ಜಗತ್ತಿನೆಲ್ಲೆಡೆಯ ಸುದ್ದಿ ಕ್ಷಣಾರ್ಧದಲ್ಲಿ ಹರಿದು ಬಂದು ಅಂಗೈ ಸೇರುವಾಗ ಯಾವುದರತ್ತ ಕಣ್ಣು ಹಾಯಿಸಬೇಕು ಎಂಬ ಗೊಂದಲ ಸಹಜ.. ಎಷ್ಟೋ ಬಾರಿ ಸುದ್ದಿಯ ಹೆಸರಿನಲ್ಲಿ ಅಸಂಗತ ಸಂಗತಿಗಳೂ ತೇಲಿ ಬರುತ್ತವೆ. ಅವುಗಳನ್ನು ಸೋಸುವುದೇ ಹರಸಾಹಸ. ನಮ್ಮ ಓದುಗರನ್ನು ಇಂತಹ ಗೊಂದಲಗಳಿಂದ ಪಾರು ಮಾಡಲೆಂದೇ ಪ್ರತಿನಿತ್ಯ Live Blog ಮೂಲಕ ಆಯಾ ಕ್ಷಣದ ಮುಖ್ಯಾಂಶಗಳನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ. ಇದು ನಿಮಗಿಷ್ಟವಾಗಿದೆ ಎನ್ನುವ ನಂಬಿಕೆ ನಮ್ಮದು.. ಬನ್ನಿ ಇಂದಿನ ಸುದ್ದಿಯ ಹರಿವನ್ನು ನೋಡೋಣ. ಸುದ್ದಿಯ ಸಂಪೂರ್ಣ ವಿವರ ವೆಬ್ಸೈಟ್ನ ವಿವಿಧ ವಿಭಾಗಗಳಲ್ಲಿ ಲಭ್ಯವಿರುತ್ತವೆ. ಓದಲು ಮರೆಯದಿರಿ.
ವಿಧಾನ ಪರಿಷತ್ ಉಪ ಸಭಾಪತಿ ಸ್ಥಾನಕ್ಕೆ ಬಿಜೆಪಿ ಎಮ್.ಕೆ. ಪ್ರಾಣೇಶ್ ಆಯ್ಕೆ ಆಗಿದ್ದಾರೆ. ನಾಳೆ ನಾಳೆ ನಾಮಪತ್ರ ಸಲ್ಲಿಕೆ ಆಗಲಿದೆ. ಸಭಾಪತಿ ಸ್ಥಾನ ಜೆಡಿಎಸ್ ಗೆ ಬಿಡಲು ನಿರ್ಧಾರ ಮಾಡಲಾಗಿದೆ. ಸಭಾಪತಿಯಾಗಿ ಬಸವರಾಜ ಹೊರಟ್ಟಿ ಬಹುತೇಕ ಖಚಿತವಾಗಿದೆ.
ಪರೀಕ್ಷೆಗೂ ಮುನ್ನ FDA ಕೀ ಆನ್ಸರ್ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಸಿಎಆರ್ ಕಾನ್ಸ್ಟೇಬಲ್ ಮುಸ್ತಾಕ್ ಕ್ವಾಟಿ ನಾಯ್ಕ್ರನ್ನು ಸಿಸಿಬಿ ನಿನ್ನೆ ತಡರಾತ್ರಿ ವಶಪಡಿಸೊಕೊಂಡಿದೆ.
ದೆಹಲಿಯ ಕೆಂಪುಕೋಟೆ ಮೇಲೆ ನಡೆದ ದಾಳಿ ಹಿನ್ನೆಲೆ ಕೆಲವು ದಿನಗಳ ಕಾಲ ಕೆಂಪುಕೋಟೆಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಕೆಂಪುಕೋಟೆಯ ಟಿಕೆಟ್ ಕೌಂಟರ್, ಸೆಕ್ಯೂರಿಟಿ ಕೌಂಟರ್, ಮೆಟಲ್ ಡಿಟೆಕ್ಟರ್, ಸ್ಕ್ಯಾನಿಂಗ್ ಯಂತ್ರ ಧ್ವಂಸವಾಗಿದೆ. ಹೀಗಾಗಿ ಎಲ್ಲವನ್ನೂ ಮೊದಲಿನ ಸ್ಥಿತಿಗೆ ತರಲು ಕಾಲಾವಕಾಶ ಬೇಕಾದ್ದರಿಂದ ಜನರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.
ಸಿಎಂ, ಈಶ್ವರಪ್ಪ ಕುಟುಂಬಸ್ಥರ ವಿರುದ್ಧ ಗಣಿಗಾರಿಕೆ ಆರೋಪಕ್ಕೆ ಸಂಬಂಧಿಸಿ ಮಾತನಾಡಿದ ಗಣಿ & ಭೂವಿಜ್ಞಾನ ಸಚಿವ ನಿರಾಣಿ ಕಾಂಗ್ರೆಸ್ನವರು ಸುಮ್ಮನೇ ಆರೋಪಿಸುವುದು ಸರಿಯಲ್ಲ. ಅಕ್ರಮವಾಗಿದ್ದರೆ ಯಾರೇ ದೊಡ್ಡವರಾಗಿದ್ದರೂ ಕ್ರಮ ನಿಶ್ಚಿತ. ಯಾರು ಎಷ್ಟೇ ದೊಡ್ಡವರಾಗಿರಲಿ ಕ್ರಮ ಅನಿವಾರ್ಯ ಎಂದು ತಿಳಿಸಿದ್ದಾರೆ.
ಸಭೆ ನಡೆಸಿದ ಗಣಿ ಸಚಿವ ಮುರುಗೇಶ್ ನಿರಾಣಿ, 15 ದಿನಗಳಿಗೊಮ್ಮೆ ಅದಾಲತ್ ನಡೆಸಲು ನಿರ್ಧರಿಸಿದ್ದೇವೆ. ಒಂದೊಂದು ಕಂದಾಯ ವಿಭಾಗದಲ್ಲಿ ಅದಾಲತ್ ನಡೆಸುತ್ತೇವೆ. ಅಕ್ರಮ ಹಾಗೂ ಸಕ್ರಮ ಗಣಿಗಾರಿಕೆ ಪಟ್ಟಿ ಮಾಡುತ್ತೇವೆ. ಕೈಗಾರಿಕೆಗಳ ಅಭಿವೃದ್ಧಿ ದೃಷ್ಟಿಯಿಂದ ಗಣಿಗಾರಿಕೆ ಅವಶ್ಯಕ. ಆದರೆ ಅಕ್ರಮ ಗಣಿಗಾರಿಕೆಗೆ ಅವಕಾಶವನ್ನ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಿಂಸೆ ಪ್ರಚೋದಿಸುವ ಮಾಹಿತಿ ಮತ್ತು ಪೋಸ್ಟರ್ ಹಾಕಿದ್ದ ಹಿನ್ನೆಲೆ ಅಕೌಂಟ್ಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಟ್ವಿಟ್ಟರ್, 500ಕ್ಕೂ ಹೆಚ್ಚು ಖಲಿಸ್ತಾನ ಟ್ವಿಟ್ಟರ್ ಖಾತೆಗಳನ್ನು ಅಮಾನತುಗೊಳಿಸಿದೆ.
