿಂದ ನಿಕೃಷ್ಟ ಸ್ಥಿತಿಗೆ ಹೋಗುತ್ತಿದೆ ಎಂದು ಮಾತನಾಡಿದ ರಾಹುಲ್ ಮೂರು ಕೃಷಿ ಕಾಯ್ದೆಯನ್ನು ವಾಪಸ್ ಪಡೆಯಲೇಬೇಕು ಎಂದರು.

  • 19 Jan 2021 02:08 PM (IST)

    ಪ್ರತಿಯೊಂದು ಕ್ಷೇತ್ರದಲ್ಲಿ ನಾಲ್ಕೈದು ವ್ಯಕ್ತಿಗಳ‌ ಏಕಸ್ವಾಮ್ಯ ಇದೆ: ರಾಹುಲ್ ಗಾಂಧಿ

    ಇದುವರೆಗೂ ಕೃಷಿಯಲ್ಲಿ ಏಕಸ್ವಾಮ್ಯ ಇರಲಿಲ್ಲ. ಆದರೆ ಇದೀಗ ಪ್ರತಿಯೊಂದು ಕ್ಷೇತ್ರದಲ್ಲಿ ನಾಲ್ಕೈದು ವ್ಯಕ್ತಿಗಳ‌ ಏಕಸ್ವಾಮ್ಯ ಇದೆ. ಕೃಷಿ ಕ್ಷೇತ್ರದಲ್ಲಿ ಸ್ವಾತಂತ್ರ್ಯ ಪೂರ್ವದ ಸ್ಥಿತಿ ಮರುಕಳಿಸುತ್ತಿದೆ. ಇದರಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ನಾವು ರೈತರಿಗೆ ಪೂರ್ತಿ ಬೆಂಬಲ ನೀಡುತ್ತೇವೆ ಎಂದು ಕಾಂಗ್ರೆಸ್ ನಾಯಕ‌ ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.

  • 19 Jan 2021 02:04 PM (IST)

    ಮಸ್ಕಿಯ 4 ಗ್ರಾಮ ಪಂಚಾಯತಿ ರೈತರ ಜೊತೆ ಸಭೆ

    ಬೆಂಗಳೂರಿನ ರಾಜಾಜಿನಗರದ ಕಲ್ಯಾಣಮಂಟಪದಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ಮಸ್ಕಿಯ 4 ಗ್ರಾಮ ಪಂಚಾಯತಿ ರೈತರ ಜೊತೆ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಸಭೆ ನಡೆಯುತ್ತಿದೆ. ಸಭೆಯಲ್ಲಿ ರಾಯಚೂರು ಶಾಸಕ ಡಾ.ಶಿವರಾಜ್ ಪಾಟೀಲ್ ಉಪಸ್ಥಿತರಿದ್ದಾರೆ.

  • 19 Jan 2021 01:30 PM (IST)

    ಹಳ್ಳಿಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರೆಲ್ಲಾ ರೈತರಾಗಲ್ಲ: ಬಿ.ಸಿ.ಪಾಟೀಲ್

    ಸರ್ಕಾರಗಳು ತನ್ನ ಕೆಲಸ ಮಾಡುತ್ತಿವೆ. ಹಳ್ಳಿಯಲ್ಲಿರುವವರು ಬಹುತೇಕರು ರೈತರೇ ಆಗಿರುತ್ತಾರೆ. ಹಳ್ಳಿಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರೆಲ್ಲಾ ರೈತರಾಗಲ್ಲ. ಆತ್ಮಹತ್ಯೆಗೆ ಕಾರಣವನ್ನು ತಜ್ಞರು ಹುಡುಕಬೇಕಾಗಿದೆ. ತಜ್ಞರ ವರದಿಯಂತೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದು ಮೈಸೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.

  • 19 Jan 2021 01:28 PM (IST)

    ರೈತರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ: ಕೃಷಿ ಸಚಿವ

    ಕೇವಲ ರೈತರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಉದ್ಯಮಿಗಳು, ಅಧಿಕಾರಿಗಳು, ಇತರೇ ಕ್ಷೇತ್ರದ ಜನರು ಸೇರಿ ಎಲ್ಲ ವಲಯದಲ್ಲೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಸರ್ಕಾರದ ನೀತಿ ಕಾರಣವಲ್ಲ ಎಂದು ಬಿ.ಸಿ.ಪಾಟೀಲ್ ಹೇಳಿದರು.

  • 19 Jan 2021 01:27 PM (IST)

    ಪರ್ಯಾಯವಾಗಿ ಕಾರ್ಯಕ್ರಮ ರೂಪಿಸಬೇಕು: ಬಿ.ಸಿ.ಪಾಟೀಲ್

    ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಹೋಗಿ ಹಾರ ಹಾಕಿ, ಸಾಂತ್ವನ ಹೇಳಿದ್ರೆ ರೈತರ ಆತ್ಮಹತ್ಯೆ ನಿಲ್ಲಲ್ಲ. ಅದಕ್ಕೆ ಪರ್ಯಾಯವಾಗಿ ಕಾರ್ಯಕ್ರಮ ರೂಪಿಸಬೇಕು ಎಂದು ಮೈಸೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ.

  • 19 Jan 2021 01:08 PM (IST)

    ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ

    ಬ್ರಿಸ್ಬೇನ್‌ನಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಭಾರತಕ್ಕೆ ಜಯ ಸಿಕ್ಕಿದೆ.

  • 19 Jan 2021 01:04 PM (IST)

    ಕಾಂಗ್ರೆಸ್ ಪಕ್ಷದಿಂದ ರಾಜಭವನ ಮುತ್ತಿಗೆ: ಕಾರ್ಯಕರ್ತರ ಬಂಧನ

    ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದಿಂದ ರಾಜಭವನ ಮುತ್ತಿಗೆ ಹಾಕಿದ ಹಿನ್ನೆಲೆ, ಎಲ್ಲೆಂದರಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನುಪೊಲೀಸರು ಬಂಧಿಸಿದ್ದಾರೆ. ಲುಂಬಿನಿ ಪಾರ್ಕ್​ ಬಳಿ ಸೇರಿದ ಕಾಂಗ್ರೆಸ್ ನಾಯಕರನ್ನು ಮುಂದೆ ಹೋಗದಂತೆ ಪೊಲೀಸರು ತಡೆದಿದ್ದಾರೆ.

  • 19 Jan 2021 12:59 PM (IST)

    ಡಿ.ಕೆ.ಶಿವಕುಮಾರ್ ಮನೆಯಲ್ಲಿ‌ ವಿಶೇಷ ಪೂಜೆ

    ಪುತ್ರಿ ಮದುವೆ ಹಿನ್ನೆಲೆಯಲ್ಲಿವಿಶೇಷ ಪೂಜೆಯನ್ನು ಡಿ.ಕೆ.ಶಿವಕುಮಾರ್ ಕುಟುಂಬ ನಡೆಸುತ್ತಿದ್ದು,  ಕೇವಲ ಕುಟುಂಬಸ್ಥರಿಗೆ ಮಾತ್ರ ಮನೆಯೊಳಗೆ ಪ್ರವೇಶ ನೀಡಲಾಗಿದೆ.

  • 19 Jan 2021 12:55 PM (IST)

    1.30 ಕ್ಕೆ ಪತ್ರಿಕಾಗೋಷ್ಠಿ ನಡೆಸುವ ರಾಹುಲ್ ಗಾಂಧಿ

    ಚೀನಾದಿಂದ ಭಾರತದ ಅರುಣಾಚಲ ಪ್ರದೇಶದಲ್ಲಿ ಗ್ರಾಮ ನಿರ್ಮಾಣದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಮಧ್ಯಾಹ್ನ 1.30 ಕ್ಕೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಭಾರತ- ಚೀನಾ ಗಡಿ ಬಿಕ್ಕಟ್ಟು ಬಗ್ಗೆ ರಾಹುಲ್ ವಾಗ್ದಾಳಿ ಮಾಡುವ ಸಾಧ್ಯತೆಯಿದೆ.

