ಕರ್ನಾಟಕದಲ್ಲಿಯೂ 2 ಕೆಮ್ಮಿನ ಸಿರಪ್​​ ಅಸುರಕ್ಷಿತ: ಆರೋಗ್ಯ ಇಲಾಖೆ ಕೈಸೇರಿದೆ ಬೆಚ್ಚಿಬೀಳಿಸುವ ವರದಿ

ಕರ್ನಾಟಕದಲ್ಲಿ ಮಾರಾಟವಾಗುತ್ತಿರುವ ಎರಡು ಕೆಮ್ಮಿನ ಸಿರಪ್‌ಗಳು ಅಸುರಕ್ಷಿತ ಎಂಬುದು ಆರೋಗ್ಯ ಇಲಾಖೆಯ ಪ್ರಯೋಗಾಲಯ ವರದಿಯಿಂದ ದೃಢಪಟ್ಟಿದೆ. ರಾಜಸ್ಥಾನ, ಮಧ್ಯಪ್ರದೇಶದಲ್ಲಿ 14 ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಸಿರಪ್‌ನ ಬ್ಯಾಚ್ SR-13ರಲ್ಲಿ ವಿಷಕಾರಿ ಅಂಶ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡುವ ಬಗ್ಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ, ವೈದ್ಯರ ಸಲಹೆ ಕಡ್ಡಾಯಗೊಳಿಸಿದೆ.

ಕರ್ನಾಟಕದಲ್ಲಿಯೂ 2 ಕೆಮ್ಮಿನ ಸಿರಪ್​​ ಅಸುರಕ್ಷಿತ: ಆರೋಗ್ಯ ಇಲಾಖೆ ಕೈಸೇರಿದೆ ಬೆಚ್ಚಿಬೀಳಿಸುವ ವರದಿ
ಕೆಮ್ಮಿನ ಸಿರಪ್ (ಸಾಂದರ್ಭಿಕ ಚಿತ್ರ)
Updated By: Digi Tech Desk

Updated on: Oct 08, 2025 | 5:13 PM

ಬೆಂಗಳೂರು, ಅಕ್ಟೋಬರ್ 7: ಕರ್ನಾಟಕದಲ್ಲಿ ಮಾರಾಟವಾಗುತ್ತಿರುವ 200 ಕಫ್ ಸಿರಪ್​​ಗಳಲ್ಲಿ 2 ಕೆಮ್ಮಿನ ಸಿರಪ್​ಗಳು ಅಸುರಕ್ಷಿತ ಎಂಬ ವರದಿ ಆರೋಗ್ಯ ಇಲಾಖೆ ಕೈಸೇರಿದೆ. ಆರೋಗ್ಯ ಇಲಾಖೆ ಜುಲೈನಲ್ಲಿ 200 ಸ್ಯಾಂಪಲ್ಸ್ ಸಂಗ್ರಹ ಮಾಡಿ ಪ್ರಯೋಗಾಲಯಕ್ಕೆ ಕಳಸಿತ್ತು. ಅದರ ವರದಿ ಅಗಸ್ಟ್​​ನಲ್ಲಿ ಇಲಾಖೆಯ ಕೈಸೇರಿದ್ದು, ಎರಡು ಕಫ್ ಸಿರಫ್ ಅಸುರಕ್ಷಿತ ಎಂಬುದು ಗೊತ್ತಾಗಿದೆ. ಈ ಎರಡು ಕೆಮ್ಮಿನ ಸಿರಪ್​​ಗಳಲ್ಲಿ ನಿಗದಿತ ಪ್ರಮಾಣದಲ್ಲಿ ರಾಸಾಯನಿಕಗಳ ಬಳಕೆ ಮಾಡಿಲ್ಲ ಎಂಬುದು ಗೊತ್ತಾಗಿತ್ತು. ಈ ಬಗ್ಗೆ ಆರೋಗ್ಯ ಇಲಾಖೆ ಕೇಂದ್ರಕ್ಕೆ ಮಾಹಿತಿ ನೀತ್ತು.

ಕರ್ನಾಟಕ ರಾಜ್ಯ ಸರ್ಕಾರ ಕಳಪೆ ಗುಣಮಟ್ಟ ಎಂದು ಪಟ್ಟಿ ಮಾಡಿದ ಹಾಗೂ ನಿಷೇಧಿತ ಸಿರಪ್‌ಗಳು ಮೈಸೂರಿನಂತಹ ನಗರಗಳಲ್ಲಿನ ಮೆಡಿಕಲ್ ಸ್ಟೋರ್‌ಗಳಲ್ಲಿ ಇನ್ನೂ ಸಿಗುತ್ತಿರುವ ಬಗ್ಗೆಯೂ ವರದಿಯಾಗಿದೆ.

ಕರ್ನಾಟಕದಲ್ಲಿ ಮಾರಾಟವಾಗುತ್ತಿರುವ ಎರಡು ಕೆಮ್ಮಿನ ಸಿರಪ್‌ಗಳು ಅಸುರಕ್ಷಿತ ಎಂಬುದು ಆರೋಗ್ಯ ಇಲಾಖೆಯ ಪ್ರಯೋಗಾಲಯ ವರದಿಯಿಂದ ದೃಢಪಟ್ಟಿದೆ. ರಾಜಸ್ಥಾನ, ಮಧ್ಯಪ್ರದೇಶದಲ್ಲಿ 14 ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಸಿರಪ್‌ನ ಬ್ಯಾಚ್ SR-13ರಲ್ಲಿ ವಿಷಕಾರಿ ಅಂಶ ಪತ್ತೆಯಾಗಿತ್ತು. ಇದರ ಬೆನ್ನಲ್ಲೇ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡುವ ಬಗ್ಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ, ವೈದ್ಯರ ಸಲಹೆ ಕಡ್ಡಾಯಗೊಳಿಸಿದೆ.

Published On - 8:54 am, Tue, 7 October 25