ದೆಹಲಿಯಲ್ಲಿ ನಿನ್ನೆ ನಡೆದ ಪ್ರತಿಭಟನೆಯಲ್ಲಿ ಪೊಲೀಸರ ವಾಹನಗಳನ್ನು ರೈತರು ಧ್ವಂಸ ಮಾಡಿದ್ದಾರೆ.
#WATCH | Protesters vandalise a Delhi Police vehicle beating it with sticks, during yesterday's episode of violence (26.1.2021)
Video clip source(Delhi Police) pic.twitter.com/3KFYUOnwYo
— ANI (@ANI) January 27, 2021
ಉತ್ತಮ ಸೇವೆ ಒದಗಿಸಿದ ಆಸ್ಪತ್ರೆಗಳಲ್ಲಿ ಬೆಂಗಳೂರಿನ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ಪ್ರಥಮ ಸ್ಥಾನಗಿಟ್ಟಿಸಿಕೊಂಡಿದೆ. ಈ ನಿಟ್ಟಿನಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಪ್ರಶಸ್ತಿ ನೀಡಲಾಗಿದೆ. ಬೆಂಗಳೂರು ನಗರ ಡಿಸಿ ಶಿವಮೂರ್ತಿ, ಕಿದ್ವಾಯಿ ಸ್ಮಾರಕ ಗಂಥಿ ಆಸ್ಪತ್ರೆ ನಿರ್ದೇಶಕ ಡಾ.ಸಿ.ರಾಮಚಂದ್ರ ಅವರಿಗೆ ಕಿದ್ವಾಯಿ ಗಂಥಿ ಸಂಸ್ಥೆಗೆ ಆಯುಷ್ಮಾನ್ ಪ್ರಶಸ್ತಿ ನೀಡಿದ್ದಾರೆ.
ಜಿಲ್ಲೆ ವಿಭಜನೆ ಬಗ್ಗೆ ಮೊದಲಿಂದಲೂ ನಾವು ಖಂಡಿಸಿದ್ದೇವೆ. ನಿನ್ನೆ ಉಸ್ತುವಾರಿ ಸಚಿವರ ಸಮ್ಮುಖದಲ್ಲೇ ವಿರೋಧಿಸಿದ್ದೇನೆ. ನಮ್ಮ ಸರ್ಕಾರ ಬಂದ್ರೆ ಅಖಂಡ ಜಿಲ್ಲೆಯಾಗಿ ಉಳಿಸುತ್ತೇವೆ. ನನ್ನ ರಾಜೀನಾಮೆಯಿಂದ ಅಖಂಡ ಜಿಲ್ಲೆ ಉಳಿಯುವುದಾದರೆ, ಈ ಕ್ಷಣದಿಂದಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಬಳ್ಳಾರಿಯಲ್ಲಿ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಹೇಳಿಕೆ ನೀಡಿದ್ದಾರೆ.
ನಾಳೆಯಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದೆ. 15ನೇ ವಿಧಾನಸಭೆಯ 9ನೇ ಅಧಿವೇಶನ ಆರಂಭಗೊಳ್ಳಲಿದೆ. ಫೆಬ್ರವರಿ 5 ರವರೆಗೆ 7 ದಿನಗಳ ಕಾಲ ಕಲಾಪ ನಡೆಯಲಿದೆ. ಜಂಟಿ ಅಧಿವೇಶನ ಉದ್ದೇಶಿಸಿ ನಾಳೆ ರಾಜ್ಯಪಾಲರ ಭಾಷಣ ನಡೆಯಲಿದೆ. ರಾಜ್ಯಪಾಲರಿಗೆ ಇಂದು ಅಧಿಕೃತವಾಗಿ ಆಹ್ವಾನ ನೀಡಿದ್ದೇವೆ. ರಾಜ್ಯಪಾಲರ ಭಾಷಣದ ಬಳಿ ಸಂತಾಪ ಸೂಚನೆ ಇರುತ್ತದೆ ಎಂದು ವಿಧಾನಸೌಧದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರೈತ ಸಂಘಟನೆಗಳ ಐವರು ಮುಖಂಡರ ವಿರುದ್ಧ FIR ದಾಖಲಾಗಿದೆ. ರೈತ ಸಂಘಟನೆಗಳ ಮುಖಂಡರಾದ ಡಾ.ದರ್ಶನ್ ಪಾಲ್, ರಾಕೇಶ್ ಟಿಕಾಯತ್, ಜೋಗಿಂದರ್, ಬೂಟಾ ಸಿಂಗ್ ಹಾಗೂ ರಾಜೇಂದ್ರ ಸಿಂಗ್ ವಿರುದ್ಧ ಪೊಲೀಸರು FIR ದಾಖಲಿಸಿದ್ದಾರೆ.
FIR by Delhi Police mentions the names of farmer leaders Darshan Pal, Rajinder Singh, Balbir Singh Rajewal, Buta Singh Burjgil & Joginder Singh Ugraha for breach of NOC issued regarding farmers' tractor rally. FIR also mentions the name of BKU spox Rakesh Tikait: Delhi Police
— ANI (@ANI) January 27, 2021
ಕ್ವಿಂಟಾಲ್ ಕೊಬ್ಬರಿಗೆ ಎಂಎಸ್‌ಪಿ 10,335 ನಿಗದಿ ಮಾಡಿದೆ.ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ನಿಗದಿ ಮಾಡಿದೆ. 2020ಕ್ಕೆ ಹೋಲಿಸಿದರೆ 375 ರೂ. ಹೆಚ್ಚಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿಕೆ ನೀಡಿದ್ದಾರೆ.
ಎದೆ ನೋವಿನಿಂದ ಬಳಲುತ್ತಿದ್ದ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯನ್ನು ಕೊಲ್ಕತ್ತಾದ ಅಪೊಲೊ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
BCCI Chief Sourav Ganguly being taken to Apollo Hospital in Kolkata after he complained of chest pain. More details awaited.
(File photo) pic.twitter.com/e72Iai7eVz
— ANI (@ANI) January 27, 2021
ಫೆಬ್ರವರಿ 19ರಿಂದ ಐಪಿಎಲ್ ಆಟಗಾರರ ಬಿಡ್ಡಿಂಗ್ ನಡೆಯುತ್ತದೆ. ಐಪಿಎಲ್ ಸೀಸನ್ 14ಕ್ಕೆ ಆಟಗಾರರ ಬಿಡ್ಡಿಂಗ್ ನಡೆಯಲಿದೆ.
ಕರ್ನಾಟಕ, ಮಹಾರಾಷ್ಟ್ರ ಗಡಿ ವಿವಾದ ಕುರಿತ ಪುಸ್ತಕ ಬಿಡುಗಡೆಗೊಂಡಿದ್ದು, ಮಹಾರಾಷ್ಟ್ರ ರಾಜ್ಯ ಸರ್ಕಾರದಿಂದ ಪುಸ್ತಕ ಬಿಡುಗಡೆಗೊಂಡಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುಸ್ತಕ ಬಿಡುಗಡೆಗೊಳಿಸಿದ್ದಾರೆ.
Maharashtra Govt releases a book in Marathi language, 'Maharashtra-Karnataka Border dispute: Struggle & determination', at an event in Mumbai.