  • 19 Jan 2021 12:49 PM (IST)

    ಚಪ್ಪಲಿಯಿಂದ ಹೊಡೆದು, ಬೆಂಕಿ ಹಚ್ಚಿ ಆಕ್ರೋಶ

    ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆಯ ಗಡಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಕಲಬುರಗಿ ನಗರದಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯುತ್ತಿದ್ದು, ಉದ್ದವ್ ಠಾಕ್ರೆ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • 19 Jan 2021 12:46 PM (IST)

    ವಿವಿಧ ಬೇಡಿಕೆಗೆ ಒತ್ತಾಯಸಿ ಎಬಿವಿಪಿಯಿಂದ ಪ್ರತಿಭಟನೆ

    ಕಾಲೇಜು ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ, ಹಾಸ್ಟೆಲ್ ವ್ಯವಸ್ಥೆ, ಅತಿಥಿ ಉಪನ್ಯಾಸಕರ ನೇಮಕಾತಿ, ಬಸ್ ವ್ಯವಸ್ಥೆ ಸೇರಿದಂತೆ ಹಲವು ಬೇಡಿಕೆಯಿಟ್ಟು ಶಿವಮೊಗ್ಗ ಡಿಸಿ ಕಚೇರಿ ಎದುರು ಎಬಿವಿಪಿಯಿಂದ ಪ್ರತಿಭಟನೆ ನಡೆಯುತ್ತಿದೆ.

  • 19 Jan 2021 12:41 PM (IST)

    ಗೋಲಿಬಾರ್‌ ಪ್ರತೀಕಾರಕ್ಕೆ ಸ್ಕೆಚ್: 6 ಜನರ ಬಂಧನ

    ಸಿಎಎ, ಎನ್‌ಆರ್‌ಸಿ ಖಂಡಿಸಿ ಮಂಗಳೂರಿನಲ್ಲಿ ನಡೆದಿದ್ದ ಗೋಲಿಬಾರ್‌ ಪ್ರತಿಕಾರ ತೀರಿಸಿಕೊಳ್ಳಲು ‘ಟೀಮ್ ಮಾಯಾ’ ಹೆಸರಲ್ಲಿ ಮುಂದಾದ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ.

  • 19 Jan 2021 12:39 PM (IST)

    ಬಾಲಕನ‌ ಮೇಲೆ ಕರಡಿ ದಾಳಿ

    ಜಮೀನಿಗೆ ನೀರು ಬಿಡಲು ಹೋದ ವೇಳೆ ಬಾಲಕನ‌ ಮೇಲೆ ಕರಡಿ ದಾಳಿ ನಡೆಸಿದ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಕಸ್ತೂರಿಪುರದಲ್ಲಿ ನಡೆದಿದೆ. ಕರಡಿ ದಾಳಿಯನ್ನು ಗಮನಿಸಿದ ಎರಡು ನಾಯಿಗಳು ಕರಡಿ ಮೇಲೆ ದಾಳಿ ನಡೆಸಿ ಬಾಲಕನ ಪ್ರಾಣ ಉಳಿಸಿವೆ.

  • 19 Jan 2021 12:34 PM (IST)

    ರೈತರ ಆತ್ಮಹತ್ಯೆಗೆ ರೈತರ ವೀಕ್​ ಮೈಂಡ್ ಕಾರಣ: ಬಿ.ಸಿ.ಪಾಟೀಲ್

    ರೈತರ ಮೈಂಡ್ ವೀಕ್ ಆದಾಗ ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ. ಬದಲಾಗಿ ಸರ್ಕಾರದ ನೀತಿಗಳು ಕಾರಣವಲ್ಲ ಎಂದು ಮೈಸೂರಿನಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ವಿವಾದಿತ ಹೇಳಿಕೆ ನೀಡಿದ್ದಾರೆ.

  • 19 Jan 2021 12:32 PM (IST)

    ಸುಪ್ರೀಂಕೋರ್ಟ್‌ ರಚಿಸಿದ ಸಮಿತಿಯ ಮೊದಲ ಸಭೆ ಶುರು

    ಕೃಷಿ ತಿದ್ದುಪಡಿ ಕಾಯ್ದೆ ಖಂಡಿಸಿ ರೈತರ ಹೋರಾಟ ವಿಚಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್​ ರಚಿಸಿದ ಸಮಿತಿಯ ಮೊದಲ ಸಭೆ ಶುರುವಾಗಿದೆ.

  • 19 Jan 2021 12:30 PM (IST)

    ಮೀನಿನ ಬಲೆಗೆ ಬಿದ್ದ ಕಾಡಾನೆ

    ಮೀನಿನ ಬಲೆಯಲ್ಲಿ ಸಿಲುಕಿ ಕಾಡಾನೆ ಪರದಾಟ ಪಟ್ಟ ಘಟನೆ ಮೈಸೂರು ಜಿಲ್ಲೆ ಸರಗೂರು ತಾಲೂಕಿನ ಬಿರ್ವಾಳಿ ಗ್ರಾಮದಲ್ಲಿ ನಡೆದಿದೆ. ಬಲೆಯಲ್ಲಿ ಸಿಲುಕಿದ ಕಾಡಾನೆಯನ್ನುಅರಣ್ಯಾಧಿಕಾರಿ ಸಿಬ್ಬಂದಿ ರಕ್ಷಿಸಿದೆ.

  • 19 Jan 2021 12:26 PM (IST)

    ತಮ್ಮ ನೋವು ವ್ಯಕ್ತಪಡಿಸುತ್ತಿದ್ದಾರೆ: ಬಿ.ವೈ.ರಾಘವೇಂದ್ರ

    ಶಾಸಕ ರೇಣುಕಾಚಾರ್ಯ ತಮ್ಮ ನೋವು ವ್ಯಕ್ತಪಡಿಸುತ್ತಿದ್ದಾರೆ. ಪಕ್ಷದ ಚೌಕಟ್ಟಿನಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಲು ಅವಕಾಶವಿದೆ. ಒಂದೆರಡು ದಿನದಲ್ಲಿ ಎಲ್ಲವೂ ಸರಿಯಾಗುವ ವಿಶ್ವಾಸವಿದೆ ಎಂದು ಉಡುಪಿಯಲ್ಲಿ BJP ಸಂಸದ ಬಿ.ವೈ.ರಾಘವೇಂದ್ರ ಹೇಳಿಕೆ ನೀಡಿದ್ದಾರೆ.

  • 19 Jan 2021 12:24 PM (IST)

    ಲಸಿಕೆ ಪೂರೈಕೆಗೆ ಆರ್ಡರ್ ನೀಡಿದ ಕೇಂದ್ರ ಸರ್ಕಾರ

    ಕೊವ್ಯಾಕ್ಸಿನ್ 2ನೇ ಬ್ಯಾಚ್ 45 ಲಕ್ಷ ಡೋಸ್ ಲಸಿಕೆ ಪೂರೈಕೆಗೆ ಹೈದರಾಬಾದ್‌ನಲ್ಲಿರುವ ಭಾರತ್ ಬಯೋಟೆಕ್‌ನ ಕೊವ್ಯಾಕ್ಸಿನ್ ಲಸಿಕೆಗೆ ಕೇಂದ್ರ ಸರ್ಕಾರ ಆರ್ಡರ್ ನೀಡಿದೆ.

  • 19 Jan 2021 12:20 PM (IST)

    ದೆಹಲಿ ಪೊಲೀಸ್ ಅಧಿಕಾರಿಗಳ ಜೊತೆ ಅಮಿತ್ ಶಾ ಚರ್ಚೆ

    ಜನವರಿ 26ರಂದು ಗಣರಾಜ್ಯೋತ್ಸವ ಕಾರ್ಯಕ್ರಮ ಹಿನ್ನೆಲೆ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಕಾನೂನು ಸುವ್ಯವಸ್ಥೆ ವಿಚಾರವಾಗಿ ದೆಹಲಿ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಯುತ್ತಿದೆ.

