ಕಾರು ಅಪಘಾತವನ್ನೇ ಹಲ್ಲೆ ಎಂದ ಬಿಜೆಪಿ ಮುಖಂಡ: ಮಣಿಕಂಠ ರಾಠೋಡ್ ಮೇಲಿನ ಹಲ್ಲೆಯ ಅಸಲಿಯತ್ತು ಬಟಾಬಯಲು

ಮಣಿಕಂಠ ರಾಠೋಡ್ ಮೇಲಿನ ಹಲ್ಲೆಯ ಅಸಲಿಯತ್ತು ಬಟಾಬಯಲಾಗಿದೆ. ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಕಾಲ್ ರೇಕಾರ್ಡ್ ಹಿಸ್ಟರಿ ಟೆಕ್ನಿಕಲ್ ಎವಿಡೆನ್ಸ್ ಬೆನ್ನತ್ತಿದಾಗ ಹಲ್ಲೆಯ ಕಥೆ ಅಪಘಾತದ ಕಥೆಯಾಗಿ ಬಯಲಾಗಿದೆ. ಹೌದು..ಕಾರು ಅಪಘಾತವನ್ನೇ ಹಲ್ಲೆ ಮಾಡಿದ್ದಾರೆಂದು ಕಥೆ ಕಟ್ಟಿ ಸಿಕ್ಕಿಬಿದ್ದಿದ್ದಾರೆ. ಹಾಗಾದ್ರೆ, ಹೇಗೆಲ್ಲಾ ಸೀನ್ ಕ್ರಿಯೇಟ್ ಮಾಡಿದ್ರು ಎನ್ನುವ ವಿವರ ಇಲ್ಲಿದೆ ನೋಡಿ.

ಕಾರು ಅಪಘಾತವನ್ನೇ ಹಲ್ಲೆ ಎಂದ ಬಿಜೆಪಿ ಮುಖಂಡ: ಮಣಿಕಂಠ ರಾಠೋಡ್  ಮೇಲಿನ ಹಲ್ಲೆಯ ಅಸಲಿಯತ್ತು ಬಟಾಬಯಲು
ಮಣಿಕಂಠ ರಾಠೋಡ್
Follow us
ದತ್ತಾತ್ರೇಯ ಪಾಟೀಲ, ಕಲಬುರಗಿ
| Updated By: ರಮೇಶ್ ಬಿ. ಜವಳಗೇರಾ

Updated on:Dec 06, 2023 | 2:04 PM

ಕಲಬುರಗಿ, (ಡಿಸೆಂಬರ್ 06): ಕಲಬುರಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ (Manikanta Rathod)ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಾರು ಅಪಘಾತವನ್ನೇ ಹಲ್ಲೆ ಮಾಡಿದ್ದಾರೆಂದು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಆರೋಪಿಸಿದ್ದ ಮಣಿಕಂಠ ರಾಠೋಡ್ ಅಸಲಿಯತ್ತು ಬಟಾಬಯಲಾಗಿದೆ. ಹಲ್ಲೆ ಪ್ರಕರಣ ಸಂಬಂಧ ಮಣಿಕಂಠ ರಾಠೋಡ್​ ಬೆಂಬಲಿಗನನ್ನು ಪೊಲೀಸರು ವಿಚಾರಣೆಗೊಳಪಡಿಸಿದಾಗ ಮಣಿಕಂಠನ ನೌಟಂಕಿ ಆಟ ಬಯಲಾಗಿದೆ. ಈ ಮೂಲಕ ಚಿತ್ತಾಪುರ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಯಾವುದೇ ಹಲ್ಲೆ ನಡೆದಿಲ್ಲ. ಕಾರು ಅಪಘಾತದಲ್ಲಿ ಗಾಯಗೊಂಡು ಹಲ್ಲೆ ಮಾಡಿದ್ದಾರೆ ಎಂದು ಕಥೆ ಕಟ್ಟಿದ್ದರು ಎನ್ನುವುದು ಗೊತ್ತಾಗಿದೆ.