Chief Minister Uddhav Thackeray, NCP Chief Sharad Pawar, State Congress chief & minister Balasaheb Thorat & others present at the event. pic.twitter.com/iyFxLEAS1N
— ANI (@ANI) January 27, 2021
59 ಚೀನೀ ಅಪ್ಲಿಕೇಶನ್‌ಗಳ ಮೇಲೆ ನಿಷೇಧ ಹೇರುವ ಭಾರತ ಸರ್ಕಾರದ ನಿರ್ಧಾರವು ವಿಶ್ವ ವಾಣಿಜ್ಯ ಸಂಸ್ಥೆಯ ನ್ಯಾಯಯುತ ವ್ಯವಹಾರ ನಿಯಮಗಳ ಉಲ್ಲಂಘನೆಯಾಗಿದೆ. ಮತ್ತು ಇದು ಚೀನಾದ ಸಂಸ್ಥೆಗಳಿಗೆ ನೋವುಂಟು ಮಾಡುತ್ತದೆ ಎಂದು ಚೀನಾ ಹೇಳಿದೆ.
China said that the Indian government’s decision to keep a ban on 59 Chinese apps was a violation of the World Trade Organization’s fair rules of business and would hurt Chinese firms: Reuters
— ANI (@ANI) January 27, 2021
ಅನೇಕ ಜನರು ಅಲ್ಲಿಗೆ ಪ್ರವೇಶಿಸಿದಾಗ ನಮ್ಮನ್ನು ಕೆಂಪು ಕೋಟೆಯಲ್ಲಿ ನಾವಿದ್ದೆವು. ನಾವು ಅವರನ್ನು ಕೋಟೆಯಿಂದ ಹೊರ ಹಾಕಲು ಪ್ರಯತ್ನಿಸಿದ್ದೆವು. ಆದರೆ ಅವರಲ್ಲಿ ತಾಳ್ಮೆ ಇರಲಿಲ್ಲ. ಅವರು ತುಂಬಾ ಆಕ್ರಮಣಕಾರಿ ಪ್ರತಿಕ್ರಿಯೆ ನೀಡುತ್ತಿದ್ದರು ಎಂದು ಪಿಸಿ ಯಾದವ್ ಪ್ರತಿಕ್ರಿಯೆ ನೀಡಿದ್ದಾರೆ.
#WATCH | We were deployed at Red Fort when many people entered there. We tried to remove them from the rampart of the fort but they became aggressive….We didn't want to use force against farmers so we exercised as much restraint as possible: PC Yadav, SHO Wazirabad. #Delhi pic.twitter.com/v6o7D57EAk
— ANI (@ANI) January 27, 2021
ಮಹಾರಾಷ್ಟ್ರ ಸಿಎಂ ಉದ್ಧವ್ ಉದ್ಧಟತನದ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ, ಇಷ್ಟೆಲ್ಲಾ ಆಗುತ್ತಿದ್ದರೂ ಸರ್ಕಾರ ಕುಂಭಕರ್ಣ ನಿದ್ದೆಗೆ ಜಾರಿದೆ. ಮಹಾರಾಷ್ಟ್ರ ಸರ್ಕಾರಕ್ಕೆ ತಕ್ಕ ಪ್ರತ್ಯುತ್ತರವನ್ನು ನೀಡಬೇಕು ಎಂದು ಬೆಂಗಳೂರಿನಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿಕೆ ನೀಡಿದ್ದಾರೆ.
ಕೊಡಗು ಜಿಲ್ಲೆ ಗರಗಂದೂರು ಮೊರಾರ್ಜಿ ದೇಸಾಯಿ ಪಿಯು ಕಾಲೇಜಿನ 24 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ವರದಿಯಾಗಿದೆ. ಜನವರಿ 11 ರಿಂದ ಕಾಲೇಜು ಆರಂಭವಾಗಿತ್ತು. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಾಗಿದ್ದರು. ಈ ಹಿನ್ನೆಲೆಯಲ್ಲಿ ಕಾಲೇಜು ಸಿಬ್ಬಂದಿ ಮತ್ತು ಉಪನ್ಯಾಸಕರಿಗೆ ಆತಂಕ ಹೆಚ್ಚಾಗಿದೆ.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆಯಿಂದ ಮತ್ತೆ ಉದ್ಧಟತನ ತೋರಿದಂತಿದೆ. ಬೆಳಗಾವಿಯನ್ನ ಮಹಾರಾಷ್ಟ್ರಕ್ಕೆ ಸೇರಿಸಿಯೇ ತೀರುತ್ತೇವೆ ಎಂದು ಮಾತನಾಡಿದ್ದಾರೆ. ಮರಾಠ ಭಾಷಿಕರ ಪ್ರದೇಶವನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇನೆ, ಅಲ್ಲಿಯವರೆಗೂ ನಾನು ಸುಮ್ಮನೆ ಕೂರುವುದಿಲ್ಲವೆಂದು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಉದ್ಧವ್ ಠಾಕ್ರೆ ಹೇಳಿಕೆ ನೀಡಿದ್ದಾರೆ.
ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಜೆ 4 ಗಂಟೆಗೆ ದೆಹಲಿ ಪೊಲೀಸರಿಂದ ಸುದ್ದಿಗೋಷ್ಠಿ ನಡೆಯಲಿದೆ. ವಿಶೇಷ ಪೊಲೀಸ್ ಆಯುಕ್ತರಿಂದ ಸುದ್ದಿಗೋಷ್ಠಿ ನಡೆಯಲಿದೆ.
ಲೆಫ್ಟಿನೆಂಟ್ ಜನರಲ್ ಸಿ.ಪಿ ಮೊಹಂತಿ ಫೆಬ್ರವರಿ 1 ರಂದು ಮುಂದಿನ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ಪ್ರಸ್ತುತ ದಕ್ಷಿಣ ಸೇನಾ ಕಮಾಂಡರ್ ಆಗಿದ್ದಾರೆ ಮತ್ತು ಲೆಫ್ಟಿನೆಂಟ್ ಜನರಲ್ ಎಸ್.ಕೆ. ಸೈನಿ ಅವರ ಅಧಿಕಾರ ವಹಿಸಿಕೊಂಡಿದ್ದಾರೆ.
Lt Gen CP Mohanty to take over as the next Vice Chief of Army Staff on February 1st. He is presently the Southern Army Commander and would be succeeding Lt Gen SK Saini on his superannuation. pic.twitter.com/8KctnlIWYb
— ANI (@ANI) January 27, 2021
ಕೊವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಫೆಬ್ರವರಿ 1 ರಿಂದ 9 ಮತ್ತು 11 ನೇ ತರಗತಿಗಳ ಶಾಲೆಗಳು ಪ್ರಾರಂಭವಾಗುತ್ತವೆ ಎಂದು ಗುಜರಾತ್ ಶಿಕ್ಷಣ ಸಚಿವ ಭೂಪೇಂದ್ರಸಿಂಗ್ ಚೂಡಾಸಮಾ ಹೇಳಿದ್ದಾರೆ.
Schools for classes 9 and 11 to start from February 1, following COVID19 guidelines: Gujarat Education Minister, Bhupendrasinh Chudasama pic.twitter.com/0A0XahVSEH
— ANI (@ANI) January 27, 2021
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೈಸೂರಲ್ಲಿ ಅರಣ್ಯ ಇಲಾಖೆ ದಿನಗೂಲಿ ನೌಕರರ ಧರಣಿಗೆ ಕುಳಿತಿದ್ದಾರೆ. ಗುತ್ತಿಗೆದಾರರು ಸರಿಯಾದ ರೀತಿಯಲ್ಲಿ ವೇತನ ನೀಡುತ್ತಿಲ್ಲ. ಗುತ್ತಿಗೆದಾರರು ಅನ್ಯಾಯ ಮಾಡುತ್ತಿದ್ದಾರೆಂದು ಅಶೋಕಪುರಂ ಉದ್ಯಾನವನದಿಂದ ಪ್ರತಿಭಟನಾ ಮೆರವಣಿಗೆ ಹೊರಟಿದೆ.