  • 19 Jan 2021 12:18 PM (IST)

    ಅಮಿತ್ ಶಾ ಮುಂದೆ ಮಾತನಾಡುವ ಧೈರ್ಯವಿಲ್ಲ: ಬಂಡೆಪ್ಪ ಕಾಶಂಪುರ

    ಬಾಗಲಕೋಟೆ ಕಾರ್ಯಕ್ರಮದಲ್ಲಿ ಕನ್ನಡ ನಿರ್ಲಕ್ಷ್ಯ ವಿಚಾರಕ್ಕೆ ಸಂಬಂಧಿಸಿ ಅಮಿತ್ ಶಾ ಮುಂದೆ ರಾಜ್ಯ ಬಿಜೆಪಿ ನಾಯಕರಿಗೆ ಮಾತನಾಡುವ ಧೈರ್ಯವಿಲ್ಲ. ಆ ಕಾರ್ಯಕ್ರಮದಲ್ಲಿ ಒಂದು ಶಿಷ್ಟಾಚಾರ ಇರಬಹುದು. ಆದರೆ ಕನ್ನಡ ಬಳಸಬಾರದು ಎಂದು ಎಲ್ಲಾದರೂ ಉಂಟಾ? ರಾಜ್ಯ ಬಿಜೆಪಿ ಸರ್ಕಾರ ಇಚ್ಛಾಶಕ್ತಿಯನ್ನ ತೋರಬೇಕು. ಕನ್ನಡ ನಿರ್ಲಕ್ಷಿಸಿರುವುದನ್ನು ಬಲವಾಗಿ ಖಂಡಿಸುತ್ತೇನೆ ಎಂದು ವಿಧಾನಸೌಧದಲ್ಲಿ ಶಾಸಕ ಬಂಡೆಪ್ಪ ಕಾಶಂಪುರ ಹೇಳಿಕೆ ನೀಡಿದ್ದಾರೆ.

  • 19 Jan 2021 12:15 PM (IST)

    ಉದ್ಧವ್ ಠಾಕ್ರೆ ಟ್ವೀಟ್: ಕನ್ನಡಪರ ಸಂಘಟನೆಗಳಿಂದ ಧರಣಿ

    ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಟ್ವೀಟ್‌ನ ಖಂಡಿಸಿ ದಾವಣಗೆರೆಯಲ್ಲಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯುತಿದ್ದು, ಸಿಎಂ ಉದ್ಧವ್ ಠಾಕ್ರೆ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • 19 Jan 2021 12:10 PM (IST)

    ವಿನಾಯಕನ ದರ್ಶನ ಪಡೆದ ಮುಖ್ಯಮಂತ್ರಿ ಯಡಿಯೂರಪ್ಪ

    ಸಿಎಂ ಯಡಿಯೂರಪ್ಪ ಆನೆಗುಡ್ಡೆ ದೇವಸ್ಥಾನಕ್ಕೆ ಭೇಟಿ ನೀಡಿ ವಿನಾಯಕನ ದರ್ಶನ ಪಡೆದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ದೇವಸ್ಥಾನಕ್ಕೆ ಆಗಮಿಸಿದ್ದು, ಪುತ್ರ ಸಂಸದ ಬಿವೈ ರಾಘವೇಂದ್ರ , ಶೋಭಾ ಕರಂದ್ಲಾಜೆ ಸಾಥ್ ನೀಡಿದರು.

  • 19 Jan 2021 12:06 PM (IST)

    ಸಿದ್ದರಾಮಯ್ಯ ಹೇಳಿಕೆಗೆ ಬಸವರಾಜ ಬೊಮ್ಮಾಯಿ ಟೀಕೆ

    ಅಮಿತ್ ಶಾ ಸುಳ್ಳಿನ ಮೂಟೆ ಉರುಳಿಸಿ ಹೋಗಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯರದ್ದು ಕಾಮಾಲೆ ಕಣ್ಣು. ಇನ್ನೂ ಭೂತಕಾಲದಲ್ಲೇ ಇದ್ದಾರೆ. ಸಿದ್ದರಾಮಯ್ಯ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

  • 19 Jan 2021 11:58 AM (IST)

    ಘಾಟಿ ಸುಬ್ರಮಣ್ಯದಲ್ಲಿ ಬ್ರಹ್ಮರಥೋತ್ಸವಕ್ಕೆ ಚಾಲನೆ

    ಇಂದು ನಾಡಿನೆಲ್ಲೆಡೆ ತುಳಸಿ ಷಷ್ಟಿ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯದಲ್ಲಿ ಬ್ರಹ್ಮರಥೋತ್ಸವಕ್ಕೆ ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿಯಿಂದ ಚಾಲನೆ ಸಿಕ್ಕಿದೆ.

  • 19 Jan 2021 11:54 AM (IST)

    ಕಾಡಾನೆಗಳ ಹಾವಳಿ ಖಂಡಿಸಿ ಪ್ರತಿಭಟನೆ

    ಕೋಲಾರ ಜಿಲ್ಲೆಯ ಗಡಿ ಭಾಗಗಳಲ್ಲಿ ಕಾಡಾನೆಗಳ ಉಪಟಳ ದಿನೇ‌ ದಿನೇ‌ ಹೆಚ್ಚಳವಾಗುತ್ತಿದ್ದು, ಪ್ರಾಣ ಕಳೆದುಕೊಂಡುವರಿಗೆ ಪರಿಹಾರ ಮತ್ತು ಕಾಡಾನೆಗಳಿಂದ ರಕ್ಷಣೆ ನೀಡುವಂತೆ ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆ‌ ಕಾರ್ಯಕರ್ತರು ಕೋಲಾರದ ಉಪ ಅರಣ್ಯ ಸಂರಕ್ಷಾಧಿಕಾರಿಗಳ ಕಚೇರಿ ಮುಂದೆ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.

  • 19 Jan 2021 11:51 AM (IST)

    ಶಿವಪ್ರಕಾಶ್‌ಗೆ ಜಾಮೀನು ಸಿಕ್ಕಿದೆ: ಬಸವರಾಜ್ ಬೊಮ್ಮಾಯಿ

    ಡ್ರಗ್ಸ್ ಪ್ರಕರಣದಲ್ಲಿ ಎ1 ಶಿವಪ್ರಕಾಶ್‌ಗೆ ಜಾಮೀನು ಸಿಕ್ಕಿದೆ. ಉಳಿದವರೆಲ್ಲರನ್ನು ಬಂಧಿಸಲಾಗಿದೆ. ಆದಿತ್ಯ ಆಳ್ವಾನನ್ನು ಕೂಡ ಬಂಧಿಸಿ ತನಿಖೆ ನಡೆಯುತ್ತಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದರು.

  • 19 Jan 2021 11:49 AM (IST)

    ಖಾತೆ ಹಂಚಿಕೆ ಸಿಎಂ ಪರಮಾಧಿಕಾರ: ಬಸವರಾಜ್ ಬೊಮ್ಮಾಯಿ

    ಮಂತ್ರಿ ಮಾಡುವುದು ಮತ್ತು  ಖಾತೆ ಹಂಚಿಕೆ ಮಾಡುವುದು ಸಿಎಂ ಪರಮಾಧಿಕಾರವಾಗಿದೆ. ಇದರ ಬಗ್ಗೆ ಸಿಎಂ ಅಂತಿಮ ನಿರ್ಧಾರವನ್ನು ಅವರೇ ತೆಗೆದುಕೊಳ್ಳುತ್ತಾರೆ ಎಂದು ಬೆಂಗಳೂರಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟರು.