ಕಾರು ಅಪಘಾತವನ್ನ ರಾಜಕೀಯವಾಗಿ ಬಳಸಿಕೊಳ್ಳಲು ಕಥೆ ಕಟ್ಟಿದ ಮಣಿಕಂಠ ರಾಠೋಡ್, ನವೆಂಬರ್ 18 ರಂದು ಮಧ್ಯರಾತ್ರಿ ಹಲ್ಲೆ ಮಾಡಿದ್ದಾರೆ ಎಂದು ಮಣಿಕಂಠ ಹೇಳಿದ್ದ. ಅದಲ್ಲದೇ ಸಚಿವ ಪ್ರಿಯಾಂಕ್ ಖರ್ಗೆ ಬೆಂಬಲಿಗರು ಹಲ್ಲೆ ಮಾಡಿದ್ದಾರೆಂದು ಆರೋಪಿಸಿದ್ದ. ಅಷ್ಟೇ ಅಲ್ಲದೇ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ. ಆದ್ರೆ, ಪೊಲೀಸರು ಈ ಪ್ರಕರಣವನ್ನು ತನಿಖೆ ನಡೆಸಿದಾಗ ಮಣಿಕಂಠ ರಾಠೋಡ್ ಕಟ್ಟು ಕಥೆಯ ಸತ್ಯಾಂಶ ಬಯಲಿಗೆ ಬಂದಿದೆ. ಇದರೊಂದಿಗೆ ಮಣಿಕಂಠ, ಪ್ರಿಯಾಂಕ್ ಖರ್ಗೆ ಮೇಲೆ ಗೂಬೆ ಕೂರಿಸಲು ಹೋಗಿ ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಮೇಲೆ ಬಿಯರ್ ಬಾಟಲ್​ಗಳಿಂದ ಹಲ್ಲೆ

ಮಣಿಕಂಠ ರಾಠೋಡ್​ನ ಅಸಲಿ ಕಥೆ ಹೀಗಿದೆ

ಬಿಜೆಪಿ ಮಣಿಕಂಠ ರಾಠೋಡ್ ಮೇಲಿನ ಹಲ್ಲೆ ದೂರು ಗಂಭೀರವಾಗಿ ಪರಿಗಣಿಸಿದ್ದ ಶಹಬಾದ್ ಪೊಲೀಸರು, ಈ ಪ್ರಕರಣವನ್ನ ಬೆನ್ನತ್ತಿ ಹೋದಾಗ ಅಸಲಿಯತ್ತು ಬಟಾಬಯಲಾಗಿದೆ. ಮಣಿಕಂಠ ರಾಠೋಡ್ ಇನ್ನೋವಾ ಕ್ರಿಸ್ಟಾ ವೈಟ್ ಕಲರ್ ಕಾರು ಯಾದಗಿರಿ ಜಿಲ್ಲೆಯ ಚೆಪಟ್ಲಾ ಬಳಿ ಅಪಘಾತವಾಗಿತ್ತು. ನವಂಬರ್ 18 ರ ಮಧ್ಯರಾತ್ರಿ ಕಾರು ಮರಕ್ಕೆ ಡಿಕ್ಕಿಯಾಗಿತ್ತು. ಮರಕ್ಕೆ ಡಿಕ್ಕಿ ಹೊಡೆದ ಹಿನ್ನಲೆ‌ ಕಾರಿನಲ್ಲಿದ್ದ ಮಣಿಕಂಠ ರಾಠೋಡ್ ಗಾಯಗೊಂಡಿದ್ದ. ಗಾಯಗೊಂಡ ಮಣಿಕಂಠ ರಾಠೋಡ್ ತನ್ನ ಮತ್ತೊಂದು ಕಾರಿನಲ್ಲಿ ತೆರಳಿದ್ದ. ಇನ್ನು ಅಪಘಾತಗೊಂಡ ಇನ್ನೋವಾ ಕ್ರಿಸ್ಟಾ ಕಾರನ್ನು ಟೋಯಿಂಗ್ ಮೂಲಕ ರಾತ್ರೋ ರಾತ್ರಿ ಹೈದರಾಬಾದ್ ಶಿಫ್ಟ್ ಮಾಡಿಸಿದ್ದ.