ಬಜೆಟ್ ದಿನ ರೈತರ ಸಂಸತ್ ಮುತ್ತಿಗೆ ಕೈಬಿಡುವ ಸಾಧ್ಯತೆ ಇದೆ. ಸಂಸತ್ವರೆಗೆ ಮೆರವಣಿಗೆ ತೆರಳಿ ಮುತ್ತಿಗೆಗೆ ನಿರ್ಧರಿಸಿದ್ದರು. ದೆಹಲಿಯಲ್ಲಿ ನಿನ್ನೆ ನಡೆದ ಹಿಂಸಾಚಾರ ಘಟನೆ ಬಳಿಕ, ಸಂಸತ್ ಮುತ್ತಿಗೆ ಕೈಬಿಡುವ ಬಗ್ಗೆ ರೈತ ಸಂಘಟನೆಗಳ ಚಿಂತನೆ ನಡೆಯುತ್ತಿದೆ.
ಮಹಾರಾಷ್ಟ್ರ ಸರ್ಕಾರದ ವತಿಯಿಂದ ಗಡಿವಿವಾದ ಕುರಿತ ಪುಸ್ತಕ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಪುಸ್ತಕ ಬಿಡುಗಡೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆ ಕೈಗೊಂಡಿದೆ.
ಬೆಳಗಾವಿ ಜಿಲ್ಲೆ ಗೋಕಾಕ್‌ನ ವಾಲ್ಮೀಕಿ ವೃತ್ತದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕರವೇ ಗೋಕಾಕ್ ತಾಲೂಕು ಅಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿ ಧರಣಿ ನಡೆಯುತ್ತಿದೆ.
ದೆಹಲಿಯಲ್ಲಿ ಟ್ರ್ಯಾಕ್ಟರ್ ರ‍್ಯಾಲಿ ವೇಳೆ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 200 ಜನರನ್ನು ವಶಕ್ಕೆ ಪಡೆದಿದ್ದಾರೆ.
ತೆಲಂಗಾಣದಲ್ಲಿ ಜನವರಿ 26 ರಂದು 147 ಹೊಸ ಕೊವಿಡ್ ಪ್ರಕರಣಗಳು ಕಂಡುಬಂದಿದೆ. ಹಾಗೂ ಓರ್ವರು ಸಾವನ್ನಪ್ಪಿದ್ದಾರೆ.
ಸಕ್ರಿಯ ಕೊವಿಡ್ ಪ್ರಕರಣಗಳು 2,819
Telangana reported 147 new #COVID19 cases, 399 recoveries and 1 death on 26th Jan.
Total cases reported as per the latest update 2,93,737
Total recoveries 2,89,325
Death toll 1593Active cases in the state 2,819 pic.twitter.com/hPrPa8JmLi
— ANI (@ANI) January 27, 2021
ಕೇರಳದ ಮಲಪುರಂನ ವಂದೂರಿನಲ್ಲಿನ ಸರ್ಕಾರಿ ಬಾಲಕಿಯರ ಹೈಯರ್ ಸೆಕೆಂಡರಿ ಶಾಲೆ ಕಟ್ಟಡವನ್ನು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಉದ್ಘಾಟಿಸಿದರು.
Kerala: Congress MP from Wayanad Rahul Gandhi inaugurates a building of Government Girls Higher Secondary School in Wandoor, Malappuram. pic.twitter.com/VoF0qgQ5iS
— ANI (@ANI) January 27, 2021
ಮನೆ ಬಾಗಿಲಿಗೆ ‘ಮಾಸಾಶನ ಅಭಿಯಾನ’ಕ್ಕೆ ಚಾಲನೆ ಹಿನ್ನೆಲೆಯಲ್ಲಿ, ಮಧ್ಯವರ್ತಿಗಳ ಹಾವಳಿ ಇಲ್ಲದೆ ಯೋಜನೆಗಳು ಸಿಗಬೇಕು. ಇದು ಪ್ರಧಾನಿ ನರೇಂದ್ರ ಮೋದಿ ಆಶಯ ಸಹ ಹೌದು. ಪಿಂಚಣಿಗಾಗಿ ಫಲಾನುಭವಿಗಳು ಬಹಳ ಕಷ್ಟ ಪಡುತ್ತಿದ್ದರು.ಅದನ್ನ ತಪ್ಪಿಸಲು ಮಹತ್ವದ ಯೋಜನೆ ಜಾರಿ ಮಾಡಿದ್ದೇವೆ.ಸದ್ಯ ಈ ಯೋಜನೆ ವೃದ್ಧರಿಗೆ ಮಾತ್ರ ಅನ್ವಯ ಆಗಲಿದೆ ಎಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಪರೀಕ್ಷೆಗೂ ಮುನ್ನ FDA ಉತ್ತರ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಿಸಿಬಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ ಪ್ರಕರಣದ ತನಿಖೆ ಇಲ್ಲಿಗೇ ಮುಕ್ತಾಯ ಆಗಲ್ಲ. ತಪ್ಪಿತಸ್ಥರು ಯಾರೇ ಆದರೂ ಕ್ರಮಕೈಗೊಳ್ಳಲಾಗುವುದು ಎಂದು ಬೆಂಗಳೂರಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಶಾಸಕಿ ಸೌಮ್ಯಾರೆಡ್ಡಿ ವಿರುದ್ಧ FIR ದಾಖಲು ಹಿನ್ನೆಲೆಯಲ್ಲಿ, FIR ರದ್ದು ಮಾಡಲು ಆಗ್ರಹಿಸಿ ಬೆಂಗಳೂರಿನ ಜಯನಗರದಲ್ಲಿ ಕಾಂಗ್ರೆಸ್ ರ‍್ಯಾಲಿ ಕೈಗೊಳ್ಳಲಾಗಿದೆ.
ಕಳೆದ ನಾಲ್ಕು ದಿನಗಳ ಹಿಂದೆ ಚಿರತೆಯೊಂದು ಬೆಂಗಳೂರು ದಕ್ಷಿಣ ಭಾಗದ ಅಪಾರ್ಟ್ಮೆಂಟ್ನೊಳಕ್ಕೆ ನುಸುಳಿದೆ. ಅದು ರಾತ್ರಿ ವೇಳೆ ನುಸುಳಿದ್ದರಿಂದ ಕತ್ತಲೆಯಲ್ಲಿ ಸಿಸಿಟಿವಿಯಲ್ಲಿ ಕಂಡುಬಂದ ಪ್ರಾಣಿ ಚಿರತೆಯಲ್ಲ; ನಾಯಿ ಎಂದು ಅಧಿಕಾರಿಗಳು ಸೇರಿದಂತೆ ಸ್ಥಳೀಯರು ಯಾಮಾರಿದ್ದರು. ಆದರೆ ಈಗ ಅಪಾರ್ಟ್ಮೆಂಟ್ನೊಳಕ್ಕೆ ನುಸುಳಿರುವುದು ಚಿರತೆಯೇ ಸರಿ ಎಂಬುದು ಪಕ್ಕಾ ಆಗಿದೆ. ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ.