  • 19 Jan 2021 11:46 AM (IST)

    25 ಸಾವಿರ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ ನಿಯೋಜನೆ

    ನೂತನ ಅಧ್ಯಕ್ಷರಾಗಿ ಜೋ ಬೈಡೆನ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭದ್ರತಾ ಪಡೆಗಳಲ್ಲಿರುವವರಿಂದಲೇ ದಾಳಿಯಾಗುವ ಭೀತಿ ಎದುರಾಗಿದ್ದು, ಕಾರ್ಯಕ್ರಮದ ಭದ್ರತೆಗೆ 25 ಸಾವಿರ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್​ನನ್ನು ನಿಯೋಜನೆ ಮಾಡಲಾಗಿದೆ.

  • 19 Jan 2021 11:43 AM (IST)

    ನೂತನ ಅಧ್ಯಕ್ಷರಾಗಿ ಜೋ ಬೈಡೆನ್ ಪ್ರಮಾಣವಚನ‌ ಸ್ವೀಕಾರ: ದಾಳಿ ಭೀತಿ

    ಇಂದು‌ ರಾತ್ರಿ ಅಮೆರಿಕಾದ ನೂತನ ಅಧ್ಯಕ್ಷರಾಗಿ ಜೋ ಬೈಡೆನ್ ಪ್ರಮಾಣವಚನ‌ ಸ್ವೀಕಾರದ ಹಿನ್ನಲೆ ಸಮಾರಂಭದಲ್ಲಿ ಭದ್ರತಾ ಪಡೆಗಳಲ್ಲಿರುವವರಿಂದಲೇ ದಾಳಿ ಭೀತಿ ಎದುರಾಗಿದೆ.

  • 19 Jan 2021 11:40 AM (IST)

    ಮಹಾರಾಷ್ಟ್ರ ಸಿಎಂ ಉದ್ಧಟತನ ಹೇಳಿಕೆ ನೀಡಿದ್ದಾರೆ: ಬಂಡೆಪ್ಪ ಕಾಶಂಪುರ್

    ನಾಡಿನ ಜಲ, ನೆಲ ವಿಚಾರಗಳು ಬಂದರೆ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಇದನ್ನು ನಾನು ಖಂಡಿಸುತ್ತೇನೆ ಎಂದು ಜೆಡಿಎಸ್ ಹಿರಿಯ ಮುಖಂಡ ಬಂಡೆಪ್ಪ ಕಾಶಂಪುರ್ ಹೇಳಿದರು.

  • 19 Jan 2021 11:37 AM (IST)

    ರಾಗಿಣಿಗಿಲ್ಲ ರಿಲೀಫ್: ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

    ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿರುವ ನಟಿ ರಾಗಿಣಿ ದ್ವಿವೇದಿಯ ಜಾಮೀನು ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರಕ್ಕೆ ಮುಂದೂಡಿದೆ.

  • 19 Jan 2021 11:34 AM (IST)

    ನಿವೃತ್ತ ನ್ಯಾಯಮೂರ್ತಿ ವಿರುದ್ದ ಸಿಸಿಬಿಗೆ ದೂರು

    ಯುವರಾಜ್ ಸ್ವಾಮಿ ಕೋಟ್ಯಾಂತರ ರೂ. ಗಳನ್ನು ಹಲವಾರು ಜನರಿಗೆ ಮೋಸ ಮಾಡಿದ್ದಾನೆ. ನಿವೃತ್ತ ನ್ಯಾಯಮೂರ್ತಿಗೆ ಗೌರ್ನರ್ ಹುದ್ದೆ ಕೊಡಿಸುತ್ತೆ ಎಂದು ಮೋಸ ಮಾಡಿದ್ದಾನೆ. ಉನ್ನತ ಹುದ್ದೆಗಾಗಿ ಹಣ ಸಂದಾಯ ಅಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ನ್ಯಾಯಮೂರ್ತಿಗಳು ಹೇಳಿಕೆ ನೀಡಿದ್ದಾರೆ. ಅದರೆ ಹಣ ವ್ಯವಹಾರದ ಬಗ್ಗೆ ಭ್ರಷ್ಟಾಚಾರದ ಅಡಿಯಲ್ಲಿ ತನಿಖೆ ಮಾಡಬೇಕು ಎಂದು ವಕೀಲ ಅಮೃತೇಶ್ ಸಿಸಿಬಿಗೆ ಮನವಿ ಮಾಡಿದ್ದಾರೆ.

  • 19 Jan 2021 11:29 AM (IST)

    ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯದಲ್ಲಿ ಬ್ರಹ್ಮರಥೋತ್ಸವ

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯದಲ್ಲಿ ಬ್ರಹ್ಮರಥೋತ್ಸವವನ್ನು ಕೊರೊನಾ ಹಿನ್ನೆಲೆ ಸರಳವಾಗಿ ಆಚರಿಸಲಾಗುತ್ತಿದೆ. ದೇವಸ್ಥಾನದ ಸಿಬ್ಬಂದಿ ಅಧಿಕಾರಿಗಳು ಮತ್ತು ಕೆಲ ಗಣ್ಯರಿಗೆ ಮಾತ್ರ ರಥೋತ್ಸವದಲ್ಲಿ ಭಾಗಿಯಾಗಲು ಅವಕಾಶವಿದೆ.

  • 19 Jan 2021 11:23 AM (IST)

    ಯಾವುದೇ CD ತೆಗೆದುಕೊಂಡು ದೆಹಲಿಗೆ ಬಂದಿಲ್ಲ: ಎಂ.ಪಿ.ರೇಣುಕಾಚಾರ್ಯ

    ನಾನು ಯಾವುದೇ ಸಿಡಿ ತೆಗೆದುಕೊಂಡು ದೆಹಲಿಗೆ ಬಂದಿಲ್ಲ. ಎಲ್ಲವೂ ಊಹಾಪೋಹ ಸುದ್ದಿ, ಸಿಡಿ ವಿಚಾರ ನನಗೆ ಗೊತ್ತಿಲ್ಲ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿಕೆ ನೀಡಿದ್ದಾರೆ.

  • 19 Jan 2021 11:21 AM (IST)

    ಸಾರಿಗೆ ಇಲಾಖೆ ಜೊತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುತ್ತದೆ: ಸುರೇಶ್ ಕುಮಾರ್

    ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗುವುದಕ್ಕೆ ಸೂಕ್ತ ಬಸ್ ಸೌಲಭ್ಯವಿಲ್ಲದ ವಿಚಾರಕ್ಕೆ ಸಂಬಂಧಿಸಿ ಸಾರಿಗೆ ಇಲಾಖೆ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

  • 19 Jan 2021 11:15 AM (IST)

    ಕ್ರೀಡಾಂಗಣ ಬೇಲಿ ತೆರವಿಗೆ ಆಗ್ರಹಿಸಿ ಬಣಕಲ್ ಬಂದ್

    ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಕ್ರೀಡಾಂಗಣಕ್ಕೆ ಪೊಲೀಸ್ ಇಲಾಖೆಯಿಂದ ಬೇಲಿ ಹಾಕಿದ ಹಿನ್ನೆಲೆ ತೆರವಿಗೆ ಆಗ್ರಹಿಸಿ ಅಂಗಡಿ ಮುಂಗಟ್ಟು ಬಂದ್ ಮಾಡಿ ವರ್ತಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನೆಯಲ್ಲಿ ನೂರಾರು ಸಾರ್ವಜನಿಕರು ಭಾಗಿಯಾಗಿದ್ದಾರೆ.