ತನ್ನ ಮತ್ತೊಂದು ಕಾರಿನಲ್ಲಿ ಚಿತ್ತಾಪುರಕ್ಕೆ ಆಗಮಿಸಿದ್ದ ಮಣಿಕಂಠ ರಾಠೋಡ್, ಚಿತ್ತಾಪುರದಿಂದ ಕಲಬುರಗಿಗೆ ಬರುವಾಗ ಹಲ್ಲೆ ಮಾಡಲಾಗಿದೆ ಎಂದು ಕಥೆ ಕಟ್ಟಿದ್ದ. ತನ್ನದೆ ಕಾರಿನ ಗಾಜನ್ನ ಒಡೆದು ಹಾಕಿ ಏಳೆಂಟು ದುಷ್ಕರ್ಮಿಗಳಿಂದ ಹಲ್ಲೆಯಾಗಿದೆ ಎಂದು ಸೀನ್ ಕ್ರಿಯೇಟ್ ಮಾಡಿದ್ದಾನೆ. ಬಳಿಕ ಚಿತ್ತಾಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಆಗಿದ್ದ. ಆದ್ರೆ, ಮಣಿಕಂಠ ರಾಠೋಡ್ ಕಾರಿನಲ್ಲಿ ಬರುವಾಗ ಹಲ್ಲೆಯಾದ ಕಾರಿನಲ್ಲಿ ಒಂದೇ ಒಂದು ಹನಿ ರಕ್ತ ಬಿದ್ದಿರಲಿಲ್ಲ.

ಇನ್ನು ಮಣಿಕಂಠ ರಾಠೋಡ್ ಕಾಲ್ ರೇಕಾರ್ಡ್ ಹಿಸ್ಟರಿ ಟೆಕ್ನಿಕಲ್ ಎವಿಡೆನ್ಸ್ ಬೆನ್ನತ್ತಿದಾಗ ಹಲ್ಲೆಯ ಕಥೆ ಅಪಘಾತದ ಕಥೆಯಾಗಿ ಬಯಲಾಗಿದೆ. ಹಲ್ಲೆ ಪ್ರಕರಣ ಬೇಧಿದಸಿದ ಬಳಿಕ ಮಣಿಕಂಠ ರಾಠೋಡ್ ಜೊತೆಗಿದ್ದವನನ್ನ ವಿಚಾರಣೆ ನಡೆಸಿದಾಗ ಅಪಘಾತದ ಕಥೆ ಬಿಚ್ಚಿಟ್ಟಿದ್ದಾನೆ. ಇದರೊಂದಿಗೆ ಅಪಘಾತವನ್ನ ರಾಜಕೀಯವಾಗಿ ಬಳಸಿಕೊಳ್ಳಲು ಹೋಗಿ ಮಣಿಕಂಠ ರಾಠೋಡ್ ಸಿಕ್ಕಿಬಿದ್ದಿದ್ದಾನೆ.

ಕಲಬುರಗಿ ಎಸ್ಪಿ ಸ್ಪಷ್ಟನೆ

ಇನ್ನು ಈ ಬಗ್ಗೆ ಸ್ಪಷ್ಟಪಡಿಸಿದ ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಸಲು, ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರು ಶಹಬಾದ್ ತಾಲೂಕಿನ ಶಂಕರವಾಡಿ ಕ್ರಾಸ್ ಬಳಿ ಮಾರಣಾಂತೀಕ ಹಲ್ಲೆ ಆಗಿತ್ತು ದೂರು ನೀಡಿದ್ದರು‌. ಅವರ ದೂರಿನ್ವಯ ಶಹಬಾದ್ ಠಾಣೆಯಲ್ಲಿ 307 ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಆದ್ರೆ ಸಾಕ್ಷಿಗಳ ವಿಚಾರಣೆ ಬಳಿಕ ಅದು ಕೊಲೆಯತ್ನ ಅಲ್ಲ. ಬದಲಾಗಿ ಅಪಘಾತ ಆಗಿದೆ ಎನ್ನುವುದು ಗೊತ್ತಾಗಿದೆ.. ಗುರುಮಿಠಕಲ್ ಬಳಿ ಅಪಘಾತವಾಗಿತ್ತು. ಮರಕ್ಕೆ ಡಿಕ್ಕಿ ಹೊಡೆದು ರಾಠೋಡ್ ಗೆ ಗಾಯವಾಗಿತ್ತು. ಸದ್ಯ ಪ್ರಕರಣ ತನೀಖೆಯಲ್ಲಿದೆ. ಕೆಲ ಪ್ರತ್ಯೇಕ್ಷ ಸಾಕ್ಷಿದಾರರು,ಕೆಲ ಟೆಕ್ನಿಕಲ್ ಸಾಕ್ಷ್ಯ ಸಂಗ್ರಹಿಸಿದ್ದೆವೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:20 pm, Wed, 6 December 23

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