ಫಲಾನುಭವಿಗಳಿಗೆ ಮನೆ ಬಾಗಿಲಿಗೆ ಪಿಂಚಣಿ ಬರಲಿದೆ.ಇಷ್ಟು ವರ್ಷದಲ್ಲಿ ಈ ಯೋಜನೆ ಯಾಕೆ ಜಾರಿಗೆ ತಂದಿಲ್ಲ ಎಂದು ತಿಳಿಯುತ್ತಿಲ್ಲ. ಹಿಂದಿನ ಸರ್ಕಾರ ಈ ಯೋಜನೆ ಜಾರಿಗೆ ತರಬೇಕಿತ್ತು. ಆದ್ರೆ ಅವರು ಇದರ ಕಡೆ ಗಮನ ಹರಿಸಿಲ್ಲ.ಈಗ ನಾವು ಈ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ತೈಮಾಸಿಕ ಕೆಡಿಪಿ ಸಭೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಅಧ್ಯಕ್ಷತೆಯಲ್ಲಿ ಆರಂಭವಾಗಿದ್ದು, 18 ಶಾಸಕರ ಪೈಕಿ ಕೇವಲ ಐದು ಜನ ಶಾಸಕರು ಮಾತ್ರ ಹಾಜರಾಗಿದ್ದು, ಉಳಿದವರು ಗೈರು ಹಾಜರಾಗಿದ್ದಾರೆ. ಕೆಡಿಪಿ ಸಭೆಗೆ ಜಿಲ್ಲೆಯ ಜನಪ್ರತಿನಿಧಿಗಳ ನಿರಾಸಕ್ತಿ ಕಾಣಿಸುತ್ತಿದೆ.
ಮನೆ ಬಾಗಿಲಿಗೆ ಮಾಸಾಶನ ಅಭಿಯಾನಕ್ಕೆ ಸಿಎಂ ಚಾಲನೆ ನೀಡಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ನವೋದಯ ಆ್ಯಪ್, ತಂತ್ರಾಂಶ ಲೋಕಾರ್ಪಣೆ ಮಾಡಲಾಗಿದೆ. ಕಂದಾಯ ಸಚಿವ ಆರ್ ಅಶೋಕ್, ಸಿಎಂ ರಾಜಕೀಯ ಕಾರ್ಯದರ್ಶಿ ಜೀವರಾಜ್, ವಿಧಾನಪರಿಷತ್ ಸದಸ್ಯ ರಮೇಶ್ ಗೌಡ ಭಾಗಿಯಾಗಿದ್ದಾರೆ.
ಶಶಿಕಲಾ ನಟರಾಜನ್ ಜೈಲಿನಿಂದ ಬಿಡುಗಡೆ ಹಿನ್ನೆಲೆ, ಸದ್ಯ ಶಶಿಕಲಾ ನಟರಾಜನ್‌ಗೆ ವಿಕ್ಟೋರಿಯಾದಲ್ಲೇ ಚಿಕಿತ್ಸೆ ಮುಂದುವರೆಯುತ್ತದೆ. ವಿಕ್ಟೋರಿಯಾ ಆಸ್ಪತ್ರೆ ಡೀನ್ ಜಯಂತಿ ಹೇಳಿಕೆ ನೀಡಿದ್ದಾರೆ.
ಶಶಿಕಲಾ ನಟರಾಜನ್‌ಗೆ 8 ದಿನಗಳ ಕಾಲ ಚಿಕಿತ್ಸೆ ಅಗತ್ಯವಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶಶಿಕಲಾಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಶಿಕಲಾ ನಟರಾಜನ್ ಜೈಲಿನಿಂದ ಬಿಡುಗಡೆ ಹಿನ್ನೆಲೆಯಲ್ಲಿ, ಖಾಸಗಿ ಆಸ್ಪತ್ರೆಯಲ್ಲಿ ವಿ.ಕೆ.ಶಶಿಕಲಾಗೆ ಚಿಕಿತ್ಸೆ ಪಡೆಯುವ ಸಾಧ್ಯತೆ ಇದೆ.
ಜೈಲಿನಿಂದ ವಿ.ಕೆ.ಶಶಿಕಲಾ ಬಿಡುಗಡೆ ಪ್ರಕ್ರಿಯೆ ಪೂರ್ಣಗೊಂಡಿದೆ. 4 ವರ್ಷಗಳ ಬಳಿಕ ಜೈಲಿನಿಂದ ಶಶಿಕಲಾ ಬಿಡುಗಡೆಯಾಗಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾದ ಶಶಿಕಲಾ ಆಸ್ಪತ್ರೆಯಿಂದ ಬಿಡುಗಡೆಯಾಗ್ತಾರಾ ಎಂದು ಕಾದು ನೋಡಬೇಕಿದೆ.
ಗಡಿ ವಿವಾದ ಬಗ್ಗೆ ಮಹಾರಾಷ್ಟ್ರ ಸರ್ಕಾರದಿಂದ ಪುಸ್ತಕ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಕೇಸ್ ಇರುವಾಗ ಪುಸ್ತಕ ಬಿಡುಗಡೆ ನ್ಯಾಯಾಂಗ ನಿಂದನೆಯಾಗುತ್ತೆ. ಪುಸ್ತಕ ಬಿಡುಗಡೆಯಾಗುತ್ತಿದ್ದಂತೆ, ಕರ್ನಾಟಕ ಸರ್ಕಾರ ಪುಸ್ತಕ ತರಿಸಿ ಪರಿಶೀಲನೆ ನಡೆಸಬೇಕು. ನಂತರ ಪುಸ್ತಕವನ್ನೇ ದಾಖಲೆಯಾಗಿಟ್ಟುಕೊಂಡು ನ್ಯಾಯಾಂಗ ನಿಂದನೆ ಕೇಸ್ ದಾಖಲಿಸಬೇಕು ಎಂದು ಬೆಳಗಾವಿಯಲ್ಲಿ ಕನ್ನಡಪರ ಹೋರಾಟಗಾರ ಅಶೋಕ್ ಚಂದರಗಿ ಹೇಳಿಕೆ.
ಮತ್ತೆ ಗಡಿ ಕಿಡಿ ಹೊತ್ತಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿರುವ ಹಾಗೆ ಕಾಣಿಸುತ್ತಿದೆ. ಏಕೆಂದರೆ ಇಂದು ವಿವಾದಿತ ಪುಸ್ತಕ ಬಿಡುಗಡೆಗೆ ಮಹಾರಾಷ್ಟ್ರ ಸರ್ಕಾರದ ಸಿದ್ಧತೆ ಮಾಡಿಕೊಂಡಿದೆ. ಗಡಿ ವಿವಾದ ಕುರಿತ ಪುಸ್ತಕ ಬಿಡುಗಡೆ ಮಾಡಲು ಮುಂದಾಗಿದೆ.
Maharashtra CM Uddhav Thackeray (file photo) to chair a meeting of High Power Committee constituted for the border dispute with Karnataka. pic.twitter.com/qqDNN1rfOQ
— ANI (@ANI) January 27, 2021
ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಕೆಂಪು ಕೋಟೆಗೆ ಭೇಟಿ ನೀಡಿದ್ದಾರೆ.