  • 19 Jan 2021 11:11 AM (IST)

    ಯಾರ ಮೇಲೂ ಯಾವುದೇ ರೀತಿ ಅಸಮಾಧಾನವಿಲ್ಲ: ಎಂ.ಪಿ.ರೇಣುಕಾಚಾರ್ಯ

    ಸಂಘಟನೆ ನಾಯಕರು ನಿನ್ನೆ ಕರೆ ಮಾಡಿ ದೆಹಲಿಗೆ ಬರುವಂತೆ ಹೇಳಿದ್ದರು. ಸಂಘಟನೆ ನಾಯಕರ ಭೇಟಿಯಾಗಿ ಅರ್ಧ ಗಂಟೆ ಚರ್ಚಿಸಿದ್ದೇನೆ. ಯಾರ ಜೊತೆ ಚರ್ಚೆ ಮಾಡಿದ್ದೇನೆ ಎಂಬುದನ್ನು ನಾನು ಹೇಳಲ್ಲ. ನನಗೆ ಯಾರ ಮೇಲೂ ಯಾವುದೇ ರೀತಿ ಅಸಮಾಧಾನವಿಲ್ಲ ಎಂದು ದೆಹಲಿಯಲ್ಲಿ ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

  • 19 Jan 2021 11:08 AM (IST)

    ಸಿದ್ದರಾಮಯ್ಯ ಹೇಳಿಕೆಗೆ S.T.ಸೋಮಶೇಖರ್ ಪ್ರತಿಕ್ರಿಯೆ

    ಸಿಎಂ ಬದಲಾವಣೆಯ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಿದ್ದರಾಮಯ್ಯ ಯಾವಾಗ ಜ್ಯೋತಿಷ್ಯ ಹೇಳ್ತಾರೋ ಗೊತ್ತಾಗಲ್ಲ. ಬಿಡುವಿನ ವೇಳೆ ಜ್ಯೋತಿಷ್ಯ ಕಲಿಯುತ್ತಿರಬೇಕು. ಪದೇ ಪದೇ ಈ ರೀತಿಯಾಗಿ ಹೇಳುವುದನ್ನು ಬಿಡಬೇಕು ಎಂದು ಮೈಸೂರಿನಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಪ್ರತಿಕ್ರಿಯಿಸಿದ್ದಾರೆ.

  • 19 Jan 2021 11:05 AM (IST)

    ಮಕ್ಕಳಿಂದ ಭಿಕ್ಷಾಟನೆ, ವ್ಯಾಪಾರ: ತಡೆಯಲು ಕಾರ್ಯಾಗಾರ

    ಮಕ್ಕಳಿಂದ ಭಿಕ್ಷಾಟನೆ, ಬೀದಿಗಳಲ್ಲಿ ವ್ಯಾಪಾರ ವಿಚಾರಕ್ಕೆ ಸಂಬಂಧಿಸಿ ಇದನ್ನು ತಡೆಯಲು ಬೆಂಗಳೂರಿನ ಟೌನ್‌ಹಾಲ್ ಮುಂದೆ ನಗರ ಕಾರ್ಯಪಡೆ ಸಮಿತಿ ಸದಸ್ಯರ ಕಾರ್ಯಾಗಾರ ನಡೆಯಲಿದೆ. ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ , ಪೊಲೀಸ್ ಅಧಿಕಾರಿಗಳು ಮತ್ತು ಮಕ್ಕಳ ಹಕ್ಕುಗಳ ಆಯೋಗದ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

  • 19 Jan 2021 11:01 AM (IST)

    ರಾಜ್ಯ ವೀಕ್ಷಕರ ಪಟ್ಟಿಗೆ ಜಿಟಿಡಿ ಪ್ರತಿಕ್ರಿಯೆ

    ಜೆಡಿಎಸ್ ರಾಜ್ಯ ವೀಕ್ಷಕರ ಪಟ್ಟಿಯಲ್ಲಿ ಹೆಸರಿಲ್ಲದ ವಿಚಾರಕ್ಕೆ ಸಂಬಂಧಿಸಿ ಜೆಡಿಎಸ್ ವೀಕ್ಷಕರ ಪಟ್ಟಿಯ ಬಗ್ಗೆ ಹೇಳುವುದಕ್ಕೆ ಏನಿದೆ? ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ ಏನೂ ನಡೆಯಲಿಲ್ಲ. ಈಗ ಕೇವಲ ಶಾಸಕ, ನನ್ನ ಮಾತನ್ನು ಯಾರು ಕೇಳುತ್ತಾರೆ. ಎಲ್ಲ ಮೈಸೂರು ಹೈಕಮಾಂಡ್ ಹೇಳಿದಂತೆ ಮಾಡಿದ್ದಾರೆ.ನನಗೂ 75 ವರ್ಷ ವಯಸ್ಸಾಯ್ತು, ಈಗ ರಾಜಕಾರಣ ಕಷ್ಟ. ಇನ್ನೆರಡು ವರ್ಷ ನಾನು ಶಾಸಕನಾಗಿ ಇರುತ್ತೇನೆ. ಆ ಮೇಲೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿರ್ಧರಿಸ್ತೇನೆ ಎಂದು ಮೈಸೂರಿನಲ್ಲಿ JDS ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

  • 19 Jan 2021 10:57 AM (IST)

    ಕುಂಬಾಶಿ ದೇವಸ್ಥಾನದಲ್ಲಿ ಗಣಯಾಗ ಆರಂಭ

    ಮುಖ್ಯಮಂತ್ರಿ ಯಡಿಯೂರಪ್ಪ ಭಾಗಿಯಾಗಲಿರುವ ಉಡುಪಿ ಜಿಲ್ಲೆಯ ಕುಂಬಾಶಿ ಮಹಾಗಣಪತಿ ದೇವಸ್ಥಾನದಲ್ಲಿ 1008 ಗಣಯಾಗ ಆರಂಭವಾಗಿದೆ.

  • 19 Jan 2021 10:55 AM (IST)

    ಬಿಎಂಟಿಸಿ ಬಸ್​ಗಳು ಶಾಲೆಗಳಾಗಿ ಮಾರ್ಪಾಡು

    ಬೆಂಗಳೂರಿನ ಸ್ಲಮ್​ ಮಕ್ಕಳು ಶಾಲೆಗಳು ಹೋಗದ ಕಾರಣ ಬಿಬಿಎಂಪಿ ಹೊಸ ನಿರ್ಧಾರ ಕೈಗೊಂಡಿದೆ. ಸ್ಲಮ್​ಗಳಿಗೆ ಬಿಎಂಟಿಸಿ ಬಸ್​ಗಳನ್ನು ತೆಗೆದುಕೊಂಡು ಹೋಗಿ ಬಿಬಿಎಂಪಿ ಶಿಕ್ಷಕರಿಂದ ಪಾಠ ಮಾಡಲು ನಿರ್ಧರಿಸಲಾಗಿದೆ. ಕಾರ್ಯಾಗಾರದಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾಹಿತಿ ನೀಡಿದ್ದಾರೆ.

  • 19 Jan 2021 10:47 AM (IST)

    ಕಾಫಿ ತೋಟದಲ್ಲಿ ಮೊಕ್ಕಾಂ ಹೂಡಿದ ಕಿಂಗ್ ಕೋಬ್ರಾ ರಕ್ಷಣೆ

    ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೋಡದಿಣ್ಣೆಯ ಸುಧೀರ್ ಗೌಡ ಎಂಬುವವರ ಕಾಫಿ ತೋಟದಲ್ಲಿದ್ದ ಕಾಳಿಂಗ ಸರ್ಪವನ್ನು ಹಿಡಿದು ಚಾರ್ಮಾಡಿ ಘಾಟ್ ಗೆ ಬಿಟ್ಟು ರಕ್ಷಿಸಿದ್ದಾರೆ.

  • 19 Jan 2021 10:44 AM (IST)

    ಲಾರಿ ಹರಿದು 15 ಕಾರ್ಮಿಕರ ಸಾವು: 2 ಲಕ್ಷ ಪರಿಹಾರ ಘೋಷಣೆ

    ಸೂರತ್‌ನಲ್ಲಿ ಲಾರಿ ಹರಿದು 15 ಕಾರ್ಮಿಕರ ಸಾವು ಪ್ರಕರಣಕ್ಕೆ ಸಂಬಂಧಿಸಿ ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರೂ. ಪರಿಹಾರವನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಘೋಷಿಸಿದ್ದು, ಗಾಯಾಳುಗಳಿಗೆ 50,000 ರೂ. ನೀಡಲಾಗುತ್ತದೆ ಎಂದು ಪಿಎಂಒ ತಿಳಿಸಿದ್ದಾರೆ.

