ಬೆಳಗಾವಿ ಬಳಿ ಟಿಪ್ಪರ್ ಗೆ ಢಿಕ್ಕಿ ಹೊಡೆದು ಹೊತ್ತಿಯುರಿದ ಕಾರು, ಇಬ್ಬರು ಸಜೀವ ದಹನ ಇಬ್ಬರಿಗೆ ಗಂಭೀರ ಸುಟ್ಟಗಾಯಗಳು

|

Updated on: Dec 07, 2023 | 10:56 AM

ಗಮನಿಸಬೇಕಾದ ಸಂಗತಿಯೆಂದರೆ, ಅಪಘಾತ ನಡೆದ ಸಂಗತಿ ಗೊತ್ತಾದ ಕೂಡಲೇ ಸ್ಥಳೀಯ ಶಾಸಕರೂ ಆಗಿರುವ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ತಮ್ಮ ಕಾರ್ಯಕರ್ತರನ್ನು ಸ್ಥಳಕ್ಕೆ ಕಳಿಸಿ ಅಪಘಾತಕ್ಕೀಡಾದ ಜನರಿಗೆ ನೆರವಾಗಿದ್ದಾರೆ. ಮೃತ ದುರ್ದೈವಿಗಳು ಹಾಗೂ ಗಾಯಗೊಂಡಿರುವ ಕುಟುಂಬ ಸದಸ್ಯರಿಗೆ ಅಗತ್ಯವಿರುವ ಎಲ್ಲ ನೆರವು ಒದಗಿಸಲಾಗುವುದು ಎಂದು ಒಬ್ಬ ಕಾರ್ಯಕರ್ತ ಹೇಳುತ್ತಾರೆ.

ಬೆಳಗಾವಿ: ಇದೊಂದು ಭೀಕರ ಮತ್ತು ಹೃದಯವಿದ್ರಾವಕ ಅಪಘಾತ. ಬುಧವಾರ ರಾತ್ರಿ ಸುಮಾರು 10 ಗಂಟೆಗೆ ಬೆಳಗಾವಿ ತಾಲ್ಲೂಕಿನ ದೇವರಗಿ ಬಂಬರಗಾ ಬಳಿ ಮರಳು ಹೊತ್ತಿದ್ದ ಟಿಪ್ಪರೊಂದಕ್ಕೆ ಕಾರು ಢಿಕ್ಕಿ ಹೊಡೆದ ಪರಿಣಾಮ ಒಬ್ಬ 12 ವರ್ಷದ ಬಾಲಕಿ (12-year-old girl) ಮತ್ತು 24-ವರ್ಷ ವಯಸ್ಸಿನ (24-year-old youth) ಯುವಕ ಕಾರಲ್ಲೇ ಸಜೀವ ದಹನವಾಗಿದ್ದಾರೆ ಮತ್ತು ಅದರಲ್ಲಿದ್ದ ಉಳಿದಿಬ್ಬರಿಗೆ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿವೆ. ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ ಕಾರು, ಟಿಪ್ಪರ್ ಡೀಸೆಲ್ ಟ್ಯಾಂಕ್ ಗೆ (diesel tank) ಅಪ್ಪಳಿಸಿದ್ದರಿಂದ ಹೊತ್ತಿ ಉರಿದಿದೆ. ಘಟನೆ ನಡೆದ ಸ್ಥಳದಲ್ಲಿರುವ ಫ್ಯಾಕ್ಟರಿಯೊಂದರ ಕಾರ್ಮಿಕರು ಧಾವಿಸಿ ಬಂದು ಕಾರಲ್ಲಿದ್ದವರನ್ನು ಹೊರಗೆಳಿದಿದ್ದಾರೆ. ಮೃತರನ್ನು ಮಾರುತಿ ಬೆಳಗಾಂವ್ಕರ್ ಮತ್ತು ಸಮೀಕ್ಷಾ ಡಿಯೇಕರ್ ಎಂದು ಗುರುತಿಸಲಾಗಿದ್ದು ಗಾಯಗೊಂಡವರನ್ನು ಬೆಳಗಾವಿಯ ಆಸ್ಪತ್ರೆಯೊಂದರಲ್ಲಿ ದಾಖಲಿಸಲಾಗಿದೆ. ಕಾರಲ್ಲಿದ್ದವರು ಒಂದೇ ಕುಟುಂಬದವರಾಗಿದ್ದು ಮದುವೆಯೊಂದರಲ್ಲಿ ಭಾಗಿಯಾಗಿ ವಾಪಸ್ಸಾಗುವಾಗ ಅಪಘಾತ ಸಂಭವಿಸಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