Delhi: Union Tourism Minister Prahlad Patel visits Red Fort. pic.twitter.com/6K5fEzRTK6
— ANI (@ANI) January 27, 2021
ನಿನ್ನೆ(ಜ.26) ನಡೆದ ಪ್ರತಿಭಟನೆಯ ತೀವ್ರತೆಯಿಂದಾಗಿ,ದೆಹಲಿಯ ಕೆಂಪು ಕೋಟೆಯಲ್ಲಿನ ಟಿಕೆಟ್ ಕೌಂಟರ್ ಧ್ವಂಸಗೊಂಡಿದೆ. ಕೋಟೆಯಲ್ಲಿ ಮುರಿದ ಗಾಜಿನ ಚೂರುಗಳು, ಚದುರಿದ ಕಾಗದದ ತುಂಡುಗಳು ಕಂಡು ಬಂದಿದೆ.
#WATCH: Broken shards of glass, scattered pieces of paper and vandalised ticket counter seen at the Red Fort in Delhi.
A group of protestors climbed to the ramparts of the fort and unfurled flags on January 26. pic.twitter.com/myCOU9QrJK
— ANI (@ANI) January 27, 2021
Latest visuals from Red Fort in Delhi.
A group of protestors climbed to the ramparts of the fort and unfurled flags on January 26. pic.twitter.com/ny6WLhYjQS
— ANI (@ANI) January 27, 2021
ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ, ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಸ್ಮಾರಕವನ್ನು ಮರೀನಾ ಬೀಚ್‌ನಲ್ಲಿ ಅನಾವರಣಗೊಳಿಸಿದರು.
Chennai: Tamil Nadu Chief Minister Edappadi Palanisamy unveils former Chief Minister J Jayalalithaa's memorial at Marina Beach.
Deputy CM O. Panneerselvam is also present. pic.twitter.com/OUl1gwVOE1
— ANI (@ANI) January 27, 2021
Tamil Nadu: People throng Marina Beach in Chennai where Chief Minister Edappadi Palanisamy will unveil former Chief Minister J Jayalalithaa's Memorial today. pic.twitter.com/mXWkmNhFBJ
— ANI (@ANI) January 27, 2021
ದೆಹಲಿಯಲ್ಲಿ ನಿನ್ನೆ ರೈತರ ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 22 FIR ದಾಖಲಿಸಲಾಗಿದೆ. ಈ ಕುರಿತಂತೆ ದೆಹಲಿ ಪೊಲೀಸರು ಮಧ್ಯಾಹ್ನ 2.30ಕ್ಕೆ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಶಶಿಕಲಾ ಬಿಡುಗಡೆ ಹಿನ್ನಲೆಯಲ್ಲಿ ವಿಕ್ಟೊರಿಯಾ ಆಸ್ಪತ್ರೆ ಮುಂದೆ ಸಿಹಿ ಹಂಚಿಕೆ ಮಾಡಲಾಗುತ್ತಿದೆ. ಶಶಿಕಲಾ ವಾಂಗ ಎಂದು ಘೋಟಷಣೆ ಕೂಗುವ ಮುಖಾಂತರ ಸಿಹಿ ಹಂಚಿಕೆ ಮಾಡುತ್ತಿದ್ದಾರೆ.
ದೆಹಲಿಯ ಬೀದಿಬೀದಿಗಳಲ್ಲಿ ರೈತರು ಹೋರಾಟ ಮಾಡ್ತಿದ್ದಾರೆ. ಸಾವು ನೋವುಗಳು ಸಂಭವಿಸುತ್ತಿರುವುದು ನಿಜಕ್ಕೂ ದುಃಖಕರ ಸಂಗತಿ. ಅಂದು ಮಾತೆತ್ತಿದರೆ ಡಾ.ಸಿಂಗ್‌ರನ್ನ ಮೌನಿಬಾಬಾ ಎನ್ನುತ್ತಿದ್ದರು, ಬಿಜೆಪಿಗರು ಇಂದು ಮೌನಿಯಾಗಿರುವುದು ಏಕೆ?. ‘ಸಮಾಜ ನಿರ್ಲಕ್ಷಿಸಿದಾಗ ಅಧಃಪತನ ಆರಂಭ’ ಎಂಬ ಸ್ವಾಮಿ ವಿವೇಕಾನಂದರ ಮಾತನ್ನು ನೆನಪಿಸಲು ಬಯಸುತ್ತೇನೆ ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಶಾಸಕ, ಮಾಜಿ ಸಚಿವ ಯು.ಟಿ.ಖಾದರ್ ಟ್ವೀಟ್ ಪ್ರಶ್ನೆ ಒಡ್ಡಿದ್ದಾರೆ.
ಸಮಾಜವನ್ನ ನಿರ್ಲಕ್ಷಿಸಿದಾಗ ಅಧಪತನ ಆರಂಭ ಎಂಬ ಸ್ವಾಮಿ ವಿವೇಕಾನಂದರ ಮಾತನ್ನ ಈ ಸಂದರ್ಭದಲ್ಲಿ ನೆನಪಿಸಲು ಬಯಸುವೆ.(2)#neglectingoffarmers #is #the #beginingoftheend@BJP4Karnataka @CMofKarnataka @nalinkateel @bcpatilkourava
— UT Khadér (@utkhader) January 27, 2021
ನವದೆಹಲಿಯಲ್ಲಿ ಇಂಟರ್‌ನೆಟ್ ಕಡಿತ ಮಾಡಿದ್ದ ಹಿನ್ನೆಲೆಯಲ್ಲಿ, ವಕೀಲರಿಂದ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಿಗೆ ಪತ್ರ ಬರೆಯಲಾಗಿದೆ. ‘ಸುಪ್ರೀಂ’ ಕಲಾಪಕ್ಕೆ ಹಾಜರಾಗದಿದ್ದರೆ ಕ್ರಮ ಕೈಗೊಳ್ಳಬೇಡಿ. ಹಾಜರಾಗದ ಕಾರಣಕ್ಕೆ ಆದೇಶ ಹೊರಡಿಸಬೇಡಿ ಎಂದು ಸುಪ್ರೀಂಕೋರ್ಟ್ ವಕೀಲರ ಅಸೋಸಿಯೇಷನ್‌ನಿಂದ ಪತ್ರ ಬರೆಯಲಾಗಿದೆ.
ಜಮ್ಮು-ಕಾಶ್ಮೀರದ ಕುಲ್ಗಾಮ್‌ನಲ್ಲಿ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ಯೋಧರಿಗೆ ಗಂಭೀರ ಗಾಯವಾಗಿದೆ.
ಕೆಂದ್ರ ಸರ್ಕಾರ ಗಡಿಗಳಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಿದ್ದು, ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಈ ನಿಟ್ಟಿನಲ್ಲಿ ರಾತ್ರಿ ಪೂರ್ತಿ ನಿದ್ದೆ ಇಲ್ಲದೆ ಪೊಲೀಸರ ಕಣ್ಗಾವಲಾಗಿ ಕಾಯುತ್ತ ಕುಳಿತಿದ್ದಾರೆ.