  • 19 Jan 2021 10:40 AM (IST)

    ‘ಪರಾಕ್ರಮ ದಿವಸ’ ಆಚರಣೆ ಘೋಷಣೆ

    ಸುಭಾಷ್‌ ಚಂದ್ರ ಬೋಸ್ ಜಯಂತಿ ಹಿನ್ನೆಲೆ ಪ್ರತಿವರ್ಷ ಜ.23 ರಂದು ‘ಪರಾಕ್ರಮ ದಿವಸ’ ಆಚರಣೆ ಎಂದು ಕೇಂದ್ರ ಸಂಸ್ಕೃತಿ ಸಚಿವಾಲಯ ಘೋಷಿಸಿದೆ.

  • 19 Jan 2021 10:38 AM (IST)

    ಬಿಬಿಎಂಪಿ ಲಸಿಕೆ ಪ್ಲ್ಯಾನ್ ಲೆಕ್ಕಾಚಾರ ಉಲ್ಟಾ

    ಬೆಂಗಳೂರಿನಲ್ಲಿ ಈವರೆಗೆ 12,555 ಜನರಿಗೆ ಲಸಿಕೆ ನೀಡಲಾಗಿದೆ. ಪ್ರತಿನಿತ್ಯ 20 ಸಾವಿರ ಜನರಿಗೆ ಲಸಿಕೆ ನೀಡುವ ಗುರಿ ಇತ್ತು. ಆದರೆ ಕೇವಲ 7 ರಿಂದ 8 ಸಾವಿರ ಜನರಿಗೆ ಮಾತ್ರ ಲಸಿಕೆ ನೀಡಲಾಗುತ್ತಿದೆ.

  • 19 Jan 2021 10:37 AM (IST)

    ವಾಲ್ಮೀಕಿ ಜಾತ್ರೆ: ಭಕ್ತರ ಸಭೆ ನಡೆಸಿದ ಪ್ರಸನ್ನಾನಂದಪುರಿ ಶ್ರೀ

    ಫೆಬ್ರವರಿ 8 ಮತ್ತು 9 ರಂದು ವಾಲ್ಮೀಕಿ ಜಾತ್ರೆ ಹಿನ್ನೆಲೆ ದಾವಣಗೆರೆ ಜಿಲ್ಲೆ ಜಗಳೂರಿನಲ್ಲಿ ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಶ್ರೀ ಗಳು ಭಕ್ತರ ಸಭೆ ನಡೆಸಿದರು.

  • 19 Jan 2021 10:34 AM (IST)

    ಅಸಮಧಾನಿತರ ಮುಂದುವರೆದ ದೆಹಲಿ ದಂಡಯಾತ್ರೆ

    ಹೈಕಮಾಂಡ್ ಭೇಟಿಯಾಗಿ ದೂರು ನೀಡಲಿರುವ ರೇಣುಕಾಚಾರ್ಯ ಇಂದು ಬೆಳಗ್ಗೆ ದೆಹಲಿಗೆ ತೆರಳಿದ್ದಾರೆ. ರೇಣುಕಾಚಾರ್ಯ ಜತೆ ಅರವಿಂದ್ ಬೆಲ್ಲದ್ ಸಹ ತೆರಳಿದ್ದಾರೆ.

  • 19 Jan 2021 10:31 AM (IST)

    ಉಚ್ಚಿಲ ಮಹಾಲಕ್ಷ್ಮೀ ದೇಗುಲಕ್ಕೆ ಸಿಎಂ ಬಿಎಸ್‌ವೈ ಭೇಟಿ

    ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಉಚ್ಚಿಲದ ದೇಗುಲಕ್ಕೆ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ದೇವರ ದರ್ಶನ ಪಡೆದರು.

  • 19 Jan 2021 10:29 AM (IST)

    JDS ಪಕ್ಷ ಸಂಘಟನೆಗೆ ಹೆಚ್‌ಡಿಕೆ ಪ್ಲ್ಯಾನ್

    ರಾಜ್ಯಾಧ್ಯಕ್ಷರ ಜೊತೆಗೆ ನಾಲ್ಕು ಹೊಸ ಕಾರ್ಯಧ್ಯಕ್ಷರ ನೇಮಕ ಮಾಡಲು ಹೆಚ್‌.ಡಿ.ಕುಮಾರಸ್ವಾಮಿ ತೀರ್ಮಾನಿಸಿದ್ದು,ಸಂಸದ ಪ್ರಜ್ವಲ್‌ರನ್ನು ಕಾರ್ಯಾಧ್ಯಕ್ಷ ಮಾಡುವ ಸಾಧ್ಯತೆಯಿದೆ.

  • 19 Jan 2021 10:27 AM (IST)

    ರೆಬೆಲ್ ಶಾಸಕರ ಸಭೆ ಸಾಧ್ಯತೆ

    ಸಚಿವ ಸ್ಥಾನ ಸಿಗದ BJP ಶಾಸಕರು ಬೆಂಗಳೂರಿನಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ನಿವಾಸದಲ್ಲಿಇಂದು ಸಭೆ ಸೇರುವ ಸಾಧ್ಯತೆಯಿದ್ದು, ಎಲ್ಲ ಅಸಮಾಧಾನಿತರ ಜೊತೆ ಚರ್ಚಿಸಿ ನಂತರ ದೆಹಲಿಗೆ ಹೋಗಲು ರೆಬೆಲ್ ಶಾಸಕರ ನಿರ್ಧಾರಿಸಲಿದ್ದಾರೆ.

  • 19 Jan 2021 10:20 AM (IST)

    ಕಮಲ್ ಹಾಸನ್ ಶಸ್ತ್ರ ಚಿಕಿತ್ಸೆ ಯಶಸ್ವಿ

    ಚಿತ್ರನಟ ಕಮಲ್ ಹಾಸನ್ ಅವರ ಕಾಲಿನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದ್ದು, ನಾಲ್ಕೈದು ದಿನಗಳಲ್ಲಿ ಆಸ್ಪತ್ರೆಯಿಂದ ಕಮಲ್ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

  • 19 Jan 2021 10:20 AM (IST)

    ಗೋಹತ್ಯೆ ನಿಷೇಧ ಕಾನೂನು ಜಾರಿ ಸಮಾಧಾನ ತಂದಿದೆ: ಸಿಎಂ ಯಡಿಯೂರಪ್ಪ

    ಗೋಹತ್ಯೆ ನಿಷೇಧ ಮಾಡುವುದು ಗಾಂಧೀಜಿ ಕನಸಾಗಿತ್ತು. ಇದೀಗ ಗೋಹತ್ಯೆ ನಿಷೇಧ ಕಾನೂನು ಜಾರಿ ಸಮಾಧಾನ ತಂದಿದೆ. ಬೇರೆ ಬೇರೆ ಕಾರಣಗಳಿಂದ ಮುಂದೂಡುತ್ತಾ ಬಂದರು ಕೂಡಾ ಈಗ ನಾವು ಕಾಯ್ದೆಯನ್ನು ತಕ್ಷಣಕ್ಕೆ ಜಾರಿಗೆ ತಂದಿದ್ದೇವೆ ಎಂದು ಉಡುಪಿಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.