Delhi: Heavy security deployment at Tikri border where farmers are protesting against #FarmLaws. pic.twitter.com/pizT7EJDHU
— ANI (@ANI) January 27, 2021
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 12,689 ಜನರಿಗೆ ಕೊರೊನಾ ದೃಢಪಟ್ಟಿದೆ.ಹಾಗೂ 24 ಗಂಟೆಯಲ್ಲಿ ಕೊರೊನಾಗೆ 137 ಜನರು ಬಲಿಯಾಗಿದ್ದಾರೆ. ದೇಶದಲ್ಲಿ ಈವರೆಗೆ ಒಟ್ಟೂ 20,29,480 ಜನರಿಗೆ ಲಸಿಕೆ ನೀಡಲಾಗಿದೆ.
ಪ್ರಧಾನಿ ನೇತೃತ್ವದಲ್ಲಿಂದು ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು, ಸಂಪುಟ ಸಭೆಯಲ್ಲಿ ದೆಹಲಿ ಹಿಂಸಾಚಾರದ ಬಗ್ಗೆ ಚರ್ಚೆ ನಡೆಯಲಿದೆ. ಗಲಾಟೆ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ.
ಟ್ರ್ಯಾಕ್ಟರ್ ರ‍್ಯಾಲಿಯಲ್ಲಿ ಅನಕ್ಷರಸ್ಥರು ಟ್ರ್ಯಾಕ್ಟರ್‌ಗಳನ್ನು ಓಡಿಸಿದ್ದರು. ಟ್ರ್ಯಾಕ್ಟರ್‌ಗಳನ್ನು ಓಡಿಸುವವರಿಗೆ ಮಾರ್ಗಗಳು ಗೊತ್ತಿರಲಿಲ್ಲ. ಪೊಲೀಸರು ದೆಹಲಿ ಕಡೆಗೆ ಹೋಗುವ ಮಾರ್ಗ ತಿಳಿಸಿದ್ದರು. ಹೀಗಾಗಿ ರೈತರು ದೆಹಲಿಗೆ ಹೋಗಿ ಮನೆಗೆ ವಾಪಸಾಗಿದ್ದಾರೆ. ಕೆಲ ರೈತರಿಗೆ ತಿಳಿಯದೆ ಕೆಂಪುಕೋಟೆ ಕಡೆ ಹೋಗಿದ್ದಾರೆ. ಕೆಂಪುಕೋಟೆ ಮೇಲೆ ಸಿಖ್ ಧರ್ಮ ಧ್ವಜ ಹಾರಿಸಿದ್ದು ತಪ್ಪು. ಅವರು ಮಾಡಿದ ತಪ್ಪಿಗೆ ದಂಡ ತೆರಲೇಬೇಕು. ನಿರ್ದಿಷ್ಟ ಸಮುದಾಯದ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ದೆಹಲಿಯಲ್ಲಿ ಭಾರತೀಯ ಕಿಸಾನ್ ಯೂನಿಯನ್ (BKU) ನಾಯಕ ರಾಕೇಶ್ ಟಿಕಾಯತ್ ಹೇಳಿಕೆ ನೀಡಿದ್ದಾರೆ.
ದೇಶದಲ್ಲಿ ನಿನ್ನೆ 5,50,426 ಕೊವಿಡ್ ಸ್ಯಾಂಪಲ್ ಟೆಸ್ಟ್ಗೆ ಮುಂದಾಗಿದ್ದು, ಈವರೆಗೆ ಒಟ್ಟು 19,36,13,120 ಸ್ಯಾಂಪಲ್ ಟೆಸ್ಟ್ ಮಾಡಲಾಗಿದೆ. ಈ ಕುರಿತಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ವರದಿ ಮಾಡಿದೆ.
A total of 19,36,13,120 samples tested for #COVID19 up to 26th January. Of these, 5,50,426 samples were tested yesterday: Indian Council of Medical Research (ICMR) pic.twitter.com/tNPk9ER5F9
— ANI (@ANI) January 27, 2021
ವಿಧಾನಪರಿಷತ್ ಸಭಾಪತಿ ಸ್ಥಾನ ವಿಚಾರದ ಹಿನ್ನೆಲೆಯಲ್ಲಿ, ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಲು ವಿಧಾನಪರಿಷತ್ ಜೆಡಿಎಸ್ ಸದಸ್ಯ ಬಸವರಾಜ ಹೊರಟ್ಟಿ ತೆರಳಲಿದ್ದಾರೆ. ಪರಿಷತ್ ಸಭಾಪತಿ ಸ್ಥಾನ ಜೆಡಿಎಸ್‌ಗೆ ಪಡೆಯಲು ನಿರ್ಧಾರಕ್ಕೆ ಸಂಬಂಧಿಸಿದಂತೆ, ಮುಖ್ಯಂತ್ರಿಯವರ ಬಳಿ ಮನವಿ ಮಾಡಲು ಹೊರಟಿದ್ದಾರೆ.
ಶಿವಮೊಗ್ಗ ತಾಲೂಕಿನ ಹುಣಸೋಡುನಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಘಟನಾ ಸ್ಥಳಕ್ಕೆ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಲಿದ್ದು, ಘಟನೆ ಸಂಬಂಧ ಮಾಹಿತಿಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪಡೆಯಲಿದ್ದಾರೆ.
ಆಂಧ್ರದ ತಿರುಮಲದ ಬಾಲಾಜಿ ದೇವಾಲಯಕ್ಕೆ ಕಳೆದ 24 ಗಂಟೆಗಳಲ್ಲಿ ಭಾರಿ ಆದಾಯ ಹರಿದು ಬಂದಿದೆ. ಭಕ್ತರಿಂದ ಹುಂಡಿಯಲ್ಲಿ 2.95 ಕೋಟಿ ಸಂಗ್ರಹವಾಗಿದೆ. 48,504 ಭಕ್ತರಿಂದ ಬಾಲಾಜಿಯ ದರ್ಶನವಾಗಿದ್ದು, 16,910 ಭಕ್ತರು ತಲೆ ಮುಡಿ ಸಮರ್ಪಿಸಿರುವುದು ತಿಳಿದು ಬಂದಿದೆ.
ಭಾರತದಿಂದ ಶ್ರೀಲಂಕಾಕ್ಕೆ ಕೊವಿಡ್ ಲಸಿಕೆ ರಫ್ತು ಮಾಡಲಾಗಿದೆ. 5 ಲಕ್ಷ ಡೋಸ್ ಕೊವಿಶೀಲ್ಡ್ ಲಸಿಕೆ ರಫ್ತು ಮಾಡಲಾಗಿದ್ದು, ಈವರೆಗೆ ಭಾರತದಿಂದ 8 ರಾಷ್ಟ್ರಗಳಿಗೆ ಲಸಿಕೆ ರಫ್ತು ಮಾಡಲಾಗಿದೆ.