  • 19 Jan 2021 10:18 AM (IST)

    ರಾಜಕೀಯ ಮರೆತು ಧಾರ್ಮಿಕ ಪ್ರವಾಸಕ್ಕಾಗಿ ಬಂದಿದ್ದೇನೆ: ಬಿಎಸ್​ವೈ

    ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ಸಿಎಂ ಯಡಿಯೂರಪ್ಪ, ಯಾವಾಗಲೂ ನಾವು ರಾಜಕೀಯ ಗೊಂದಲದಲ್ಲಿರುತ್ತೇವೆ. ಆದರೆ ಇದೀಗ ರಾಜಕೀಯ ಮರೆತು ಧಾರ್ಮಿಕ ಪ್ರವಾಸಕ್ಕಾಗಿ ಬಂದಿದ್ದೇನೆ. ಇಲ್ಲಿನ ಮೀನುಗಾರರ ಸಮಸ್ಯೆ ಏನಿದೆ ಎಂದು ತಿಳಿದುಕೊಳ್ಳುತ್ತೇನೆ ಎಂದು ಅಭಿಪ್ರಾಯಪಟ್ಟರು.

  • 19 Jan 2021 10:15 AM (IST)

    ಗುಡ್ಡಕ್ಕೆ ಬಿದ್ದ ಕಾಡ್ಗಿಚ್ಚು: ಮೆಕ್ಕೆಜೋಳ ಅಗ್ನಿಗಾಹುತಿ

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾವಿನಕಟ್ಟೆ ಗುಡ್ಡಕ್ಕೆ ಬಿದ್ದ ಕಾಡ್ಗಿಚ್ಚಿನಿಂದ ಸಾಸ್ವೆಹಳ್ಳಿಯ 22 ಎಕರೆಯಲ್ಲಿ ಬೆಳೆದಿದ್ದ ಮೆಕ್ಕೆಜೋಳ ಸುಟ್ಟು ಭಸ್ಮವಾಗಿದೆ.

  • 19 Jan 2021 10:12 AM (IST)

    ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಕಂಡು ಡಿಸಿ ಗರಂ

    ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ನಿನ್ನೆ ಸಂಜೆ ಭೇಟಿ ನೀಡಿದ್ದ ಬಳ್ಳಾರಿ ಜಿಲ್ಲಾಧಿಕಾರಿ ಆಸ್ಪತ್ರೆ ಅವ್ಯವಸ್ಥೆ ಕಂಡು ವೈದ್ಯಾಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

  • 19 Jan 2021 10:09 AM (IST)

    16 ರೈಲುಗಳ ಸಂಚಾರದಲ್ಲಿ ವ್ಯತ್ಯಯ

    ಮಂಜು ಕವಿದು ಹಳಿ ಕಾಣದ ಹಿನ್ನೆಲೆ ಉತ್ತರ ರೈಲ್ವೆಯ 16 ರೈಲುಗಳ ಸಂಚಾರವನ್ನು ವ್ಯತ್ಯಯಗೊಳಿಸಲಾಗಿದೆ.

  • 19 Jan 2021 10:07 AM (IST)

    ಮುಸ್ಲಿಂ ಸಂಘಟನೆಗಳಿಂದ ಬೆಂಗಳೂರು ಬಂದ್‌ಗೆ ಕರೆ

    ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ವಿಚಾರಕ್ಕೆ ಸಂಬಂಧಿಸಿ ಅಮಾಯಕರ ಬಿಡುಗಡೆಗೆ ಆಗ್ರಹಿಸಿ ಮತ್ತು ಲವ್ ಜಿಹಾದ್, ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಯನ್ನು ರದ್ದು ಮಾಡಲು ಒತ್ತಾಯಿಸಿ ಜನವರಿ 22 ರಂದು ಬೆಂಗಳೂರು ಮುಸ್ಲಿಂ ಸಂಘಟನೆಗಳು ಬೆಂಗಳೂರು ಬಂದ್‌ಗೆ ಕರೆ ನೀಡಲಾಗಿದೆ.

  • 19 Jan 2021 10:03 AM (IST)

    ಮೋದಿ ಭೇಟಿಯಾಗಲಿರುವ ತಮಿಳುನಾಡು ಸಿಎಂ

    ತಮಿಳುನಾಡು ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆ ತಮಿಳುನಾಡು ಸಿಎಂ ಪಳನಿಸ್ವಾಮಿ ಬೆಳಿಗ್ಗೆ 10.30ಕ್ಕೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗುತ್ತಾರೆ.

  • 19 Jan 2021 10:01 AM (IST)

    ದರೋಡೆ ಗ್ಯಾಂಗ್ ಕರಾಮತ್ತು ಸಿಸಿ ಕ್ಯಾಮರಾದಲ್ಲಿ ಸೆರೆ

    ಗದಗ ನಗರದ ಹಾತಲಗೇರಿ ರಸ್ತೆಯ SBI ಎಟಿಎಂನಲ್ಲಿ ದರೋಡೆಗೆ ಯತ್ನಿಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

  • 19 Jan 2021 09:58 AM (IST)

    ದೆಹಲಿಗೆ ಆಂಧ್ರ ಸಿಎಂ‌ ಭೇಟಿ

    ಮಧ್ಯಾಹ್ನ 3 ಗಂಟೆಗೆ ಗನ್ನಾವರಂ ವಿಮಾನ ನಿಲ್ದಾಣದಿಂದ‌ ದೆಹಲಿಗೆ ಪಯಾಣಿಸಲಿರುವ ಆಂಧ್ರದ ಸಿಎಂ ಜಗನ್ ಮೋಹನ್ ರೆಡ್ಡಿ ಸಂಜೆ‌ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಮಾಡಿ ಹಲವು ಮಹತ್ವದ‌ ವಿಷಯ ಕುರಿತು ಚರ್ಚೆ ಮಾಡುವ ಸಾಧ್ಯತೆಯಿದೆ.

  • 19 Jan 2021 09:54 AM (IST)

    ಅಗ್ನಿ ಆಕಸ್ಮಿಕ: ಬೆಲೆ‌ ಬಾಳುವ ಸಾಮಗ್ರಿಗಳು‌‌ ಬೆಂಕಿ‌ಗೆ ಆಹುತಿ

    ಆಂಧ್ರದ ಪೂರ್ವ ಗೋದಾವರಿ ಜಿಲ್ಲೆಯ ತೂನಿ ರೈಲ್ವೆ‌ ನಿಲ್ದಾಣದ ಸಮೀಪದ ಸಿಗ್ನಲ್‌ವಿಭಾಗದ ಕಚೇರಿಯ ಎದುರಿನಲ್ಲಿ ಆಕಸ್ಮಿಕವಾಗಿ ಬೆಂಕಿ ಹತ್ತಿದ್ದು, ಖಾಸಗಿ ಗುತ್ತಿಗೆದಾರರೊಬ್ಬರಿಗೆ ಸೇರಿದ‌ ಭಾರಿ ಪ್ರಮಾಣದ ಬೆಲೆ‌ ಬಾಳುವ ಸಾಮಗ್ರಿಗಳು‌‌ ಸುಟ್ಟು ಹೋಗಿವೆ. ಸ್ಥಳಕ್ಕೆ ದೌಡಾಯಿಸಿದ ಅಗ್ನಿ ಶ್ಯಾಮಕ ದಳ ಬೆಂಕಿಯನ್ನು‌ ನಂದಿಸುತ್ತಿದೆ.

  • 19 Jan 2021 09:51 AM (IST)

    ಅತ್ಯಾಚಾರ, ಕಿರುಕುಳ: ಪೋಕ್ಸೊ ಕೇಸ್ ದಾಖಲು

    ಮಹಿಳೆಯ ಮೇಲೆ ನಿರಂತರ ಅತ್ಯಾಚಾರ, ಕಿರುಕುಳ ಆರೋಪಕ್ಕೆ ಸಂಬಂಧಿಸಿ SDPI ಮುಖಂಡ ಸಿದ್ದೀಖ್ ವಿರುದ್ಧ ಮಂಗಳೂರು ಹೊರವಲಯದ ಉಳ್ಳಾಲ ಠಾಣೆಯಲ್ಲಿ ಪೋಕ್ಸೊ ಕೇಸ್ ದಾಖಲಾಗಿದೆ.

  • 19 Jan 2021 09:48 AM (IST)

    ಜೆಡಿಎಸ್ ರಾಜ್ಯ ವೀಕ್ಷಕರ ಪಟ್ಟಿಯಲ್ಲಿ ಜಿಟಿಡಿ ಹೆಸರಿಲ್ಲ..!

    ರಾಜ್ಯ ವೀಕ್ಷಕರ‌‌ ಪಟ್ಟಿ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿ ಮೈಸೂರು ವಿಭಾಗದ ವೀಕ್ಷಕರ ಪಟ್ಟಿಯಲ್ಲಿ ಶಾಸಕ ಜಿ.ಟಿ.ದೇವೇಗೌಡಗೆ ವರಿಷ್ಠರು ಸ್ಥಾನ ನೀಡಲಿಲ್ಲ.

  • 19 Jan 2021 09:45 AM (IST)

    ಕುಂಭಾಶಿಯ ಆನೆಗುಡ್ಡಕ್ಕೆ ಸಿಎಂ ಬಿಎಸ್‌ವೈ ಭೇಟಿ

    ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕುಂಭಾಶಿಯ ಆನೆಗುಡ್ಡಕ್ಕೆ ಸಿಎಂ ಬಿ.ಎಸ್​.ವೈ.ಯಡಿಯೂರಪ್ಪ ಇಂದು ಭೇಟಿ ನೀಡುತ್ತಾರೆ. ಕರಾವಳಿ ಭಾಗದ ಪ್ರಸಿದ್ಧ ಗಣಪತಿ ಕ್ಷೇತ್ರವಾಗಿರುವ ಆನೆಗುಡ್ಡದಲ್ಲಿ ಹಾಸನದ ಜೆ.ಪಿ.ರಾಘವೇಂದ್ರ ರಾವ್​ ಕುಟುಂಬದಿಂದ ಯಾಗ ನೆರವೇರಿಸಲಾಗುತ್ತದೆ.

  • 19 Jan 2021 09:41 AM (IST)

    ಬೋರ್‌ವೆಲ್‌ ಲಾರಿಯಲ್ಲಿ ಬೆಂಕಿ: ತಪ್ಪಿದ ಅನಾಹುತ

    ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ಬೋರ್‌ವೆಲ್‌ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಹೊತ್ತಿದ್ದ ಬೆಂಕಿಯನ್ನು ಸ್ಥಳೀಯರು ನಂದಿಸಿದರು.

  • 19 Jan 2021 09:38 AM (IST)

    ಇಂಗ್ಲೆಂಡ್ ಪ್ರಯಾಣ ನಿರ್ಬಂಧ ತೆರವುಗೊಳಿಸಿದ ಟ್ರಂಪ್

    ಕೊರೊನಾ ಸೋಂಕು ಹೆಚ್ಚಿದ್ದರೂ ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂಗ್ಲೆಂಡ್ ಮತ್ತು ಬ್ರೆಜಿಲ್ ಪ್ರಯಾಣ ನಿರ್ಬಂಧ ತೆರವುಗೊಳಿಸಿ, ಜನವರಿ 26ರಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದಾರೆ.

  • 19 Jan 2021 09:34 AM (IST)

    ಪತಿ ನೇಣಿಗೆ ಶರಣು: ಆತ್ಮಹತ್ಯೆಯ ದೃಶ್ಯ ಸೆರೆ

    ಪತ್ನಿಯ ಜೊತೆ ಜಗಳವಾಡಿಕೊಂಡು ಮದ್ಯದ ಅಮಲಿನಲ್ಲಿ ಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನ ಬಸವೇಶ್ವರನಗರದ ಮಂಜುನಾಥ ನಗರದಲ್ಲಿ ನಡೆದಿದೆ. ಆತ್ಮಹತ್ಯೆಯ ದೃಶ್ಯ ನೆರೆಮನೆಯವರ ಮೊಬೈಲ್‌ನಲ್ಲಿ ಸೆರೆಯಾಗಿದೆ.

  • 19 Jan 2021 09:31 AM (IST)

    ಡ್ರಗ್ಸ್ ಪ್ರಕರಣ: ನಟಿ ರಾಗಿಣಿ ದ್ವಿವೇದಿ ಜಾಮೀನು ಅರ್ಜಿ ವಿಚಾರಣೆ

    ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ನಲ್ಲಿ ಇಂದು ನಟಿ ರಾಗಿಣಿ ದ್ವಿವೇದಿಯ ಜಾಮೀನು ಅರ್ಜಿ ವಿಚಾರಣೆ  ನಡೆಯಲಿದೆ.

  • 19 Jan 2021 09:23 AM (IST)

    10ನೇ ಸುತ್ತಿನ ಚರ್ಚೆ ನಾಳೆಗೆ ಮುಂದೂಡಿದ ಕೇಂದ್ರ ಸರ್ಕಾರ

    ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತರ ಹೋರಾಟ ವಿಚಾರಕ್ಕೆ ಸಂಬಂಧಿಸಿ ಇಂದು ನಿಗದಿಯಾಗಿದ್ದ 10ನೇ ಸುತ್ತಿನ ಕೇಂದ್ರ ಸರ್ಕಾರ ಮತ್ತು ರೈತರ ನಡುವಿನ ಮಾತುಕತೆಯನ್ನು ನಾಳೆ ಮಧ್ಯಾಹ್ನ 2 ಗಂಟೆಗೆ ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯಲಿದೆ.

  • 19 Jan 2021 09:21 AM (IST)

    ದೇಗುಲ ಟ್ರಸ್ಟ್ ಚೇರ್ಮನ್​ಗೆ ಪ್ರಧಾನಿ ಮೋದಿ ನೇಮಕ

    ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಸೋಮನಾಥ ದೇಗುಲದ ಟ್ರಸ್ಟ್‌ ಚೇರ್ಮನ್‌ ಆಗಿ  ಪ್ರಧಾನಿ ನರೇಂದ್ರ ಮೋದಿಯನ್ನು ನೇಮಕ ಮಾಡಲಾಗಿದೆ.

  • 19 Jan 2021 09:19 AM (IST)

    ಇಂದಿನಿಂದ ಶಾಲೆ-ಕಾಲೇಜು ಆರಂಭ

    ತಮಿಳುನಾಡಿನಲ್ಲಿ ಇಂದಿನಿಂದ 10 ಮತ್ತು 12ನೇ ತರಗತಿಗಳು ಆರಂಭವಾಗುತ್ತಿದ್ದು, ಕೊಠಡಿಯೊಂದರಲ್ಲಿ 25 ವಿದ್ಯಾರ್ಥಿಗಳಿಗಷ್ಟೇ ಅವಕಾಶ ನೀಡಲಾಗಿದೆ.

  • 19 Jan 2021 09:16 AM (IST)

    ರಾಗಿಣಿ ಜೈಲು ವಾಸಕ್ಕೆ ಮಹಾ ಕಾರಣ..!

    ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿ ತುಪ್ಪದ ಬೆಡಗಿ ರಾಗಿಣಿ ಇಷ್ಟೊಂದು ದಿನ ಜೈಲಿನಲ್ಲೇ ಇರೋದಕ್ಕೆ  ಎರಡು ಕಾರಣಗಳೆಂದರೆ ರಾಗಿಣಿ ನೆಡೆಸಿದ್ದ ಹಾಗೂ ಭಾಗಿಯಾಗಿದ್ದ ಡ್ರಗ್ಸ್ ಪಾರ್ಟಿಯ ಫೋಟೋಗಳು ಲಭ್ಯ ಮತ್ತು  ರಾಗಿಣಿ ವ್ಯಕ್ತಿ ಯೊರ್ವನಿಗೆ ಡ್ರಗ್ಸ್ ಮಾರಾಟ ಮಾಡಿದ್ದು ಸಿಸಿಬಿ ಪತ್ತೆ ಹಚ್ಚಿದ್ದರು.

  • Published On - Jan 19,2021 7:36 PM

    Follow us
    ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
    ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
    ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
    ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
    ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
    ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
    ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
    ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
    ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
    ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
    ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
    ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
    ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
    ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
    ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
    ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
    ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
    ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
    ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
    ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