ನಿನ್ನೆ ರೈತರ ಟ್ರ್ಯಾಕ್ಟರ್ ಪರೇಡ್ ವೇಳೆ ಗಲಾಟೆ ಹಿನ್ನೆಲೆಯಲ್ಲಿ ದೆಹಲಿಯ ಕೆಂಪು ಕೋಟೆ ಬಳಿ ಪೊಲೀಸರ ಬಿಗಿ ಭದ್ರತೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ನಿನ್ನೆ ನಡೆದ ಗಲಾಟೆಯಲ್ಲಿ 86 ಪೊಲೀಸರು ಗಾಯಗೊಂಡಿದ್ದು, ಗಾಯಾಳು ಪೊಲೀಸ್ ಸಿಬ್ಬಂದಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂಸಾಚಾರ ಸಂಬಂಧ FIR ದಾಖಲಿಸಲಾಗಿದೆ. ಪಾಂಡವ್‌ನಗರ್, ಸೀಮಾಪುರಿ, ನಜಾಫ್‌ಗಢ್, ಗಾಜಿಪುರ ದ್ವಾರಕಾ, ಉತ್ತಮ್‌ನಗರ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
An FIR has been registered at IP Police Station in connection with the violence during yesterday's farmers' tractor rally in ITO. Case registered against unknown protestors including the farmer who died after his tractor overturned after ramming into a barricade: Delhi Police
— ANI (@ANI) January 27, 2021
4 ವರ್ಷ ಶಿಕ್ಷೆ ಅನುಭವಿಸಿದ ಜಯಲಲಿತಾ ಆಪ್ತೆ ಶಶಿಕಲಾಗೆ ಇಂದು ಜೈಲುವಾಸ ಅಂತ್ಯವಾಗಲಿದೆ. ಆದರೆ ಶಶಿಕಲಾ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಗಾಗಿ ಆಸ್ಪತ್ರೆಯಲ್ಲಿ ಜೈಲಿನ ಕೆಲ ಪ್ರಕ್ರಿಯೆಗಳನ್ನು ನಡೆಸುವುದು ಕಷ್ಟಸಾಧ್ಯವಾಗಿದ್ದು ಜೈಲಾಧಿಕಾರಿಗಳು ಗುಣಮುಖರಾದ ನಂತರವೇ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗ್ತಿತ್ತು. ಆದ್ರೆ ಶಶಿಕಲಾ ಪರ ವಕೀಲರು ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿ ಜೈಲಿನಿಂದ ಹೊರ ಕರೆತರಲು ಮುಂದಾಗಿದ್ದಾರೆ. ಹೀಗಾಗಿ ಜೈಲಧಿಕಾರಿಗಳ ಸಮ್ಮುಖದಲ್ಲಿ ಆಸ್ಪತ್ರೆಗೆ ತೆರಳಿ ಶಶಿಕಲಾ ಸಹಿ ಪಡೆದು ಬಿಡುಗಡೆ ಪ್ರಕ್ರಿಯೆ ಪೂರ್ಣಗೊಳಿಸುವ ಸಾಧ್ಯತೆಯಿದೆ.
ಮತ್ತೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ. ಕಳೆದ ವಾರದಿಂದ ನಿರಂತರವಾಗಿ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳವಾಗುತ್ತಲೇ ಇತ್ತು. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 27 ಹಾಗೂ ಡೀಸೆಲ್ಗೆ 25 ಪೈಸೆ ಹೆಚ್ಚಳವಾಗಿದೆ.
ದೆಹಲಿಯಲ್ಲಿ ನಿನ್ನೆ ರಾಷ್ಟ್ರ ರಾಜಧಾನಿಯ ಕೆಂಪು ಕೋಟೆಯಲ್ಲಿ ಭದ್ರತೆ ಬಿಗಿಗೊಳಿಸಲಾಗಿದ್ದು, ಪ್ರತಿಭಟನಾಕಾರರ ಗುಂಪೊಂದು ಕೋಟೆಯ ಗುಮ್ಮಟವನ್ನು ಹತ್ತಿ ಧ್ವಜವನ್ನು ಕೆಳಗಿಳಿಸಿದೆ.
Delhi: Security tightened at Red Fort in the national capital.
A group of protestors climbed to the ramparts of the fort and unfurled flags yesterday. pic.twitter.com/ovGx9mugzS
— ANI (@ANI) January 27, 2021
ದೆಹಲಿಯಲ್ಲಿ ನಿನ್ನೆ ರೈತರ ಪ್ರತಿಭಟನೆಯ ಕಾವು ಹೆಚ್ಚಾದ್ದರಿಂದ ಮೆಟ್ರೋ ಸ್ಟೇಷನ್ಗಳನ್ನು ಮುಚ್ಚಲಾಗಿತ್ತು. ಈ ನಿಟ್ಟಿನಲ್ಲಿ ಲಾಲ್ ಕಿಲಾ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರಗಳನ್ನು ಮುಚ್ಚಲಾಗಿದೆ. ಉಳಿದೆಲ್ಲ ನಿಲ್ದಾಣಗಳು ತೆರೆದಿವೆ.
Entry gates of Lal Quila metro station are closed. Exit is permitted at this station. All other stations are open. Normal services on all lines: Delhi Metro Rail Corporation pic.twitter.com/JkngOlxBz9
— ANI (@ANI) January 27, 2021
ಜಯಲಲಿತಾ ಅವರ ‘ವೇದ ನಿಲಯಂ’ ನಿವಾಸವನ್ನು ಪೋಸ್ ಗಾರ್ಡನ್ ಸ್ಮಾರಕವಾಗಿ ಅನಾವರಣಗೊಳಿಸುವ ಬಗ್ಗೆ ತಮಿಳುನಾಡು ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಜನವರಿ 28ರಂದು ಸ್ಮಾರಕ ಅನಾವರಣ ಮಾಡಲಿದೆ.
ದೇವನಹಳ್ಳಿ ಡಿನೋಟಿಫಿಕೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ. ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಚಿವ ಮುರುಗೇಶ್ ನಿರಾಣಿ ಅರ್ಜಿಗೆ ಸಂಬಂಧಿಸಿ ಸುಪ್ರೀಂಕೋರ್ಟ್‌ನಲ್ಲಿ ಇಂದು ಅರ್ಜಿ ವಿಚಾರಣೆ ನಡೆಯಲಿದೆ.
ಲಡಾಕ್ನಲ್ಲಿ ತಡರಾತ್ರಿ ಲಘು ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ ತೀವ್ರತೆ 3.6ರಷ್ಟು ದಾಖಲಾಗಿದೆ.
ಕೆಂಪುಕೋಟೆಯಲ್ಲಿ ಸಿಖ್ ಧರ್ಮ ಧ್ವಜ ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದರ ನೇತೃತ್ವ ವಹಿಸಿದ್ದು ಪಂಜಾಬ್ ಚಿತ್ರನಟ ದೀಪ್ ಸಿಧು ಎಂದು ತಿಳಿದು ಬಂದಿದೆ. ಇವರು ಬಿಜೆಪಿ ಸಂಸದ ಸನ್ನಿ ಡಿಯೋಲ್ ಬೆಂಬಲಿಗರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಮತಯಾಚನೆ ಹಾಗೂ ಸನ್ನಿ ಡಿಯೋಲ್ ಪರ ಪ್ರಚಾರ ಮಾಡಿದ್ದರು. ಸಿಧು ನಡವಳಿಕೆ ಗಮನಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ ಧರಣಿಯಿಂದ ಹೊರಗಿಟ್ಟಿದ್ದರು. ಈತ ರೈತ ಹೋರಾಟದ ಶತ್ರು ಎಂದು ಓರ್ವ ರೈತ ನಾಯಕರು ಹೇಳಿದ್ದರು. ಸದ್ಯ ದೀಪ್ ಸಿಧು ವಿರುದ್ಧ, ರೈತ ಸಂಘಟನೆ ತನಿಖೆಗೆ ಆಗ್ರಹಿಸಿರುವುದು ಕೇಳಿ ಬರುತ್ತಿದೆ.
Published On - 8:55 pm, Wed, 27 January 21